Gruha Lakshmi Amount Update: ಇನ್ನು ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲವೇ? ಇಲ್ಲಿದೆ ಹೊಸ ಅಪ್ಡೇಟ್.
ಗೃಹಲಕ್ಷ್ಮಿ ಹಣ ಜಮಾ ಆಗದೆ ಇರುವುದು ಫಲಾನುಭವಿಗಳಲ್ಲಿ ನಿರಾಸೆಯನ್ನು ಉಂಟು ಮಾಡಿದೆ. ಇದನ್ನು ಪ್ರಶ್ನಿಸಿದ ಕೆಲವರಿಗೆ ಉತ್ತರ ದೊರೆತಂತಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ. ಸರ್ಕಾರದ ಉದ್ದೇಶ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಮಹಿಳೆಯರಿಗೂ ಸಹ ಈ ಒಂದು ಯೋಜನೆಯ ಸದುಪಯೋಗ ಸಿಗಬೇಕು ಎನ್ನುವುದು. ಇದರ ಕುರಿತಾದ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗ್ರೂಪಿಗೆ ಸೇರಲು ಈ ಕೆಳಗೆ ಕ್ಲಿಕ್ ಮಾಡಿ.
Gruha Lakshmi Amount Update: ಹಣ ಜಮಾ ವಿಳಂಬದ ಕುರಿತು ಸ್ಪಷ್ಟನೆ
ಫಲಾನುಭವಿಗಳು ಈ ಯೋಜನೆಗೆ ಅರ್ಜಿಯನ್ನು ಹಾಕಿದ್ದು ಅವರಲ್ಲಿ ಕೆಲವರಿಗೆ ಈ ಯೋಜನೆಯ ರೂ. 2,000 ಸಹಾಯಧನ ತಲುಪದ ಕುರಿತು ಪ್ರಶ್ನಿಸಿದ ವೇಳೆ ಸಚಿವರ ಉತ್ತರ ಹೀಗಿತ್ತು, “ಹಣ ಜಮಾ ಆಗುತ್ತದೆ ಇದರಲ್ಲಿ ಯಾವುದೇ ಸಂದೇಹವಿಲ್ಲ, ಈ ಯೋಜನೆ ಅಡಿಯಲ್ಲಿ ಕಾರ್ಮಿಕ ಮಹಿಳೆಯರು ಕೂಡ ಸದುಪಯೋಗ ಪಡೆದುಕೊಳ್ಳಬೇಕು ಎಂಬುದು ಸರ್ಕಾರದ ನಿಲುವು, ಹಾಗಿದ್ದರೂ ಕೆಲವರಿಗೆ ಇನ್ನು ಹಣ ಜಮಾ ಆಗದೆ ಇರುವುದಕ್ಕೆ ತಾಂತ್ರಿಕ ದೋಷ ಅಥವಾ ದಾಖಲೆ ತೊಂದರೆ ಇರಬಹುದು” ಎಂದು ಹೇಳಿದರು.
ಕಾರ್ಮಿಕ ಇಲಾಖೆ ಜೊತೆ ಮಾತುಕತೆ

ಈ ಕುರಿತಾಗಿ ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ್ ಲಾಡ್ ಅವರೊಂದಿಗೆ ಚರ್ಚೆ ನಡೆಸಲಾಗುವುದು ಮತ್ತು ತಕ್ಷಣವೇ ಈ ಒಂದು ಸಮಸ್ಯೆಗೆ ಪರಿಹಾರ ನೀಡಲಾಗುವುದು, ಎಂದು ಭರವಸೆ ನೀಡಿದರು. “ಪ್ರತಿಯೊಬ್ಬರು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು, ಒಂದು ವೇಳೆ ಯಾರಾದರೂ ಈ ಯೋಜನೆ ಯಿಂದ ವಂಚಿತರಾಗಿದ್ದರೆ ಅವರ ವಿಚಾರದಲ್ಲಿ ಸರಿಯಾದ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದರು.
₹500 ನೋಟು ರದ್ದುಮಾಡ್ತಾರಾ? ಹೊಸ ಅಪ್ಪಡೇಟು ಓದಿ ಗೊಂದಲ ನಿವಾರಿಸಿಕೊಳ್ಳಿ! ಆರ್‌ಬಿಐ ಸ್ಪಷ್ಟನೆ ಏನು?
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿರುವಂತೆ, ಗೃಹಲಕ್ಷ್ಮಿ ಯೋಜನೆ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆ ಆಗಿದೆ. ಯಾವುದೇ ವರ್ಗದ ಮಹಿಳೆಯರು ಈ ಯೋಜನೆಯ ಹಣದಿಂದ ವಂಚಿತರಾಗಬಾರದು ಎನ್ನುವುದೇ ಸರ್ಕಾರದ ಪ್ರಮುಖ ನಿಲುವು. ಹೀಗಾಗಿ ಹಂತ ಹಂತವಾಗಿ ಎಲ್ಲಾ ತೊಂದರೆಗಳನ್ನು ಪರಿಹರಿಸಿ, ಅಂತಿಮವಾಗಿ ಫಲಾನುಭವಿಗಳಿಗೆ ಹಣವನ್ನು ತಲುಪಿಸಲು ಸರ್ಕಾರ ಬದ್ಧವಾಗಿದೆ.
ಪ್ರತಿಯೊಬ್ಬರಿಗೂ ಹಣವು ತಲುಪೆ, ತಲುಪುತ್ತದೆ ಹಾಗಾಗಿ ಜನರಲ್ಲಿ ಆತಂಕ ಬೇಡ. ಒಂದು ವೇಳೆ ನಿಮಗೆ ಹಣ ಜಮಾ ಆಗುವಲ್ಲಿ ಸಮಸ್ಯೆ ಉಂಟಾದರೆ, ತಕ್ಷಣವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಥವಾ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಿ.











