CISF Recruitment 2025:10ನೇ ತರಗತಿ ಪಾಸ್ ಆಗಿದ್ದರೆ ಸಾಕು.1161 ಹುದ್ದೆಗಳು…!

Photo of author

Mantesh

Publish: March 11, 2025
CISF Recruitment 2025

share Share:

Introduction:ನಮಸ್ಕಾರ ಕರ್ನಾಟಕದ ಜನತೆಗೆ, ಈ ಒಂದು ಲೇಖನದಲ್ಲಿ ಇಂದು ನಾವು ಕೇಂದ್ರೀಯ ಭದ್ರತಾ ಪಡೆಯಲ್ಲಿ(CISF Recruitment 2025) ಕರೆಯಲಾದ 1161 ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲು ಇಷ್ಟಪಡುತ್ತೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸುತ್ತೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಿ. ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ:

ಸ್ನೇಹಿತರೇ ಇದೀಗ ಕೇಂದ್ರೀಯ ಭದ್ರತಾ ಪಡೆಯಲ್ಲಿ(CISF Recruitment 2025) ಖಾಲಿ ಇರುವ ವಿವಿಧ ರೀತಿಯ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಇದರಲ್ಲಿ ಕುಕ್, ಟೇಲರ್, ಪೇಂಟರ್, ಹಾಗೂ ಇನ್ನಿತರ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಹಾಗಾಗಿ ಯಾರೆಲ್ಲಾ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು, ಮತ್ತು ಹೇಗೆ ಸಲ್ಲಿಸಬೇಕು, ಹಾಗೂ ಅರ್ಹತಾ ಮಾನದಂಡಗಳು ಏನು ಎಂಬುದನ್ನು ಮತ್ತು ಬೇಕಾಗುವ ಅಗತ್ಯ ದಾಖಲಾತಿಗಳೇನು ಎಂಬುದರ ಕುರಿತು ಸಂಪೂರ್ಣವಾಗಿ ಈ ಒಂದು ಲೇಖನದಲ್ಲಿ ಹೇಳಲಾಗಿದೆ. ದಯವಿಟ್ಟು ಸಂಪೂರ್ಣವಾಗಿ ಈ ಒಂದು ಲೇಖನವನ್ನು ಓದಿ ಮಾಹಿತಿಯನ್ನು ಪಡೆದುಕೊಳ್ಳಿ.

ಒಟ್ಟು ಹುದ್ದೆಗಳ ವಿವರ (1161):CISF Recruitment 2025

ಸ್ನೇಹಿತರೆ ಕೇಂದ್ರೀಯ ಭದ್ರತಾ ಪಡೆಯಲ್ಲಿ ಕರೆಯಲಾದ ಅರ್ಜಿಯಲ್ಲಿ ನಾವು ವಿವಿಧ ರೀತಿಯ ಹುದ್ದೆಗಳನ್ನು ಕಾಣಬಹುದು ಅವುಗಳಲ್ಲಿ ಟ್ರೇಡ್ಸ್ ಮ್ಯಾನ್, ಕಾನ್ಸ್ಟೇಬಲ್, ಕುಕ್, ಟೈಲರ್, ಪೇಂಟರ್, ಈ ರೀತಿ ಮುಂತಾದ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದ್ದು ಯಾವೆಲ್ಲ ಹುದ್ದೆಗಳಿಗೆ ಅರ್ಜಿಯನ್ನು ಯಾವ ರೀತಿಯಾಗಿ ಕರೆಯಲಾಗಿದೆ ಎಂಬುದನ್ನು ಈ ಕೆಳಗೆ ಚಾರ್ಟ್ ನಲ್ಲಿ ನೀಡಲಾಗಿದೆ.

CISF Recruitment 2025

ಸ್ನೇಹಿತರೆ ಅರ್ಜಿಯನ್ನು ಕರೆಯಲಾದ ಕೇಂದ್ರೀಯ ಭದ್ರತಾ ಪಡೆಯಲ್ಲಿ(CISF Recruitment 2025) ಪುರುಷ ಹಾಗೂ ಮಹಿಳೆಯರಿಗೂ ಇಬ್ಬರಿಗೂ ಸಹ ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಳ್ಳಲಾಗಿದೆ. ಆದಕಾರಣ ಈ ಒಂದು ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಇಬ್ಬರೂ ಸಹ ಅರ್ಜಿಯನ್ನು ಸಲ್ಲಿಸಬಹುದು ಇಲ್ಲಿ ನೆನಪಿನಲ್ಲಿಡಬೇಕಾದ ಅಂಶ ಏನೆಂದರೆ, ಒಬ್ಬ ಅಭ್ಯರ್ಥಿಯು ಒಂದು ಬಾರಿಗೆ ಒಂದೇ ಒಂದು ಹುದ್ದೆಗೆ ಅಥವಾ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಬಹುದು, ಉದಾಹರಣೆಗೆ; ನೀವು ಅಂದರೆ ಅಡುಗೆ ಮಾಡುವವ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದರೆ ಬೇರೆ ಯಾವುದೇ ರೀತಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ.

ಅರ್ಜಿ ಸಲ್ಲಿಕೆ ಕುರಿತು:CISF Recruitment 2025

ಕೇಂದ್ರೀಯ ಭದ್ರತಾ ಪಡೆಯಲ್ಲಿ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಕೆಲವು ಮಹತ್ವದ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05/03/2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03/04/2025
ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ಸಾಮಾನ್ಯ ವರ್ಗ, ಹಿಂದುಳಿದ ವರ್ಗ (OBC), ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (EWS) 100 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ. ಹಾಗೂ ಮಹಿಳಾ ಅಭ್ಯರ್ಥಿಗಳಿಗೆ, SC/ST, ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಹತಾ ಮಾನದಂಡಗಳು:

ಶೈಕ್ಷಣಿಕ ಅರ್ಹತೆಗಳು:

ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಆಸಕ್ತ ಅಭ್ಯರ್ಥಿಯು ಕನಿಷ್ಠ 10ನೇ ತರಗತಿಯನ್ನು ಪಾಸ್ ಆಗಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ಹಾಗೂ ಗರಿಷ್ಠ 23 ವರ್ಷದ ಒಳಗಿನ ಅಭ್ಯರ್ಥಿಯಾಗಿರಬೇಕು. ಇನ್ನು ವಿವಿಧ ರೀತಿಯ ವರ್ಗದ ಹಾಗೂ ಪಂಗಡದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. SC/ST ಅಭ್ಯರ್ಥಿಗಳಿಗೆ 5 ವರ್ಷಗಳು ವಯೋಮಿತಿ ಸಡಿಲಿಕೆ ಇರುವುದು, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ (OBC) 3 ವರ್ಷದ ವಯೋಮಿತಿ ಸಡಿಲಿಕೆ ಇರುವುದು. ಅದೇ ರೀತಿ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುವುದು.

ದೈಹಿಕ ಅರ್ಹತೆಗಳು:

ಪುರುಷ ಅಭ್ಯರ್ಥಿಗಳಿಗೆ ಎತ್ತರ: 170CM
ಪುರುಷ ಅಭ್ಯರ್ಥಿಗಳಿಗೆ ಎದೆಯ ಸುತ್ತಳತೆ: 80-85
ಮಹಿಳಾ ಅಭ್ಯರ್ಥಿಗಳಿಗೆ ಎತ್ತರ: 157CM

ನೇಮಕಾತಿ ಹಂತಗಳು:

ಕೇಂದ್ರೀಯ ಭದ್ರತಾ ಪಡೆ (CISF Recruitment 2025) ನೇಮಕಾತಿ ಮಾಡಿಕೊಳ್ಳುವ ಮೊದಲ ಹಂತವಾಗಿ ದೈಹಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಅಭ್ಯರ್ಥಿಯ ಎತ್ತರ, ಎದೆಯ ಸುತ್ತಳತೆ ಹಾಗೂ ಇನ್ನಿತರ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ನಂತರ ಈ ಹಂತಗಳಲ್ಲಿ ಪಾಸಾದ ಅಭ್ಯರ್ಥಿಯು ಮುಂದಿನ ಹಂತಕ್ಕೆ ಕಳುಹಿಸಲಾಗುತ್ತದೆ.
ಮುಂದಿನ ಹಂತದಲ್ಲಿ ಪುರುಷ ಅಭ್ಯರ್ಥಿಗಳಿಗೆ 1,600 m ನಷ್ಟು ಓಟವನ್ನು ಓಡಿಸಲಾಗುತ್ತದೆ. ಈ ಓಟವು 6 ನಿಮಿಷ 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಅದೇ ರೀತಿ ಮಹಿಳಾ ಅಭ್ಯರ್ಥಿಗಳಿಗೆ 800 ಮೀಟರ್ ಓಟವನ್ನು ಓಡಿಸಲಾಗುತ್ತದೆ, ಇದನ್ನು 4 ನಿಮಿಷದಲ್ಲಿ ಓಡಲು ಅವಕಾಶ ನೀಡಲಾಗುತ್ತದೆ.

ದಾಖಲಾತಿಗಳ ಪರಿಶೀಲನೆ:

ಈ ರೀತಿಯ ದೈಹಿಕ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ದಾಖಲಾತಿಗಳು ಪರಿಶೀಲನೆ ಮಾಡಲಾಗುತ್ತದೆ. ಇದರಲ್ಲಿ ಶೈಕ್ಷಣಿಕ ದಾಖಲಾತಿಗಳು 10ನೇ ತರಗತಿಯ ಅಂಕಪಟ್ಟಿ ಹಾಗೂ domicile certificate ಅನ್ನು ಹಾಗೂ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ಇನ್ನಿತರ ದಾಖಲಾತಿಗಳು ಪರಿಶೀಲನೆಯನ್ನು ಮಾಡಲಾಗುವುದು.
ಈ ರೀತಿಯಾಗಿ ಎಲ್ಲಾ ಹಂತಗಳನ್ನು ಪಾಸಾದ ಅಭ್ಯರ್ಥಿಗಳಿಗೆ ಕೊನೆಯ ಹಂತವಾಗಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳಿದ್ದು 100 ಅಂಕದ ಪ್ರಶ್ನೆ ಪತ್ರಿಕೆ ಇರುತ್ತದೆ. ಇದಕ್ಕೆ 2 ಗಂಟೆಯ ಸಮಯಾವಕಾಶ ಇರುತ್ತದೆ. ಈ ಎಲ್ಲ ಹಂತಗಳಲ್ಲಿ ಪಾಸಾದ ಅಭ್ಯರ್ಥಿಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು.

Official Notification Link: Click here.

Apply link: Click here.

ಈ ಮಾಹಿತಿಗಳನ್ನು ಓದಿ:

Calcium Deficiency Symptoms In Kannada: ನಿಮ್ಮಲ್ಲಿ ಈ ಲಕ್ಷಣಗಳು ಕಂಡು ಬಂದರೆ, ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆ ಎಂದರ್ಥ.

ಯೋಗ (Yoga): ಮಾನಸಿಕ ಮತ್ತು ದೈಹಿಕ ಬಲಕ್ಕಾಗಿ

Join

2 thoughts on “CISF Recruitment 2025:10ನೇ ತರಗತಿ ಪಾಸ್ ಆಗಿದ್ದರೆ ಸಾಕು.1161 ಹುದ್ದೆಗಳು…!”

Leave a Comment