Bharat Bandh Tomorrow 2025: ನಾಳೆ ಭಾರತ್ ಬಂದ್ ದಿಂದ ಬ್ಯಾಂಕ್ ಮತ್ತು ಷೇರು ಮಾರುಕಟ್ಟೆ..!

Photo of author

Mantesh

Publish: July 8, 2025

share Share:

Bharat Bandh Tomorrow 2025 Latest News in Kannada: ಜುಲೈ 9ರಂದು ಭಾರತದ ಪ್ರಮುಖ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಾಳೆ ಬ್ಯಾಂಕ್‌ಗಳು ಮತ್ತು ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳ ವಿರುದ್ಧ ಶಬ್ಧಿಸುತ್ತಿರುವ ಈ ಮುಷ್ಕರವು ಕೆಲವು ಪ್ರಮುಖ ಸೇವೆಗಳನ್ನು ವ್ಯತ್ಯಯಗೊಳಿಸಬಹುದು ಎನ್ನಲಾಗುತ್ತಿದೆ.

ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;


ಭಾರತ್ ಬಂದ್ ಕರೆ ಯಾರಿಂದ? – Bharat Bandh Call By Trade Unions

ದೇಶದ 10ಕ್ಕೂ ಹೆಚ್ಚು ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳು, ಕೃಷಿ ಸಂಘಟನೆಗಳು ಮತ್ತು ಗ್ರಾಮೀಣ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ 2025 ಗೆ ಬೆಂಬಲ ಸೂಚಿಸಿವೆ. INTUC, AITUC, CITU, HMS, AIUTUC, TUCC, SEWA, AICCTU, LPF, UTUC ಮುಂತಾದ ಪ್ರಮುಖ ಸಂಘಟನೆಗಳು ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.

ಸಂಘಟನೆಗಳ ಬೇಡಿಕೆ ಏನು? – Bharat Bandh Reason

ಕಾರ್ಮಿಕ ಸಂಘಟನೆಗಳ ವಾದ ಏನೆಂದರೆ, ಕೇಂದ್ರ ಸರ್ಕಾರದ ನೀತಿಗಳು ಕಾರ್ಮಿಕ ಮತ್ತು ಕೃಷಿ ವರ್ಗದ ಹಿತಕ್ಕೆ ವಿರುದ್ಧವಾಗಿದ್ದು, ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ಅನುಕೂಲಕಾರಿಯಾಗಿವೆ.
‘ದೇಶದ ಕಲ್ಯಾಣ ರಾಜ್ಯ ತತ್ವವನ್ನು ಸರ್ಕಾರ ಕೈಬಿಟ್ಟಿದೆ. ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ. ಇದನ್ನು ವಿರೋಧಿಸಲು ಈ ಮುಷ್ಕರ ಅನಿವಾರ್ಯವಾಗಿದೆ’ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

Railone App: ಇಂದಿನಿಂದ RailOne ಸೂಪರ್ ಆಪ್: ರೈಲು ಪ್ರಯಾಣದ ಎಲ್ಲ ಸೇವೆಗಳು ಒಂದೇ ಜಾಗದಲ್ಲಿ! ಇನ್ನಷ್ಟು ತಿಳಿಯಲು.

Bharat Bandh Tomorrow Banks Open or Closed?

Bharat Bandh Tomorrow
Bharat Bandh Tomorrow

ಬಹುಪಾಲು ಬ್ಯಾಂಕ್ ಸಂಸ್ಥೆಗಳು ನೇರವಾಗಿ ಮುಷ್ಕರಕ್ಕೆ ಅಧಿಕೃತ ಬೆಂಬಲ ಘೋಷಿಸದಿದ್ದರೂ, ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇರುವುದಾಗಿ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.
RBI Bank Holiday List 2025 ಪ್ರಕಾರ ಜುಲೈ 9 ರಂದು ಯಾವುದೇ ಅಧಿಕೃತ ರಜೆ ಇಲ್ಲದಿದ್ದರೂ, ಕೆಲವೆಡೆ ಸಿಬ್ಬಂದಿ ಕೊರತೆಯಿಂದ ಸೇವೆಗಳಲ್ಲಿ ತೊಂದರೆ ಉಂಟಾಗಬಹುದು.
ಹೀಗಾಗಿ Bharat Bandh Banks Open or Closed Tomorrow? ಎಂಬ ಪ್ರಶ್ನೆಗೆ ಉತ್ತರ – ಬ್ಯಾಂಕ್ ಶಾಖೆಗಳು ತೆರೆದಿರುತ್ತವೆ ಆದರೆ ಕೆಲಸದಲ್ಲಿ ವಿಳಂಬ ಸಾಧ್ಯ.

Bharat Bandh Tomorrow Stock Market Open or Closed?

ಭಾರತ್ ಬಂದ್ 2025 ದಿನ ಷೇರು ಮಾರುಕಟ್ಟೆ ಓಪನ್ ಇರುತ್ತದೆನಾ? ಎಂಬುದು ಹೂಡಿಕೆದಾರರಿಗೆ ಪ್ರಮುಖ ಪ್ರಶ್ನೆ. BSE ಮತ್ತು NSE Stock Market Holiday List 2025 ಪ್ರಕಾರ ಜುಲೈ 9 ರಂದು ಷೇರು ಮಾರುಕಟ್ಟೆಗೆ ಯಾವುದೇ ರಜೆ ಇಲ್ಲ. ಹೀಗಾಗಿ ಮುಂಬೈ ಷೇರು ಪೇಟೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಮುಂತಾದವು ಎಂದಿನಂತೆ ತೆರೆಯಿರುತ್ತವೆ. ಹೂಡಿಕೆದಾರರು ತಮ್ಮ ವಹಿವಾಟು ನಿರಂತರವಾಗಿ ನಡೆಸಬಹುದು.

Bharat Bandh 2025 Strike Impact: ಯಾವೆಲ್ಲಾ ಕ್ಷೇತ್ರಗಳಿಗೆ ಪರಿಣಾಮ?

ಭಾರತ್ ಬಂದ್ ದಿಂದ ದೇಶದ ಪ್ರಮುಖ ಹಣಕಾಸು ಸಂಸ್ಥೆಗಳು, ಕೈಗಾರಿಕಾ ಘಟಕಗಳು, ಕಲ್ಲಿದ್ದಲು ಗಣಿಗಳು, ಸಾರಿಗೆ, ಅಂಚೆ ಸೇವೆಗಳು ಮತ್ತು ಸರ್ಕಾರಿ ಕಚೇರಿಗಳ ಕಾರ್ಯ ನಿರ್ವಹಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಮೂಡಲಾದ ಅಂದಾಜು ಪ್ರಕಾರ, ಸುಮಾರು 25 ಕೋಟಿ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

Bharat Bandh 2025 Updates

  • ಬ್ಯಾಂಕ್ ಭೇಟಿ ಮಾಡಬೇಕಿದ್ದರೆ ಸ್ಥಳೀಯ ಶಾಖೆಯ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಿ.
  • ಷೇರು ಪೇಟೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರೂ, ಯಾವುದೇ ತುರ್ತು ಮಾಹಿತಿ ಬರಬಹುದೆಂದು ನ್ಯೂಸ್‌ ಅಪ್‌ಡೇಟ್ಸ್ ನೋಡುತ್ತಿರಿ.
  • Bharat Bandh Tomorrow News in Kannada ಯನ್ನು ಅನುಸರಿಸಿ ನಿಮ್ಮ ವಹಿವಾಟು ಪ್ಲಾನ್ ಮಾಡಿ.

Join

Leave a Comment