Calcium Deficiency Symptoms In Kannada: ನಿಮ್ಮಲ್ಲಿ ಈ ಲಕ್ಷಣಗಳು ಕಂಡು ಬಂದರೆ, ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆ ಎಂದರ್ಥ.

Photo of author

Mantesh

Publish: March 10, 2025

share Share:

Introduction: ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ಮಾನವನ ದೇಹದಲ್ಲಿ ಕ್ಯಾಲ್ಸಿಯಂ ನ (Calcium Deficiency Symptoms In Kannada) ಪಾತ್ರ ಎಷ್ಟು ಹಾಗೂ ಕ್ಯಾಲ್ಸಿಯಂ ಕಡಿಮೆಯಾದರೆ ನಮ್ಮ ದೇಹದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತವೆ ಮತ್ತು ಇದಕ್ಕೆ ಪ್ರತಿಯಾಗಿ ನಾವು ಏನು ಮಾಡಬಹುದು ಯಾವ ರೀತಿಯ ಆಹಾರ ಸೇವನೆ ಶ್ರೇಷ್ಠಕರ ಎಂಬುವುದರ ಕುರಿತು ಈ ಒಂದು ಲೇಖನ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಹೇಳುತ್ತೇನೆ.ಇಂತಹ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಿ. ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ:

ಮಾನವನ ದೇಹದಲ್ಲಿ ಕ್ಯಾಲ್ಸಿಯಂ ನ ಮಹತ್ವ:Calcium Deficiency Symptoms In Kannada.

ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಕ್ಯಾಲ್ಸಿಯಂ ನ ಪ್ರಮಾಣವು 8.5 ರಿಂದ 10.2 mg/dl ಇರುತ್ತದೆ. ಒಬ್ಬ ವಯಸ್ಕ ಮನುಷ್ಯನಿಗೆ ಒಂದು ದಿನಕ್ಕೆ 1000-3000mg ರ ವರೆಗೆ ಕ್ಯಾಲ್ಸಿಯಂ ನ ಅವಶ್ಯಕತೆ ಇರುತ್ತದೆ. ಈ ಕ್ಯಾಲ್ಸಿಯಂ ನ ಪ್ರಮಾಣದಲ್ಲಿ ಶೇ 99% ಎಷ್ಟು ನಮ್ಮ ದೇಹದ ಮೂಳೆಗಳಿಗೆ ಹಾಗೂ ಹಲ್ಲುಗಳಿಗೆ ಬೇಕಾಗುತ್ತದೆ. ಇನ್ನು ಉಳಿದ ಶೇ.1% ನಷ್ಟು ಕ್ಯಾಲ್ಸಿಯಂ ನಮ್ಮ ದೇಹದ ಉಳಿದ ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ದೇಹದ ಪ್ರತಿಯೊಂದು ಜೀವಕೋಶವು ಸಹ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಕ್ಯಾಲ್ಸಿಯಂ ನ ಅಗತ್ಯ ಬಹಳ ಇದೆ. ಮಾನವನ ದೇಹದಲ್ಲಿನ ಈ ಕ್ಯಾಲ್ಸಿಯಂ ನ ಪ್ರಮಾಣವನ್ನು ನಿಯಂತ್ರಣ ಮಾಡುವ ಮೂರು ಪ್ರಮುಖ ಭಾಗಗಳು ಅಥವಾ ಕಾರಣಗಳು ಎಂದರೆ: ಕ್ಯಾಲ್ಸಿಟೋನಿನ್ ಮತ್ತು ಪ್ಯಾರಾ ಥೈರಾಯ್ಡ್, ಇದರಲ್ಲಿ ಕ್ಯಾಲ್ಸಿಟೋನಿನ್ ಮಾಡುವ ಕಾರ್ಯ ಏನೆಂದರೆ, ರಕ್ತದಲ್ಲಿನ ಕ್ಯಾಲ್ಸಿಯಂ ನ್ನು ಮೂಳೆಗಳಿಗೆ ರವಾನಿಸುವ ಕೆಲಸವನ್ನು ಈ ಒಂದು ಕ್ಯಾಲ್ಸಿಟೋನಿನ್ ಮಾಡುತ್ತದೆ. ಅದೇ ರೀತಿ ರಕ್ತದಲ್ಲಿನ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದಾಗ ಮೂಳೆಗಳಲ್ಲಿನ ಕ್ಯಾಲ್ಸಿಯಂ ಅನ್ನು ರಕ್ತಕ್ಕೆ ರವಾಯಿಸುವ ಕೆಲಸವನ್ನು ಪ್ಯಾರಾ ಥೈರಾಯ್ಡ್ ಗ್ರಂಥಿಯು ಮಾಡುತ್ತದೆ. ಈ ಎರಡು ಹಾರ್ಮೋನ್ ಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕಾದರೆ ವಿಟಮಿನ್ ಡಿ ನ ಅವಶ್ಯಕತೆ ಮಾನವನ ದೇಹಕ್ಕೆ ಬಹು ಮುಖ್ಯ.

Calcium Deficiency Symptoms


ಇವುಗಳೆಲ್ಲವೂ ಅನೈಚ್ಚಿಕ್ ಸ್ನಾಯುಗಳನ್ನು ಹೊಂದಿರುತ್ತವೆ. ಹಾಗಾಗಿ ನಾವು ಹೆಚ್ಚಿನ ಸಮಯದಲ್ಲಿ ರಕ್ತದಲ್ಲಿನ ಕ್ಯಾಲ್ಸಿಯಂ ನ ಕೊರತೆಯನ್ನು ಕಂಡುಕೊಳ್ಳಲು ಆಗುವುದಿಲ್ಲ. ಹಾಗೆ ಈ ಪ್ಯಾರಾಥೈರಾಯ್ಡ್ ಗ್ರಂಥಿಯು ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದಾಗ ಶೀಘ್ರದಲ್ಲಿ ಮೂಳೆಗಳಲ್ಲಿನ ಕ್ಯಾಲ್ಸಿಯಂ ಅನ್ನು ರಕ್ತಕ್ಕೆ ರವಾನೆ ಮಾಡುವ ಕೆಲಸ ಮಾಡುತ್ತದೆ. ಹಾಗಾಗಿ ನಾವು ಅತಿ ಹೆಚ್ಚಾಗಿ ಕ್ಯಾಲ್ಸಿಯಂ ನ ಕೊರತೆಯನ್ನು ಮೂಳೆಗಳಲ್ಲಿಯೇ ಕಾಣುತ್ತೇವೆ. ಕ್ಯಾಲ್ಸಿಯಂ ದೇಹದ ಇನ್ನಿತರ ಕಾರ್ಯ ಚಟುವಟಿಕೆಗಳಿಗೆ ಅತಿ ಮುಖ್ಯವಾಗಿರುವುದರಿಂದ ದೇಹದಲ್ಲಿ ಇದರ ಪ್ರಮಾಣ ಕಡಿಮೆಯಾದಾಗ ಕೆಲವೊಂದು ಲಕ್ಷಣಗಳನ್ನೂ ನಾವು ಕಾಣಬಹುದು.

ಅತೀವ ಸ್ನಾಯುಗಳ ನೋವು: (muscle cramps)

Calcium Deficiency Symptoms ದೇಹದ ಪ್ರತಿಯೊಂದು ಕಾರ್ಯ ಚಟುವಟಿಕೆಗಳಿಗೆ ಉಪಯುಕ್ತವಾಗಿರುವ ಕ್ಯಾಲ್ಸಿಯಂ ಸ್ನಾಯುಗಳ ಜೋಡಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಮಗೆಲ್ಲ ತಿಳಿದಿರುವ ಹಾಗೆ ನಾವು ಯಾವ ಸ್ನಾಯುಗಳ ಮೇಲೆ ಒತ್ತಡ ಹೇರುತ್ತೇವೋ ಅವುಗಳಲ್ಲಿ ಬೆಳವಣಿಗೆ ವಿಧಾನವಾಗಿ ಅವುಗಳು ದ್ವಿಗುಣ ಗೊಳ್ಳುತ್ತವೆ. ಇದರ ಅರ್ಥ ಸ್ನಾಯುಗಳಲ್ಲಿ ಕೋಶಗಳ ಒಡೆಯುವಿಕೆ, ಈ ರೀತಿಯಾಗಿ ತುಂಡಾದ ಸ್ನಾಯು ಕೋಶಗಳು ಮತ್ತೆ ಒಂದಾಗಿ ಬಲಿಷ್ಠ ಮಾಂಸ ಖಂಡದ ಸ್ನಾಯುಗಳಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಕ್ಯಾಲ್ಸಿಯಂ ನ ಅಗತ್ಯ ಹೆಚ್ಚಾಗಿರುವುದು. ಒಂದು ವೇಳೆ ಸರಿಯಾದ ರೀತಿಯಲ್ಲಿ ಕ್ಯಾಲ್ಸಿಯಂ ದೊರೆಯದಿದ್ದಾಗ ನೋವು ಕಂಡು ಬರುವುದು. ಈ ರೀತಿಯ ಸ್ನಾಯುಗಳ ನೋವು ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವುದು ಕಾರಣ ಅವರು ದಿನನಿತ್ಯ ಅತಿ ಹೆಚ್ಚಿನ ಪ್ರಮಾಣದ ದೈಹಿಕ ಚಟುವಟಿಕೆಗಳಿಗೆ ಒಳಗಾಗುತ್ತಾರೆ.

ದೇಹದಲ್ಲಿ ಅತೀವ ಸುಸ್ತಾಗುವಿಕೆ ಕಂಡುಬರುವುದು:

ಕ್ಯಾಲ್ಸಿಯಂ (Calcium Deficiency Symptoms) ಅವಶ್ಯಕತೆ ಇಡೀ ದೇಹಕ್ಕೆ ಇರುತ್ತದೆ. ಸರಿಯಾದ ರೀತಿಯಲ್ಲಿ ಕ್ಯಾಲ್ಸಿಯಂ ದೊರೆಯದೆ ಇದ್ದಾಗ ನರಮಂಡಲದಲ್ಲಿ ಸಂದೇಶ ರವಾನಿಸುವಿಕೆಯಲ್ಲಿ ಒತ್ತಡ ಉಂಟಾಗುವುದು. ಅದೇ ರೀತಿ ಕಾಲು ಮತ್ತು ಅಂಗೈಗಳಲ್ಲಿ ಹೇಳಿಕೊಳ್ಳಲಾಗದೆ ಜೋಮು ಹಿಡಿಯುವುದಕ್ಕೆ ಮುಂತಾದವುಗಳು ಕಂಡುಬರುವುದು. ಅದೇ ರೀತಿ ಕ್ಯಾಲ್ಸಿಯಂ ನ ಸಮಸ್ಯೆ ಇರುವವರಲ್ಲಿ ಅತೀವ ಸುಸ್ತಾಗುವಿಕೆ ಯನ್ನು ಕಾಣಬಹುದು. ಸ್ವಲ್ಪ ವ್ಯಾಯಾಮ ಮಾಡಿದಾಗ ಅಥವಾ ಸ್ವಲ್ಪ ಹೆಚ್ಚಿಗೆ ನಡೆದಾಡಿದಾಗ ಸುಸ್ತು ಕಂಡುಬರುವುದು ಇದೆಲ್ಲ ಕ್ಯಾಲ್ಸಿಯಂ ನ ಕೊರತೆಗೆ ಲಕ್ಷಣಗಳು.
ಈ ಮೇಲೆ ಹೇಳಿದ ಸಮಸ್ಯೆಗಳು ಕ್ಯಾಲ್ಸಿಯಂ ನ ಕೊರತೆಯಿಂದಾಗಿ (Calcium Deficiency Symptoms)ಕಂಡುಬರುತ್ತವೆ, ಆದರೆ ನಮ್ಮ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದಾಗ ಪ್ಯಾರಾಥೈರಾಯ್ಡ್ ಗ್ರಂಥಿಯು ಮೂಳೆಗಳಲ್ಲಿನ ಕ್ಯಾಲ್ಸಿಯಂ ಅನ್ನು ರಕ್ತಕ್ಕೆ ರವಾನಿಸುವುದರ ಮೂಲಕ ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸುತ್ತದೆ. ಆದರೆ ನಮಗೆ ನಮ್ಮ ದೇಹದಲ್ಲಿ ಮೂಳೆಗಳಲ್ಲಿ ನೋವು ಉಂಟಾದಾಗ ಮಾತ್ರ ಗೊತ್ತಾಗುವುದು ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಆಗಿದೆ ಎಂದು, ಇದೇ ರೀತಿ ಮುಂದುವರೆದರೆ ಮೂಳೆಗಳು ಅತಿ ಮೃದುವಾಗಿ ಮುರಿದು ಹೋಗುವ ಸಾಧ್ಯತೆಗಳು ಇರುತ್ತವೆ. ಮತ್ತು ಹಲ್ಲಿನ ಆರೋಗ್ಯವು ಸಹ ಹದಗೆಡುವುದು ಅಲ್ಲಿನಲ್ಲಿ ಹುಳುಕು ಕಾಣಿಸಿಕೊಳ್ಳುವುದು.
ಅನೈಚ್ಚಿಕ್ ಸ್ನಾಯುಗಳು ಹೊಡೆದುಕೊಳ್ಳುವುದು ಅಂದರೆ ದೇಹದಲ್ಲಿ ನಿಯಂತ್ರಣವಿಲ್ಲದೆ ಸ್ನಾಯುಗಳ ಚಲನೆ ಆಗುವುದು ಉದಾಹರಣೆಗೆ ಕಣ್ಣಿನ ರೆಪ್ಪೆಗಳ ಚಲಾವಣೆ, ಕಾಲಿನ ಮೀನಗಂಡಗಳಲ್ಲಿ ಕಾಣಿಸಿಕೊಳ್ಳುವ ಸ್ನಾಯುಗಳ ಚಲನೆ ಇವೆಲ್ಲ ಕ್ಯಾಲ್ಸಿಯಂ ನ ಕೊರತೆಯಿಂದ ಉಂಟಾಗುತ್ತವೆ.

ಉಗುರುಗಳ ಮೇಲೆ ಬಿಳಿಯ ಚುಕ್ಕೆಗಳು ಕಂಡುಬರುವುದು:

ಬೇಗ ಕೂದಲು ಉದುರಿ ಹೋಗುವುದು:

ಒಣಗಿದ ಚರ್ಮ:

ಕ್ಯಾಲ್ಸಿಯಂ ನ ಕೊರತೆಗೆ ಕಾರಣಗಳೇನು?Calcium Deficiency Symptoms.

ಕಡಿಮೆ ಕ್ಯಾಲ್ಸಿಯಂ ಹೊಂದಿರುವ ಆಹಾರದ ಸೇವನೆ:

ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಸಮ ಪ್ರಮಾಣದ ಅವಶ್ಯಕ ಕ್ಯಾಲ್ಸಿಯಂ ಇಲ್ಲದೆ ಇರುವುದು ಇದರ ಕೊರತೆಗೆ ಕಾರಣ. ಮೊದಲೇ ಹೇಳಿರುವ ಹಾಗೆ ಒಬ್ಬ ವಯಸ್ಕರ ಮನುಷ್ಯನಿಗೆ ಒಂದು ದಿನಕ್ಕೆ 1000-3000 ವರೆಗೆ ಕ್ಯಾಲ್ಸಿಯಂ ನ ಅವಶ್ಯಕತೆ ಇರುತ್ತದೆ, ಹಾಗಾಗಿ ಕ್ಯಾಲ್ಸಿಯಂ ಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು. ಹಾಗೆ ಇನ್ನೂ ಕೆಲವರು ಸಸ್ಯಹಾರಿಗಳು ಇರುತ್ತಾರೆ ಅವರು ಮಾಂಸದ ಸೇವನೆಯನ್ನು ಮಾಡದ ಕಾರಣ ಅವರಲ್ಲಿ ಸಹ ಕ್ಯಾಲ್ಸಿಯಂ ನ ಕೊರತೆ ಕಂಡುಬರುವುದು ಸಾಮಾನ್ಯ.

ಸೀಮಿತ ಆಹಾರ ಸೇವನೆ (food allergies):

ಕೆಲವರಿಗೆ ಕೆಲವೊಂದು ಆಹಾರ ಪದಾರ್ಥಗಳ ಸೇವನೆ ಇಷ್ಟ ಇಲ್ಲದೆ ಇರುವ ಕಾರಣ ಅವರಲ್ಲಿ ಅಲರ್ಜಿ ಇರುವುದರಿಂದ ಅಂತವರು ಕೆಲವೊಂದು ಕ್ಯಾಲ್ಸಿಯಂ ಯುಕ್ತ ಆಹಾರ ಪದಾರ್ಥಗಳನ್ನು ತ್ಯಜಿಸುತ್ತಾರೆ. ಅಂಥವರಲ್ಲಿಯೂ ಸಹ ಕ್ಯಾಲ್ಸಿಯಂ ಕೊರತೆ (Calcium Deficiency Symptoms) ಕಂಡುಬರುವುದು.

ವಿಟಮಿನ್ D ಕೊರತೆಯಿಂದಾಗಿ:

ದೇಹದಲ್ಲಿ ಕ್ಯಾಲ್ಸಿಯಂ ನ ನಿರ್ವಹಣೆ ಮಾಡಲು ವಿಟಮಿನ್ ಡಿ ಅವಶ್ಯಕವಾಗಿ ಬೇಕಾಗುತ್ತದೆ. ಹಾಗಾಗಿ ನಮ್ಮ ದೇಹದಲ್ಲಿ ಸರಿಯಾದ ರೀತಿಯ ವಿಟಮಿನ್ D ಇಲ್ಲದಿರುವುದು ಸಹ ಕ್ಯಾಲ್ಸಿಯಂ ನ ಕೊರತೆಗೆ (Calcium Deficiency Symptoms) ಒಂದು ಕಾರಣ.

ಪ್ಯಾರಾ ಥೈರಾಯ್ಡ್ ಸಮಸ್ಯೆಗಳು:

ದೇಹದಲ್ಲಿ ಕ್ಯಾಲ್ಸಿಯಂ ನಿರ್ವಹಣೆ ಪಾತ್ರದಲ್ಲಿ ಪ್ಯಾರಾಥೈರಾಯ್ಡ್ ಪ್ರಮುಖ ಪಾತ್ರ ವಹಿಸುವುದು. ಹಾಗೂ ಇದು ಪ್ಯಾರಾಥೈರಾಕ್ಸಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುವುದು. ಈ ಹಾರ್ಮೋನು ಸರಿಯಾದ ರೀತಿಯಲ್ಲಿ ಬಿಡುಗಡೆಯಾಗಬೇಕಾದರೆ ದೇಹಕ್ಕೆ ಪೂರಕವಾಗಿ ಮೆಗ್ನೀಷಿಯಂ ನ ಅವಶ್ಯಕತೆ ಸಹ ಬೇಕಾಗುತ್ತದೆ. ಆಹಾರ ಪದಾರ್ಥಗಳಲ್ಲಿ ಮೆಗ್ನೀಷಿಯಂ ನ ಸೇವನೆ ಬಹು ಮುಖ್ಯ. ಇದರ ಕೊರತೆಯಿಂದ ಸಹ ಕ್ಯಾಲ್ಸಿಯಂ ಕೊರತೆ ಉಂಟಾಗುವುದು. ಅದೇ ರೀತಿ ಥೈರಾಯ್ಡ್ ಗೆ ಸಂಬಂಧಿಸಿದ ಕಾಯಿಲೆಗಳು ಕಂಡುಬಂದಲ್ಲಿ ಅವುಗಳ ಚಿಕಿತ್ಸೆ ವಿಧಾನದಲ್ಲಿ ಏರುಪೇರು ಉಂಟಾಗಿ ಇದು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದಿದ್ದಾಗ ತನ್ನ ಸಂಪೂರ್ಣ ಕಾರ್ಯವನ್ನು ಸರಿಯಾದ ರೀತಿಯಲ್ಲಿ ಮಾಡುವುದಿಲ್ಲ. ಹಾಗಾಗಿ ಈ ರೀತಿಯ ಥೈರಾಯಿಡ್ ಗೆ ಸಂಬಂಧಿಸಿದ ಕಾಯಿಲೆಗಳು ಬಂದಾಗ ಮನುಷ್ಯನಲ್ಲಿ ಕ್ಯಾಲ್ಸಿಯಂ ನ ಕೊರತೆ (Calcium Deficiency Symptoms) ಕಂಡುಬರುವುದು ಸಾಮಾನ್ಯವಾಗಿದೆ.

ನೈಸರ್ಗಿಕವಾಗಿ ದೇಹದಲ್ಲಿ ಕ್ಯಾಲ್ಸಿಯಂ ನ ಪ್ರಮಾಣವನ್ನು ಹೆಚ್ಚಿಸುವ ವಿಧಾನ:

ಕ್ಯಾಲ್ಸಿಯಂ ಯುಕ್ತ ಆಹಾರ ಪದಾರ್ಥಗಳು ಸೇವನೆ:

ಇನ್ನು ಕ್ಯಾಲ್ಸಿಯಂ ನ ಕೊರತೆಯಿಂದ ಬಳಲುತ್ತಿರುವ ಅವರು ಕ್ಯಾಲ್ಸಿಯಂಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಇದನ್ನು ಹೋಗಲಾಡಿಸಬಹುದು. ನಮಗೆಲ್ಲ ತಿಳಿದಿರುವ ಹಾಗೆ ಹಾಲು ಒಂದು ಸಮತೋಲನ ಆಹಾರವಾಗಿದ್ದು ಇದರಲ್ಲಿ ಅತಿಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಅನ್ನು ಕಾಣಬಹುದು, ಒಂದು ಗ್ಲಾಸ್ ಹಾಲಿನಲ್ಲಿ ಸರಿಸುಮಾರು 300 ಗ್ರಾಂ ಕ್ಯಾಲ್ಸಿಯಂ ದೊರೆಯುತ್ತದೆ.

Milk
Green Vegetable’s
Fish
Egg’s
Meat
Beans

ಹಸಿ ತರಕಾರಿಗಳು ಒಂದು ಕ್ಯಾಲ್ಸಿಯಂ ಪ್ರಮುಖ ಮೂಲ ಎಂದು ಹೇಳಬಹುದು. ಏಕೆಂದರೆ ನಾವು ಸೇವಿಸುವ ಆಹಾರದಲ್ಲಿ ಕ್ಯಾಲ್ಸಿಯಂ ಜೊತೆ ಜೊತೆಗೆ ಮೆಗ್ನೀಷಿಯಂ ಅನ್ನು ಸಹ ನಾವು ಹಸಿ ತರಕಾರಿಗಳಲ್ಲಿ ಕಾಣಬಹುದು. ಇದರ ಮೂಲಕವೇ ಪ್ಯಾರಾ ಥೈರಾಯ್ಡ್ ಹಾರ್ಮೋನು ಸರಿಯಾದ ರೀತಿಯಲ್ಲಿ ಉತ್ಪತ್ತಿಯಾಗುವುದು. ಹಾಗಾಗಿ ನಾವು ಹಸಿ ತರಕಾರಿಗಳನ್ನು ಹೆಚ್ಚಾಗಿ ಸೊಪ್ಪಿನ ತರಕಾರಿಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

ಹಸಿ ಕಾಳುಗಳು ಮತ್ತು ಸಸ್ಯಹಾರಿ ಗಳ ಮೂಳೆ ರಹಿತ ಮಾಂಸ ಎಂದು ಕರೆಯಲ್ಪಡುವ ಸೋಯಾಬೀನ್ ಅನ್ನು ಸಹ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಮತ್ತು ಹೆಚ್ಚಿನ ಪ್ರಮಾಣದ ಮೀನುಗಳನ್ನು ಸೇವಿಸುವುದು ಉತ್ತಮ. ಮೀನುಗಳ ಮೂಳೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಕಂಡು ಬರುತ್ತದೆ.

ಈ ಮಾಹಿತಿಗಳನ್ನು ಓದಿ:

Ganga Kalyan Yojana: ಏನಿದು ಗಂಗಾ ಕಲ್ಯಾಣ ಯೋಜನೆ?

ಯೋಗ (Yoga): ಮಾನಸಿಕ ಮತ್ತು ದೈಹಿಕ ಬಲಕ್ಕಾಗಿ

Join

2 thoughts on “Calcium Deficiency Symptoms In Kannada: ನಿಮ್ಮಲ್ಲಿ ಈ ಲಕ್ಷಣಗಳು ಕಂಡು ಬಂದರೆ, ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆ ಎಂದರ್ಥ.”

Leave a Comment