ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026: 1,100 ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಾಲಿಸ್ಟ್ ಹುದ್ದೆಗಳು. ವಿದ್ಯಾರ್ಹತೆ, ವೇತನ, ವಯೋಮಿತಿ, ಆಯ್ಕೆ ವಿಧಾನ ತಿಳಿಯಿರಿ.
ಹಲೋ ಸ್ನೇಹಿತರೇ, ಬ್ಯಾಂಕ್ ಆಫ್ ಬರೋಡಾ (BOB) ಅಖಿಲ ಭಾರತ ಮಟ್ಟದಲ್ಲಿ 1,100 ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಾಲಿಸ್ಟ್ (C&IC) ಹುದ್ದೆಗಳ ಖಾಯಂ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ (ಜಾಹೀರಾತು ಸಂಖ್ಯೆ BOB/HRM/REC/ADVT/2026/17). ಹುದ್ದೆಗಳ ವಿವರ, ವಿದ್ಯಾರ್ಹತೆ, ವೇತನ ಮತ್ತು ಆಯ್ಕೆ ವಿಧಾನ ಇಲ್ಲಿದೆ.
ಹುದ್ದೆಗಳ ವಿವರ
- ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ
- ವೆಲ್ತ್ ಎಕ್ಸಿಕ್ಯೂಟಿವ್ (JMG/S-I): 1,000 ಹುದ್ದೆಗಳು
- ಕ್ರೆಡಿಟ್ ಅನಾಲಿಸ್ಟ್ – C&IC (MMG/S-II): 100 ಹುದ್ದೆಗಳು
- ವೆಲ್ತ್ ಎಕ್ಸಿಕ್ಯೂಟಿವ್ ವರ್ಗವಾರು: SC 150, ST 75, OBC 270, EWS 100, ಸಾಮಾನ್ಯ 405
- ಕ್ರೆಡಿಟ್ ಅನಾಲಿಸ್ಟ್ ವರ್ಗವಾರು: SC 15, ST 8, OBC 27, EWS 10, ಸಾಮಾನ್ಯ 40
- ಉದ್ಯೋಗ ಸ್ಥಳ: ಭಾರತದ ಯಾವುದೇ ಭಾಗ
ವಿದ್ಯಾರ್ಹತೆ
- ವೆಲ್ತ್ ಎಕ್ಸಿಕ್ಯೂಟಿವ್: ಯಾವುದೇ ವಿಷಯದಲ್ಲಿ ಪದವಿ, ಜೊತೆಗೆ ಅಧಿಸೂಚನೆಯಲ್ಲಿ ತಿಳಿಸಿದ NISM/IC 38 ಪ್ರಮಾಣಪತ್ರ ಮತ್ತು ವೆಲ್ತ್ ಉತ್ಪನ್ನಗಳ ಮಾರಾಟದ ಅನುಭವ. MBA/PGDM ಇದ್ದರೆ ಆದ್ಯತೆ.
- ಕ್ರೆಡಿಟ್ ಅನಾಲಿಸ್ಟ್: ಪದವಿ ಹಾಗೂ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ನಲ್ಲಿ ಕನಿಷ್ಠ 1 ವರ್ಷ ಅನುಭವ. ಕಾರ್ಪೊರೇಟ್ ಕ್ರೆಡಿಟ್ ಅನುಭವ ಇದ್ದರೆ ಆದ್ಯತೆ.
ವೇತನ
- ವೆಲ್ತ್ ಎಕ್ಸಿಕ್ಯೂಟಿವ್: ತಿಂಗಳಿಗೆ ₹48,480 ರಿಂದ ಆರಂಭ
- ಕ್ರೆಡಿಟ್ ಅನಾಲಿಸ್ಟ್: ₹64,820 – ₹93,960 ವೇತನ ಶ್ರೇಣಿ
ಮುಖ್ಯ ಮಾಹಿತಿ: ವೆಲ್ತ್ ಎಕ್ಸಿಕ್ಯೂಟಿವ್ ಹುದ್ದೆಗೆ ಪದವಿ ಜೊತೆಗೆ ಅಧಿಸೂಚನೆಯಲ್ಲಿ ತಿಳಿಸಿದ NISM ಅಥವಾ IC 38 ಪ್ರಮಾಣಪತ್ರ ಕಡ್ಡಾಯ. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ಅರ್ಹತೆಗಳನ್ನು ಪರಿಶೀಲಿಸಿ.
ವಯೋಮಿತಿ
ವಯಸ್ಸನ್ನು 01-09-2026 ರಂತೆ ಲೆಕ್ಕ ಹಾಕಲಾಗುತ್ತದೆ.
- ವೆಲ್ತ್ ಎಕ್ಸಿಕ್ಯೂಟಿವ್: 22 ರಿಂದ 32 ವರ್ಷ
- ಕ್ರೆಡಿಟ್ ಅನಾಲಿಸ್ಟ್: 21 ರಿಂದ 33 ವರ್ಷ
- ಸಡಿಲಿಕೆ: OBC 3 ವರ್ಷ, SC/ST 5 ವರ್ಷ, PwBD (ಸಾಮಾನ್ಯ) 10 ವರ್ಷ, PwBD (OBC) 13 ವರ್ಷ, PwBD (SC/ST) 15 ವರ್ಷ
ಅರ್ಜಿ ಶುಲ್ಕ
- ಸಾಮಾನ್ಯ, EWS, OBC: ₹850
- SC, ST, PwBD, ESM: ₹175
- ಪಾವತಿ: ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಆನ್‌ಲೈನ್‌ನಲ್ಲಿ
ಆಯ್ಕೆ ಪ್ರಕ್ರಿಯೆ
- ಅರ್ಜಿಗಳ ಶಾರ್ಟ್‌ಲಿಸ್ಟಿಂಗ್
- ಆನ್‌ಲೈನ್ ಪರೀಕ್ಷೆ (ನಡೆಸಿದಲ್ಲಿ ಮಾತ್ರ)
- ಮನೋಮಾಪನ ಪರೀಕ್ಷೆ
- ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನ
- ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ತಪಾಸಣೆ
ಅರ್ಜಿ ಸಲ್ಲಿಸುವ ವಿಧಾನ
- ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ನ Careers ವಿಭಾಗಕ್ಕೆ ಭೇಟಿ ನೀಡಿ.
- ಜಾಹೀರಾತು ಸಂಖ್ಯೆ BOB/HRM/REC/ADVT/2026/17 ಆಯ್ಕೆ ಮಾಡಿ, ಅಧಿಸೂಚನೆ ಓದಿ.
- Apply Online ಕ್ಲಿಕ್ ಮಾಡಿ, ಶೈಕ್ಷಣಿಕ ಮತ್ತು ವೈಯಕ್ತಿಕ ವಿವರ ಭರ್ತಿ ಮಾಡಿ.
- ಫೋಟೋ, ಸಹಿ ಮತ್ತು ಅಗತ್ಯ ಪ್ರಮಾಣಪತ್ರ ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿ.
- ಸ್ವೀಕೃತಿ ಪ್ರತಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ: 04-09-2026
- ಕೊನೆಯ ದಿನಾಂಕ (ವೆಲ್ತ್ ಎಕ್ಸಿಕ್ಯೂಟಿವ್):
01-10-2026(ವಿಸ್ತರಿಸಲಾಗಿದೆ : 16.10.2026) - ಕೊನೆಯ ದಿನಾಂಕ (ಕ್ರೆಡಿಟ್ ಅನಾಲಿಸ್ಟ್): 24-09-2026
- ಅರ್ಜಿ ಪ್ರಿಂಟ್ ತೆಗೆಯಲು ಕೊನೆಯ ದಿನಾಂಕ: 09-10-2026
ಪ್ರಮುಖ ಲಿಂಕ್‌ಗಳು
| ವಿವರ | ಲಿಂಕ್ |
|---|---|
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| WhatsApp ಗ್ರೂಪ್ | ಜಾಯಿನ್ ಆಗಿ |
| Telegram ಚಾನೆಲ್ | ಜಾಯಿನ್ ಆಗಿ |











