Bank Holidays In July 2025: ಜುಲೈ ತಿಂಗಳಲ್ಲಿ 13 ದಿನ ಬ್ಯಾಂಕ್ ಬಂದ್: ರಾಜ್ಯವಾರು ರಜಾದಿನಗಳ ಪಟ್ಟಿ ನೋಡಿ!

Photo of author

Mantesh

Publish: July 1, 2025
2nd and 4th saturday bank holiday

share Share:

Bank Holidays In July 2025: ಜುಲೈ ತಿಂಗಳಲ್ಲಿ ದೇಶದಾದ್ಯಂತ ಬ್ಯಾಂಕುಗಳು ಸುಮಾರು 13 ದಿನಗಳ ಕಾಲ ರಜೆಗಳನ್ನು ಹೊಂದಿವೆ. ಆದರೆ ಈ ರಜೆಗಳು ಬೇರೆ ಬೇರೆ ರಾಜ್ಯಗಳಿಗೆ ಬೇರೆಬೇರೆ ರೀತಿಯಲ್ಲಿ ಅನ್ವಯಿಸುತ್ತವೆ. ವಿಶೇಷವಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ತಿಂಗಳಲ್ಲಿ ವಾರಾಂತ್ಯದ ರಜೆಗಳನ್ನು ಬಿಟ್ಟರೆ ಬೇರೆ ಯಾವುದೇ ವಿಶೇಷ ರಜೆಗಳು ಇಲ್ಲ. ದೇಶದಲ್ಲಿನ ವಿವಿಧ ರಾಜ್ಯಗಳ ಬ್ಯಾಂಕುಗಳ ರಜಾ ದಿನಗಳು ಹೇಗಿವೆ, ಯಾವ ರಾಜ್ಯದಲ್ಲಿ ಯಾವ ಯಾವ ದಿನ ಬ್ಯಾಂಕುಗಳು ಮುಚ್ಚಿರುತ್ತವೆ ಎಂಬ ಸಂಪೂರ್ಣ ವಿವರಗಳನ್ನು ಈ ಒಂದು ಲೇಖನದಲ್ಲಿ ನೀಡಲಾಗಿದೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;


Bank Holidays In July 2025: ಹಬ್ಬ-ಹಬ್ಬ, ವಿಶೇಷ ರಜೆಗಳ ಮಹತ್ವ!

ಸಾಮಾನ್ಯವಾಗಿ ಬ್ಯಾಂಕುಗಳಿಗೆ ರಜೆ ವಾರಂತ್ಯದಲ್ಲಿ ಸಿಗುತ್ತವೆ. ಅದು ಅಲ್ಲದೆ ಅನೇಕ ರಜಾ ದಿನಗಳು, ಹಬ್ಬಗಳು, ಮತ್ತು ಪ್ರಾದೇಶಿಕ ರಜೆಗಳು ಸೇರಿ ಈ ತಿಂಗಳಲ್ಲಿ (ಅಂದರೆ ಜುಲೈ 2025) (bank holidays this month) ಒಟ್ಟಾರೆಯಾಗಿ ಬ್ಯಾಂಕುಗಳಿಗೆ 13 ದಿನಗಳ ರಜೆ ಇರುತ್ತವೆ. ಹಾಗಾಗಿ ಯಾರು ಅತಿಯಾಗಿ ಬ್ಯಾಂಕಿನ ವಹಿವಾಟನ್ನು ಹೊಂದಿರುತ್ತೀರಿ ಅಂತವರು ಈ ಮಾಹಿತಿಗಳನ್ನು ತಿಳಿದುಕೊಳ್ಳುವುದು ಉಪಯುಕ್ತ.

RBI Bank Holidays List: ಆರ್‌ಬಿಐ ಬಿಡುಗಡೆ ಮಾಡಿದ ರಜೆಗಳ ಪಟ್ಟಿ

Bank Holidays In July 2025
2nd and 4th saturday bank holiday

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರತಿ ವರ್ಷದ ಪ್ರಾರಂಭದಲ್ಲಿ ಅಧಿಕೃತವಾಗಿ ಆ ವರ್ಷದ ಒಟ್ಟು ಬ್ಯಾಂಕ್ ಪ್ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ಅದೇ ರೀತಿ ಜುಲೈ 2025ರಲ್ಲಿ ಒಟ್ಟಾರೆಯಾಗಿ 13 ದಿನಗಳ ಬ್ಯಾಂಕ್ ರಜೆ ಇರುವುದು. ಇದರಲ್ಲಿ ವಾರಾಂತ್ಯದ ರಜೆಗಳಾದ ಶನಿವಾರ ಮತ್ತು ಭಾನುವಾರ ಹಾಗೂ ಸ್ಥಳೀಯ ಹಬ್ಬಗಳು ಸೇರಿವೆ. ನಮಗೆಲ್ಲ ತಿಳಿದಿರುವ ಹಾಗೆ ಹಬ್ಬಗಳು ಪ್ರಾದೇಶಿಕ ಆಚರಣೆಗಳಾಗಿದ್ದು, ಇವುಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಅದರಂತೆ ಈ ತಿಂಗಳು ಅಂದರೆ ಜುಲೈ 2025ರಲ್ಲಿ ಕರ್ನಾಟಕಕ್ಕೆ ಯಾವುದೇ ರೀತಿಯ ಬ್ಯಾಂಕ್ ರಜೆಗಳು ಇಲ್ಲ ಎಂಬುವುದು ಗಮನಾರ್ಹ.

ಗ್ರಾಹಕರಿಗೆ ಮುನ್ನೆಚ್ಚರಿಕೆ ಅಗತ್ಯ

ಈ ಮಹತ್ವದ ಮಾಹಿತಿಯನ್ನು ತಿಳಿದುಕೊಂಡು ಗ್ರಾಹಕರು ತಮ್ಮ ಬ್ಯಾಂಕ್ ವೈವಾಟುಗಳನ್ನು ಮುಂಚಿತವಾಗಿ ಮುಗಿಸಿಕೊಳ್ಳುವುದು ಉತ್ತಮ. ನಮಗೆಲ್ಲ ತಿಳಿದಿರುವ ಹಾಗೆ ದೇಶದ ಎಲ್ಲಾ ಬ್ಯಾಂಕುಗಳು ಪ್ರತಿ ತಿಂಗಳ ಮೊದಲ, ಮೂರನೇ, ಮತ್ತು 5ನೇ ಶನಿವಾರಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಆದರೆ ಎರಡನೇ ಮತ್ತು ನಾಲ್ಕನೇ ಶನಿವಾರಗಳಲ್ಲಿ (2nd and 4th saturday bank holiday) ಬ್ಯಾಂಕುಗಳಿಗೆ ರಜೆ ಇರುತ್ತದೆ.

ಜುಲೈ 2025: ರಾಜ್ಯಾವಾರು ಬ್ಯಾಂಕ್ ರಜೆಗಳ ವಿವರವಾದ ಪಟ್ಟಿ

ದಿನಾಂಕಹಬ್ಬ / ಕಾರಣರಾಜ್ಯಗಳು
ಜುಲೈ 3ಖರ್ಚೀ ಪೂಜಾತ್ರಿಪುರ
ಜುಲೈ 5ಗುರು ಹರಿಗೋಬಿಂದ್ ಜೀ ಜಯಂತಿಜಮ್ಮು ಮತ್ತು ಕಾಶ್ಮೀರ
ಜುಲೈ 6ಭಾನುವಾರ (ಸಾಮಾನ್ಯ ರಜೆ)ದೇಶಾದ್ಯಂತ
ಜುಲೈ 12ಎರಡನೇ ಶನಿವಾರದೇಶಾದ್ಯಂತ
ಜುಲೈ 13ಭಾನುವಾರ (ಸಾಮಾನ್ಯ ರಜೆ)ದೇಶಾದ್ಯಂತ
ಜುಲೈ 14ಬೆಹ್ ದೀಂಖ್ಲಾಮ್ಮೇಘಾಲಯ
ಜುಲೈ 16ಹರೇಲಾ ಹಬ್ಬಉತ್ತರಾಖಂಡ
ಜುಲೈ 17ಯೂ ಟಿರೋಟ್ ಸಿಂಗ್ ವರ್ಧಂತಿಮೇಘಾಲಯ
ಜುಲೈ 19ಕೆರ್ ಪೂಜಾತ್ರಿಪುರ
ಜುಲೈ 20ಭಾನುವಾರ (ಸಾಮಾನ್ಯ ರಜೆ)ದೇಶಾದ್ಯಂತ
ಜುಲೈ 26ನಾಲ್ಕನೇ ಶನಿವಾರದೇಶಾದ್ಯಂತ
ಜುಲೈ 27ಭಾನುವಾರ (ಸಾಮಾನ್ಯ ರಜೆ)ದೇಶಾದ್ಯಂತ
ಜುಲೈ 28ದ್ರುಕ್ಪಾ ಶೆ-ಜೀಸಿಕ್ಕಿಂ
Bank Holidays In July 2025

Join

Leave a Comment