SBI Junior Associates Recruitment: SBI ಕಿರಿಯ ಸಹಾಯಕ ನೇಮಕಾತಿ 2025 – 6,589 ಹುದ್ದೆಗಳ ಭರ್ತಿ
ಭಾರತದ ಅತಿ ದೊಡ್ಡ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ದೇಶದಾದ್ಯಂತ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಮಾರಾಟ) ಹುದ್ದೆಗಳ ಭರ್ತಿಗಾಗಿ 2025ರ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ.
ಒಟ್ಟಾರೆ 6,589 ಹುದ್ದೆಗಳು ಲಭ್ಯವಿದ್ದು, ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ 06 ಆಗಸ್ಟ್ 2025 ರಿಂದ 26 ಆಗಸ್ಟ್ 2025 ರವರೆಗೆ ನಡೆಯಲಿದೆ.
SBI Junior Associates Recruitment: ಹುದ್ದೆಗಳ ವಿವರ
| ಹುದ್ದೆ ಹೆಸರು | ಒಟ್ಟು ಹುದ್ದೆಗಳು |
|---|---|
| ಜೂನಿಯರ್ ಅಸೋಸಿಯೇಟ್ (Customer Support & Sales) | 5,180 (ಸಾಮಾನ್ಯ) + 1,409 (ಬ್ಯಾಕ್‌ಲಾಗ್) = 6,589 |
ವರ್ಗವಾರು ಹುದ್ದೆಗಳ ಹಂಚಿಕೆ (ಸಾಮಾನ್ಯ ಹುದ್ದೆಗಳು)
| ವರ್ಗ | ಹುದ್ದೆಗಳ ಸಂಖ್ಯೆ |
|---|---|
| ಸಾಮಾನ್ಯ (GEN) | 788 |
| ಇತರ ಹಿಂದುಳಿದ ವರ್ಗ (OBC) | 1199 |
| ಅನುಸೂಚಿತ ಜಾತಿ (SC) | 400 |
| ಅನುಸೂಚಿತ ಪಂಗಡ (ST) | 119 |
| ಆರ್ಥಿಕವಾಗಿ ದುರ್ಬಲ ವರ್ಗ (EWS) | 525 |
| ಒಟ್ಟು | 2513 |
(ಬ್ಯಾಕ್‌ಲಾಗ್ ಹುದ್ದೆಗಳ ಪ್ರತ್ಯೇಕ ಹಂಚಿಕೆ ಅಧಿಸೂಚನೆಯಲ್ಲಿ ಲಭ್ಯವಿದೆ)
ವೇತನ ಶ್ರೇಣಿ (Salary Scale)
- ಮೂಲ ವೇತನ: ₹26,730 (₹24,050 + 2 ಇನ್ಕ್ರಿಮೆಂಟ್‌ಗಳು)
- ಬ್ಯಾಂಕ್ ನಿಯಮಾನುಸಾರ ಡಿಯರ್‌ನೆಸ್ ಅಲೌನ್ಸ್, ಹೌಸ್ ರೆಂಟ್ ಅಲೌನ್ಸ್, ಟ್ರಾವೆಲ್ ಅಲೌನ್ಸ್ ಸೇರಿದಂತೆ ವಿವಿಧ ಸೌಲಭ್ಯಗಳು ಲಭ್ಯ.
- ಗರಿಷ್ಠ ವೇತನ ಶ್ರೇಣಿ ₹64,480 ವರೆಗೆ ಇರಬಹುದು.

ಅರ್ಹತಾ ಮಾನದಂಡಗಳು (SBI Clerk Eligibility)
ವಯೋಮಿತಿ (Age Limit)
- ಕನಿಷ್ಠ ವಯಸ್ಸು: 20 ವರ್ಷ
- ಗರಿಷ್ಠ ವಯಸ್ಸು: 28 ವರ್ಷ (01 ಏಪ್ರಿಲ್ 2025ರಂತೆ)
- ಮೀಸಲಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ಲಭ್ಯ.
ಶೈಕ್ಷಣಿಕ ಅರ್ಹತೆ (Educational Qualification)
- ಯಾವುದೇ ವಿಭಾಗದಲ್ಲಿ ಪದವಿ (Graduation) ಪಡೆದಿರಬೇಕು.
- 31 ಡಿಸೆಂಬರ್ 2025ರೊಳಗೆ ಪದವಿ ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ರಿಯೆ (Selection Process)
- ಪ್ರಾಥಮಿಕ ಆನ್‌ಲೈನ್ ಪರೀಕ್ಷೆ (Preliminary Exam) – 100 ಅಂಕಗಳು, 60 ನಿಮಿಷ
- ಮೆೈನ್ಸ್ ಆನ್‌ಲೈನ್ ಪರೀಕ್ಷೆ (Mains Exam) – 200 ಅಂಕಗಳು, 2 ಗಂಟೆ 40 ನಿಮಿಷ
- ಸ್ಥಳೀಯ ಭಾಷಾ ಪ್ರಾವೀಣ್ಯ ಪರೀಕ್ಷೆ (Local Language Test)
- ದಾಖಲೆ ಪರಿಶೀಲನೆ (Document Verification)
ಅರ್ಜಿ ಶುಲ್ಕ (Application Fee)
- ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ: ₹750
- SC / ST / PwBD / ESM / XS / DXS ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಸ್ಟೇಟ್ ಬ್ಯಾಂಕ್ ಕಿರಿಯ ಸಹಾಯಕ ಹುದ್ದೆ ಅರ್ಜಿ
ಸಲ್ಲಿಸುವ ವಿಧಾನ
- ಅಧಿಕೃತ SBI ಕರಿಯರ್ ವೆಬ್‌ಸೈಟ್‌ಗೆ ಭೇಟಿ ನೀಡಿ: https://sbi.co.in/careers
- “Recruitment of Junior Associates 2025” ಲಿಂಕ್ ಆಯ್ಕೆಮಾಡಿ.
- ನೋಂದಣಿ ಮಾಡಿ, ಅಗತ್ಯ ಮಾಹಿತಿಯನ್ನು ತುಂಬಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿ ಶುಲ್ಕ ಪಾವತಿಸಿ.
- ಅರ್ಜಿಯನ್ನು ಸಲ್ಲಿಸಿದ ನಂತರ ಪ್ರಿಂಟ್ ಕಾಪಿ ಸಂಗ್ರಹಿಸಿಕೊಳ್ಳಿ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 06 ಆಗಸ್ಟ್ 2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 26 ಆಗಸ್ಟ್ 2025
sbi junior associate recruitment 2025 exam date
ಇನ್ನು ಯಾವುದೇ ರೀತಿಯ ಅಧಿಕೃತ ದಿನಾಂಕ ನಿಗದಿಯಾಗಿಲ್ಲ.
ಪ್ರಮುಖ ಲಿಂಕ್‌ಗಳು
- ವಿವರವಾದ ಅಧಿಸೂಚನೆ (PDF): ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್: https://sbi.co.in/careers
ಸೂಚನೆ: ಅಭ್ಯರ್ಥಿಗಳು ಸ್ಥಳೀಯ ಭಾಷಾ ಅರ್ಹತೆಯನ್ನು ಪರಿಶೀಲಿಸಿ, ಅರ್ಜಿಯನ್ನು ಸಮಯಕ್ಕೆ ಮುನ್ನ ಸಲ್ಲಿಸುವುದು ಅತ್ಯಂತ ಮುಖ್ಯ.













