Karnataka Weather Report: ಕರ್ನಾಟಕ ಹವಾಮಾನ ಮುನ್ಸೂಚನೆ: ಒಡಿಸ್ಸಾ ಕರಾವಳಿ ತಲುಪಿದ ವಾಯುಭಾರ ಕುಸಿತ – ಸೆಪ್ಟೆಂಬರ್ 7ರ ತನಕ ಮಳೆ ಸಾಧ್ಯತೆ..!

Photo of author

Siddu

Publish: September 4, 2025
Karnataka Weather Report

share Share:

Karnataka Weather Report: ಕಳೆದ ರಾತ್ರಿ ಒಡಿಸ್ಸಾ ಕರಾವಳಿಯಿಂದ ಮುನ್ನುಗ್ಗಿದ ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಲ್ಲಿ ಅನಿರೀಕ್ಷಿತ ಮಳೆಯಾಗಿದೆ. ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಅನುಭವವಾಗಿದೆ.

ಇವತ್ತಿನ ಹವಾಮಾನ ಮುನ್ಸೂಚನೆ:

Karnataka Weather Report
Karnataka Weather Report

  • ಕರಾವಳಿ: ಇಂದು ಕೂಡ ಮರಳಿ ಮಳೆ ನಿರೀಕ್ಷೆ ಇದೆ. ವಿಶೇಷವಾಗಿ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 7ರ ತನಕ ಈ ವಾತಾವರಣ ಮುಂದುವರಿಯಬಹುದು.
  • ಮಲೆನಾಡು:
    • ಕೊಡಗು, ಹಾಸನ: ಕೆಲಕಡೆ ಸಾಮಾನ್ಯ ಮಳೆ.
    • ಚಿಕ್ಕಮಗಳೂರು, ಶಿವಮೊಗ್ಗ: ಕೆಲವು ಸ್ಥಳಗಳಲ್ಲಿ ಬಿಟ್ಟುಬಿಟ್ಟು ಮಳೆಯ ಸಾಧ್ಯತೆ.
    • ಕರಾವಳಿ ಅಂಚಿನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚು ಇರಬಹುದು. ಸೆಪ್ಟೆಂಬರ್ 5ರವರೆಗೆ ಈ ವಾತಾವರಣ ಮುಂದುವರಿಯುವ ನಿರೀಕ್ಷೆ.
  • ಒಳನಾಡು:
    • ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಯನಗರ, ದಾವಣಗೆರೆ, ಬಳ್ಳಾರಿ: ಕೆಲಕಡೆ ಸಾಮಾನ್ಯ ಮಳೆ.
    • ಉಳಿದ ಭಾಗಗಳಲ್ಲಿ ತುಂತುರು ಮಳೆಯ ಜೊತೆಗೆ ಮೋಡದ ವಾತಾವರಣ
  • ದಕ್ಷಿಣ ಒಳನಾಡು:
    • ಮಂಡ್ಯ, ರಾಮನಗರ, ಬೆಂಗಳೂರು (ನಗರ + ಗ್ರಾಮಾಂತರ), ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು: ಕೆಲಕಡೆ ಸಾಮಾನ್ಯ ಮಳೆಯ ಮುನ್ಸೂಚನೆ.
    • ಉಳಿದ ಭಾಗಗಳಲ್ಲಿ ಮೋಡದ ವಾತಾವರಣ ಇರುವ ಸಾಧ್ಯತೆ.

8ನೇ ವೇತನ ಆಯೋಗ..! ಕನಿಷ್ಠ ಸಂಬಳ ₹41,000 ಆಗುವ ಸಾಧ್ಯತೆ! ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ಮುಂದಿನ ಹವಾಮಾನ:

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಸೆಪ್ಟೆಂಬರ್ 5ರ ಸುಮಾರಿಗೆ ಉತ್ತರ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯ ಕಡೆ ಚಲಿಸುವ ನಿರೀಕ್ಷೆ ಇದೆ.

ಸೂಚನೆ: ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ, ಹೊರಗಿನ ಚಟುವಟಿಕೆಗಳಲ್ಲಿ ಎಚ್ಚರಿಕೆ ವಹಿಸುವುದು ಶಿಫಾರಸು ಮಾಡಲಾಗಿದೆ

ಇದೆ ರೀತಿಯ ಉಪಯುಕ್ತ ಮಾಹಿತಿಗಳನ್ನು ಪ್ರತಿದಿನ ಪಡೆಯಲು ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು [ಇಲ್ಲಿ ಕ್ಲಿಕ್ ಮಾಡಿ]

Join

Leave a Comment