ಇತ್ತೀಚಿಗೆ ಕರ್ನಾಟಕದಲ್ಲಿ ಜಾತಿ ಗಣತಿ ತುಂಬಾ ಚುರುಕುಗೊಂಡಿದೆ, ಹಾಗೆಯೇ ಸರ್ಕಾರದ ನಿಯಮವನ್ನು ಪಾಲಿಸುತ್ತಾ ಕರ್ನಾಟಕ ಸರ್ಕಾರ ಆದೇಶದ ಮೇರೆಗೆ ಎಲ್ಲಾ ಪ್ರಾಥಮಿಕ ಶಿಕ್ಷಕ ಶಿಕ್ಷಕಿಯರು ಜಾತಿ ಗಣತಿ ಮಾಡುವಲ್ಲಿ ಪಾಲ್ಗೊಂಡು ಸುಭಿಕ್ಷವಾಗಿ ಜಾತಿ ಗಣತಿಯನ್ನು ಮಾಡುತ್ತಿದ್ದಾರೆ. ತಕ್ಕಂತೆ ಅರ್ಧ ಸಮೀಕ್ಷೆಯು ಮುಗಿಯುತ್ತಾ ಬಂದಿದೆ.
ಸರ್ಕಾರ ಹೇಳಿಕೊಳ್ಳುವ ಪ್ರಕಾರ ಸಮೀಕ್ಷೆಯು ಕೇವಲ ಹಿಂದುಳಿದ ವರ್ಗಗಳ ಸಮೀಕ್ಷೆ ಎಂದು ಭಾವಿಸುವುದು ತಪ್ಪು. ಪ್ರಸ್ತುತವಾಗಿ ರಾಜ್ಯದಲ್ಲಿ ನೀಡುವ ಪಂಚ ಯೋಜನೆಗಳ ಸದುಪಯೋಗಗಳನ್ನು ಎಲ್ಲರೂ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವೊಂದಿಷ್ಟು ಜನ ಅರ್ಹತೆಗೆ ಮೀರಿ ಅಂದರೆ ಅನರ್ಹರು ಕೂಡ ಈ ಯೋಜನೆಗಳ ಸದುಪಯೋಗಗಳನ್ನು ಪಡೆದುಕೊಳ್ಳುತ್ತಿರುವರು, ಜಾತಿ ಸಮೀಕ್ಷೆ ಮೂಲಕ ಇದೆಲ್ಲ ತಿಳಿದುಬರುವುದು. ಅದಕ್ಕಾಗಿ ಈ ಜಾತಿ ಸಮೀಕ್ಷೆ.
ಇನ್ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿ ಹಾಗೂ ನಾರಾಯಣಮೂರ್ತಿ “ನಾವು ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ”
ಹೌದು, ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರಾದ ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿಯವರು ನಾವು ಯಾವುದೇ ರೀತಿಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿಯನ್ನು ನೀಡುವುದಿಲ್ಲ, ನಾವು ಹಿಂದುಳಿದ ಜಾತಿಯವರೆಲ್ಲ.ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯನವರು ಮಾಧ್ಯಮಗಳ ಮುಂದೆ “ಇನ್ಫೋಸಿಸ್ ಸಂಸ್ಥೆಯವರು ಅಂದರೆ ಅವರು ಬೃಹಸ್ಪತಿಗಳ?” ಎಂದು ಪ್ರಶ್ನಿಸಿದ್ದಾರೆ.
ಹಾಗೆ ಮೊದಲಿಗೆ ಅವರು ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ ಇದು ಕೇವಲ ಹಿಂದುಳಿದ ವರ್ಗಗಳ ಅಥವಾ ಜಾತಿಗಳ ಸಮೀಕ್ಷೆ ಅಲ್ಲ, ಈಗ ನಾವು ಸಹಕರಿಸುವುದಿಲ್ಲ ಎಂದು ಹೇಳುವ ಇವರು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಜಾತಿಗಲತಿಯನ್ನು ಮಾಡುತ್ತದೆ. ಆಗಲು ನೀವು ಸಹಕರಿಸುವುದಿಲ್ಲವೇ? ಎನ್ನುವ ರೀತಿಯಲ್ಲಿ ಪ್ರಶ್ನಿಸಿದ್ದಾರೆ.












