IRCTC New Rules: ಪ್ರಯಾಣಿಕರ ಅನುಕೂಲತೆಯನ್ನು ಸುದಾರಿಸುವ ಗುರಿಯನ್ನು ಹೊಂದಿರುವ ರೈಲ್ವೆ ಸಚಿವಾಲಯವು ಹೊಸ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಹೌದು, ರೈಲ್ವೆ ಇಲಾಖೆಯು ಇದೀಗ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ, ಇನ್ನು ಮುಂದೆ ಪ್ರಯಾಣಿಕರು ಯಾವುದೇ ರೀತಿಯ ರದ್ಧತಿ ಶುಲ್ಕವನ್ನು ಪಾವತಿಸದೆ ತಮ್ಮ ರೈಲು ಟಿಕೆಟ್ ಗಳನ್ನು ಮರು ನಿಗದಿಪಡಿಸಲು ಅನುವು ಮಾಡಿಕೊಡುತ್ತದೆ.
ಮಾಧ್ಯಮ ಸಂವಾದದಲ್ಲಿ ಕೇಂದ್ರದ ರೈಲ್ವೆ ಸಚಿವರು ಪ್ರಯಾಣಿಕರಿಗೆ ನಾವು ಅನುಕೂಲ ಆಗುವ ರೀತಿಯಲ್ಲಿ ಈ ಹೊಸ ನಿಯಮವನ್ನು ಜನವರಿ 2026 ರಿಂದ ಜಾರಿಗೆ ತರಲು ಸರ್ಕಾರ ಯೋಚಿಸುತ್ತಿದೆ ಎಂದು ಹೇಳಿದರು.
ಹೊಸ ವ್ಯವಸ್ಥೆಯಿಂದ ಗ್ರಾಹಕರ ಅನುಕೂಲ
ಜನವರಿಯಿಂದ ಜಾರಿಗೆ ಬರುವ ಈ ನಿಯಮವು ಪ್ರತಿದಿನ ರೈಲ್ವೆ ಪ್ರಯಾಣವನ್ನು ಅವಲಂಬಿಸಿರುವ ಪ್ರಯಾಣಿಕರಿಗೆ ಬಹಳ ಉಪಯುಕ್ತವಾಗಿ ಕಾರ್ಯನಿರ್ವಹಿಸುವುದು. ಇನ್ನು ಮುಂದೆ ದೃಢೀಕತ ಟಿಕೆಟಗಳನ್ನು ಆನ್ಲೈನ್ ಮೂಲಕವೇ ಪ್ರಯಾಣದ ದಿನಾಂಕವನ್ನು ಬದಲಾಯಿಸಿಕೊಳ್ಳಬಹುದು, ಹಾಗೂ ಯಾವುದೇ ರೀತಿಯ ರದ್ಧತಿ ಮತ್ತು ಮರು ಬುಕಿಂಗ್ ಮಾಡುವ ಅಗತ್ಯ ಇರುವುದಿಲ್ಲ.
ಆದರೆ, ಈ ವ್ಯವಸ್ಥೆಯು ಕೇವಲ ಸೀಟುಗಳು ಲಭ್ಯವಿದ್ದರೆ ಮಾತ್ರ ಅನ್ವಯವಾಗುವುದು. ಉದಾಹರಣೆಗೆ: ನೀವು ದಿನಾಂಕವನ್ನು ಬದಲಾಯಿಸ ಬೇಕೆಂದರೆ ಆ ದಿನದಂದು ಸೀಟುಗಳು ಲಭ್ಯವಿರಬೇಕು ಆವಾಗ ಮಾತ್ರ ಇದು ಅನ್ವಯಿಸುವುದು.
PM Kisan 21ನೇ ಕಂತಿನ ಹಣ ಬಿಡುಗಡೆ..! ಆದರೆ ನಿಮಗೆ ಇನ್ನು ಬಂದಿಲ್ವಾ? ಇಲ್ಲಿದೆ ನೋಡಿ ಅಪ್ಡೇಟ್.
ಪ್ರಸ್ತುತವಾಗಿ ಪ್ರಯಾಣಿಕರು ತಮ್ಮ ಪ್ರಯಾಣದ ದಿನಾಂಕಗಳನ್ನು ಬದಲಾಯಿಸಬೇಕೆಂದರೆ ಮೊದಲಿಗೆ ಬುಕ್ ಮಾಡಿದ ಟಿಕೆಟ್ಗಳನ್ನು ರದ್ದುಗೊಳಿಸಬೇಕು, ನಂತರ ಮತ್ತೆ ಹೊಸದಾಗಿ ಬುಕಿಂಗ್ ಮಾಡಬೇಕಾಗಿತ್ತು. ಅದರ ಮೇಲೆ ಒಂದು ವೇಳೆ ರೈಲು ನಿರ್ಗಮನ ಸಮಯದ 48 ರಿಂದ 12 ಗಂಟೆಗಳ ಮೊದಲು ದೃಢಪಡಿಸಿದ ಟಿಕೆಟ್ಗಳನ್ನು ರದ್ದುಗೊಳಿಸಿದರೆ ಅದರ ಮೇಲೆ 25% ದರ ಕಡಿತವಾಗುತ್ತಿತ್ತು. ನಿರ್ಗಮನ ಸಮಯದ ಹತ್ತಿರದಲ್ಲಿ ಮಾಡಿದರೆ ಕಡಿತವು 50% ಕೆ ಏರುತ್ತಿತ್ತು.
ಪ್ರಯಾಣಿಕರಿಗೆ ಅನುಕೂಲತೆ
ಮುಂದೆ ಜಾರಿಗೆ ಬರುವ ಈ ನಿಯಮಗಳ ಅಡಿಯಲ್ಲಿ ಪ್ರಯಾಣಿಕರು ತಾವು ದೃಢಪಡಿಸಿದ ಟಿಕೆಟ್ ನ್ನು ರದ್ದುಪಡಿಸದೆ ಆನ್ಲೈನ್ ಮೂಲಕವೇ ಪ್ರಯಾಣದ ದಿನಾಂಕವನ್ನು ಮತ್ತೆ ಮರು ನಿಗದಿಪಡಿಸಲು ಸಾಧ್ಯವಾಗುವುದು. ಹೊಸ ದಿನಾಂಕದಂದು ಸೀಟುಗಳು ಲಭ್ಯವಿರಬೇಕು. ಇದರಲ್ಲಿ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗಿಲ್ಲ. ಒಂದು ವೇಳೆ ಟಿಕೆಟ್ ಶುಲ್ಕ ಹೆಚ್ಚಾಗಿದ್ದರೆ ಮಾತ್ರ ಪಾವತಿ ಮಾಡಬೇಕು.
ಯಾರಿಗೆ ಲಾಭ?
ನಿಜವಾಗಿಯೂ ಇದರ ಬಗ್ಗೆ ಹೇಳಬೇಕಾದರೆ ಪ್ರತಿದಿನ ಯಾರು ರೈಲ್ವೆ ಪ್ರಯಾಣವನ್ನು ಅವಲಂಬನೆ ಮಾಡಿಕೊಂಡಿರುತ್ತಾರೆ ಅಂದರೆ ಆಗಾಗ್ಗೆ ಪ್ರಯಾಣಿಸುವವರು, ಕೊನೆಯ ಕ್ಷಣಗಳಲ್ಲಿ ದಿನಾಂಕಗಳನ್ನು ಬದಲಾವಣೆ ಮಾಡುವವರು. ಈ ರೀತಿಯ ಗ್ರಾಹಕರು ಅಥವಾ ಪ್ರಯಾಣಿಕರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ನಮ್ಮ ನಮ್ಮ ಜಾಲತಾಣಕ್ಕೆ ಅಧಿಕೃತ ಚೆಂದದಾರರಾಗಿರಿ.
ಇದೆ ರೀತಿಯ ಉಪಯುಕ್ತ ಮಾಹಿತಿಗಳನ್ನು ಪ್ರತಿದಿನ ಪಡೆಯಲು ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು [ಇಲ್ಲಿ ಕ್ಲಿಕ್ ಮಾಡಿ]











