ರೈಲ್ವೆ ಸೆಕ್ಷನ್ ಕಂಟ್ರೋಲರ್ ನೇಮಕಾತಿ 2026: 119 ಹುದ್ದೆಗಳಿಗೆ ಅರ್ಜಿ ಆಹ್ವಾನ | RRB Section Controller Recruitment 2026.

Photo of author

Mantesh

Publish: July 15, 2026
RRB Section Controller Recruitment 2026

share Share:

ರೈಲ್ವೆ ನೇಮಕಾತಿ ಮಂಡಳಿ (RRB) ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ CEN No. 03/2026 ಅಧಿಸೂಚನೆ ಬಿಡುಗಡೆ. 119 ಹುದ್ದೆಗಳು, ಪದವಿ ಅರ್ಹತೆ, ವಯೋಮಿತಿ, ಸಂಬಳ, ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಕೆ ವಿಧಾನ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಲೋ ಸ್ನೇಹಿತರೇ ನಮಸ್ಕಾರ! ಪದವೀಧರ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶ ಒದಗಿ ಬಂದಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ಸೆಕ್ಷನ್ ಕಂಟ್ರೋಲರ್ (ವಿಭಾಗ ನಿಯಂತ್ರಕ) ಹುದ್ದೆಗಳ ಭರ್ತಿಗಾಗಿ ಕೇಂದ್ರೀಕೃತ ಉದ್ಯೋಗ ಅಧಿಸೂಚನೆ (CEN) ಸಂಖ್ಯೆ 03/2026 ಅನ್ನು ಬಿಡುಗಡೆ ಮಾಡಿದೆ. ಒಟ್ಟು 119 ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

✅ ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜುಲೈ 15, 2026
✅ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 14, 2026
✅ ಅರ್ಜಿ ಶುಲ್ಕ ಪಾವತಿಗೆ ಕೊನೆದಿನ – ಆಗಸ್ಟ್ 16, 2026
✅ ಅರ್ಜಿ ನಮೂನೆ ತಿದ್ದುಪಡಿಗೆ ಅವಕಾಶ – ಆಗಸ್ಟ್ 17 ರಿಂದ 26ರವರೆಗೆ

ಮುಖ್ಯ ಮಾಹಿತಿ: ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಕೊನೆಯ ಕ್ಷಣದ ಒತ್ತಡ ತಪ್ಪಿಸಲು ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

ಒಟ್ಟು ಹುದ್ದೆಗಳ ಸಂಖ್ಯೆ

ಈ ಅಧಿಸೂಚನೆಯಡಿ ಒಟ್ಟು 119 ಸೆಕ್ಷನ್ ಕಂಟ್ರೋಲರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ವಿವಿಧ ರೈಲ್ವೆ ವಲಯಗಳಲ್ಲಿ (ಬೆಂಗಳೂರು ಸೇರಿದಂತೆ) ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಶೈಕ್ಷಣಿಕ ಅರ್ಹತೆ

✅ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು

ವಯೋಮಿತಿ

01-07-2026ರಂತೆ ಲೆಕ್ಕಾಚಾರ:

✅ ಕನಿಷ್ಠ ವಯಸ್ಸು – 20 ವರ್ಷಗಳು
✅ ಗರಿಷ್ಠ ವಯಸ್ಸು – 33 ವರ್ಷಗಳು

(ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ)

ಆಯ್ಕೆ ವಿಧಾನ

ಅಭ್ಯರ್ಥಿಗಳ ಆಯ್ಕೆ ಈ ಕೆಳಗಿನ ಹಂತಗಳ ಮೂಲಕ ನಡೆಯಲಿದೆ:

✅ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
✅ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ (CBAT)
✅ ದಾಖಲೆ ಪರಿಶೀಲನೆ (DV)
✅ ವೈದ್ಯಕೀಯ ಪರೀಕ್ಷೆ (MD)

ಸಂಬಳ

7ನೇ ಕೇಂದ್ರ ವೇತನ ಆಯೋಗದ (7th CPC) ಮಟ್ಟ 6ರ ಪ್ರಕಾರ ಮಾಸಿಕ ರೂ.35,400/- ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ

✅ ಮಹಿಳೆ/ಟ್ರಾನ್ಸ್‌ಜೆಂಡರ್/ಮಾಜಿ ಸೈನಿಕ/ಎಸ್ಸಿ/ಎಸ್ಟಿ/ಅಲ್ಪಸಂಖ್ಯಾತ/ಇಬಿಸಿ/ಪಿಡಬ್ಲ್ಯೂಬಿಡಿ ವರ್ಗ – ರೂ.250/-
✅ ಉಳಿದ ಎಲ್ಲಾ ವರ್ಗಗಳು – ರೂ.500/-

ಅರ್ಜಿ ಸಲ್ಲಿಸುವ ವಿಧಾನ

✅ ಅಧಿಕೃತ ಜಾಲತಾಣ rrbapply.gov.in ಗೆ ಭೇಟಿ ನೀಡಿ
✅ ಹೊಸ ಬಳಕೆದಾರರಾಗಿದ್ದಲ್ಲಿ ಖಾತೆ ಸೃಜಿಸಿ, ಈಗಾಗಲೇ ಇದ್ದಲ್ಲಿ ಲಾಗಿನ್ ಮಾಡಿ
✅ “Online Application” ವಿಭಾಗದಲ್ಲಿ CEN No. 03/2026 – Section Controller ಆಯ್ಕೆ ಮಾಡಿ
✅ ಸಂಬಂಧಿತ ರೈಲ್ವೆ ನೇಮಕಾತಿ ಮಂಡಳಿ (ಉದಾ: ಬೆಂಗಳೂರು) ಆಯ್ಕೆ ಮಾಡಿ
✅ Personal Details, Other Details, Educational Qualification ಭರ್ತಿ ಮಾಡಿ
✅ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
✅ Preference ಆಯ್ಕೆ ಮಾಡಿ, Preview ಮಾಡಿ ಅರ್ಜಿ Submit ಮಾಡಿ

ಪ್ರಮುಖ ಲಿಂಕ್‌ಗಳು

ವಿವರಲಿಂಕ್
ಅಧಿಕೃತ ಶಾರ್ಟ್ ನೋಟಿಫಿಕೇಶನ್ PDFDownload
ಅಧಿಕೃತ ವಿವರವಾದ ನೋಟಿಫಿಕೇಶನ್ PDFDownload
ಆನ್‌ಲೈನ್ ಅರ್ಜಿ ಲಿಂಕ್Apply Now
ಅಧಿಕೃತ ಜಾಲತಾಣRRBs
Join WhatsAppJoin Telegram

Join
Join WhatsApp Group