BPL CARD Canceled ಪ್ರಮುಖ ದಾಖಲೆಗಳಲ್ಲಿ ಒಂದಾದ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಇದರ ಕುರಿತು ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅದೇನೆಂದರೆ ಅನರ್ಹ ರೇಷನ್ ಕಾರ್ಡುಗಳನ್ನು ರದ್ದು ಮಾಡುವ ಕುರಿತು. ಈ ಒಂದು ಲೇಖನದಲ್ಲಿ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
ಅನರ್ಹ ರೇಷನ್ ಕಾರ್ಡ್ ಗಳು ರದ್ದು. BPL CARD Canceled
ಹೌದು ಸ್ನೇಹಿತರೆ, ಕರ್ನಾಟಕ ಸರ್ಕಾರ ಇದೀಗ ರೇಷನ್ ಕಾರ್ಡಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತಂದಿದ್ದು, ರಾಜ್ಯದಲ್ಲಿ ಅನರ್ಹ ಫಲಾನುಭವಿಗಳ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುವುದು. ರಾಜ್ಯದ ಅನೇಕ ಜನರು ವಿವಿಧ ರೀತಿಯಲ್ಲಿ ಅನೇಕ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡು ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಲು ಯತ್ನಿಸುತ್ತಿದ್ದಾರೆ. ಇದನ್ನು ಅರಿತ ರಾಜ್ಯ ಸರ್ಕಾರವು ಇದೀಗ ರೇಷನ್ ಕಾರ್ಡ್ ಗಳನ್ನು ನಿಷೇಧಿಸಲು ಮುಂದಾಗಿದೆ. ಪಡಿತರ ವಿತರಣೆಯಲ್ಲಿ ನೈತಿಕತೆ ಹಾಗೂ ನ್ಯಾಯ ಸಮ್ಮತವನ್ನು ಸ್ಥಾಪಿಸುವ ಉದ್ದೇಶದಿಂದ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ.
Minor Pan Card: 18 ವರ್ಷ ಒಳಗಿನ ಮಕ್ಕಳಿಗೂ ಪ್ಯಾನ್ ಕಾರ್ಡ್..! ಇಂದೇ ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ.
ಒಂದೇ ಮನೆಯಲ್ಲಿ ಎರಡು ಮೂರು ರೇಷನ್ ಕಾರ್ಡ್ ಗಳು

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಳೆದ ಕೆಲವು ತಿಂಗಳಿನಿಂದ ರಾಜ್ಯಾದ್ಯಂತ ರೇಷನ್ ಕಾರ್ಡ್ ಸಂಬಂಧಿಸಿದಂತೆ ಕುರಿತು ವಿವಿಧ ಮನೆಮನೆಗಳಿಗೆ ಭೇಟಿ ನೀಡಿ ರೇಷನ್ ಕಾರ್ಡ್ ಪರಿಶೀಲನೆಯನ್ನು ನಡೆಸುತ್ತಿದೆ. ಈ ವೇಳೆ ಅನೇಕ ಸ್ಥಳಗಳಲ್ಲಿ ಫಲಾನುಭವಿಗಳು ಒಂದೇ ವಿಳಾಸದಲ್ಲಿ ವಾಸವಾಗಿದ್ದು ಮತ್ತು ಒಂದಕ್ಕಿಂತ ಹೆಚ್ಚಿನ ಪಡಿತರ ಚೀಟಿಗಳನ್ನು ಹೊಂದಿ, ಅವುಗಳಿಂದ ಅನಧಿಕೃತವಾದ ಸಬ್ಸಿಡಿ ಆಹಾರವನ್ನು ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು ಇದೀಗ ಇಂತಹ ಅಕ್ರಮ ಕಾರ್ಡುಗಳನ್ನು ಹೊಂದಿದವರ ರೇಷನ್ ಕಾರ್ಡ್ ಗಳನ್ನು ನೇರವಾಗಿ ರದ್ದುಗೊಳಿಸಲು (BPL CARD Canceled) ನಿರ್ಧಾರ ತೆಗೆದುಕೊಂಡಿದೆ.
ಸ್ವಯಂ ಹಿಂತಿರುಗಿಸುವಿಕೆಯ ಗಡುವು
ರಾಜ್ಯ ಸರ್ಕಾರವು ಈ ರೀತಿ ನೇರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಮೊದಲು, ರಾಜ್ಯದ ಜನರಿಗೆ ಸ್ವಯಂ ಆಗಿ ಹಿಂತಿರುಗಿಸಲು ಅವಕಾಶ ನೀಡಿತ್ತು. ಆದರೆ ಈ ಎಚ್ಚರಿಕೆಗೆ ಸ್ಪಂದಿಸದ ಜನರು ಹಾಗೆಯೇ ಅನಧಿಕೃತವಾಗಿ ಆಹಾರ ಸಬ್ಸಿಡಿಯನ್ನು ಪಡೆಯುತ್ತಿದ್ದರು. ಇದನ್ನು ಅನೇಕ ಸರ್ವೆಗಳ ಮೂಲಕ ವೀಕ್ಷಿಸಿದ ಸರ್ಕಾರವು ಈಗ ನೇರವಾಗಿ ನೀಡದೆ ಎಲ್ಲಾ ಕಾರ್ಡ್ಗಳನ್ನು ರದ್ದು ಮಾಡಲು ತೀರ್ಮಾನ ತೆಗೆದುಕೊಂಡಿದೆ.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ತಾತ್ಕಾಲಿಕ ನಿರ್ಬಂಧ
ಪ್ರಸ್ತುತವಾಗಿ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಾಗೇನಾದರೂ ಒಂದು ವೇಳೆ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ರೇಷನ್ ಕಾರ್ಡ್ ನ ಅಗತ್ಯವಿದ್ದರೆ ಮಾತ್ರ ಹೊಸ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆರ್ಥಿಕವಾಗಿ ಬಡವರಾಗಿದ್ದರು, ನುಗ್ತಾ ವೈದ್ಯಕೀಯ ದಾಖಲೆಗಳಿಲ್ಲದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
ಯಾವೆಲ್ಲ ಕಾರ್ಡುಗಳು ರದ್ದು BPL CARD Canceled
- ಒಂದೇ ಮನೆಗೆ ಎರಡು ಕಾರ್ಡುಗಳನ್ನು ಹೊಂದಿದವರು
- ಸ್ವಯಂ ಹಿಂತಿರುಗಿಸದ ಕಾರ್ಡುಗಳ ಮೇಲೆ ನೇರ ಕ್ರಮ
- ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚಿರುವ ಕುಟುಂಬ
- ಮೂರು ಹೆಕ್ಟೇರಗಿಂತ ಹೆಚ್ಚಿನ ಭೂಮಿಯನ್ನು ಹೊಂದಿದವರು
- ವೈಯಕ್ತಿಕ ಆದಾಯ ತೆರಿಗೆಯನ್ನು ಪಾವತಿಸುವವರು












