ಗೃಹ ರಕ್ಷಕದಳ ನೇಮಕಾತಿ 2026: Home Guard Recruitment 2026 Karnataka

Photo of author

Mantesh

Publish: October 27, 2026
home guard recruitment 2026 karnataka

share Share:

ಬೆಂಗಳೂರು ಉತ್ತರ ಜಿಲ್ಲೆ ಗೃಹ ರಕ್ಷಕದಳ ನೇಮಕಾತಿ 2026. 10ನೇ ತರಗತಿ ಪಾಸಾದವರಿಗೆ ಅವಕಾಶ. ವಯೋಮಿತಿ, ದಾಖಲೆ, ಅರ್ಜಿ ವಿತರಣೆ ದಿನಾಂಕ ಮತ್ತು ವಿಳಾಸ ಇಲ್ಲಿದೆ.

ನಮಸ್ಕಾರ ಸ್ನೇಹಿತರೇ, ಸಮಾಜ ಸೇವೆಯ ಜೊತೆಗೆ ಸರ್ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಆಸೆ ಇದೆಯೇ? ಬೆಂಗಳೂರು ಉತ್ತರ ಜಿಲ್ಲೆಯ ಗೃಹ ರಕ್ಷಕದಳದಲ್ಲಿ ಖಾಲಿ ಇರುವ ಗೃಹ ರಕ್ಷಕ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ಕೇವಲ 10ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಬಹುದು. ಅರ್ಜಿ ವಿತರಣೆ 27-10-2026 ರಿಂದ ಆರಂಭವಾಗಿದೆ.

ಪ್ರಮುಖ ಮಾಹಿತಿ

  • ಇಲಾಖೆ: ಗೃಹ ರಕ್ಷಕದಳ, ಬೆಂಗಳೂರು ಉತ್ತರ ಜಿಲ್ಲೆ
  • ಹುದ್ದೆ: ಗೃಹ ರಕ್ಷಕರು
  • ಹುದ್ದೆಗಳ ಸಂಖ್ಯೆ: ವಿವಿಧ ಹುದ್ದೆಗಳು
  • ಕೆಲಸದ ಸ್ಥಳ: ಬೆಂಗಳೂರು
  • ಅರ್ಜಿ ವಿಧಾನ: ಕಚೇರಿಯಲ್ಲಿ ಅರ್ಜಿ ಪಡೆದು ಸಲ್ಲಿಸುವುದು

ವಿದ್ಯಾರ್ಹತೆ

ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು.

ಮುಖ್ಯ ಮಾಹಿತಿ: ಅರ್ಜಿ ವಿತರಣೆ 27-10-2026 ರಿಂದ 07-11-2026 ರವರೆಗೆ, ಪ್ರತಿದಿನ ಮಧ್ಯಾಹ್ನ 2:30 ರಿಂದ ಸಂಜೆ 5:00 ಗಂಟೆಯೊಳಗೆ ಮಾತ್ರ ನಡೆಯುತ್ತದೆ.

ವಯೋಮಿತಿ

  • ಕನಿಷ್ಠ ವಯಸ್ಸು: 19 ವರ್ಷ ಪೂರ್ಣಗೊಂಡಿರಬೇಕು
  • ಗರಿಷ್ಠ ವಯಸ್ಸು: 50 ವರ್ಷ ಮೀರಿರಬಾರದು

ಅರ್ಜಿ ಶುಲ್ಕ

ಅರ್ಜಿ ಶುಲ್ಕದ ಬಗ್ಗೆ ಅಧಿಸೂಚನೆಯಲ್ಲಿ ಸ್ಪಷ್ಟ ಮಾಹಿತಿ ಇಲ್ಲ. ಹೋಗುವ ಮುನ್ನ ಸಂಬಂಧಿತ ಕಚೇರಿಯಲ್ಲಿ ಖಚಿತಪಡಿಸಿಕೊಳ್ಳಿ.

ವೇತನ ಮತ್ತು ಆಯ್ಕೆ ವಿಧಾನ

ಗೌರವಧನ ಹಾಗೂ ಆಯ್ಕೆ ಪ್ರಕ್ರಿಯೆಯ ಕುರಿತ ವಿವರಗಳನ್ನು ಅಧಿಸೂಚನೆ PDF ನಲ್ಲಿ ಪರಿಶೀಲಿಸಿ. ಅರ್ಜಿ ಪಡೆಯುವಾಗ ಕಚೇರಿಯಲ್ಲೂ ವಿಚಾರಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ

  1. ಕೆಳಗಿನ ಲಿಂಕ್‌ನಲ್ಲಿ ಅಧಿಸೂಚನೆ PDF ಡೌನ್‌ಲೋಡ್ ಮಾಡಿ ಸಂಪೂರ್ಣವಾಗಿ ಓದಿ.
  2. ನಿಗದಿತ ದಿನಾಂಕ ಮತ್ತು ಸಮಯದೊಳಗೆ ಕೆಳಗಿನ ವಿಳಾಸದ ಕಚೇರಿಗೆ ಹೋಗಿ.
  3. ಅರ್ಜಿ ನಮೂನೆ ಪಡೆದು ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  4. ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  5. ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಯಲ್ಲಿ ಸಲ್ಲಿಸಿ.

ಪ್ರಮುಖ ದಿನಾಂಕಗಳು

  • ಅರ್ಜಿ ವಿತರಣೆ ಆರಂಭ: 27-10-2026
  • ಅರ್ಜಿ ವಿತರಣೆ ಕೊನೆಯ ದಿನಾಂಕ: 07-11-2026
  • ಸಮಯ: ಮಧ್ಯಾಹ್ನ 2:30 ರಿಂದ ಸಂಜೆ 5:00 ಗಂಟೆಯವರೆಗೆ

ಅಗತ್ಯ ದಾಖಲೆಗಳು

  • ಜನ್ಮ ದಿನಾಂಕ ದೃಢೀಕರಿಸುವ ಶಾಲೆಯ ಬೋನಫೈಡ್ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಸ್ಥಳೀಯ ನಿವಾಸ ದೃಢೀಕರಿಸುವ ದಾಖಲೆಗಳು

ಕಚೇರಿ ವಿಳಾಸ

ಸಮಾದೇಶಕರ ಕಚೇರಿ, ಗೃಹ ರಕ್ಷಕದಳ, ಬೆಂಗಳೂರು ಉತ್ತರ ಜಿಲ್ಲೆ, ವೆಸ್ ಆಫ್ ಕಾರ್ಡ್ ರಸ್ತೆ, ಅಗ್ನಿಶಾಮಕ ಠಾಣೆ ಹತ್ತಿರ, ರಾಜಾಜಿನಗರ, ಬೆಂಗಳೂರು – 560010.

ಪ್ರಮುಖ ಲಿಂಕ್‌ಗಳು

ವಿವರಲಿಂಕ್
ಅಧಿಸೂಚನೆ PDFಇಲ್ಲಿ ಕ್ಲಿಕ್ ಮಾಡಿ
WhatsApp ಗ್ರೂಪ್ ಸೇರಿJoin Now
Telegram ಚಾನೆಲ್ ಸೇರಿJoin Now

Join

Leave a Comment

Join WhatsApp Group