Punjab and Sind Bank Apprentice 2026 ಅಡಿ 635 ಹುದ್ದೆಗಳಿಗೆ ಅರ್ಜಿ ಆಹ್ವಾನ. ₹12,300 ಮಾಸಿಕ ವೇತನ. SC/ST ₹100, General/OBC ₹200 ಅರ್ಜಿ ಶುಲ್ಕ. ಕೊನೆ ದಿನ 06-06-2026. punjabandsind.bank.in ನಲ್ಲಿ ಅರ್ಜಿ ಸಲ್ಲಿಸಿ.
ಪದವಿ ಮುಗಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಬಂದಿದೆ. Punjab and Sind Bank Apprentice 2026 ಅಡಿಯಲ್ಲಿ ದೇಶಾದ್ಯಂತ 635 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ 10 ಹುದ್ದೆಗಳು ಲಭ್ಯವಿದ್ದು, ಕೊನೆ ದಿನ ಜೂನ್ 6, 2026.
ಪ್ರಮುಖ ವಿವರಗಳು
- ಸಂಸ್ಥೆಯ ಹೆಸರು: ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (ಭಾರತ ಸರ್ಕಾರದ ಉದ್ಯಮ)
- ಹುದ್ದೆಯ ಹೆಸರು: ಅಪ್ರೆಂಟಿಸ್ (Apprentice)
- ಒಟ್ಟು ಹುದ್ದೆಗಳು: 635
- ಕೆಲಸದ ಸ್ಥಳ: ದೇಶಾದ್ಯಂತ (ಕರ್ನಾಟಕ – 10 ಹುದ್ದೆ, ಬೆಂಗಳೂರು ನಗರ)
ವಿದ್ಯಾರ್ಹತೆ
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದೇ ವಿಷಯದಲ್ಲಿ ಪದವಿ (Degree) ಪೂರ್ಣಗೊಳಿಸಿರಬೇಕು. Postgraduate ಪದವೀಧರರು ಮತ್ತು 1 ವರ್ಷ ಅಥವಾ ಹೆಚ್ಚಿನ ಕೆಲಸ ಅನುಭವ ಇರುವ ಅಭ್ಯರ್ಥಿಗಳು ಅರ್ಹರಲ್ಲ. ಅರ್ಹತಾ ಪರೀಕ್ಷೆ ತೇರ್ಗಡೆ ಆಗಿ 5 ವರ್ಷ ಮೀರಿರಬಾರದು.
ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹12,300/- Stipend ನೀಡಲಾಗುತ್ತದೆ. ತರಬೇತಿ ಅವಧಿ 12 ತಿಂಗಳು. ಈ ಹುದ್ದೆ ಉದ್ಯೋಗ ಅಲ್ಲ – ತರಬೇತಿ ಕಾರ್ಯಕ್ರಮ ಮಾತ್ರ.
ವಯೋಮಿತಿ
01-05-2026 ರಂತೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ಇರಬೇಕು.
ವಯೋಮಿತಿ ಸಡಿಲಿಕೆ:
- OBC ಅಭ್ಯರ್ಥಿಗಳಿಗೆ: 3 ವರ್ಷ
- SC/ST ಅಭ್ಯರ್ಥಿಗಳಿಗೆ: 5 ವರ್ಷ
- PwBD (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷ
ಅರ್ಜಿ ಶುಲ್ಕ
- ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳಿಗೆ: ₹200/-
- SC / ST / PWD ಅಭ್ಯರ್ಥಿಗಳಿಗೆ: ₹100/-
ಆಯ್ಕೆ ಪ್ರಕ್ರಿಯೆ
- ಅರ್ಹತಾ ಪಟ್ಟಿ (10+2 ಅಂಕಗಳ ಆಧಾರದ Merit List)
- ವೈದ್ಯಕೀಯ ಪರೀಕ್ಷೆ
ಅಭ್ಯರ್ಥಿಗಳ ಆಯ್ಕೆ 10+2 (HSC) ಅಂಕಗಳ ಆಧಾರದ ಮೇಲೆ State-wise, District-wise ಮತ್ತು Category-wise Merit List ತಯಾರಿಸಿ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು apprenticeshipindia.gov.in ಅಥವಾ nats.education.gov.in ನಲ್ಲಿ Registration ಮಾಡಿಕೊಳ್ಳಿ ಮತ್ತು Profile 100% Complete ಮಾಡಿ.
- ಅರ್ಜಿ ಸಲ್ಲಿಸುವ ಮುನ್ನ ನಿಮ್ಮ Email ID, ಮೊಬೈಲ್ ಸಂಖ್ಯೆ, ಐಡಿ ಪ್ರೂಫ್, ಮಾರ್ಕ್ಸ್ ಕಾರ್ಡ್ ಮತ್ತು ರೆಸ್ಯೂಮೆಗಳನ್ನು ಸಿದ್ಧಾಗಿಟ್ಟುಕೊಳ್ಳಿ.
- ಕೆಳಗೆ ನೀಡಿರುವ ಅರ್ಜಿ ಲಿಂಕ್ ಕ್ಲಿಕ್ ಮಾಡಿ punjabandsind.bank.in ನಲ್ಲಿ ಆನ್‌ಲೈನ್ ಅರ್ಜಿ ಫಾರ್ಮ್ ತೆರೆಯಿರಿ.
- ನಿಮ್ಮ ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
- ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನುಗುಣವಾಗಿ ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಕೊನೆಯದಾಗಿ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ‘Submit’ ಬಟನ್ ಒತ್ತಿ. ಮುಂದಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 21-05-2026
- ಅರ್ಜಿ ಸಲ್ಲಿಸಲು ಕೊನೆಯ ದಿನ: 06-06-2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 06-06-2026
ಪ್ರಮುಖ ಲಿಂಕ್‌ಗಳು
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
|---|---|
| ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ | Click Here |
| ಅರ್ಜಿ ಆನ್‌ಲೈನ್ | Click Here |











