2024-25ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಗಳಿಸಿದ ಕಾರ್ಮಿಕರ ಮಕ್ಕಳು ಹಾಗೂ ಪ್ರಯೋಜನಪಡೆಯುವ ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಮಿಕ ಕಾರ್ಡ್ ಬಹುಮಾನ ಧನ 2025 (Labour card scholarship 2025) ನೀಡಲಾಗುತ್ತಿದೆ. ಕರ್ನಾಟಕ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಪ್ರಮುಖ ಕಲ್ಯಾಣ ಕಾರ್ಯಕ್ರಮಗಳಲ್ಲಿ ಇದು ಪ್ರಮುಖವಾಗಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 2 ತಿಂಗಳ ಒಳಗಾಗಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 8 ತಿಂಗಳ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗಿದೆ.
ಅರ್ಹ ವಿದ್ಯಾರ್ಥಿಗಳು https://karbwwb.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ, Labour Card Education Assistance (ಕಾರ್ಮಿಕ ಕಾರ್ಡ್ ಶಿಕ್ಷಣ ಸಹಾಯಧನ) ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು..
ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆಯವರೆಗೂ ಓದಿ ಹಾಗೂ ನಿಮ್ಮ ಸ್ನೇಹಿತರೊಡನೇ ಹಂಚಿಕೊಳ್ಳಿ.
ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].
ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಜುಲೈ 31, 2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಸೆಪ್ಟೆಂಬರ್ 15, 2025
ನಿಗದಿತ ದಿನಾಂಕಗಳೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
ಈ Karnataka Labour Card Prize Money 2025 ಸ್ಕೀಮ್‌ಗೆ ಅರ್ಜಿ ಹಾಕಲು ಕೆಲವು ನಿಯಮಗಳಿವೆ. 2024-25ನೇ ಶೈಕ್ಷಣಿಕ ವರ್ಷದ ಪರೀಕ್ಷೆಗಳು 2025ರಲ್ಲಿ ನಡೆದ SSLC ಮತ್ತು PUC ಫಲಿತಾಂಶಗಳಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಗೆ ಅರ್ಹರು.
- SSLC ಫಲಿತಾಂಶ 2 ಮೇ 2025 ರೊಳಗಾಗಿ ಪ್ರಕಟವಾಗಬೇಕು. ಈ ದಿನಾಂಕದ ನಂತರ ಪ್ರಕಟವಾಗುವ ಫಲಿತಾಂಶಗಳಿಗೆ ಈ ಯೋಜನೆಯ ಪ್ರಯೋಜನ ದೊರೆಯುವುದಿಲ್ಲ.
- PUC ಫಲಿತಾಂಶ 8 ಏಪ್ರಿಲ್ 2025 ರೊಳಗಾಗಿ ಪ್ರಕಟವಾಗಬೇಕು. ಈ ದಿನಾಂಕದ ನಂತರ ಪ್ರಕಟವಾಗುವ ಫಲಿತಾಂಶಗಳು ಪರಿಗಣಿಸಲ್ಪಡುವುದಿಲ್ಲ.
How to apply for Labour Card Prize Money 2025 – ಅರ್ಜಿ ಹಾಕುವ ವಿಧಾನ

Labour card prize money application ಗಾಗಿ ಅರ್ಜಿ ಸಲ್ಲಿಸುವುದು ತುಂಬಾ ಸುಲಭ.
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:
- ಅರ್ಜಿಯನ್ನು ಭರ್ತಿ ಮಾಡಿ:
- 2024-25ನೇ ಸಾಲಿನ ಪರೀಕ್ಷಾ ಫಲಿತಾಂಶದ ಆಧಾರದ ಮೇಲೆ ಮಾಹಿತಿಯನ್ನು ತುಂಬಿ.
- ಕೇಳಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಸರಿಯಾದ ವಿವರಗಳನ್ನು ನೀಡಿ, ತಪ್ಪು ಮಾಹಿತಿ ನೀಡದಂತೆ ಗಮನಿಸಿ.
- ಅರ್ಜಿ ಸಲ್ಲಿಸಿ:
- ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿದ ನಂತರ, ಅರ್ಜಿಯನ್ನು ಸಲ್ಲಿಸಿ. ಭವಿಷ್ಯದಲ್ಲಿ ಉಪಯೋಗಕ್ಕೆ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿ ಅಥವಾ ಪ್ರಿಂಟ್ ತೆಗೆದುಕೊಳ್ಳಿ.
ಯಾವುದೇ ತಾಂತ್ರಿಕ ಸಮಸ್ಯೆ ಅಥವಾ ಮಾಹಿತಿ ಸ್ಪಷ್ಟತೆಗಾಗಿ 155214 ಎಂಬ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
Important Direct Links:
Important Direct Links:
| Labour Card Prize Money 2025 Online Form Link | Apply Now |
| Official Website | karbwwb.karnataka.gov.in |
| More Updates | Karnataka24.in |













