COVID-19 New Variant: ಮತ್ತೆ ಬಂತು ಕೊರೋನಾ ವೈರಸ್…!

Photo of author

Mantesh

Publish: May 22, 2025
COVID-19 New Variant

share Share:

COVID-19 New Variant: ಮತ್ತೆ ಬಂತು ಕೊರೋನಾ ವೈರಸ್…!


ನಮಸ್ಕಾರ ಕರ್ನಾಟಕದ ಜನತೆಗೆ, ಇದೀಗ ಮತ್ತೆ ಕೊರೋನಾ ವೈರಸ್ ಸುದ್ದಿ ಕೇಳಿ ಬರುತ್ತಿದ್ದು ಜನರು ಆತಂಕಕ್ಕೆ ಈಡಾಗಿದ್ದಾರೆ. ಇವತ್ತಿನ ಈ ಒಂದು ಲೇಖನದಲ್ಲಿ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿ ಪಡೆದುಕೊಳ್ಳಿ. ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ;

ಕರ್ನಾಟಕದಲ್ಲಿ ಮತ್ತೆ ಕೋವಿಡ್ (ಕೊರೊನ ವೈರಸ್):COVID-19 cases in Karnataka

ನಮಸ್ಕಾರ ಕರ್ನಾಟಕದ ಜನತೆಗೆ, ಇತ್ತೀಚಿಗೆ ಕೋವಿಡ್ 19 ಕುರಿತಂತೆ ಅನೇಕ ಸುದ್ದಿಗಳು ಕೇಳಿ ಬರುತ್ತಿದ್ದು, ಕೆಲ ರಾಜ್ಯಗಳಲ್ಲಿ ಹೊಸ ಪ್ರಕರಣಗಳು ಕಂಡುಬಂದಿವೆ. ಭಾರತದಲ್ಲಿ ಮೇ 22 2025 ರ ನಂತರ ಅಂಕಿ ಅಂಶಗಳ ಪ್ರಕಾರ, ದೇಶದಾದ್ಯಂತ 257 ಸಕ್ರಿಯ ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ಅದರಲ್ಲಿ ಕರ್ನಾಟಕದಲ್ಲಿ 16 ಸಕ್ರಿಯ ಪ್ರಕರಣಗಳಿವೆ ಎಂಬ ಮಾಹಿತಿ ದೊರಕಿದೆ. ಇದು ನಿರ್ಲಕ್ಷ ಮಾಡುವಂತಹ ವಿಷಯ ಅಲ್ಲ. ತಕ್ಷಣಕ್ಕೆ ಯಾವುದೇ ರೀತಿಯ ಆತಂಕವಿಲ್ಲದಿದ್ದರೂ, ಎಚ್ಚರಿಕೆ ಎಂಬುವುದು ಅಗತ್ಯವಿದೆ.

ಪ್ರಸ್ತುತ ವಿದ್ಯಮಾನ ಏನು? COVID-19 active cases India 2025

ಈ ರೀತಿಯಾಗಿ ಕಂಡುಬಂದಿರುವ ಹೊಸ ಕೋವಿಡ್ ಪ್ರಕರಣಗಳ ಹಿಂದಿರುವ ಮುಖ್ಯ ಕಾರಣ, JN.1 (JN.1 variant in Karnataka) ಒಮಿಕ್ರಾನ್ ಉಪ-ವೇರಿಯಂಟ್ ಆಗಿದೆ. ಇದರ ಹರಡುವಿಕೆ ವೇಗವಾಗಿ ಇದ್ದರೂ ಸಹ ಇದರ ತೀವ್ರತೆ ಬಹಳ ಕಡಿಮೆ. ಅನೇಕ ರೋಗಿಗಳು ಕೆಲವು ಲಕ್ಷಣಗಳನ್ನು ಅನುಭವಿಸುತ್ತಿದ್ದು, ಆಸ್ಪತ್ರೆ ಸೇವೆಗಳ ಅಗತ್ಯವಿಲ್ಲದೆ ಚೇತರಿಸಿಕೊಳ್ಳುತ್ತಿದ್ದಾರೆ.
ಮಹಾರಾಷ್ಟ್ರ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಕಂಡುಬಂದಿದ್ದು, ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಪ್ರಕರಣಗಳು ದಾಖಲಾಗಿವೆ. ಆದರೂ, ಇದನ್ನು ನಿರ್ಲಕ್ಷ ಮಾಡುವಂತಿಲ್ಲ.

5 Yoga Mudras For A Healthy Life

COVID-19 New Variant
COVID-19 New Variant

ಸರ್ಕಾರದ ಕ್ರಮ: Karnataka government COVID-19 response

ಗಮನಕ್ಕೆ ಬಂದ ತಕ್ಷಣ ನಿದ್ದೆಯಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು, ಆರೋಗ್ಯ ಇಲಾಖೆ ಮೂಲಕ ಪರಸ್ಥಿತಿಯನ್ನು ನಿಗದಿತವಾಗಿ ಮೌಲ್ಯಮಾಪನ ಮಾಡುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಆರೋಗ್ಯ ಇಲಾಖೆ ತಂಡಗಳು ಪರಿಶೀಲನೆ ಹಾಗೂ ಪರೀಕ್ಷೆಗಳನ್ನು ಗಂಭೀರವಾಗಿ ಕೈಗೊಳ್ಳುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆಯನ್ನು ಪುನಃ ಜೋರಾಗಿ ಪ್ರಚಾರ ಮಾಡಲಾಗುತ್ತಿದೆ.

ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ:

‌ ✅ಮಾಸ್ಕ್ ಧರಿಸಿ: ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಉತ್ತಮ.
‌ ✅ಕೈ ತೊಳೆಯಿರಿ: ಕೈಗಳನ್ನು ಮೇಲಿಂದ ಮೇಲೆ ಚೆನ್ನಾಗಿ ತೊಳೆಯುವುದರಿಂದ ವೈರಸ್ ನಿಂದ ರಕ್ಷಣೆ ಪಡೆಯಬಹುದು.
‌ ✅ಬೂಸ್ಟರ್ ಡೋಸ್ ಪಡೆಯಿರಿ: ಈ ಮೊದಲು ನೀವು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದರೆ ಅದರ ಬೂಸ್ಟರ್ ಡೋಸ್ ತಪ್ಪದೇ ಪಡೆಯಿರಿ.
✅ಅಗತ್ಯವಿದ್ದಲ್ಲಿ ತಪ್ಪದೇ ವೈದ್ಯರನ್ನು ಸಂಪರ್ಕಿಸಿ.

Join

Leave a Comment