ಕೇಂದ್ರ ಬಜೆಟ್ 2024 (Union Budget 2024): ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ, ಏನಿರುತ್ತೆ? ಏನಿರಲ್ಲ?.

Photo of author

Mantesh

Publish: July 23, 2024

share Share:

ಕೇಂದ್ರ ಬಜೆಟ್ ೨೦೨೪ ಇದು ನಿರ್ಮಲಾ ಸೀತಾರಾಮನ್‌ ಅವರ 7 ಬಜೆಟ್ ಮಂಡನೆ ಆಗಿದ್ದು ಹಾಗೂ ಇದು ಸ್ವತಂತ್ರ ಬಜೆಟ್ ಆಗಿರದೆ ಮಿತ್ರ ಪಕ್ಷಗಳ ಹಿತಾಸಕ್ತಿಯ ಮೇಲು ಅವಲಂಬಿತವಾಗಿದೆ. ಈ ಬಾರಿ ಹಣದುಬ್ಬರದ ಬಗ್ಗೆ ಸಹ ಗಮನವಿಟ್ಟು ಬಜೆಟ್ ಮಂಡನೆ ಮಾಡಬೇಕಾಗುತ್ತದೆ.
ಮೂರನೇ ಬಾರಿಗೆ ಆಯ್ಕೆಯಾಗಿ ಬಂದಿರುವ ಸರ್ಕಾರದ ಮೇಲೆ ಜನ ಸಾಮಾನ್ಯರು, ಮಧ್ಯಮ ವರ್ಗದ ನಿರೀಕ್ಷೆಯೂ ಹೆಚ್ಚಿದೆ.

ನಾವು ಹಿಂದಿನ ಬಜೆಟ್ ಗಳನ್ನ ನೋಡಿದಾಗ ಯಾವ ಬಜೆಟ್ ಸಹ ಮಧ್ಯಮ ವರ್ಗದ ಹಾಗೂ ಬಡವರ ಮಿತ್ರ ಬಜೆಟ್ ಗಳು ಕಂಡುಬಂದಿಲ್ಲಈ ಬಾರಿಯ ಬಜೆಟ್ನಲ್ಲಿ ಜನಸಾಮಾನ್ಯರ ಹಿತಾಸಕ್ತಿಗಳನ್ನುನೋಡಿಕೊಂಡು ಬಜೆಟ್ ಮಂಡನೆ ಮಾಡುವ ಮೂಲಕ ಸರ್ಕಾರ ಬೆಲೆ ಏರಿಕೆಯಂತಹ ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ. RBI ಗವರ್ನೆರ್ ಶಕ್ತಿಕಾಂತ ದಾಸ್‌ “ಸುಸ್ಥಿರ ಆರ್ಥಿಕ ಬೆಳವಣಿಗೆಯ ನಡುವೆ ಹಣದುಬ್ಬರ ನಿಯಂತ್ರಣಕ್ಕೆ ತುರ್ತಾಗಿ ಗಮನ ಹರಿಸಬೇಕಾದ ಅಗತ್ಯವಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಂದರೆ ಇದರರ್ಥ, ಹಣದುಬ್ಬರ ನಿಯಂತ್ರಣಕ್ಕೆ ರೆಪೊ ದರ ಏರಿಕೆಯೊಂದೇ ಪರಿಹಾರವಲ್ಲ ಎನ್ನುವುದಾಗಿದೆ.

ಕೇಂದ್ರ ಬಜೆಟ್ 2024 (Union Budget 2024) ಇದು ಸ್ವತಂತ್ರ ಸರ್ಕಾರದ ಬಜೆಟ್ ಆಗಿರುವದಿಲ್ಲ ಇಲ್ಲಿ ಮಿತ್ರ ಪಕ್ಷಗಳ ಹಿತಾಸಕ್ತಿಯನ್ನು ಸಹ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಬೇಕಾಗುತ್ತದೆ.

ನಿರ್ಮಲಾ ಸೀತಾರಾಮನ್‌ ಬಜೆಟ್‌ 2024ಕ್ಕೆ ಕ್ಷಣಗಣನೆ, ಯಾವಾಗ ಮಂಡನೆ? ಲೈವ್‌ ನೋಡುವುದು ಹೇಗೆ?

 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024-25ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮೂರನೇ ಅವಧಿಯ ಮೊದಲ ಬಜೆಟ್‌ ಆಗಿದ್ದು, ನಿರ್ಮಲಾ ಸೀತಾರಾಮನ್‌ ಸತತ 7ನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದಾರೆ.

2024 ರ ಬಜೆಟ್ ಮಂಡನೆಯನ್ನು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು 2025ನೇ ಆರ್ಥಿಕ ವರ್ಷದ ಬಜೆಟ್‌ನ್ನು ಸಂಸತ್ತಿನಲ್ಲಿ ಜುಲೈ 23, 2024ರಂದು ಮಂಗಳವಾರ ಮಂಡನೆ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಭಾಷಣವನ್ನು ಬೆಳಿಗ್ಗೆ 11 ಗಂಟೆಗೆ ಆರಂಭಿಸುವ ನಿರೀಕ್ಷೆ ಇದೆ. ಇದು ಅವರ 7ನೇ ಬಜೆಟ್‌ ಆಗಿದೆ. ಹಾಗು ನರೇಂದ್ರ ಮೋದಿ ಅವರ ನೇತೃತ್ವದ ಸತತ
3 ಅವಧಿಯಯ ಮೊದಲ ಬಜೆಟ್ ಮಂಡನೆ ಆಗಿದ್ದು ಜನಸಾಮಾನ್ಯರಲ್ಲಿ ಬಹಳ ನಿರೀಕ್ಷೆ ಇದೆ.

ಬಜೆಟ್ ಬಗ್ಗೆ ಮೋದಿಜಿ ಅವರ ಮಾತು.

ಬಜೆಟ್‌ಗೆ ಮುನ್ನ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, “ಬಜೆಟ್ ಅಮೃತ್ ಕಾಲದ ಪ್ರಮುಖ ಬಜೆಟ್ ಆಗಿರಲಿದೆ. ಈ ಬಜೆಟ್ ನಮ್ಮ ಅಧಿಕಾರಾವಧಿಯ ಮುಂದಿನ 5 ವರ್ಷಗಳ ದಿಕ್ಕನ್ನು ನಿರ್ಧರಿಸಲಿದೆ. ಈ ಬಜೆಟ್ ನಮ್ಮ ಕನಸಿನ ‘ವಿಕಸಿತ ಭಾರತ’ಕ್ಕೆ ಭದ್ರ ಅಡಿಪಾಯ ಹಾಕಲಿದೆ,” ಎಂದು ಹೇಳಿದ್ದಾರೆ. ಬಿಜೆಪಿ ಏಕಾಂಗಿಯಾಗಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ವಿಫಲವಾಗಿ ಸಮ್ಮಿಶ್ರ ಸರಕಾರ ರಚನೆಯಾದ ಬಳಿಕೆ ಮಂಡನೆಯಾಗುತ್ತಿರುವ ಇದು ಮೊದಲ ಬಜೆಟ್ ಆಗಿದೆ.

pm: Narendra Modi

ಮಧ್ಯಮ ವರ್ಗದ ಜನರು, ವೇತನ ಪಡೆಯುವ ತೆರಿಗೆದಾರರು ಮತ್ತು ಸಾಮಾನ್ಯ ಜನರು, ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ವಿಶೇಷವಾಗಿ ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ಹೆಚ್ಚಿನ ಕೊಡುಗೆಗಳನ್ನು ನಿರೀಕ್ಷಿಸುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರದ ಮೇಲೆ “ಇದು ದೇಶದ ಉದ್ಯೋಗಪತಿಗಳ ಹಾಗೂ ಶ್ರೀಮಂತರರ ಮಿತ್ರ ಪಕ್ಷ ಅವರ ಹಿತಾಸಕ್ತಿಗೆ ಅನುಗುಣವಾಗಿ ಕಾನೂನು ರಚಿಸುವ ಪಕ್ಷ ” ಎಂಬ ಆರೋಪ ಇದೆ, ಇನ್ನು ಈ ಬಾರಿಯ ಬಜೆಟ್ ಮಂಡನೆಯಲ್ಲಿ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತಹ ಯಾವುದೇ ರೀತಿಯ ಮೀಸಲಾತಿ ಯನ್ನು ಅಂದರೆ ತೆರಿಗೆ ಮೀಸಲಾತಿಯನ್ನು ನೀಡದಿದ್ದರೆ ಇದು ಪಕ್ಷದ ಮುಂದಿನ ಬೆಳವಣಿಗೆಯಲ್ಲಿ ತುಂಬಾ ಹಿನ್ನಡೆ ಯಾಗುವ ಸಾಧ್ಯತೆ ಇದೆ. ಇದನೆಲ್ಲ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡುವು ಸವಾಲು ಈಗ ಕೇಂದ್ರ ಸರಕಾರದ ಮೇಲೆ ಇದೆ.

Join

2 thoughts on “ಕೇಂದ್ರ ಬಜೆಟ್ 2024 (Union Budget 2024): ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ, ಏನಿರುತ್ತೆ? ಏನಿರಲ್ಲ?.”

Leave a Comment