ಕೆಇಎ ಮೂಲಕ KREIS ಗ್ರೂಪ್ ಸಿ ಶಿಕ್ಷಕರ 1087 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ. ಅರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಿರಿ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ವ್ಯಾಪ್ತಿಯ ಶಾಲೆಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ವೃಂದದ ಶಿಕ್ಷಕ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅರ್ಜಿ ಆಹ್ವಾನಿಸಿದೆ. ಒಟ್ಟು 1087 ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
- ಉಳಿಕೆ ಮೂಲ ವೃಂದ: 767 ಹುದ್ದೆಗಳು (ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಗಣಕಯಂತ್ರ, ದೈಹಿಕ ಶಿಕ್ಷಣ ಶಿಕ್ಷಕರು)
- ಕಲ್ಯಾಣ ಕರ್ನಾಟಕ ವೃಂದ: 320 ಹುದ್ದೆಗಳು (ಮೇಲಿನ ವಿಷಯಗಳ ಜೊತೆ ಪದವೀಧರ ಮತ್ತು ಡಿಪ್ಲೊಮಾ ಚಿತ್ರಕಲಾ ಶಿಕ್ಷಕರು ಸೇರಿ)
ಶೈಕ್ಷಣಿಕ ಅರ್ಹತೆ
ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಬಿ.ಎಡ್ ಪದವಿ ಹೊಂದಿರಬೇಕು. ಜೊತೆಗೆ ಕೆಟಿಇಟಿ ಅಥವಾ ಸಿಟಿಇಟಿ ಅರ್ಹತೆ ಕಡ್ಡಾಯ. ಸಂಪೂರ್ಣ ಅರ್ಹತಾ ಮಾಹಿತಿಗೆ ಅಧಿಕೃತ ಅಧಿಸೂಚನೆ ಪರಿಶೀಲಿಸಿ.
ವಯೋಮಿತಿ
13-08-2026ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 45 ವರ್ಷ, 2ಎ/2ಬಿ/3ಎ/3ಬಿ ವರ್ಗಕ್ಕೆ 48 ವರ್ಷ, ಪರಿಶಿಷ್ಟ ಜಾತಿ/ಪಂಗಡ/ಪ್ರವರ್ಗ-1ಕ್ಕೆ 50 ವರ್ಷ. ಸರ್ಕಾರದ ನಿಯಮಾನುಸಾರ ವರ್ಗವಾರು ಸಡಿಲಿಕೆ ಅನ್ವಯ.
ವೇತನ
ಭಾಷಾ/ವಿಜ್ಞಾನ/ಗಣಿತ/ಸಮಾಜ ವಿಜ್ಞಾನ/ದೈಹಿಕ ಶಿಕ್ಷಣ ಶಿಕ್ಷಕರಿಗೆ ರೂ.54,175 – 99,400 ವೇತನ ಶ್ರೇಣಿ. ಚಿತ್ರಕಲಾ ಶಿಕ್ಷಕರಿಗೆ ರೂ.49,050 – 92,500 ವೇತನ ಶ್ರೇಣಿ ಅನ್ವಯ.
ಮುಖ್ಯ ಮಾಹಿತಿ: ಅರ್ಜಿ ಸಲ್ಲಿಕೆ ಜುಲೈ 15 ರಿಂದ ಆಗಸ್ಟ್ 13ರವರೆಗೆ ಮಾತ್ರ ಲಭ್ಯ ಇರಲಿದ್ದು, ಶುಲ್ಕ ಪಾವತಿಗೆ ಆಗಸ್ಟ್ 14 ಕೊನೆಯ ದಿನಾಂಕ.
ಆಯ್ಕೆ ಪ್ರಕ್ರಿಯೆ
- ಸ್ಪರ್ಧಾತ್ಮಕ ಪರೀಕ್ಷೆ
- ದಾಖಲಾತಿ ಪರಿಶೀಲನೆ
ಅರ್ಜಿ ಶುಲ್ಕ
- ಸಾಮಾನ್ಯ/2ಎ/2ಬಿ/3ಎ/3ಬಿ: ರೂ.750
- ಪ.ಜಾತಿ/ಪ.ಪಂಗಡ/ಪ್ರವರ್ಗ-1/ಮಾಜಿ ಸೈನಿಕ: ರೂ.500
- ಅಂಗವಿಕಲ ಅಭ್ಯರ್ಥಿಗಳಿಗೆ: ರೂ.250
ಅರ್ಜಿ ಸಲ್ಲಿಸುವ ವಿಧಾನ
- ಕೆಇಎ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
- ಮೆನುವಿನಲ್ಲಿ “ನೇಮಕಾತಿ” ವಿಭಾಗದಡಿ “KREIS ನೇಮಕಾತಿ – 2026” ಆಯ್ಕೆ ಮಾಡಿ
- ಸೂಕ್ತ ವೃಂದದ ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ
- ಡಿಜಿಲಾಕರ್ ಮೂಲಕ ನೋಂದಣಿ ಮಾಡಿ, ಅರ್ಜಿ ನಮೂನೆ ಭರ್ತಿ ಮಾಡಿ ಶುಲ್ಕ ಪಾವತಿಸಿ
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ: ಜುಲೈ 15
- ಅರ್ಜಿ ಕೊನೆ ದಿನಾಂಕ: ಆಗಸ್ಟ್ 13
- ಶುಲ್ಕ ಪಾವತಿ ಕೊನೆ ದಿನಾಂಕ: ಆಗಸ್ಟ್ 14
Links Table
| ಲಿಂಕ್ | URL |
|---|---|
| ಅಧಿಕೃತ ಅಧಿಸೂಚನೆ | Download |
| ಆನ್‌ಲೈನ್ ಅರ್ಜಿ | Apply Now |
| Join | |
| Telegram | Join |
| Karnataka24.in | Karnataka24.in |











