Atal Pension Yojana Details in Kannada: ₹5000 ಪಿಂಚಣಿಗೆ ಈಗ ಪ್ರತಿ ತಿಂಗಳು ಕೊಡುಗೆ ನೀಡೋದು ಕಡ್ಡಾಯ! ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

Photo of author

Mantesh

Publish: July 18, 2025
Atal Pension Yojana Details in Kannada

share Share:

Atal Pension Yojana Details in Kannada: ನಿವೃತ್ತಿಯ ನಂತರದ ಜೀವನವನ್ನು ಭದ್ರಗೊಳಿಸಲು ಸರ್ಕಾರ 2015ರಲ್ಲಿ ಪ್ರಾರಂಭಿಸಿದ ಅಟಲ್ ಪಿಂಚಣಿ ಯೋಜನೆ (Atal Pension Yojana – APY) ಈಗ ಹೆಚ್ಚು ಜನಪ್ರಿಯತೆ ಗಳಿಸಿದೆ. ಈಗ ಪಾವತಿಸಬೇಕಾದ ಕೊಡುಗೆ ಮೊತ್ತ, ಅರ್ಹತೆಗಳು ಹಾಗೂ ಪಿಂಚಣಿ ದೊರೆಯುವ ಪ್ರಕ್ರಿಯೆ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು [ಇಲ್ಲಿ ಕ್ಲಿಕ್ ಮಾಡಿ]


Atal Pension Yojana Details in Kannada: ಯೋಜನೆಯ ಮುಖ್ಯ ಉದ್ದೇಶ

ಅಟಲ್ ಪಿಂಚಣಿ ಯೋಜನೆಯ ಉದ್ದೇಶವೆಂದರೆ:

  • ಬಡ, ನೌಕರರಲ್ಲದ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ನಿವೃತ್ತಿ ನಂತರ ಭದ್ರತೆಯ ಪಿಂಚಣಿ ಒದಗಿಸುವುದು.
  • ತಿಂಗಳಿಗೆ ₹1000 ರಿಂದ ₹5000 ವರೆಗೆ ಪಿಂಚಣಿಯನ್ನು 60 ವರ್ಷ ಪೂರ್ಣಗೊಂಡ ನಂತರ ನೀಡಲಾಗುತ್ತದೆ.
  • ಪಾವತಿ ಮಾಡುವ ಕೊಡುಗೆ ಮೊತ್ತವು ನಿಮ್ಮ ಪ್ರಾರಂಭ ವಯಸ್ಸು ಹಾಗೂ ಆಯ್ಕೆ ಮಾಡಿದ ಪಿಂಚಣಿ ಮೊತ್ತದ ಆಧಾರದ ಮೇಲೆ ನಿರ್ಧಾರವಾಗುತ್ತದೆ.

Gruha Lakshmi Amount Update: ಇನ್ನು ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲವೇ? ಇಲ್ಲಿದೆ ಹೊಸ ಅಪ್ಡೇಟ್.

ಯಾರು ಅರ್ಹ?

ಅಂಶವಿವರ
ವಯಸ್ಸು18ರಿಂದ 40ರೊಳಗಿನವರೆಗೂ ಅರ್ಹ
ಖಾತೆಸೇವಿಂಗ್ ಬ್ಯಾಂಕ್ ಖಾತೆ ಅಗತ್ಯ
ದಾಖಲೆಗಳುಆಧಾರ್, ಮೊಬೈಲ್ ಸಂಖ್ಯೆ, ಪಾನ್ ಅಥವಾ ಗುರುತಿನ ಚೀಟಿ
ನಿವೃತ್ತಿ ವಯಸ್ಸು60 ವರ್ಷದಲ್ಲಿ ಪಿಂಚಣಿ ಶುರು

ಯೋಜನೆಯ ಪಿಂಚಣಿ ಆಯ್ಕೆ ಮತ್ತು ಮಾಸಿಕ ಕೊಡುಗೆ

ಪಿಂಚಣಿ ಮೊತ್ತ18 ವರ್ಷದ ಪಾವತಿ40 ವರ್ಷದ ಪಾವತಿ
₹1,000₹42₹291
₹2,000₹84₹582
₹3,000₹125₹873
₹4,000₹168₹1,164
₹5,000₹210₹1,454

ಯೋಜನೆಯ ಪ್ರಮುಖ ವೈಶಿಷ್ಟ್ಯಗಳು

Atal Pension Yojana Details in Kannada
Atal Pension Yojana Details in Kannada

  • ಸರಕಾರದ ಕೊಡುಗೆ: ಕೆಲವು ಶ್ರೇಣಿಗೆ 50% ಅಥವಾ ₹1000 ವರೆಗೆ ಪ್ರತಿವರ್ಷ ಸರ್ಕಾರ ಸಹಾಯಧನ ನೀಡುತ್ತದೆ.
  • ಪಾವತಿ ವಿಧಾನ: ನಿಮ್ಮ ಬ್ಯಾಂಕ್ ಖಾತೆಯಿಂದ ಆಟೋ ಡೆಬಿಟ್ (Auto-Debit) ಮೂಲಕ ನೇರವಾಗಿ ಹಣ ಕಡಿತವಾಗುತ್ತದೆ.
  • ಪಾವತಿ ಅವಧಿ: ನೀವು 60 ವರ್ಷ ತಲುಪುವವರೆಗೆ ಪಾವತಿಸಬೇಕು.
  • ಪಿಂಚಣಿ ಆರಂಭ: 60 ವರ್ಷದಲ್ಲಿ ಪಿಂಚಣಿ ನೀಡಲಾಗುತ್ತದೆ.

ನೋಂದಣಿ ಪ್ರಕ್ರಿಯೆ

  • ಸೇವಿಂಗ್ ಖಾತೆಯೊಂದಿಗೆ ಸಮರ್ಪಕವಾಗಿ APY ಫಾರ್ಮ್ ಭರ್ತಿ ಮಾಡಿ.
  • ಆಧಾರ್, ಬ್ಯಾಂಕ್ ಡಿಟೇಲ್ಸ್ ಇತ್ಯಾದಿ ದಾಖಲೆಗಳನ್ನು ಸೇರಿಸಿ.
  • ಪಾವತಿ ಆಯ್ಕೆ ಮಾಡಿ (ಆಟೋ ಡೆಬಿಟ್/ಮಾಸಿಕ/ತ್ರೈಮಾಸಿಕ).
  • ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಅರ್ಜಿ ಸಲ್ಲಿಸಿ.

ಎಲ್ಲಿ ಸಂಪರ್ಕಿಸಬೇಕು?

  • ನಿಮ್ಮ ಬ್ಯಾಂಕ್ ಶಾಖೆ
  • ಪೋಸ್ಟ್ ಆಫೀಸ್
  • ಸರ್ಕಾರಿ ಸಹಾಯವಾಣಿ: 1800-180-1111
  • ಅಧಿಕೃತ ವೆಬ್‌ಸೈಟ್: https://www.npscra.nsdl.co.in

ಅಟಲ್ ಪಿಂಚಣಿ ಯೋಜನೆ ಬಡವರ್ಗದ ಜನತೆಗೆ ಉಚಿತವಾಗಿ ಹೂಡಿಕೆಗೆ ಅವಕಾಶ ನೀಡುವ ಅತ್ಯುತ್ತಮ ಯೋಜನೆ. ದಿನಕ್ಕೆ ₹7ರಿಂದ ಆರಂಭಿಸಿ ನಿಮ್ಮ ನಿವೃತ್ತ ಭದ್ರತೆಯನ್ನು ಇಂದೆ ರೂಪಿಸಬಹುದು. ನಿಮ್ಮ ವಯಸ್ಸು 18 ರಿಂದ 40ರೊಳಗೆ ಇದ್ದರೆ, ತಡಮಾಡದೇ ಈಗಲೇ ಸೇರಿ!

Join

Leave a Comment