Agriculture Land Way: ಜಮೀನಿನ ಕಾಲುದಾರಿಯನ್ನು ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಲು ಹೀಗೆ ಚೆಕ್ ಮಾಡಿ.

Photo of author

Mantesh

Publish: March 25, 2025

share Share:

ನಮಸ್ಕಾರ ಸ್ನೇಹಿತರೆ, ನೀವು ರೈತಾಪಿ ವರ್ಗಕ್ಕೆ ಸೇರಿದವರಾದರೆ ಹಾಗೂ ನೀವು ಯಾವುದೇ ರೀತಿಯ ಕೃಷಿ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದರೆ, ಈ ಒಂದು ಮಾಹಿತಿಯು ನಿಮಗೆ ತುಂಬಾ ಉಪಯುಕ್ತವಾದದ್ದು. ಈ ಒಂದು ಲೇಖನದಲ್ಲಿ ನಾವು ನಿಮಗೆ ನಿಮ್ಮ ಜಮೀನಿಗೆ ಕಾಲುದಾರಿ ಇದೆಯೋ? (Agriculture Land Way)ಇಲ್ಲವೋ? ಇದ್ದರೆ ಹೇಗೆ ಇದೆ, ಎಂಬುದನ್ನು ಹಾಗೂ ನಿಮ್ಮ ಊರಿನ ಸಂಪೂರ್ಣ ನಕ್ಷೆಯ ಕಾಲುದಾರಿಗಳನ್ನು ಹಾಗೂ ಹಳ್ಳ ಕೊಳ್ಳಗಳನ್ನು ನೀವು ನಿಮ್ಮ ಮನೆಯಲ್ಲಿ ಕುಳಿತುಕೊಂಡು ನಿಮ್ಮ ಮೊಬೈಲ್ ನಿಂದ ಹೇಗೆ ಚೆಕ್ ಮಾಡುವುದು ಎಂಬುದರ ಕುರಿತಾಗಿ ಸಂಪೂರ್ಣವಾಗಿ ವಿವರಿಸಿದ್ದೇವೆ. ಆದಕಾರಣ ನೀವು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿ ವಿನಂತಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪನ್ನು ಜಾಯಿನ್ ಆಗಿ. ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ:

ಜಮೀನಿನ ಕಾಲುದಾರಿ ಹಾಗೂ ಬಂಡಿದಾರಿ ಕುರಿತು:Agriculture Land Way

ಸ್ನೇಹಿತರೆ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಎಷ್ಟು ಜನ ರೈತರಿಗೆ ಅನೇಕ ರೀತಿಯ ಸಮಸ್ಯೆಗಳು ಇರುತ್ತವೆ. ಶಿಕ್ಷಣದ ಕೊರತೆಯಿಂದಾಗಿ ಅವರಿಗೆ ಯಾವುದೇ ರೀತಿಯ ಸರ್ಕಾರಿ ಸವಲತ್ತುಗಳು ಹಾಗೂ ಸಹಾಯಗಳು ದೊರಕದೆ ಅವರು ವಂಚಿತರಾಗಿರುತ್ತಾರೆ. ಆದರೆ ಕೆಲವೊಂದು ವಿಷಯಗಳನ್ನು ರೈತರು ತಿಳಿದುಕೊಳ್ಳುವುದು ತುಂಬಾ ಉಪಯುಕ್ತ. ಅಂತವುಗಳಲ್ಲಿ ಜಮೀನಿನ ಕಾಲುದಾರಿಗಳು ಹಾಗೂ ಬಂಡಿದಾರಿಗಳು, ಹೌದು ಸ್ನೇಹಿತರೆ, ನೀವೇನಾದರೂ ನಿಮ್ಮ ಜಮೀನಿಗೆ ಹೋಗುವ ಹಾದಿಯಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೆ ಅಥವಾ ಪಕ್ಕದ ಜಮೀನಿನವರು ನಿಮಗೆ ಹಾದು ಹೋಗಲು ದಾರಿಯನ್ನು ನೀಡದಿದ್ದರೆ, ಅಂತಹ ಸನ್ನಿವೇಶದಲ್ಲಿ ನೀವು ಈ ರೀತಿಯಾಗಿ ಈ ಜಮೀನಿನಲ್ಲಿ ಕಾಲುದಾರಿಯ ಮಾರ್ಗ (Agriculture Land Way) ಇದೆಯೋ? ಇಲ್ಲವೋ? ಎಂದು ನೀವು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿ ನೋಡಬಹುದು.

Agriculture Land Way

ನಕ್ಷೆಯ ಕುರಿತು ಮಾಹಿತಿ: Agriculture Land Way

ರೈತರು ತಮ್ಮ ಊರಿನ ನಕ್ಷೆಯನ್ನು ಮೊಬೈಲ್ ನಲ್ಲಿಯೇ ವೀಕ್ಷಿಸಲು ಹಾಗೂ ಅದನ್ನು ಡೌನ್ಲೋಡ್ ಮಾಡಿಕೊಳ್ಳಲು ಕಂದಾಯ ಇಲಾಖೆ (revenue department) ವ್ಯವಸ್ಥೆ ಮಾಡಿಕೊಟ್ಟಿದೆ. ಇದರ ಮೂಲಕ ರೈತರು ಕೇವಲ ತಮ್ಮ ಜಮೀನಿನ ಕಾಲುದಾರಿ (Agriculture Land Way) ಹಾಗೂ ಬಂಡಿದಾರಿ ಮಾತ್ರವಲ್ಲದೆ ತಮ್ಮ ಊರಿನ ಸುತ್ತಮುತ್ತ ಹರೆಯುವ ಹಳ್ಳ ಕೊಳ್ಳಗಳು, ಕಾಲುವೆಗಳು, ತೊರೆಗಳು, ನದಿಗಳು ಹರಿಯುತ್ತಿದ್ದರೆ ಆ ಅವುಗಳು ಯಾವ ದಿಕ್ಕಿನಲ್ಲಿ ಹರಿಯುತ್ತಿದೆ ಹಾಗೂ ಯಾವ ಸರ್ವೇ ನಂಬರ್ ಪಕ್ಕದಲ್ಲಿ ಈ ರೀತಿಯಾದಂತಹ ನದಿ ಹಳ್ಳ ಕೊಳ್ಳಗಳು ಹರಿಯುತ್ತಿವೆ ಎಂಬ ಮಾಹಿತಿಯು ಕೂಡ ರೈತರಿಗೆ ಸಿಗಲಿದೆ. ಇದಕ್ಕಾಗಿ ಕೇವಲ ಜಮೀನಿನ ಸರ್ವೆ ನಂಬರ್ ಗೊತ್ತಿದ್ದರೆ ಸಾಕು, ಅದರ ಅಕ್ಕ ಪಕ್ಕದಲ್ಲಿನ ರಸ್ತೆಗಳು ಯಾವ ಮಾರ್ಗದಿಂದ ಯಾವ ಮಾರ್ಗಕ್ಕೆ ಹೋಗುತ್ತವೆ ಎಂಬುವುದನ್ನು ಸಹ ಚೆಕ್ ಮಾಡಬಹುದು..

ಗ್ರಾಮ ನಕ್ಷೆಯನ್ನು ಹೀಗೆ ನೋಡಿ: Agriculture Land Way

ಈ ರೀತಿ ಮಾಹಿತಿಯನ್ನು ಪಡೆಯಲು ಮೊದಲು ನಿಮ್ಮ ಹತ್ತಿರ ನಿಮ್ಮ ಗ್ರಾಮದ ಗ್ರಾಮ ನಕ್ಷೆ ಇರಬೇಕು, ಹಾಗಾದರೆ ಗ್ರಾಮ ನಕ್ಷೆಯನ್ನು ನೋಡುವುದು ಹೇಗೆ? ಮೊದಲಿಗೆ ನೀವು ಕಂದಾಯ ಇಲಾಖೆ(revenue department)ಜಾಲತಾಣದ ಪುಟಕ್ಕೆ ಭೇಟಿ ಕೊಡಬೇಕು. ಇದರ ಡೈರೆಕ್ಟ್ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ;

Revenue Maps Online

ನಂತರ ಆ ಪುಟವು ಈ ರೀತಿಯಾಗಿ ತೆರೆದುಕೊಳ್ಳುವುದು;

ಈ ಒಂದು ಪುಟದಲ್ಲಿ ನೀವು ನಿಮ್ಮ ಊರಿನ ಗ್ರಾಮ ನಕ್ಷೆಯನ್ನು ವೀಕ್ಷಿಸಲು ಮೊದಲು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು, ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು, ಅದೇ ರೀತಿ ಮುಂದಿನ ಹಂತದಲ್ಲಿ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಂಡು, ನಂತರ ನಿಮ್ಮ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪಟ್ಟಿಯು ನಿಮಗೆ ಸಿಗುತ್ತದೆ. ಈ ರೀತಿಯಾಗಿ ನೀವು ಗ್ರಾಮ ನಕ್ಷೆಯನ್ನು ಪಡೆದುಕೊಂಡು ಅದರಲ್ಲಿ ಯಾವ ರೀತಿಯಾಗಿ ಕಾಲುದಾರಿಗಳು ಬಂಡಿದಾರಿಗಳು ಹಾಗೂ ನದಿ ತೊರೆಗಳು, ಹಳ್ಳ ಕೊಳ್ಳೆಗಳು ಇವೆ ಎಂದು ತಿಳಿದುಕೊಳ್ಳಬಹುದು.


ಇದಿಷ್ಟು ನೀವು ನಿಮ್ಮ ಗ್ರಾಮ ನಕ್ಷೆಯನ್ನು ಪಡೆದುಕೊಂಡು ಜಮೀನಿನ ಕಾಲುದಾರಿಗಳು ಹಾಗೂ ಬಂಡಿದಾರಿಗಳ ಕುರಿತು ಮಾಹಿತಿ ಪಡೆಯುವುದರ ಬಗ್ಗೆ ಸಂಪೂರ್ಣ ಮಾಹಿತಿ.

ನಿಮ್ಮ ಗ್ರಾಮ ನಕ್ಷೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್: Click Here

ಈ ಮಾಹಿತಿಗಳನ್ನು ಓದಿ:

Gruhalakshmi scheme: ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್. ಒಟ್ಟಿಗೆ ಎರಡು ತಿಂಗಳು ₹4000 ಹಣ ಬಿಡುಗಡೆ…! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ.

Udyogini Yojana: ಉದ್ಯೋಗಿನಿ ಯೋಜನೆ ಅಡಿಯಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ..! 1.50 ಲಕ್ಷ ಸಬ್ಸಿಡಿ..! Quick Apply.

Join

1 thought on “Agriculture Land Way: ಜಮೀನಿನ ಕಾಲುದಾರಿಯನ್ನು ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಲು ಹೀಗೆ ಚೆಕ್ ಮಾಡಿ.”

Leave a Comment