2027-28ನೇ ಸಾಲಿನ ಜವಾಹರ್ ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಗೆ ನೋಂದಣಿ ಆರಂಭ. ಅರ್ಹತೆ, ದಾಖಲೆಗಳು, ಪರೀಕ್ಷಾ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ ಇಲ್ಲಿದೆ.
2027-28ನೇ ಶೈಕ್ಷಣಿಕ ಸಾಲಿಗೆ ಜವಾಹರ್ ನವೋದಯ ವಿದ್ಯಾಲಯ ಸಮಿತಿ (NVS) 6ನೇ ತರಗತಿ ಪ್ರವೇಶಕ್ಕಾಗಿ ಆಯ್ಕೆ ಪರೀಕ್ಷೆ (JNVST) ಅಧಿಸೂಚನೆ ಬಿಡುಗಡೆ ಮಾಡಿದೆ. ಪ್ರಸ್ತುತ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಜುಲೈ 31, 2026ರೊಳಗೆ ನೋಂದಣಿ ಮಾಡಿಕೊಳ್ಳಬಹುದು. ದೇಶಾದ್ಯಂತ 27 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ 665 ನವೋದಯ ವಿದ್ಯಾಲಯಗಳಿದ್ದು, ಪ್ರತಿ ಶಾಲೆಗೆ ಗರಿಷ್ಠ 80 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಪ್ರವೇಶ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು, ಆಯ್ಕೆ ಪ್ರಕ್ರಿಯೆ ಬರೀ ಲಿಖಿತ ಪರೀಕ್ಷೆಯ ಆಧಾರದ ಮೇಲೆ ನಡೆಯಲಿದೆ.
ಪ್ರಮುಖ ವಿವರಗಳು
| ವಿವರ | ಮಾಹಿತಿ |
|---|---|
| ಸಂಸ್ಥೆ | ನವೋದಯ ವಿದ್ಯಾಲಯ ಸಮಿತಿ (NVS) |
| ಪ್ರವೇಶ ತರಗತಿ | 6ನೇ ತರಗತಿ (2027-28) |
| ನೋಂದಣಿ ಆರಂಭ | ಜುಲೈ 6/7, 2026 |
| ನೋಂದಣಿ ಕೊನೆಯ ದಿನಾಂಕ | ಜುಲೈ 31, 2026, ರಾತ್ರಿ 11:59 |
| ಪರೀಕ್ಷಾ ದಿನಾಂಕ | ನವೆಂಬರ್ 28, 2026 |
| ಫಲಿತಾಂಶ | ಮಾರ್ಚ್ 2027 |
| ಅರ್ಜಿ ಶುಲ್ಕ | ಇಲ್ಲ |
| ಅಧಿಕೃತ ಜಾಲತಾಣ | navodaya.gov.in |
ವಿದ್ಯಾರ್ಹತೆ
✔ ಅಭ್ಯರ್ಥಿ 2026-27ನೇ ಸಾಲಿನಲ್ಲಿ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿ ಓದುತ್ತಿರಬೇಕು.
✔ ಜನ್ಮ ದಿನಾಂಕ 01.05.2015ರಿಂದ 31.07.2017ರ ನಡುವೆ ಇರಬೇಕು (ಎರಡೂ ದಿನಾಂಕಗಳು ಸೇರಿದಂತೆ).
✔ ವಿದ್ಯಾರ್ಥಿಯು ಯಾವ ಜಿಲ್ಲೆಯ ನವೋದಯ ವಿದ್ಯಾಲಯಕ್ಕೆ ಪ್ರವೇಶ ಬಯಸುತ್ತಾನೋ, ಅದೇ ಜಿಲ್ಲೆಯ ನಿವಾಸಿಯಾಗಿದ್ದು, ಅಲ್ಲಿಯೇ 5ನೇ ತರಗತಿ ಓದುತ್ತಿರಬೇಕು.
✔ ಈ ಹಿಂದೆ JNVST ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
✔ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಶೇ.75ರಷ್ಟು ಸೀಟುಗಳು ಮೀಸಲಾಗಿವೆ. ಈ ಮೀಸಲಾತಿ ಪಡೆಯಲು 3, 4, 5ನೇ ತರಗತಿಗಳನ್ನು ಗ್ರಾಮೀಣ ಶಾಲೆಯಲ್ಲಿ ಪೂರ್ಣಗೊಳಿಸಿರಬೇಕು.
ಅಗತ್ಯ ದಾಖಲೆಗಳು
✔ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ
✔ ಸಹಿ (Signature) ಸ್ಕ್ಯಾನ್ ಪ್ರತಿ
✔ ಆಧಾರ್ ಕಾರ್ಡ್ (ಇಲ್ಲದಿದ್ದರೆ ವಾಸಸ್ಥಳ ಪ್ರಮಾಣಪತ್ರ ನೀಡಿ, ಆಯ್ಕೆಯಾದ ನಂತರ ಆಧಾರ್ ಸಲ್ಲಿಸಬೇಕು)
✔ 5ನೇ ತರಗತಿ ಓದುತ್ತಿರುವ ಬಗ್ಗೆ ಶಾಲಾ ಪ್ರಮಾಣಪತ್ರ
✔ ಗ್ರಾಮೀಣ ಮೀಸಲಾತಿಗೆ ಅರ್ಹತೆ ಇದ್ದಲ್ಲಿ ಸಂಬಂಧಿತ ಪ್ರಮಾಣಪತ್ರ
ಪರೀಕ್ಷಾ ಮಾದರಿ (Exam Pattern)
JNVST ಪರೀಕ್ಷೆ ಒಟ್ಟು 80 ಪ್ರಶ್ನೆಗಳಿಗೆ 100 ಅಂಕಗಳಿಗೆ ನಡೆಯುತ್ತದೆ. ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು 2 ಗಂಟೆಗಳ ಕಾಲಾವಕಾಶ ಇರುತ್ತದೆ. ನೆಗೆಟಿವ್ ಮಾರ್ಕಿಂಗ್ ಇಲ್ಲ.
- ಮಾನಸಿಕ ಸಾಮರ್ಥ್ಯ ಪರೀಕ್ಷೆ (MAT) – 40 ಪ್ರಶ್ನೆಗಳು, 50 ಅಂಕಗಳು
- ಗಣಿತ ಪರೀಕ್ಷೆ (Arithmetic Test) – 25 ಪ್ರಶ್ನೆಗಳು, 25 ಅಂಕಗಳು
- ಭಾಷಾ ಪರೀಕ್ಷೆ (Language Test) – 15 ಪ್ರಶ್ನೆಗಳು, 25 ಅಂಕಗಳು
ಪರೀಕ್ಷೆಯನ್ನು ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತದೆ. ಎಲ್ಲಾ ಮೂರು ವಿಭಾಗಗಳಲ್ಲಿ ಕನಿಷ್ಠ ಅಂಕ ಗಳಿಸುವುದು ಆಯ್ಕೆಗೆ ಕಡ್ಡಾಯ.
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ಜಾಲತಾಣ https://cbseitms.rcil.gov.in/nvs/ ಗೆ ಭೇಟಿ ನೀಡಿ.
- Class VI Admission 2027-28 ಲಿಂಕ್ ಮೇಲೆ ಕ್ಲಿಕ್ ಮಾಡಿ.


- ಅಗತ್ಯ ವಿವರಗಳನ್ನು ಬಳಸಿ ನೋಂದಣಿ ಮಾಡಿಕೊಳ್ಳಿ ಮತ್ತು ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿ ಭರ್ತಿ ಮಾಡಿ.
- ಫೋಟೋ, ಸಹಿ ಮತ್ತು ಇತರ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ, ದೃಢೀಕರಣ ಪುಟದ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಮುಖ್ಯ ಮಾಹಿತಿ: ಅರ್ಜಿ ಶುಲ್ಕ ಇಲ್ಲ — ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಸಂಪೂರ್ಣ ಉಚಿತ ನೋಂದಣಿ.
ಟಿಪ್ಸ್
✔ ಕೊನೆಯ ದಿನದವರೆಗೆ ಕಾಯದೆ ಬೇಗ ನೋಂದಣಿ ಮಾಡಿಕೊಳ್ಳಿ, ಸರ್ವರ್ ಸಮಸ್ಯೆ ತಪ್ಪಿಸಬಹುದು.
✔ ಫೋಟೋ ಮತ್ತು ಸಹಿ ಅಧಿಕೃತ ಸೈಜ್/ಫಾರ್ಮ್ಯಾಟ್‌ನಲ್ಲೇ ಅಪ್‌ಲೋಡ್ ಮಾಡಿ.
✔ ಜಿಲ್ಲಾ ನಿವಾಸ ಮಾಹಿತಿ ನಿಖರವಾಗಿ ನಮೂದಿಸಿ, ತಪ್ಪಾದರೆ ಅರ್ಜಿ ತಿರಸ್ಕರಿಸಬಹುದು.
✔ MAT ವಿಭಾಗಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟು ಅಭ್ಯಾಸ ಮಾಡಿ, ಇದು ಅತಿ ಹೆಚ್ಚು ಅಂಕದ ವಿಭಾಗ.
ಪ್ರಮುಖ ಲಿಂಕ್‌ಗಳು
| ವಿವರ | ಲಿಂಕ್ |
|---|---|
| ಅಧಿಕೃತ ಅಧಿಸೂಚನೆ PDF | Download |
| Online ಅರ್ಜಿ ಲಿಂಕ್ | Apply Here |
| WhatsApp Group | Join |
| Telegram Channel | Join |
| ಹೆಚ್ಚಿನ ಮಾಹಿತಿ | Karnataka24.in |











