ಇಂಡಿಯನ್ ಆಯಿಲ್ IOCL ಅಪ್ರೆಂಟಿಸ್ ನೇಮಕಾತಿ 2026 ಪ್ರಕಟ. 335 ಹುದ್ದೆ, ಪರೀಕ್ಷೆ ಇಲ್ಲ, ಮೆರಿಟ್ ಆಧಾರದ ಆಯ್ಕೆ. ಅರ್ಹತೆ, ವಯೋಮಿತಿ, ಅರ್ಜಿ ವಿಧಾನ ಮತ್ತು ಕೊನೆಯ ದಿನಾಂಕ ಇಲ್ಲಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) 2026-27ನೇ ಸಾಲಿನ ಅಪ್ರೆಂಟಿಸ್ ತರಬೇತಿಗೆ ಅಧಿಸೂಚನೆ ಹೊರಡಿಸಿದೆ. ಟ್ರೇಡ್, ಟೆಕ್ನಿಷಿಯನ್ ಮತ್ತು ಗ್ರಾಜುಯೇಟ್ ವಿಭಾಗಗಳಲ್ಲಿ ಒಟ್ಟು 335 ಹುದ್ದೆಗಳಿವೆ. ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇಲ್ಲ, ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯುತ್ತದೆ. ತರಬೇತಿ ಸ್ಥಳ ಪಶ್ಚಿಮ ವಲಯದ ರಾಜ್ಯಗಳು.
ಹುದ್ದೆಗಳ ಪ್ರಮುಖ ವಿವರ
- ಸಂಸ್ಥೆ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)
- ಅಧಿಸೂಚನೆ ಸಂಖ್ಯೆ: IOCL/MKTG/WR/APPR/2026-27
- ಒಟ್ಟು ಹುದ್ದೆಗಳು: 335 (ಸಂಭಾವ್ಯ)
- ವಿಭಾಗಗಳು: ಟ್ರೇಡ್ ಅಪ್ರೆಂಟಿಸ್, ಟೆಕ್ನಿಷಿಯನ್ ಅಪ್ರೆಂಟಿಸ್, ಗ್ರಾಜುಯೇಟ್ ಅಪ್ರೆಂಟಿಸ್
- ತರಬೇತಿ ಅವಧಿ: 12 ತಿಂಗಳು
- ತರಬೇತಿ ಸ್ಥಳ: ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಗೋವಾ, ಛತ್ತೀಸ್‌ಗಢ, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ ಹವೇಲಿ
ವಿದ್ಯಾರ್ಹತೆ
- ಟೆಕ್ನಿಷಿಯನ್ ಅಪ್ರೆಂಟಿಸ್: ಸಂಬಂಧಿತ ವಿಭಾಗದಲ್ಲಿ 3 ವರ್ಷದ ಇಂಜಿನಿಯರಿಂಗ್ ಡಿಪ್ಲೊಮಾ. ಸಾಮಾನ್ಯ, EWS, OBC ಅವರಿಗೆ ಕನಿಷ್ಠ 50% ಅಂಕ, SC/ST/PwBD ಅವರಿಗೆ 45%
- ಟ್ರೇಡ್ ಅಪ್ರೆಂಟಿಸ್ (ITI): SSLC ಜೊತೆಗೆ ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್ ಅಥವಾ ಮೆಷಿನಿಸ್ಟ್ ಟ್ರೇಡ್‌ನಲ್ಲಿ 2 ವರ್ಷದ ITI
- ಗ್ರಾಜುಯೇಟ್ ಅಪ್ರೆಂಟಿಸ್: BA, B.Com, B.Sc ಅಥವಾ BBA ಪದವಿ, ಕನಿಷ್ಠ 50% ಅಂಕ (SC/ST/PwBD ಅವರಿಗೆ 45%)
- ಡೇಟಾ ಎಂಟ್ರಿ ಆಪರೇಟರ್ (ಫ್ರೆಶರ್): ಕನಿಷ್ಠ 50% ಅಂಕದೊಂದಿಗೆ PUC ತೇರ್ಗಡೆ, ಪದವಿ ಇರಬಾರದು
- ಡೇಟಾ ಎಂಟ್ರಿ ಆಪರೇಟರ್ (ಸ್ಕಿಲ್ ಸರ್ಟಿಫಿಕೇಟ್): PUC ಜೊತೆಗೆ NSQF ಮಾನ್ಯತೆಯ ಡೊಮೆಸ್ಟಿಕ್ ಡೇಟಾ ಎಂಟ್ರಿ ಆಪರೇಟರ್ ಸರ್ಟಿಫಿಕೇಟ್
ಮುಖ್ಯ ಮಾಹಿತಿ: ಪದವಿ ಮತ್ತು ಡಿಪ್ಲೊಮಾ 01.04.2023 ರಿಂದ 30.09.2026ರ ನಡುವೆ ಪೂರ್ಣಗೊಂಡಿರಬೇಕು. ITI ಮತ್ತು ಡೇಟಾ ಎಂಟ್ರಿ ಹುದ್ದೆಗಳಿಗೆ 01.04.2022 ರಿಂದ 30.09.2026ರ ನಡುವೆ ತೇರ್ಗಡೆಯಾಗಿರಬೇಕು. B.E, B.Tech, MBA, MCA, CA, LLB ಪದವೀಧರರು ಅರ್ಹರಲ್ಲ.
ವಯೋಮಿತಿ
30.09.2026ಕ್ಕೆ ಕನಿಷ್ಠ 18 ಮತ್ತು ಗರಿಷ್ಠ 24 ವರ್ಷ.
- SC/ST: 5 ವರ್ಷ ಸಡಿಲಿಕೆ
- OBC (ನಾನ್ ಕ್ರೀಮಿ ಲೇಯರ್): 3 ವರ್ಷ ಸಡಿಲಿಕೆ
- PwBD: 10 ವರ್ಷ (SC/ST ಅವರಿಗೆ 15, OBC ಅವರಿಗೆ 13)
ಆಯ್ಕೆ ವಿಧಾನ
- ವಿದ್ಯಾರ್ಹತೆಯ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ
- ಶಾರ್ಟ್‌ಲಿಸ್ಟ್ ಆದವರಿಗೆ ಇ-ಮೇಲ್ ಮೂಲಕ ಮಾಹಿತಿ, ಮೂಲ ದಾಖಲೆಗಳ ಪರಿಶೀಲನೆ
- ವೈದ್ಯಕೀಯ ತಪಾಸಣೆಯ ನಂತರ ಅಂತಿಮ ಆಯ್ಕೆ
ಅರ್ಜಿ ಸಲ್ಲಿಸುವ ವಿಧಾನ
- ITI ಮತ್ತು ಡೇಟಾ ಎಂಟ್ರಿ ಹುದ್ದೆಗಳಿಗೆ NAPS ಪೋರ್ಟಲ್‌ನಲ್ಲಿ, ಡಿಪ್ಲೊಮಾ ಮತ್ತು ಗ್ರಾಜುಯೇಟ್ ಹುದ್ದೆಗಳಿಗೆ NATS ಪೋರ್ಟಲ್‌ನಲ್ಲಿ ನೋಂದಣಿ ಮಾಡಿ.
- ಪ್ರೊಫೈಲ್ ಅನ್ನು 100% ಪೂರ್ಣಗೊಳಿಸಿ.
- ಎಸ್ಟಾಬ್ಲಿಷ್‌ಮೆಂಟ್ ಹುಡುಕಿ: NATS ID WMHMCC000053, NAPS ID E01172700332.
- ಪಶ್ಚಿಮ ವಲಯದ ಖಾಲಿ ಹುದ್ದೆ ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ. ಒಬ್ಬ ಅಭ್ಯರ್ಥಿ ಒಂದು ಡಿಸಿಪ್ಲಿನ್‌ಗೆ ಮಾತ್ರ ಅರ್ಜಿ ಹಾಕಬಹುದು.
ಅಗತ್ಯ ದಾಖಲೆಗಳು: SSLC ಅಂಕಪಟ್ಟಿ, ವಿದ್ಯಾರ್ಹತೆಯ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಅಥವಾ ರದ್ದಾದ ಚೆಕ್, ಭಾವಚಿತ್ರ ಮತ್ತು ಸಹಿ.
ಪ್ರಮುಖ ದಿನಾಂಕಗಳು
- ಅರ್ಜಿ ಆರಂಭ: 05.10.2026
- ಕೊನೆಯ ದಿನಾಂಕ: 04.11.2026 (ಸಂಜೆ 5:00 ರವರೆಗೆ)
ಪ್ರಮುಖ ಲಿಂಕ್‌ಗಳು
| ವಿವರ | ಲಿಂಕ್ |
|---|---|
| ITI ಮತ್ತು ಡೇಟಾ ಎಂಟ್ರಿ ಹುದ್ದೆಗೆ ಅರ್ಜಿ (NAPS) | ಇಲ್ಲಿ ಕ್ಲಿಕ್ ಮಾಡಿ |
| ಡಿಪ್ಲೊಮಾ ಮತ್ತು ಗ್ರಾಜುಯೇಟ್ ಹುದ್ದೆಗೆ ಅರ್ಜಿ (NATS) | ಇಲ್ಲಿ ಕ್ಲಿಕ್ ಮಾಡಿ |
| IOCL ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| WhatsApp ಗ್ರೂಪ್ | ಸೇರಲು ಕ್ಲಿಕ್ ಮಾಡಿ |
| Telegram ಚಾನೆಲ್ | ಸೇರಲು ಕ್ಲಿಕ್ ಮಾಡಿ |











