RTE Free admission 2025: ಖಾಸಗಿ ಶಾಲೆಗಳಲ್ಲಿ ನಿಮ್ಮ ಮಕ್ಕಳಿಗೆ ಉಚಿತ ಶಿಕ್ಷಣ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಇತರ ಸಂಪೂರ್ಣ ಮಾಹಿತಿ ಇಲ್ಲಿದೆ..!

Photo of author

Mantesh

Publish: April 26, 2025
RTE Free admission 2025

share Share:

ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದಲ್ಲಿ (RTE Free admission 2025) ನಾವು ನಿಮಗೆ ಕೇಂದ್ರ ಸರ್ಕಾರದ ಶಿಕ್ಷಣ ಹಕ್ಕು ಕಾಯ್ದೆ -RTE ಯ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ. ಹಾಗೂ 2025-26 ಸಾಲಿನ RTE Free addmission ನ ಕುರಿತು ಮಾಹಿತಿಯನ್ನು ನೀಡುತ್ತೇವೆ. RTE ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಕೆಗೆ ಯಾರು ಅರ್ಹರು? ಅರ್ಜಿ ಸಲ್ಲಿಸಲು ಯಾವ ರೀತಿಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗಿದೆ. ದಯವಿಟ್ಟು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;

RTE Free admission 2025: ಆರ್ ಟಿ ಇ ಕುರಿತು.

RTE ಕಾಯ್ದೆಯು 2009ರಲ್ಲಿ ಜಾರಿ ಮಾಡಲಾಯಿತು. ಈ ಕಾಯ್ದೆಯ ಪ್ರಕಾರ 6 ರಿಂದ 14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡಬೇಕು ಇದು ಪೋಷಕರ ಆದ್ಯ ಕರ್ತವ್ಯ. ಹಾಗೂ ಈ ಕಾಯ್ದೆಯ ಮೂಲಕವೇ ಶಿಕ್ಷಣವೆಂಬುದನ್ನು ಪ್ರತಿ ಮಗುವಿನ ಮೂಲಭೂತ ಹಕ್ಕು ಎಂದು ಹೇಳಲಾಯಿತು. ಇದೇ ಒಂದು ಕಾಯ್ದೆಯಲ್ಲಿ ಇನ್ನೊಂದು ಮಹತ್ವದ ಅಂಶ ಏನೆಂದರೆ, ದೇಶದ ಪ್ರತಿಯೊಂದು ಖಾಸಗಿ ಶಾಲೆಗಳಲ್ಲಿ 25% ನಷ್ಟು ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲು ಇಡಬೇಕು ಎಂಬುದು.

Vivo T4 5G – ಅಬ್ಬಾ…! ಇಷ್ಟು ಕಡಿಮೆ ಬೆಲೆಯಲ್ಲಿ ಅದೆಷ್ಟೋ ಫೀಚರ್ಸ. Vivo ಕಂಪನಿಯ T-Series ನ ಮತ್ತೊಂದು ಫೋನ್ ಮಾರುಕಟ್ಟೆಗೆ.

ಖಾಸಗಿ ಶಾಲೆಗಳಲ್ಲಿ 25% ಉಚಿತ ಸೀಟು.RTE Free admission 2025

2009ರಲ್ಲಿ ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆ ( right to education act – 2009) ಪ್ರಕಾರ, ಆರರಿಂದ ಹದಿನಾಲ್ಕು ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸುವುದು ಪೋಷಕರ ಆದ್ಯ ಕರ್ತವ್ಯವಾಗಬೇಕು ಹಾಗೂ ಇದು ಮಕ್ಕಳ ಒಂದು ಮೂಲಭೂತ ಹಕ್ಕು. ಈ ಒಂದು ಕಾಯ್ದೆಯ ಅಡಿಯಲ್ಲಿ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕನಿಷ್ಠಪಕ್ಷ 25% ಸೀಟುಗಳನ್ನು ಅರ್ಹ ಮಕ್ಕಳಿಗೆ ಮೀಸಲಿಡಬೇಕು ಎಂಬುದು. ಯಾರು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ ಅಂತಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು, ಶೋಷಿತ ಸಮುದಾಯದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಮುಕ್ತ ಅವಕಾಶಗಳನ್ನು ಸೃಷ್ಟಿಸುವುದು ಈ ಒಂದು ಕಾಯ್ದೆಯ ಪ್ರಮುಖ ಉದ್ದೇಶ.

RTE ಕಾಯ್ದೆಯು ಪ್ರಮುಖ ಲಾಭ.RTE Free admission 2025.

RTE Free admission 2025

ಯಾವುದೇ ರೀತಿಯ ಖಾಸಗಿ ಶಾಲೆಗಳಲ್ಲಿ ಪ್ರವೇಶಗಳನ್ನು ಪಡೆಯಬಹುದು.
ಪ್ರವೇಶ ಪಡೆಯಲು ಯಾವುದೇ ರೀತಿಯ ಪ್ರವೇಶ ಶುಲ್ಕ ಹಾಗೂ ಡೊನೇಷನ್ ನೀಡುವ ಅಗತ್ಯ ಇರುವುದಿಲ್ಲ.
ಮಕ್ಕಳ ಎಲ್ಲಾ ಶೈಕ್ಷಣಿಕ ಖರ್ಚನ್ನು ಸರ್ಕಾರವೇ ಭರಿಸುವುದು.
ವಿದ್ಯಾರ್ಥಿಗಳಿಗೆ ಅಗತ್ಯವಾದ ಪುಸ್ತಕಗಳು, ಯೂನಿಫಾರ್ಮ್, ಉಚಿತ ಮಧ್ಯಾಹ್ನದ ಊಟ ಹಾಗೂ ಇನ್ನಿತರ ಸೌಲಭ್ಯಗಳನ್ನು ಸರ್ಕಾರವೇ ತನ್ನ ಖರ್ಚಿನಲ್ಲಿ ನೀಡುವುದು.

Free sewing machine: ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣೆ! ಅಗತ್ಯ ದಾಖಲೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ.

ಯಾರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರು?RTE Free admission 2025.

  • ಈ ಒಂದು RTE Free admission 2025 ಕಾಯ್ದೆಯ ಅಡಿಯಲ್ಲಿ ಪ್ರಯೋಜನವನ್ನು ಪಡೆಯುವ ಪೋಷಕರು ಮತ್ತು ಮಕ್ಕಳು, ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಭರ್ತಿ ಹೊಂದುವ ತರಗತಿಗೆ ಅನುಗುಣವಾಗಿ ವಯೋಮಿತಿಯನ್ನು ಹೊಂದಿರಬೇಕು. ಎಲ್ ಕೆ ಜಿ ಗೆ 3 ವರ್ಷ ಹತ್ತು ತಿಂಗಳಿನಿಂದ 4 ವರ್ಷ ಹತ್ತು ತಿಂಗಳವರೆಗೆ , ಹಾಗೂ 1 ನೆಯ ತರಗತಿಗೆ 5 ವರ್ಷ ಹತ್ತು ತಿಂಗಳಿನಿಂದ 6 ವರ್ಷ ಹತ್ತು ತಿಂಗಳವರೆಗೆ ವಯೋಮಿತಿ ಹೊಂದಿರಬೇಕು.
  • ಕುಟುಂಬದ ವಾರ್ಷಿಕ ಆದಾಯ ರೂ.2 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಬಿಪಿಎಲ್ ಕಾರ್ಡ್ ( ಪಡಿತರ ಚೀಟಿ) ಹೊಂದಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪೋಷಕರ ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮಕ್ಕಳ ಜನನ ಪ್ರಮಾಣ ಪತ್ರ
  • ನಿವಾಸ ದೃಢೀಕರಣ ( ರೇಷನ್ ಕಾರ್ಡ್/ವೋಟರ್ ಐಡಿ/ಇತರೆ)
  • ಪಾಸ್ ಪೋರ್ಟ್ ಅಳತೆಯ ಫೋಟೋ ( 2 ಪ್ರತಿ)

ಅರ್ಜಿ ಸಲ್ಲಿಕೆ ವಿಧಾನ

ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ RTE ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು. RTE ಅಧಿಕೃತ ವೆಬ್ಸೈಟ್ ಪ್ರವೇಶಿಸಲು.


APPLY LINK: ಇಲ್ಲಿ ಕ್ಲಿಕ್ ಮಾಡಿ;


ಮೊದಲಿಗೆ ಮಗುವಿನ ಆಧಾರ್ ವಿವರಗಳನ್ನು ನಮೂದಿಸಿ ಹಾಗೂ OTP ಮೂಲಕ ದೃಢೀಕರಣ ಮಾಡಿ. ಇದರ ಮೂಲಕ ವಿದ್ಯಾರ್ಥಿಯು ಅರ್ಹ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಿ ಮುಂದಿನ ಹಂತದಲ್ಲಿ ವಿದ್ಯಾರ್ಥಿಯ ವಿವರ ಹಾಗೂ ಪೋಷಕರ ವಿವರಗಳನ್ನು ನಮೂದಿಸಿ.
ಮುಂದಿನ ಹಂತದಲ್ಲಿ ಶಾಲೆಯ ಆಯ್ಕೆ: ನಿಮ್ಮ ನಿವಾಸದ ವ್ಯಾಪ್ತಿಯಲ್ಲಿ ಬರುವ ಶಾಲೆಗಳು ಮಾತ್ರ ಇದರಲ್ಲಿ ಲಭ್ಯವಿರುತ್ತವೆ ಅದು ಸಹ ಒಂದು ಕಿಲೋಮೀಟರ್ ನಿಂದ 3 ಕಿಲೋ ಮೀಟರ್ ವ್ಯಾಪ್ತಿಯ ಒಳಗಡೆ ಬರುವ ಶಾಲೆಗಳು. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿ ಪರಿಶೀಲಿಸಿ ಹಾಗೂ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

Ration card e-kyc: ಏಪ್ರಿಲ್ 30ರ ನಂತರ ರೇಷನ್ ಕಾರ್ಡ್ ಬಂದ್? ಈ-ಕೆ ವೈ ಸಿ ಕೊನೆಯ ದಿನಾಂಕ!

RTE 2025-26 ಪ್ರವೇಶದ ವೇಳಾಪಟ್ಟಿ

  • ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಏಪ್ರಿಲ್ 15
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 12
  • ಅರ್ಜಿ ದಾಖಲೆಯ ಪರಿಶೀಲನೆ: ಮೇ 14
  • ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: ಮೇ 17
  • ಮೊದಲ ಹಂತದ ಲಾಟರಿ ಆಧಾರಿತ ಸೀಟು ಹಂಚಿಕೆ: ಮೇ 21
  • ಶಾಲಾ ಪ್ರವೇಶ: ಮೇ ಕೊನೆಯ ವಾರ

ಆಯ್ಕೆಯ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಯು ಸಲ್ಲಿಸಿದ ಅರ್ಜಿಗಳನ್ನು ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ, ಮೇ 17ನೇ ದಿನಾಂಕದಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ನಂತರ ಲಾಟರಿ ಆಧಾರಿತ ಆಯ್ಕೆ ವಿಧಾನದಿಂದ ಸೀಟುಗಳನ್ನು ಹಂಚಲಾಗುತ್ತದೆ. ಆಯ್ಕೆಯಾದ ಮಕ್ಕಳಿಗೆ ಆಯ್ಕೆ ಪತ್ರ ನೀಡಲಾಗುತ್ತದೆ. ನಂತರ ಪೋಷಕರು ಮಕ್ಕಳನ್ನು ಆಯ್ಕೆಯಾದ ಶಾಲೆಯಲ್ಲಿ ಪ್ರವೇಶ ಮಾಡಿಸಬಹುದು.


ವಿಶೇಷ ಸೂಚನೆ: ಅರ್ಜಿ ಸಲ್ಲಿಸುವಾಗ ಯಾವುದೇ ಕಾರಣಕ್ಕೂ ತಪ್ಪು ಮಾಹಿತಿಗಳನ್ನು ನೀಡಬೇಡಿ. ದಾಖಲೆಗಳು ಪೂರಕವಾಗಿರಬೇಕು. ವಿದ್ಯಾರ್ಥಿಯ ಆಯ್ಕೆ ಖಚಿತವಾದ ಮೇಲೆ ನಿಗದಿತ ಅವಧಿಯಲ್ಲಿ ಪ್ರವೇಶವನ್ನು ಪಡೆಯದಿದ್ದರೆ ಅವಕಾಶವೂ ತಪ್ಪುವುದು.

ಅರ್ಜಿ ಸಲ್ಲಿಕೆಯ ಲಿಂಕ್: click here

Join

1 thought on “RTE Free admission 2025: ಖಾಸಗಿ ಶಾಲೆಗಳಲ್ಲಿ ನಿಮ್ಮ ಮಕ್ಕಳಿಗೆ ಉಚಿತ ಶಿಕ್ಷಣ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಇತರ ಸಂಪೂರ್ಣ ಮಾಹಿತಿ ಇಲ್ಲಿದೆ..!”

Leave a Comment