SSB ಹೆಡ್ ಕಾನ್ಸ್ಟೇಬಲ್ ನೇಮಕಾತಿ 2026: ಒಟ್ಟು 76 ಹುದ್ದೆಗಳಿಗೆ Online ಅರ್ಜಿ ಆಹ್ವಾನ. ಅರ್ಹತೆ, ಸಂಬಳ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ತಿಳಿಯಿರಿ. ಏಪ್ರಿಲ್ 20 ಕೊನೆಯ ದಿನ.
ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಶಸ್ತ್ರ ಸೀಮಾ ಬಲ (SSB) ಇದೀಗ ಗ್ರೂಪ್-‘ಸಿ’ ವರ್ಗದ ಒಟ್ಟು 76 ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಹೆಡ್ ಕಾನ್ಸ್ಟೇಬಲ್ (ಪ್ರಯೋಗಾಲಯ ಸಹಾಯಕ), ಹೆಡ್ ಕಾನ್ಸ್ಟೇಬಲ್ (ಫಿಸಿಯೋಥೆರಪಿ ಸಹಾಯಕ), ಮತ್ತು ಕಾನ್ಸ್ಟೇಬಲ್ (Nursing Assistant cum Medic) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ Online ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 20, 2026 ಅರ್ಜಿ ಸಲ್ಲಿಸಲು ಕೊನೆಯ ದಿನ. ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಮಾರ್ಚ್ 21, 2026
- ಅರ್ಜಿ ಸಲ್ಲಿಸಲು ಕೊನೆಯ ದಿನ – ಏಪ್ರಿಲ್ 20, 2026
- ಅರ್ಜಿ ಶುಲ್ಕ ಪಾವತಿ ಕೊನೆಯ ದಿನ – ಏಪ್ರಿಲ್ 20, 2026
ಖಾಲಿ ಇರುವ ಹುದ್ದೆಗಳ ವಿವರ:
| ಹುದ್ದೆಯ ಹೆಸರು | ಖಾಲಿ ಸ್ಥಾನಗಳು |
|---|---|
| ಹೆಡ್ ಕಾನ್ಸ್ಟೇಬಲ್ (ಪ್ರಯೋಗಾಲಯ ಸಹಾಯಕ) | 30 |
| ಹೆಡ್ ಕಾನ್ಸ್ಟೇಬಲ್ (ಫಿಸಿಯೋಥೆರಪಿ ಸಹಾಯಕ) | 12 |
| ಕಾನ್ಸ್ಟೇಬಲ್ (Nursing Assistant cum Medic) | 34 |
| ಒಟ್ಟು | 76 |
ಶೈಕ್ಷಣಿಕ ಅರ್ಹತೆ:
✓ ಹೆಡ್ ಕಾನ್ಸ್ಟೇಬಲ್ (ಪ್ರಯೋಗಾಲಯ ಸಹಾಯಕ): ಮಾನ್ಯತೆ ಪಡೆದ ಮಂಡಳಿಯಿಂದ Biology ವಿಷಯದೊಂದಿಗೆ 2ನೇ PUC ಉತ್ತೀರ್ಣ ಹಾಗೂ Lab Assistant ಕೋರ್ಸ್ Certificate ಸಹಿತ ಕನಿಷ್ಠ 1 ವರ್ಷದ ಅನುಭವ ಇರಬೇಕು.
✓ ಹೆಡ್ ಕಾನ್ಸ್ಟೇಬಲ್ (ಫಿಸಿಯೋಥೆರಪಿ ಸಹಾಯಕ): ಮಾನ್ಯತೆ ಪಡೆದ ಮಂಡಳಿಯಿಂದ 2ನೇ PUC ಉತ್ತೀರ್ಣ ಹಾಗೂ Physiotherapy ಕೋರ್ಸ್ Certificate ಸಹಿತ ಕನಿಷ್ಠ 1 ವರ್ಷದ ಅನುಭವ ಇರಬೇಕು.
✓ ಕಾನ್ಸ್ಟೇಬಲ್ (Nursing Assistant cum Medic): ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣ ಹಾಗೂ First Aid ಕೋರ್ಸ್ Certificate ಸಹಿತ Nursing ಸಹಾಯಕರಾಗಿ ಕನಿಷ್ಠ 1 ವರ್ಷದ ಅನುಭವ ಇರಬೇಕು.
ವಯೋಮಿತಿ:
✓ ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ: ಕನಿಷ್ಠ 18 ವರ್ಷ – ಗರಿಷ್ಠ 30 ವರ್ಷ ✓ ಕಾನ್ಸ್ಟೇಬಲ್ ಹುದ್ದೆಗಳಿಗೆ: ಕನಿಷ್ಠ 18 ವರ್ಷ – ಗರಿಷ್ಠ 27 ವರ್ಷ
ವಯೋಮಿತಿ ಸಡಿಲಿಕೆ: ಪ.ಜಾತಿ ಮತ್ತು ಪ.ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, OBC ಮತ್ತು ಮಾಜಿ ಸೈನಿಕರಿಗೆ 3 ವರ್ಷ, ಇಲಾಖಾ ಅಭ್ಯರ್ಥಿಗಳಿಗೆ (ಸಾಮಾನ್ಯ) 40 ವರ್ಷ ಮತ್ತು ಪ.ಜಾತಿ/ಪ.ಪಂಗಡ ಇಲಾಖಾ ಅಭ್ಯರ್ಥಿಗಳಿಗೆ 45 ವರ್ಷದವರೆಗೆ.
ಆಯ್ಕೆ ಪ್ರಕ್ರಿಯೆ:
- ದೈಹಿಕ ದಕ್ಷತೆ ಪರೀಕ್ಷೆ (PET)
- ದೈಹಿಕ ಗುಣಮಟ್ಟ ಪರೀಕ್ಷೆ (PST)
- ಲಿಖಿತ ಪರೀಕ್ಷೆ (Written Test)
- ದಾಖಲಾತಿ ಮತ್ತು ವಿವರವಾದ ವೈದ್ಯಕೀಯ ಪರೀಕ್ಷೆ (DME)
- ದಾಖಲೆ ಪರಿಶೀಲನೆ (DV)
📌 ಗಮನಿಸಿ: SI (Staff Nurse) ಹುದ್ದೆಗೆ PET ಇರುವುದಿಲ್ಲ, ಆದರೆ Pharmacist ಹುದ್ದೆಗೆ PET ಕಡ್ಡಾಯ.
ಸಂಬಳ:
- ಹೆಡ್ ಕಾನ್ಸ್ಟೇಬಲ್ (ಪ್ರಯೋಗಾಲಯ ಸಹಾಯಕ ಮತ್ತು ಫಿಸಿಯೋಥೆರಪಿ ಸಹಾಯಕ): ₹25,500 ರಿಂದ ₹81,100
- ಕಾನ್ಸ್ಟೇಬಲ್ (Nursing Assistant cum Medic): ₹21,700 ರಿಂದ ₹69,100
ಇದರ ಜೊತೆಗೆ DA, HRA, Ration Allowance ಸೇರಿದಂತೆ ಇತರ ಕೇಂದ್ರ ಸರ್ಕಾರಿ ಭತ್ಯೆಗಳು ಸಹ ದೊರೆಯಲಿವೆ.
ಅರ್ಜಿ ಶುಲ್ಕ:
- ಹೆಡ್ ಕಾನ್ಸ್ಟೇಬಲ್ ಹುದ್ದೆಗೆ (ಸಾಮಾನ್ಯ / OBC / EWS): ₹200
- ಕಾನ್ಸ್ಟೇಬಲ್ ಹುದ್ದೆಗೆ (ಸಾಮಾನ್ಯ / OBC / EWS): ₹100
- ಪ.ಜಾತಿ, ಪ.ಪಂಗಡ, ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ
ಶುಲ್ಕ ಪಾವತಿ Online ಮೂಲಕ (Debit Card / Credit Card / Net Banking / UPI) ಮಾಡಬಹುದು.
ಅರ್ಜಿ ಸಲ್ಲಿಸುವ ವಿಧಾನ:
- SSB ಅಧಿಕೃತ ಜಾಲತಾಣ https://applyssb.com ಗೆ ಭೇಟಿ ನೀಡಿ.

- “SSB_ADVT_MED_2026” ಅಡಿಯಲ್ಲಿರುವ Application Link ಮೇಲೆ Click ಮಾಡಿ.
- ಹೊಸ ಬಳಕೆದಾರರಾಗಿದ್ದರೆ, ಹೆಸರು, Mobile ನಂಬರ್, Email ID ನಮೂದಿಸಿ Register ಮಾಡಿ.
- Login ಮಾಡಿ, ವೈಯಕ್ತಿಕ ಮಾಹಿತಿ, ಶೈಕ್ಷಣಿಕ ವಿವರ ಮತ್ತು ಅನುಭವ ನಮೂದಿಸಿ.
- Photo, Signature ಮತ್ತು ಅಗತ್ಯ ದಾಖಲಾತಿಗಳನ್ನು Upload ಮಾಡಿ.
- Online ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ, Submit ಮಾಡಿ.
- ಅಂತಿಮವಾಗಿ Submitted ಅರ್ಜಿಯ Printout ತೆಗೆದಿಟ್ಟುಕೊಳ್ಳಿ.
Important Direct Links:
| ವಿವರ | Link |
|---|---|
| SSB HC Official Notification PDF | Download |
| SSB Constable Official Notification PDF | Download |
| Online Application Form | Apply Now |
| Official Website | https://ssb.gov.in |
| ಹೆಚ್ಚಿನ ಮಾಹಿತಿಗಾಗಿ | karnataka24.in |











