India Post Recruitment 2025: ಒಟ್ಟು 21413 ಹುದ್ದೆಗಳು ಖಾಲಿ!

Photo of author

Mantesh

Publish: February 14, 2025
India Post Recruitment 2025

share Share:

ಸರ್ಕಾರಿ ಹುದ್ದೆಗಳಿಗಾಗಿ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ ನಡೆಯುತ್ತಿದ್ದು ಒಟ್ಟು 21413 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಹೌದು ಗೆಳೆಯರೇ India Post Recruitment 2025 ಭಾರತೀಯ ಅಂಚೆ ಇಲಾಖೆಯಲ್ಲಿ ಅಂದರೆ India Post Recruitment 2025 ನಲ್ಲಿ ಬೃಹತ್ ನೇಮಕಾತಿ ನಡೆಯುತ್ತಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಇದು ಒಂದು ಸುವರ್ಣ ಅವಕಾಶ. ಕೇವಲ 10ನೇ ತರಗತಿಯನ್ನು ಪಾಸ್ ಮಾಡಿದ್ದರೆ ಸಾಕು, ನೀವು ಸಹ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತೀರಿ. ಯಾವೆಲ್ಲ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ ಎಂದು ನೋಡುವುದಾದರೆ ಗ್ರಾಮೀಣ ಡಾಕ್ ಸೇವಕ (branch postmaster) ಹಾಗೂ ಗ್ರಾಮೀಣ ಡಾಕ್ ಸೇವಕ (assistant branch postmaster / dak sevak) ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗಳು ಭಾರತಾದ್ಯಂತ ಖಾಲಿ ಇದ್ದು ನೀವು ಯಾವ ರಾಜ್ಯಕ್ಕೆ ಬೇಕಾದರೂ ಅರ್ಜಿಯನ್ನು ಸಲ್ಲಿಸಬಹುದು. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಈ ಒಂದು ಲೇಖನವನ್ನು ಓದಿ.

ಇದೇ ರೀತಿಯ ಎಲ್ಲಾ ಉದ್ಯೋಗ ಮಾಹಿತಿಗಳು ಹಾಗೂ ಇನ್ನಿತರ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಲು ಈಗಲೇ ನಮ್ಮ ಟೆಲಿಗ್ರಾಂ ಚಾನಲ್ಗೆ ಜಾಯಿನ್ ಆಗಿ. ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಗ್ರಾಮೀಣ ಡಾಕ್ ಸೇವಕ:

India Post Recruitment 2025 ಗ್ರಾಮೀಣ ಡಾಕ್ ಸೇವಕ್ ಇದರಲ್ಲಿ ಎರಡು ರೀತಿಯ ಹುದ್ದೆಗಳನ್ನು ನಾವು ಕಾಣಬಹುದು ಮೊದಲನೆಯದು ಬ್ರಾಂಚ್ ಪೋಸ್ಟ್ ಮಾಸ್ಟರ್ ಇವರ ಒಂದು ಕೆಲಸ ಎಂದರೆ ಇವರದು ಕೇವಲ ಆಫೀಸ್ ಕೆಲಸವಾಗಿರುತ್ತದೆ. ಅಂದರೆ ಆಫೀಸ್ ನಲ್ಲಿ ನಡೆಯುವ ಎಲ್ಲಾ ರೀತಿಯ ಹಣದ ವಹಿವಾಟುಗಳು ಹಾಗೂ ಗ್ರಾಹಕರ ಜೊತೆಗಿನ ಸಮಸ್ಯೆಗಳ ಬಗೆಹರಿಸುವಿಕೆ ಮತ್ತು ಹಣದ ಜಮಾ ಹಾಗೂ ವರ್ಗಾವಣೆಯ ಇನ್ನಿತರ ಕೆಲಸಗಳನ್ನು ಬ್ರಾಂಚ್ ಪೋಸ್ಟ್ ಮಾಸ್ಟರ್ ಅವರು ನಿರ್ವಹಿಸುತ್ತಾರೆ. ಅದೇ ರೀತಿಯಾಗಿ ABPM ಇವರು ಫೀಲ್ಡ್ ವರ್ಕರ್ ಆಗಿ ಕಾರ್ಯ ನಿರ್ವಹಿಸುತ್ತಾರೆ ಅಂದರೆ ಒಬ್ಬ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಅವರು ಪೋಸ್ಟ್ ಆಫೀಸ್ನ ಎಲ್ಲಾ ರೀತಿಯ ಹೊರಗಿನ ವಹಿವಾಟುಗಳನ್ನು ನೋಡಿಕೊಳ್ಳುತ್ತಾರೆ ಗ್ರಾಹಕರ ಪತ್ರಗಳ ವಿಶ್ಲೇಷಣೆ ಹಾಗೂ ಅವುಗಳ ವರ್ಗಾವಣೆ ಮತ್ತು ಆಫೀಸಿಗೆ ಬೇಕಾಗುವಂತಹ ದಾಖಲೆಗಳ ವರ್ಗಾವಣೆಗಳನ್ನು ಇವರು ನೋಡಿಕೊಳ್ಳುತ್ತಾರೆ.

India Post Recruitment 2025

ಶೈಕ್ಷಣಿಕ ಅರ್ಹತೆಗಳು:

ಗ್ರಾಮೀಣ ಡಾಕ್ ಸೇವಕ India Post Recruitment 2025 ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವಂತ ಯಾವುದೇ ರೀತಿಯ ಬೋರ್ಡ್ ಅಥವಾ ಯೂನಿವರ್ಸಿಟಿಯ ಮೂಲಕ ನೀವು ನಿಮ್ಮ ಹತ್ತನೆಯ ತರಗತಿಯನ್ನು ಪಾಸ್ ಮಾಡಿರಬೇಕು. ಕೇವಲ ಈ ಒಂದು ಅರ್ಹತೆಯನ್ನು ನಿಗದಿಪಡಿಸಲಾಗಿದೆ.

ಬೇಕಾಗುವ ದಾಖಲಾತಿಗಳು:

ಈ ಕೆಳಗೆ ನೀಡಿರುವಂತಹ ದಾಖಲಾತಿಗಳನ್ನು ನೀವು ಹೊಂದಿರಬೇಕಾಗುತ್ತದೆ. ಆದರೆ ಕೆಲವೊಂದು ದಾಖಲಾತಿಗಳು ನಿಮಗೆ ಅನ್ವಯ ಆಗದಿದ್ದರೆ ಅವುಗಳನ್ನು ಲಗತ್ತಿಸುವಂತಹ ಅವಶ್ಯಕತೆ ಇರುವುದಿಲ್ಲ. ನೆನಪಿನಲ್ಲಿಡಿ ಇಲ್ಲಿ ಬೇಕಾಗುವ ಕೆಲವು ಸಾಮಾನ್ಯ ದಾಖಲಾತಿಗಳನ್ನು ನೀವು ಹೊಂದಿರಬೇಕಾಗುತ್ತದೆ ಹಾಗೂ ಅವಶ್ಯಕತೆ ಇದ್ದಲ್ಲಿ ಅವಶ್ಯಕ ದಾಖಲಾತಿಗಳನ್ನು ಸಹ ಹೊಂದಿರಬೇಕಾಗುತ್ತದೆ.

  1. Marks sheet
  2. Id proof
  3. Caste certificate
  4. PWD certificate
  5. EWS certificate
  6. Transgender certificate
  7. Date of Birth Proof
  8. Medical certificate issed by a Medical officer of any Govt hospital
  9. Photo & Signature image in JPG format less than 50kb & 20kb

ವಯೋಮಿತಿ:

ನಿಮಗೆಲ್ಲ ತಿಳಿದಿರುವ ಹಾಗೆ ಭಾರತದಲ್ಲಿ ಯಾವುದೇ ರೀತಿಯ ಸರಕಾರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದಲ್ಲಿ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಅದೇ ರೀತಿ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ

ವಯೋಮಿತಿ ಸಡಿಲಿಕೆ:

Age Relaxation Chart for India Post Office Recruitment 2025:

CategoryAge Relaxation
OBC Candidates3 Years
SC/ST Candidates5 Years
PWD (General) Candidates10 Years
PWD (OBC) Candidates13 Years
PWD (SC/ST) Candidates15 Years

Also Read :

BEL Recruitment 2025: (Trainee Engineer & Project Engineer)

KPSC(Karnataka public service commission): ಒಟ್ಟು 945 ಹುದ್ದೆಗಳು ಖಾಲಿ!

Selection process:

ಗ್ರಾಮೀಣ ಡಾಕ್ ಸೇವಕ ಹುದ್ದೆಗೆ ನೇಮಕಾತಿಯನ್ನು ಈ ರೀತಿಯಾಗಿ ನಡೆಸಲಾಗುತ್ತದೆ. ಈ ಒಂದು ಹುದ್ದೆಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಕಾರಣ ಈ ಒಂದು ನೇಮಕಾತಿಯು ನೇರ ನೇಮಕಾತಿ ಆಗಿದ್ದು ಇಲ್ಲಿ ನೀವು ಹತ್ತನೇ ತರಗತಿಯಲ್ಲಿ ಪಡೆದಂತಹ ಅಂಕಗಳಿಗೆ ಅನುಗುಣವಾಗಿ ನಿಮ್ಮ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ತದನಂತರ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಮುಂದಿನ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಯನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಈ ಮೂರು ಹಂತಗಳನ್ನು ಅಭ್ಯರ್ಥಿಯು ಪಾಸ್ ಮಾಡಿದರೆ ಅವರ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ.

Important Dates:

Start Date to Apply Online: 10-02-2025

Last Date to Apply Online: 03-Mar-2025

Date of Edit/Correction Window for Applicants: 06th to 08th March 2025

ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಆನ್ಲೈನ್ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ನಂತರ ನಿಮ್ಮ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ. ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

Join

2 thoughts on “India Post Recruitment 2025: ಒಟ್ಟು 21413 ಹುದ್ದೆಗಳು ಖಾಲಿ!”

Leave a Comment