Bank Holidays In August: ಆಗಸ್ಟ್ 2025 ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿ: ಸ್ವಾತಂತ್ರ್ಯ ದಿನ, ಗಣೇಶ ಚತುರ್ಥಿ ಸೇರಿದಂತೆ 15 ದಿನ ಬ್ಯಾಂಕ್‌ ಮುಚ್ಚಿರುತ್ತವೆ. ಇನ್ನಷ್ಟು ತಿಳಿಯಿರಿ.

Photo of author

Mantesh

Publish: July 29, 2025

share Share:

Bank Holidays: ಆಗಸ್ಟ್‌ ತಿಂಗಳು ಪ್ರಾರಂಭವಾಗುತ್ತಿದ್ದಂತೆ, ಬ್ಯಾಂಕ್ ಖಾತೆದಾರರು ಹಾಗೂ ವ್ಯವಹಾರಿಗಳಿಗೆ ಪ್ರಮುಖ ಮಾಹಿತಿ.
ಸ್ವಾತಂತ್ರ್ಯ ದಿನ, ಗಣೇಶ ಚತುರ್ಥಿ, ಜನ್ಮಾಷ್ಟಮಿ ಮೊದಲಾದ ಹಬ್ಬಗಳ ಜೊತೆಗೆ ಭಾನುವಾರ ಹಾಗೂ ಶನಿವಾರಗಳನ್ನು ಸೇರಿಸಿದರೆ ಆಗಸ್ಟ್ 2025ರಲ್ಲಿ ಒಟ್ಟು 15 ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ..

ಈ ಪೈಕಿ ಕೆಲವು ರಜಾದಿನಗಳು ದೇಶವ್ಯಾಪಿಯಾಗಿ ಅನ್ವಯಿಸುತ್ತವೆ, ಆದರೆ ಕೆಲವು ರಾಜ್ಯ ಮಟ್ಟದ ಹಬ್ಬಗಳಿಗೆ ಮಾತ್ರ ಸೀಮಿತ. ಆದ್ದರಿಂದ ನೀವು ಬ್ಯಾಂಕ್‌ಗೆ ಹೋಗುವ ಮೊದಲು ಈ ಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿಕೊಳ್ಳಿ. ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].


RBI ಪ್ರಕಟಿಸಿರುವ ಆಗಸ್ಟ್‌ 2025ರ ಬ್ಯಾಂಕ್ ರಜಾದಿನಗಳು (Bank Holidays)

ಭಾನುವಾರ ಹಾಗೂ ಎರಡನೇ/ನಾಲ್ಕನೇ ಶನಿವಾರಗಳು ರಾಷ್ಟ್ರವ್ಯಾಪಿ ಸಾಮಾನ್ಯ ರಜೆ. ಇವುಗಳ ಹೊರತಾಗಿ ಹಬ್ಬಗಳು ಹಾಗೂ ಸ್ಥಳೀಯ ಆಚರಣೆಗಳ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಈ ಕೆಳಗಿನ ದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ:

ಆಗಸ್ಟ್ 2025ರ ಬ್ಯಾಂಕ್‌ ರಜೆಗಳ (Bank Holidays) ವಿವರವಾದ ಪಟ್ಟಿ:

ದಿನಾಂಕ ಕಾರಣ / ಹಬ್ಬ ರಾಜ್ಯ / ಪ್ರದೇಶ
ಆಗಸ್ಟ್ 3 (ಭಾನುವಾರ) ಸಾಮಾನ್ಯ ರಜೆ ದೇಶಾದ್ಯಂತ
ಆಗಸ್ಟ್ 8 (ಶುಕ್ರವಾರ) ಟೆಂಡಾಂಗ್ ಲೋ ಹ್ರಮ್ ಫಾಟ್ ಹಬ್ಬ ಸಿಕ್ಕಿಂ, ಒಡಿಶಾ
ಆಗಸ್ಟ್ 9 (ಶನಿವಾರ) ರಕ್ಷಾ ಬಂಧನ + ಎರಡನೇ ಶನಿವಾರ ದೇಶಾದ್ಯಂತ
ಆಗಸ್ಟ್ 10 (ಭಾನುವಾರ) ಸಾಮಾನ್ಯ ರಜೆ ದೇಶಾದ್ಯಂತ
ಆಗಸ್ಟ್ 13 (ಬುಧವಾರ) ದೇಶಭಕ್ತಿ ದಿವಸ್ ಮಣಿಪುರ
ಆಗಸ್ಟ್ 15 (ಶುಕ್ರವಾರ) ಸ್ವಾತಂತ್ರ್ಯ ದಿನ ದೇಶಾದ್ಯಂತ
ಆಗಸ್ಟ್ 16 (ಶನಿವಾರ) ಜನ್ಮಾಷ್ಟಮಿ, ಪಾರ್ಸಿ ಹೊಸ ವರ್ಷ ಗುಜರಾತ್, ಮಧ್ಯಪ್ರದೇಶ, ಮಿಜೋರಾಂ, ತಮಿಳುನಾಡು, ಚಂಡೀಗಢ, ಸಿಕ್ಕಿಂ, ತೆಲಂಗಾಣ, ಜಮ್ಮು-ಕಾಶ್ಮೀರ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮೇಘಾಲಯ, ಆಂಧ್ರ
ಆಗಸ್ಟ್ 17 (ಭಾನುವಾರ) ಸಾಮಾನ್ಯ ರಜೆ ದೇಶಾದ್ಯಂತ
ಆಗಸ್ಟ್ 19 (ಮಂಗಳವಾರ) ಮಹಾರಾಜ ಬೀರ್ ಬಿಕ್ರಮ್ ಜಯಂತಿ ತ್ರಿಪುರಾ
ಆಗಸ್ಟ್ 23 (ಶನಿವಾರ) ನಾಲ್ಕನೇ ಶನಿವಾರ ದೇಶಾದ್ಯಂತ
ಆಗಸ್ಟ್ 24 (ಭಾನುವಾರ) ಸಾಮಾನ್ಯ ರಜೆ ದೇಶಾದ್ಯಂತ
ಆಗಸ್ಟ್ 25 (ಸೋಮವಾರ) ಶ್ರೀಮಂತ ಶಂಕರದೇವರ ತಿರುಭವ ತಿಥಿ ಅಸ್ಸಾಂ
ಆಗಸ್ಟ್ 27 (ಬುಧವಾರ) ಗಣೇಶ ಚತುರ್ಥಿ ತೆಲಂಗಾಣ, ಆಂಧ್ರ, ಕರ್ನಾಟಕ, ಒಡಿಶಾ, ಗುಜರಾತ್, ತಮಿಳುನಾಡು, ಗೋವಾ, ಮಹಾರಾಷ್ಟ್ರ
ಆಗಸ್ಟ್ 28 (ಗುರುವಾರ) ಗಣೇಶ ಚತುರ್ಥಿ / ನುವಾಖೈ ಕರ್ನಾಟಕ, ಒಡಿಶಾ, ಗೋವಾ
ಆಗಸ್ಟ್ 31 (ಭಾನುವಾರ) ಸಾಮಾನ್ಯ ರಜೆ ದೇಶಾದ್ಯಂತ

ನಿಮ್ಮ ಬ್ಯಾಂಕಿಂಗ್ ಯೋಜನೆ ಹೀಗೆ ಮಾಡಿ

Bank Holidays
Bank Holidays

ಹಣಕಾಸು ವ್ಯವಹಾರಗಳು, ಚೆಕ್‌ ಡಿಪಾಜಿಟ್‌, ಲೋನ್‌ ಕೆಲಸಗಳು ಅಥವಾ ಯಾವುದೇ ಬ್ಯಾಂಕಿಂಗ್ ಸೇವೆಗಳು ಬೇಕಿದ್ದರೆ ಮುಂಚಿತವಾಗಿ ಈ ದಿನಾಂಕಗಳನ್ನು ಗಮನಿಸಿ ಯೋಜನೆ ಮಾಡಿಕೊಳ್ಳಿ. ಆನ್‌ಲೈನ್ ಬ್ಯಾಂಕಿಂಗ್ (NetBanking / UPI) ಸೇವೆಗಳು ಈ ದಿನಗಳಲ್ಲೂ ಲಭ್ಯವಿರುತ್ತವೆ.

ಮುಖ್ಯ ಸೂಚನೆ

  • ಎಲ್ಲಾ ರಜಾದಿನಗಳು ಎಲ್ಲ ರಾಜ್ಯಗಳಿಗೆ ಅನ್ವಯಿಸುವುದಿಲ್ಲ
  • ಸ್ಥಳೀಯ ಹಬ್ಬಗಳಿಗೆ ಸಂಬಂಧಿಸಿದ ರಜೆಗಳು ಆ ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತವೆ

ಆಗಸ್ಟ್ 2025ರಲ್ಲಿ ಒಟ್ಟು 15 ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ನೀವು ಬ್ಯಾಂಕ್ ಕೆಲಸಗಳನ್ನು ಪ್ಲಾನ್ ಮಾಡುತ್ತಿರುವರೆ, ಈ ಪಟ್ಟಿಯನ್ನು ಉಳಿಸಿಕೊಂಡು ತೊಂದರೆ ತಪ್ಪಿಸಿಕೊಳ್ಳಿ.

Discover the latest job opportunities

Join

Leave a Comment