ಭಾರತ – ಬ್ರಿಟನ್ ಉಚಿತ ವಾಣಿಜ್ಯ ಒಪ್ಪಂದ (FTA -Free Trade Agreement): ಜನರು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯಗಳು!
ಭಾರತ ಮತ್ತು ಬ್ರಿಟನ್ ನಡುವಿನ ಉಚಿತ ವಾಣಿಜ್ಯ ಒಪ್ಪಂದ (Free Trade Agreement – FTA) ಬಗ್ಗೆ ಇತ್ತೀಚೆಗೆ ತುಂಬಾ ಸುದ್ದಿ ಕೇಳಿಬರುತ್ತಿದೆ. ಈ ಒಪ್ಪಂದದ ಅರ್ಥವೇನು? ಇದು ನಮ್ಮ ದೇಶಕ್ಕೆ ಹೇಗೆ ಉಪಯೋಗವಾಗಬಹುದು? ಇದು ಯಾವ ಹಂತದಲ್ಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಸರಳವಾಗಿ ಉತ್ತರ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
ಉಚಿತ ವಾಣಿಜ್ಯ ಒಪ್ಪಂದ ಅಂದ್ರೇನು? What is the meaning of FTA in India?
ಉಚಿತ ವಾಣಿಜ್ಯ ಒಪ್ಪಂದ (FTA-Free Trade Agreement) ಅಂದರೆ ಎರಡು ದೇಶಗಳು ಪರಸ್ಪರ ತಮ್ಮ ಉತ್ಪನ್ನಗಳು ಮತ್ತು ಸೇವೆಗಳಿಗೆ ತೆರಿಗೆ (ಟ್ಯಾಕ್ಸ್) ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ತೆಗೆದುಹಾಕುವುದು. ಇದರೊಂದಿಗೆ, ಆ ದೇಶಗಳ ನಡುವೆ ವ್ಯಾಪಾರ ಹೆಚ್ಚು ಸುಲಭವಾಗಿ ನಡೆಯುತ್ತದೆ. ಇದರಿಂದ ದೇಶದ ಆರ್ಥಿಕ ಮಟ್ಟವು ಸುಧಾರಿಸುತ್ತದೆ.
ಭಾರತ-ಬ್ರಿಟನ್ FTA ಯ ಉದ್ದೇಶವೇನು? Motive of Free Trade Agreement
ಈ ಒಪ್ಪಂದದ ಪ್ರಮುಖ ಉದ್ದೇಶಗಳು:
• ಇಬ್ಬರೂ ದೇಶಗಳ ನಡುವಿನ ವಾಣಿಜ್ಯ ಮತ್ತು ಹೂಡಿಕೆ ಹೆಚ್ಚಿಸುವುದು
• ಭಾರತೀಯ ಉತ್ಪನ್ನಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಹೆಚ್ಚು ಅವಕಾಶ
• ಬ್ರಿಟನ್ ಉತ್ಪನ್ನಗಳ ಮೇಲೆ ಭಾರತದಲ್ಲಿ ತೆರಿಗೆ ಕಡಿತ (ಉದಾ: ಐತಿಹಾಸಿಕ ಬ್ರಿಟಿಷ್ ಸ್ಕಚ್ ವಿಸ್ಕಿ)
• ಭಾರತೀಯ ಉದ್ಯೋಗಿಗಳಿಗೆ ಬ್ರಿಟನ್ನಲ್ಲಿ ಉದ್ಯೋಗಾವಕಾಶ ಸಿಗುವಿಕೆ
• ಟೆಕ್ನಾಲಜಿ, ನವೋದ್ಯಮ, ಹಸಿರು ಇಂಧನ ಕ್ಷೇತ್ರಗಳಲ್ಲಿ ಸಹಕಾರ
[short-code1]
ಒಳಗೊಂಡ ವಸ್ತುಗಳು ಮತ್ತು ಕ್ಷೇತ್ರಗಳು ಹಾಗೂ ವಲಯಗಳು?
ಭಾರತದ ಪ್ರಮುಖ ವಸ್ತುಗಳು:
• ಬಟ್ಟೆ
• ಔಷಧಿಗಳು (ಫಾರ್ಮಾ)
• ಆಭರಣಗಳು (ಚಿನ್ನ, ಬೆಳ್ಳಿ)
• ಐಟಿ ಮತ್ತು ಸಾಫ್ಟ್ವೇರ್ ಸೇವೆಗಳು
• ಕೃಷಿ ಉತ್ಪನ್ನಗಳು
ಬ್ರಿಟನ್ನ ಪ್ರಮುಖ ವಸ್ತುಗಳು:
• ಕಾರುಗಳು ಮತ್ತು ವಾಹನ ಭಾಗಗಳು
• ಸ್ಕಾಚ್ ವಿಸ್ಕಿ ಮತ್ತು ಆಲ್ಕೊಹಾಲ್
• ಹಣಕಾಸು ಮತ್ತು ಬಿಮಾ ಸೇವೆಗಳು
• ಶಿಕ್ಷಣ ಮತ್ತು ಕಾನೂನು ಸೇವೆಗಳು

BPNL Recruitment 2025: ಪಶುಪಾಲನ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ..!
ಈ ಒಪ್ಪಂದ ಯಾವ ಹಂತದಲ್ಲಿದೆ?
•ಸತತವಾಗಿ ಮೂರು ವರ್ಷಗಳ ನಿರಂತರ ಚರ್ಚೆಯಿಂದ ಕೂಡಿದ ಒಪ್ಪಂದ.
• ಈಗಾಗಲೇ 14–15 ರೌಂಡ್ಗಳ ಚರ್ಚೆ ನಡೆದಿವೆ.
• ಎರಡೂ ದೇಶಗಳು ಒಪ್ಪಂದದ ಕೊನೆ ಹಂತದ ಸಮಾಲೋಚನೆ ನಡೆಸುತ್ತಿವೆ.
• ಕೆಲವು ಅಡೆತಡೆಗಳಿದ್ದರೂ, ಸರ್ಕಾರಗಳು ಒಪ್ಪಂದದತ್ತ ಸಾಗುತ್ತಿವೆ.
ಪ್ರಮುಖ ಅಡೆತಡೆಗಳು ಯಾವುವು?
• ಬ್ರಿಟನ್ ತನ್ನ ಕಾರುಗಳು, ಮದ್ಯದ ಉತ್ಪನ್ನಗಳ ಮೇಲೆ ಭಾರತದಲ್ಲಿ ಕಡಿಮೆ ತೆರಿಗೆ ಬಯಸುತ್ತಿದೆ.
• ಭಾರತ ತನ್ನ ಸೇವಾ ವಲಯ (service sector) ಉದ್ಯೋಗಿಗಳಿಗೆ ಬ್ರಿಟನ್ನಲ್ಲಿ ಹೆಚ್ಚು ಅವಕಾಶ ಕೇಳುತ್ತಿದೆ.
• ಕಾನೂನು, ಬೌದ್ಧಿಕ ಸಂಪತ್ತಿನ ಹಕ್ಕುಗಳು (IPR), ನೈತಿಕ ಕೆಲಸದ ಹಕ್ಕುಗಳಂತಹ ವಿಷಯಗಳು ಇನ್ನೂ ಚರ್ಚೆಯಲ್ಲಿವೆ.
ಈ ಒಪ್ಪಂದದಿಂದ ನಿರೀಕ್ಷೆ ಮಾಡಬಹುದಾದ ಲಾಭಗಳೇನು?
- ಉದ್ಯೋಗ ಅವಕಾಶಗಳು: in job sector
ಭಾರತದ ಐಟಿ ಉದ್ಯೋಗಿಗಳಿಗೆ ಬ್ರಿಟನ್ನಲ್ಲಿ ಕೆಲಸ ಮಾಡುವ ಅವಕಾಶಗಳು ಹೆಚ್ಚಾಗುತ್ತವೆ. - ಬೆಲೆ ಕಡಿತ: in price
ಬ್ರಿಟನ್ನ ವಸ್ತುಗಳು (ಮದ್ಯ, ವಾಹನ) ಭಾರತದಲ್ಲಿ ಕಡಿಮೆ ಬೆಲೆಗೆ ಸಿಗಬಹುದು. - ಕೃಷಿಕರಿಗೆ ಮತ್ತು ಕೈಗಾರಿಕೆಗೆ ಲಾಭ: in agriculture and industries.
ಭಾರತೀಯ ಉತ್ಪನ್ನಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಹೆಚ್ಚು exports ಆಗುತ್ತವೆ. - ಹೂಡಿಕೆ ಮತ್ತು ತಂತ್ರಜ್ಞಾನ: investments and technology
UKನಿಂದ ಭಾರತಕ್ಕೆ ಹೆಚ್ಚು ಹೂಡಿಕೆ ಬರಬಹುದು, ಹೊಸ ಟೆಕ್ನಾಲಜಿಗಳ ಒಳರುವಿಕೆ ಹೆಚ್ಚಾಗುತ್ತದೆ.
ಬ್ರಿಟನ್ ಗೆ ಭಾರತದ ಮಹತ್ವ?
• ಭಾರತವು ಬ್ರಿಟನ್ಗಾಗಿ 7ನೇ ಅತಿ ದೊಡ್ಡ ವ್ಯಾಪಾರ ಪಾಲುದಾರ. ಅತಿ ಹೆಚ್ಚಿನ ಪ್ರಮಾಣದ ವ್ಯಾಪಾರವನ್ನು ನಾವು ಬ್ರಿಟನ್ ನೊಂದಿಗೆ ಹೊಂದಿದ್ದೇವೆ. ಭಾರತ ಹಾಗೂ ಬ್ರಿಟನ್ ನ 2023-24 ಸಾಲಿನ ಒಟ್ಟಾರೆ ವ್ಯಾಪಾರ ವಹಿವಾಟು 41 ಬಿಲಿಯನ್ ಪೌಂಡ್ ನಷ್ಟು.
• Post-Brexit ನಂತರ, ಬ್ರಿಟನ್ ಹೊಸ ವ್ಯಾಪಾರ ಒಪ್ಪಂದಗಳತ್ತ ಹೆಚ್ಚು ಗಮನ ಹರಿಸಿದೆ.
• ಭಾರತ ಎಂಬ ದೊಡ್ಡ ಮಾರುಕಟ್ಟೆ ಲಭಿಸುವುದು ಬ್ರಿಟನ್ಗೆ ದೊಡ್ಡ ಅವಕಾಶ. ತೀವ್ರ ಗತಿಯಲ್ಲಿ ಭಾರತದ ಆರ್ಥಿಕ ಮಾರುಕಟ್ಟೆ ಬೆಳೆಯುತ್ತಿರುವುದು ಇದರ ಮುಖ್ಯ ಪ್ರಾಧ್ಯಾನತೆ ಎನ್ನಬಹುದು.
ಒಪ್ಪಂದದ ಮುಂದಿನ ಭಾರತದ ಭವಿಷ್ಯ?
ಈ ಒಪ್ಪಂದದ ಮೂಲಕ ಭಾರತ ವಿಶ್ವದತ್ತ ಇನ್ನಷ್ಟು ತೆರೆಯುತ್ತಲಿದೆ. ನಮ್ಮ ಯುವಜನತೆಗೆ ಹೊಸ ಉದ್ಯೋಗ, ಹೊಸ ಮಾರುಕಟ್ಟೆ, ಹೊಸ ತಂತ್ರಜ್ಞಾನ—all in one! ಎಲ್ಲವೂ ಸಹ ದೊರಕಲಿದೆ.
ಭಾರತ – ಬ್ರಿಟನ್ ಉಚಿತ ವಾಣಿಜ್ಯ ಒಪ್ಪಂದ ಒಂದು ದೊಡ್ಡ ಹೆಜ್ಜೆ. ಇದರಿಂದ ನಮ್ಮ ಉದ್ಯೋಗ, ಕೃಷಿ, ಕೈಗಾರಿಕೆ, ಶಿಕ್ಷಣ, ಆರ್ಥಿಕತೆ ಎಲ್ಲಕ್ಕೂ ಒಳ್ಳೆಯದಾಗಬಹುದು.
[short-code2]











