Mobile Canteen Subsidy 2025: ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಉದ್ಯಮ ಆರಂಭಿಸಲು ನೆರವಾಗುವ ಉದ್ಯಮಶೀಲತಾ ಅಭಿವೃದ್ದಿ ಯೋಜನೆ (Entrepreneurship Development Scheme) ಯನ್ನು ಜಾರಿಗೆ ತಂದಿದೆ. ಇದರಡಿ ಪರಿಶಿಷ್ಟ ಜಾತಿಗೆ ಸೇರಿದ ನಿರುದ್ಯೋಗಿ ಯುವಕರು ಹಾಗೂ ಯುವತಿಯರು ಮೊಬೈಲ್ ಕ್ಯಾಂಟೀನ್ (ಫಾಸ್ಟ್ ಫುಡ್ ಟ್ರಕ್/ಮೊಬೈಲ್ ಕಿಚನ್) ಆರಂಭಿಸಲು ಸರ್ಕಾರದಿಂದ ಗರಿಷ್ಠ ₹4 ಲಕ್ಷ ಸಹಾಯಧನ ಪಡೆಯಬಹುದು.
ಈ ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಲು ಬೇಕಾದ ಅರ್ಹತೆ, ಅರ್ಜಿ ವಿಧಾನ ಮತ್ತು ಅಗತ್ಯ ದಾಖಲೆಗಳ ಮಾಹಿತಿ ಇಲ್ಲಿದೆ.
ಉದ್ಯಮಶೀಲತಾ ಅಭಿವೃದ್ದಿ ಯೋಜನೆ ಎಂದರೆ ಏನು?
ಉದ್ಯಮಶೀಲತೆ ಬೆಳೆಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದರ ಪ್ರಮುಖ ಗುರಿ:
- ಹೊಸ ಉದ್ಯಮ ಪ್ರಾರಂಭಿಸಲು ಆರ್ಥಿಕ ನೆರವು
- ತರಬೇತಿ ಮತ್ತು ಮಾರ್ಗದರ್ಶನದ ಮೂಲಕ ಉದ್ಯಮಶೀಲತೆ ಕೌಶಲ್ಯ ವೃದ್ಧಿ
- ಮಾರುಕಟ್ಟೆ ಬೆಂಬಲದೊಂದಿಗೆ ಉತ್ಪನ್ನಗಳ ಮಾರಾಟಕ್ಕೆ ನೆರವು
ಮೊಬೈಲ್ ಕ್ಯಾಂಟೀನ್ ಆರಂಭಿಸಲು ಸಹಾಯಧನ. Mobile Canteen Subsidy 2025.
ಈ ಯೋಜನೆಯಡಿ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕರು ಮೊಬೈಲ್ ಫುಡ್ ಟ್ರಕ್ ಅಥವಾ ಚಲಿಸುವ ಅಡುಗೆ ಘಟಕ (Mobile Kitchen) ಪ್ರಾರಂಭಿಸಲು ಅವಕಾಶ ಪಡೆಯುತ್ತಾರೆ. ಸರ್ಕಾರದಿಂದ ಘಟಕ ವೆಚ್ಚದ 75% ಅಥವಾ ಗರಿಷ್ಠ ₹4,00,000 ಸಹಾಯಧನ ನೀಡಲಾಗುತ್ತದೆ.
ಅರ್ಹತಾ ಮಾನದಂಡಗಳು
ಅರ್ಜಿದಾರರು ಕೆಳಗಿನ ಶರತ್ತುಗಳನ್ನು ಪೂರೈಸಿರಬೇಕು:
- ಪರಿಶಿಷ್ಟ ಜಾತಿಗೆ ಸೇರಿದವರು ಆಗಿರಬೇಕು
- ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿ
- ವಯಸ್ಸು 21 ರಿಂದ 50 ವರ್ಷ ನಡುವಿರಬೇಕು
- ಕುಟುಂಬದ ವಾರ್ಷಿಕ ಆದಾಯ:
- ಗ್ರಾಮೀಣ ಪ್ರದೇಶ: ಗರಿಷ್ಠ ₹1,50,000
- ನಗರ ಪ್ರದೇಶ: ಗರಿಷ್ಠ ₹2,00,000
- ಈ ಹಿಂದೆ ಸರ್ಕಾರ/ನಿಗಮದಿಂದ ₹1,00,000 ಮೇಲ್ಪಟ್ಟು ಸಹಾಯಧನ ಪಡೆದಿರಬಾರದು
- ಘಟಕ ಸ್ಥಾಪಿಸಲು ಅಗತ್ಯ ಸ್ಥಳಾವಕಾಶ ಹೊಂದಿರಬೇಕು

ಸಹಾಯಧನದ ಮೊತ್ತ
- ಗರಿಷ್ಠ ₹4,00,000 ವರೆಗಿನ ಸಹಾಯಧನ
- ಘಟಕ ವೆಚ್ಚದ 75% ವರೆಗೆ ಸರ್ಕಾರ ಭರಿಸುವುದು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
- 10 ಸೆಪ್ಟೆಂಬರ್ 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ
- ಅರ್ಜಿಗಳನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ ಸಲ್ಲಿಸಬೇಕು
ಅರ್ಜಿ ಸಲ್ಲಿಸುವ ವಿಧಾನ
- ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ Seva Sindhu Portal ಪ್ರವೇಶಿಸಿರಿ
- “ಉದ್ಯಮಶೀಲತಾ ಅಭಿವೃದ್ದಿ ಯೋಜನೆ – ಮೊಬೈಲ್ ಕ್ಯಾಂಟೀನ್ ಅರ್ಜಿ” ವಿಭಾಗವನ್ನು ಆಯ್ಕೆಮಾಡಿ
- ಅಗತ್ಯ ವಿವರಗಳನ್ನು ಭರ್ತಿ ಮಾಡಿ
- ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿಯನ್ನು ಸಲ್ಲಿಸಿ, ಆಧಾರ ದಾಖಲೆಗಳೊಂದಿಗೆ ಮುದ್ರಿತ ಪ್ರತಿಯನ್ನು ಸಂರಕ್ಷಿಸಿಕೊಳ್ಳಿ
Apply Now:
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ವಾಹನ ಚಾಲನಾ ಪರವಾನಗಿ
- ಭಾವಚಿತ್ರ (ಪಾಸ್ಪೋರ್ಟ್ ಸೈಜ್ ಫೋಟೋ)
- ಬ್ಯಾಂಕ್ ಪಾಸ್ಬುಕ್ ಪ್ರತಿಗೆ
- ಜಾತಿ ಹಾಗೂ ಆದಾಯ ಪ್ರಮಾಣಪತ್ರ
- ರೇಶನ್ ಕಾರ್ಡ್
- ಮೊಬೈಲ್ ಸಂಖ್ಯೆ
ಮುಖ್ಯ ಸೂಚನೆಗಳು
- ಅರ್ಜಿದಾರರು ಆಯ್ಕೆ ಸಮಿತಿ ಯಲ್ಲಿ ಆಯ್ಕೆಯಾಗಿರಬೇಕು
- ಮಂಜೂರಾತಿ ಪಡೆದ ನಂತರ ಅನರ್ಹತೆ ಸಾಬೀತಾದರೆ ಸಹಾಯಧನ ರದ್ದುಪಡಿಸಲಾಗುತ್ತದೆ
“ಉದ್ಯಮಶೀಲತಾ ಅಭಿವೃದ್ದಿ ಯೋಜನೆ 2025” ಅಡಿಯಲ್ಲಿ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕರು ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲು ₹4 ಲಕ್ಷ ಸಹಾಯಧನ (Mobile Canteen Subsidy 2025) ಪಡೆಯುವ ಅವಕಾಶ ಇದೆ. ಸ್ವಯಂ ಉದ್ಯೋಗದ ದಾರಿ ಹಿಡಿಯಲು ಮತ್ತು ಸ್ವಾವಲಂಬನೆ ಸಾಧಿಸಲು ಇದು ಒಳ್ಳೆಯ ಅವಕಾಶ. ಆಸಕ್ತರು ತಕ್ಷಣವೇ 10 ಸೆಪ್ಟೆಂಬರ್ 2025 ರೊಳಗೆ ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕು.
ಇದೆ ರೀತಿಯ ಉಪಯುಕ್ತ ಮಾಹಿತಿಗಳನ್ನು ಪ್ರತಿದಿನ ಪಡೆಯಲು ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು [ಇಲ್ಲಿ ಕ್ಲಿಕ್ ಮಾಡಿ]












