Minor Pan Card: 18 ವರ್ಷ ಒಳಗಿನ ಮಕ್ಕಳಿಗೂ ಪ್ಯಾನ್ ಕಾರ್ಡ್..! ಇಂದೇ ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ.
Minor Pan Card ಹೌದು ಸ್ನೇಹಿತರೆ, ನಿಮಗೆ ಗೊತ್ತಾ? 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಗೂ ಈಗ ಪ್ಯಾನ್ ಕಾರ್ಡ್ ನೀಡಲಾಗುತ್ತದೆ. ಅನೇಕರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅಂತವರು ಕೇವಲ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ಯಾನ್ ಕಾರ್ಡ್ ನೀಡಲಾಗುತ್ತದೆ ಎಂದು ಭಾವಿಸಿರುತ್ತಾರೆ. ಆದರೆ ಅದು ತಪ್ಪು. ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
Minor Pan Card ಕುರಿತು
ಭಾರತೀಯ ಆದಾಯ ತೆರಿಗೆ ಇಲಾಖೆಯು ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡಿನ ಕುರಿತು ಜನರಲ್ಲಿ ಅರಿವು ಮೂಡಿಸಲು ವಿಶೇಷ ಈ-ಅಭಿಯಾನಗಳನ್ನು ಪ್ರಾರಂಭಿಸಿದೆ. ಇದೆ ಅಭಿಯಾನದ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಬಗ್ಗೆ ಒಂದು ಪ್ರಮುಖ ಸಂಗತಿಯನ್ನು ಬಹಿರಂಗಪಡಿಸಿದೆ. ಅದೇನೆಂದರೆ ಈಗ ಕೇವಲ 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಅಷ್ಟೇ ಅಲ್ಲದೆ ಅಪ್ರಾಪ್ತರು (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಸಹ ಪ್ಯಾನ್ ಕಾರ್ಡ್ ಪಡೆಯಬಹುದು. ಆದರೆ ಅನೇಕ ಜನರಿಗೆ ಈ ವಿಷಯದ ಕುರಿತು ಮಾಹಿತಿ ಇಲ್ಲ.
ನಮಗೆಲ್ಲ ತಿಳಿದಿರುವ ಹಾಗೆ 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಾತ್ರ ಇದರ ಅಗತ್ಯವಿದೆ ಹಾಗೂ ಹಣಕಾಸಿನ ವಹಿವಾಟನ್ನು ಮಾಡ ಬಯಸುವ ಜನರಿಗೆ ಮಾತ್ರ ಇದರ ಅವಶ್ಯಕತೆ ಇದೆ ಎಂದು ನಾವೆಲ್ಲ ತಿಳಿದಿದ್ದೇವೆ. ಆದರೆ ಅಪ್ರಾಪ್ತ ವಯಸ್ಸಿನವರು ಕೂಡ ಪ್ಯಾನ್ ಕಾರ್ಡ್ ನ ಅವಶ್ಯಕತೆಯನ್ನು ಹೊಂದಿರುತ್ತಾರೆ. ಉದಾಹರಣೆಯಾಗಿ ಬ್ಯಾಂಕ್ ಖಾತೆಗಳನ್ನು ತೆರೆಯಲು, ಭವಿಷ್ಯದ ಹಣಕಾಸಿನ ಹೂಡಿಕೆಗಾಗಿ, ಮತ್ತು ಅನೇಕ ಭವಿಷ್ಯದ ಹಣಕಾಸಿನ ಸುರಕ್ಷತೆಗಾಗಿ, ಪ್ಯಾನ್ ಕಾರ್ಡ್ ನ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ಅವರು ಇದನ್ನು ಪಡೆಯಲು ನೇರವಾಗಿ ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ. ಅವರ ಬದಲಾಗಿ ಅವರ ಪೋಷಕರು ಈ ಒಂದು ಪ್ಯಾನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬಹುದು.
ಅಪ್ರಾಪ್ತರಿಗಾಗಿ ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ನಮಗೆಲ್ಲ ತಿಳಿದಿರುವ ಹಾಗೆ ಅಪ್ರಾಪ್ತರು ಸ್ವತಃ ಪ್ಯಾನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ. ಆದರೆ ಅವರ ಬದಲಾಗಿ ಅವರ ಪೋಷಕರು ಅರ್ಜಿಯನ್ನು ಸಲ್ಲಿಸಬಹುದು.
ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಬಯಸಿದರೆ, ಮೊದಲು NSDL ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಸಂಬಂಧಿತ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಹಾಗೂ ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಹಾಗೆ ಅಪ್ಲೋಡ್ ಮಾಡಿದ ಫಾರ್ಮಗಳನ್ನು ಆಫ್ಲೈನ್ ಮೂಲಕ ಪ್ಯಾನ್ ಕಾರ್ಡ್ ಕೇಂದ್ರಕ್ಕೆ ಕಳುಹಿಸಬೇಕು. ಈ ರೀತಿಯಾಗಿ ಸಲ್ಲಿಸಲಾದ ಅರ್ಜಿಯ ಮೂಲಕ ಪಡೆದ Minor Pan Card ನಲ್ಲಿ ಅವರ ಭಾವಚಿತ್ರ (ಫೋಟೋ) ಹಾಗೂ ಸಹಿ (ಹಸ್ತಾಕ್ಷರ) ಇರುವುದಿಲ್ಲ. ಇದನ್ನು ನೀವು 18 ವರ್ಷ ತುಂಬಿದ ನಂತರ ಫೋಟೋ ಮತ್ತು ಸಹಿಯೊಂದಿಗೆ ಹೊಸ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಆದರೆ ಪ್ಯಾನ್ ಕಾರ್ಡ್ ಸಂಖ್ಯೆ ಹಾಗೆಯೇ ಉಳಿದಿರುತ್ತದೆ.
ಫಾರ್ಮ್ 49A ನೊಂದಿಗೆ ಅರ್ಜಿ ಸಲ್ಲಿಸುವುದು ಹೇಗೆ

- NSDL ನ ಅಧಿಕೃತ ವೆಬ್‌ಸೈಟ್ https://www.onlineservices.nsdl.com/paam/endUserRegisterContact.html ಗೆ ಭೇಟಿ ನೀಡಿ.
- ನ್ಯೂ ಅಪ್ಲಿಕೇಷನ್ ಫಾರ್ಮ್ ಮೇಲೆ ಕ್ಲಿಕ್ ಮಾಡಿ. ಪ್ಯಾನ್ ಕಾರ್ಟ್ ಐಪ್ ಅಡಿಯಲ್ಲಿ, ಹೊಸ ಪ್ಯಾನ್- ಇಂಡಿಯನ್ ಸಿಟಿಜನ್ (ಫಾರ್ಮ್ 49A), ಕೆಟಗರಿ- ಇಂಡಿವಿಜುವಲ್ ಆಯ್ಕೆಮಾಡಿ.
- ಪ್ಯಾನ್ ಪಡೆಯಲು ಬಯಸುವ ಮಗುವಿನ ಪೋಷಕರ ವಿವರಗಳು ಮತ್ತು ಪೋಷಕರ ಸಹಿಯನ್ನು ಅಪ್‌ಲೋಡ್ ಮಾಡಬೇಕು. ಇದಾದ ನಂತರ, ಸಬ್ಮಿಟ್ ಬಟನ್ ಕ್ಲಿಕ್ ಮಾಡುವುದರಿಂದ ನಿಮ್ಮನ್ನು ಹೊಸ ವೆಬ್ ಪುಟಕ್ಕೆ ಕರೆದೊಯ್ಯುತ್ತದೆ.
- ಅದರಲ್ಲಿ ಪ್ರತಿನಿಧಿ ಮೌಲ್ಯಮಾಪಕರ (ಪೋಷಕರು/ಪಾಲಕರು) ವಿವರಗಳನ್ನು ನಮೂದಿಸಬೇಕು. ಅಪ್ರಾಪ್ತರ ಫೋಟೋ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಬೇಕು.
- ಅಗತ್ಯ ಶುಲ್ಕವನ್ನು ಪಾವತಿಸಿ. ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಪಾವತಿ ಯಶಸ್ವಿಯಾದ ನಂತರ ಸ್ವೀಕೃತಿ ಸಂಖ್ಯೆಯನ್ನು ಸ್ವೀಕರಿಸಲಾಗುತ್ತದೆ.
- ನೀವು ಭೌತಿಕ ದಾಖಲೆ ಪರಿಶೀಲನೆಯನ್ನು ಆರಿಸಿಕೊಂಡರೆ, ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ದಾಖಲೆಗಳನ್ನು NSDL ಪ್ರೋಟೀನ್ ಅಥವಾ UTIITSL ವಿಳಾಸಕ್ಕೆ ಕಳುಹಿಸಬೇಕು.
- 18 ವರ್ಷದೊಳಗಿನ ಮಕ್ಕಳು ಹಣಕಾಸಿನ ವಹಿವಾಟು ನಡೆಸಲು ಪ್ಯಾನ್ ಕಾರ್ಡ್ (Minor Pan Card) ಉಪಯುಕ್ತವಾಗಿದೆ.













