krishi Honda Subsidy: ಚಾಮರಾಜನಗರ ತೋಟಗಾರಿಕೆ ಇಲಾಖೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕಾಗಿ ಎಲ್ಲಾ ವರ್ಗದ ರೈತರಿಗೆ ಶೇಕಡಾ 50% ರಿಂದ 90% ರಷ್ಟು ಸಹಾಯಧನ ಅಥವಾ ಸಬ್ಸಿಡಿ (krishi Honda Subsidy) ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆದ್ದರಿಂದ ಆಸಕ್ತಿ ಇರುವ ರೈತರು ತಮ್ಮ ಹೊಲದಲ್ಲಿಗೆ ಕೃಷಿ ಹೊಂಡ ನಿರ್ಮಿಸಲು ತಕ್ಷಣ ಅರ್ಜಿ ಸಲ್ಲಿಸಬಹುದು.
ಹೌದು ಸ್ನೇಹಿತರೆ! ಈ ಲೇಖನದ ಮೂಲಕ ನೀವು:
- ✔️ ಕೃಷಿ ಹೊಂಡಕ್ಕಾಗಿ ಬೇಕಾಗುವ ಅಗತ್ಯ ದಾಖಲೆಗಳು ಯಾವವು?
- ✔️ ಎಷ್ಟು ಸಹಾಯಧನ ಸಿಗುತ್ತದೆ?
- ✔️ ಅರ್ಜಿ ಸಲ್ಲಿಸುವ ಸರಿಯಾದ ವಿಧಾನವೇನು?
ಅನ್ನುವ ಎಲ್ಲ ಮುಖ್ಯ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.
ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
krishi Honda Subsidy: ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ – ಶೇಕಡ 50% ರಿಂದ 90% ಸಹಾಯಧನ!
ಈಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ರೈತರಿಗೆ 2025–26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) ಯೋಜನೆಯಡಿ ಕೃಷಿ ಹೊಂಡ (Krishi Honda) ನಿರ್ಮಾಣಕ್ಕೆ ಅರ್ಜಿ ಆಹ್ವಾನ ನೀಡಲಾಗಿದೆ.
ಈ ಯೋಜನೆಯ ಮೂಲಕ:
- ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 50% ಸಬ್ಸಿಡಿ,
- ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ರೈತರಿಗೆ ಶೇಕಡಾ 90% ಸಹಾಯಧನ ದೊರೆಯಲಿದೆ.
ಆದ್ದರಿಂದ ಆಸಕ್ತಿ ಇರುವ ರೈತರು ತಾವು ಮಾಲೀಕರಾಗಿರುವ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಈಗಲೇ ಅರ್ಜಿ ಸಲ್ಲಿಸಿ ಮತ್ತು ನೀರಾವರಿ ವ್ಯವಸ್ಥೆಯನ್ನು ಬಲಪಡಿಸಿ!
ಕೃಷಿ ಹೊಂಡ ನಿರ್ಮಾಣಕ್ಕೆ ಗರಿಷ್ಠ ಸಹಾಯಧನ ಎಷ್ಟು ಕೊಡುತ್ತಾರೆ?
ನೀವು ಕೃಷಿ ಹೊಂಡ (krishi Honda) ನಿರ್ಮಿಸಲು ಯೋಜಿಸುತ್ತಿದ್ದರೆ, ಸರ್ಕಾರದಿಂದ ಉತ್ತಮ ಪ್ರಮಾಣದಲ್ಲಿ ಆರ್ಥಿಕ ನೆರವು ಪಡೆಯಬಹುದು.
- ಸಾಮಾನ್ಯ ವರ್ಗದ ರೈತರಿಗೆ ಗರಿಷ್ಠ ₹75,000 ರಷ್ಟು ಸಹಾಯಧನ ದೊರೆಯಲಿದೆ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಗರಿಷ್ಠ ₹2.28 ಲಕ್ಷ ರಷ್ಟು ಸಹಾಯಧನವನ್ನು ಸರ್ಕಾರ ನೀಡಲಿದೆ.
ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು
- ಕೃಷಿ ಹೊಂಡ ನಿರ್ಮಿಸಲು ರೈತರು ಕನಿಷ್ಠ 1 ಹೆಕ್ಟೇರ್ ಜಮೀನು ಹೊಂದಿರಬೇಕು.
- ಅರ್ಜಿ ಸಲ್ಲಿಸುವ ರೈತ ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಅರ್ಜಿ ಹಾಕುವ ರೈತರು ಕರ್ನಾಟಕ ನಿವಾಸಿಗಳಾಗಿರಬೇಕು.
- ಜಮೀನಿಗೆ ಸಂಬಂಧಿಸಿದ ಸರಿಯಾದ ದಾಖಲೆಗಳು (ಪಹಣಿ, ಜಮೀನು ದಾಖಲೆಗಳು) ಇರಬೇಕು.
Farm pond construction rules Karnataka: ಕೃಷಿ ಹೊಂಡದ ಅಳತೆಗಳು ಮತ್ತು ಪಾಲಿಸಬೇಕಾದ ನಿಯಮಗಳು

- ಕೃಷಿ ಹೊಂಡದ ತಳಿ ಅಳತೆ 20×20×3 ಮೀಟರ್ ಆಗಿರಬೇಕು, 1:1 ಇಳಿಜಾರಿನಂತೆ ನಿರ್ಮಾಣವಾಗಬೇಕು.
- ಗರಿಷ್ಠ 12 ಘನ ಮೀಟರ್ ನೀರು ಶೇಖರಣೆ ಸಾಮರ್ಥ್ಯ ಹೊಂದಿರಬೇಕು.
- ನೀರು ಇಂಗದಂತೆ 300 ಮೈಕ್ರಾನ್ ISI ಗುಣಮಟ್ಟದ ಪಾಲಿಥಿನ್ ಲೈನಿಂಗ್ ಕಡ್ಡಾಯ.
- ಒಳಹರಿವು ಮತ್ತು ಔಟ್ಲೆಟ್ ವ್ಯವಸ್ಥೆಯನ್ನು ರೈತರು ಕಡ್ಡಾಯವಾಗಿ ನಿರ್ಮಿಸಬೇಕು.
- ಕನಿಷ್ಠ ಒಂದು ಎಕರೆ ತೋಟಗಾರಿಕೆ ಬೆಳೆ ಇದ್ದರೆ ಮಾತ್ರ ಅರ್ಹತೆ.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಧಾಖಲೆಗಳು
- ಅರ್ಜಿ ನಮೂನೆ (ಅಧಿಕೃತ)
- ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಈ ವರ್ಷದ ಪಹಣಿ ನಕಲು
- ಅರ್ಜಿದಾರನ ಆಧಾರ್ ಕಾರ್ಡ್ ಪ್ರತಿ
- ಬ್ಯಾಂಕ್ ಖಾತೆ ವಿವರಗಳು, ಚೆಕ್ ಪಾಸ್ಬುಕ್ ಪ್ರತಿ
- ಬೆಳೆ ದೃಢೀಕರಣ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಇತರ ಅಗತ್ಯ ದಾಖಲೆಗಳು (ತೋಟಗಾರಿಕೆ ಇಲಾಖೆಯಿಂದ ಕೇಳಿಬಂದರೆ)
How to apply for Krishi Honda Subsidy: ಅರ್ಜಿ ಸಲ್ಲಿಸುವ ವಿಧಾನ
- ಮೇಲ್ಕಂಡ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ.
- ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿ ಅಥವಾ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ.
- ಅರ್ಜಿ ನಮೂನೆ ಪಡೆಯಿರಿ, ಸರಿಯಾಗಿ ಭರ್ತಿ ಮಾಡಿ.
- ಅಧಿಕೃತ ಸಿಬ್ಬಂದಿಗೆ ದಾಖಲೆಗಳ ಪರಿಶೀಲನೆ ನೀಡಿ, ಅರ್ಜಿ ಸಲ್ಲಿಸಿ.
- ಹೆಚ್ಚಿನ ಮಾಹಿತಿ ಅಥವಾ ಅನುಮಾನಗಳಿಗೆ ಸ್ಥಳೀಯ ತೋಟಗಾರಿಕೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಿ.
ರೈತ ಬಂಧುಗಳೇ, ಕೃಷಿ ಹೊಂಡ ಸಹಾಯಧನ (krishi Honda Subsidy) ಯೋಜನೆಯಿಂದ ನೀರಾವರಿ ವ್ಯವಸ್ಥೆಯನ್ನು ಉತ್ತಮಗೊಳಿಸಿಕೊಂಡು ಉತ್ತಮ ಬೆಳೆ ಉತ್ಪಾದನೆ ಮಾಡಿ! ಈ ಅವಕಾಶವನ್ನು ಹಾಳುಮಾಡದೆ ತಪ್ಪದೇ ಅರ್ಜಿ ಹಾಕಿ, ಸರಿಯಾದ ದಾಖಲೆಗಳನ್ನು ಸಿದ್ಧಪಡಿಸಿ.
ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;











