ರೈತರಿಗೆ ಸಿಹಿ ಸುದ್ದಿ: 18 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ ರಾಜ್ಯ ಸರ್ಕಾರ..!

Photo of author

Mantesh

Publish: August 9, 2025

share Share:

ರಾಜ್ಯದ ರೈತರಿಗೆ ಮತ್ತೊಂದು ಶುಭಸುದ್ದಿ ಸಿಕ್ಕಿದೆ. ಕರ್ನಾಟಕ ಸರ್ಕಾರವು 18 ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (Minimum Support Price – MSP) ನೀಡಲು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ಮಾಹಿತಿ ನೀಡಿದರು.

ಸಚಿವರ ಪ್ರಕಾರ, 7 ಲಕ್ಷ ರೈತರಿಂದ ಒಟ್ಟು 6.11 ಲಕ್ಷ ಮೆಟ್ರಿಕ್ ಟನ್ ಉತ್ಪನ್ನಗಳನ್ನು ಸರ್ಕಾರ ಖರೀದಿಸಲಿದೆ. ಒಟ್ಟು ₹7,135 ಕೋಟಿ ವೆಚ್ಚ ಈ ಯೋಜನೆಗೆ ಮೀಸಲಾಗಿದ್ದು, ರೈತರಿಗೆ ಮಾರುಕಟ್ಟೆ ದರದ ಕುಸಿತದಿಂದ ರಕ್ಷಣೆ ನೀಡುವ ಉದ್ದೇಶ ಹೊಂದಿದೆ.

ಸೆಪ್ಟೆಂಬರ್‌ನಿಂದ ಬೆಂಬಲ ಬೆಲೆ ನೋಂದಣಿ, ಜನವರಿಯಿಂದ ಖರೀದಿ

ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ, ಅವರು ತಿಳಿಸಿದ್ದಾರೆ, ರೈತರು ಸೆಪ್ಟೆಂಬರ್‌ನಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಬಹುದು ಮತ್ತು ಜನವರಿಯಿಂದ ಮಾರ್ಚ್‌ವರೆಗೆ ಸರ್ಕಾರ ಖರೀದಿ ಕಾರ್ಯಾಚರಣೆ ನಡೆಸಲಿದೆ.

  • ರಾಗಿ: ಪ್ರತಿ ಕ್ವಿಂಟಲ್‌ಗೆ ₹4,846
  • ಭತ್ತ: ಪ್ರತಿ ಕ್ವಿಂಟಲ್‌ಗೆ ₹2,369
  • ಬಿಳಿ ಜೋಳ: ಪ್ರತಿ ಕ್ವಿಂಟಲ್‌ಗೆ ₹3,669
  • ಸಿರಿಧಾನ್ಯಗಳು: ಪ್ರತಿ ಕ್ವಿಂಟಲ್‌ಗೆ ₹5,000 (MSP ₹4,886 + ₹114 ಪ್ರೋತ್ಸಾಹ ಧನ)

ಭತ್ತಕ್ಕೆ ಹೆಚ್ಚುವರಿ ₹69, ಜೋಳಕ್ಕೆ ₹50 ಪ್ರೋತ್ಸಾಹ ಧನ ನೀಡಲಾಗುವುದು. ಜೊತೆಗೆ 3 ಲಕ್ಷ ಮೆಟ್ರಿಕ್ ಟನ್ ಬಿಳಿ ಜೋಳ ಮತ್ತು 6 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಲು ಸರ್ಕಾರ ಗುರಿ ಇಟ್ಟಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಉದ್ಯೋಗಗಳು : Click Here

18 ಬೆಳೆಗಳ ಪಟ್ಟಿ

ವರ್ಗಬೆಳೆ (Crop)MSP (₹/quintal)
ಅನ್ನಧಾನ್ಯಗಳು (Cereals)ಅಕ್ಕಿ (Paddy – Common)₹2,369
ಜೋಳ (Jowar – Hybrid)₹3,699
ರಾಗಿ (Ragi)₹4,886
ಮೆಕ್ಕೆಜೋಳ (Maize)₹2,400
ಕಾಳುಗಳು (Pulses)ತೊಗರಿ (Tur / Arhar)₹8,000
ಹೆಸರೆಕಾಳು (Moong)₹8,768
ಉದ್ದಿನಕಾಳು (Urad)₹7,800
ಎಣ್ಣೆ ಬೀಜಗಳು (Oilseeds)ಕಡಲೆಕಾಯಿ (Groundnut)₹7,263
ಸೂರ್ಯಕಾಂತಿ ಬೀಜ (Sunflower Seed)₹7,721
ಸೋಯಾಬೀನ್ (Soybean – Yellow)₹5,328
ವಾಣಿಜ್ಯ ಬೆಳೆಗಳು (Commercial Crops)ಹತ್ತಿ (Cotton – Medium Staple)₹5,726
ರಬಿ ಧಾನ್ಯಗಳು (Rabi Cereals)ಗೋಧಿ (Wheat)₹2,275
ಸಜ್ಜೆ (Barley)₹1,850
ಕಡಲೆ (Gram / Chana)₹5,650
ಮಸೂರಕಾಳು (Masur / Lentil)₹6,425
ಸಾಸಿವೆ (Rapeseed & Mustard)₹5,650
ಕುಸುಂಬೆ (Safflower)₹5,800
ಇತರ (Others)ಜ್ಯೂಟ್ (Jute)₹5,050
ತೆಂಗು (Copra – Milling)₹10,860

ರಾಜ್ಯ ಸರ್ಕಾರದ ಈ ಕ್ರಮವು ಕೃಷಿ ಕ್ಷೇತ್ರದಲ್ಲಿ ಧೈರ್ಯ ತುಂಬುವಂತದ್ದು. ಮಾರುಕಟ್ಟೆ ಬೆಲೆ ಕುಸಿದಾಗಲೂ ರೈತರಿಗೆ ಕನಿಷ್ಠ ಭರವಸೆ ದೊರಕುವಂತಾಗುತ್ತದೆ. ಬೆಂಬಲ ಬೆಲೆ (Minimum Support price) ಘೋಷಣೆ ಜೊತೆಗೆ ನೀಡಲಾಗುವ ಪ್ರೋತ್ಸಾಹ ಧನ ರೈತರ ಕೈಗೆ ನೇರವಾಗಿ ಲಾಭ ತರುತ್ತದೆ.

ಇದೇ ರೀತಿಯ ಉಪಯುಕ್ತ ಮಾಹಿತಿಗಳನ್ನು ಪ್ರತಿದಿನ ಪಡೆಯಲು ಈ ಕೂಡಲೇ ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಿ. ಜಾಯಿನ್ ಆಗಲು [ಇಲ್ಲಿ ಕ್ಲಿಕ್ ಮಾಡಿ].

Join

Leave a Comment