ನಮಸ್ಕಾರ ಕರ್ನಾಟಕದ ಎಲ್ಲ ಜನತೆಗೆ ನೀವು ತಿಳಿದಿರುವ ಹಾಗೆ 2024ರ ಬೇಸಿಗೆ ಒಲಂಪಿಕ್ಸ್ ಪ್ಯಾರಿಸ್ ನಲ್ಲಿ ನಡೆಯುತ್ತಿದ್ದು, ಈ ಬಾರಿಯ ಒಲಿಂಪಿಕ್ಸ್ ಬಗ್ಗೆ ಭಾರತ ಜನರಲ್ಲಿ ತುಂಬಾ ನಿರೀಕ್ಷೆ ಇದೆ ಕಾರಣ 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತವು ಕೇವಲ 2 ಮೆಡಲ್ಗಳನ್ನು ಪಡೆಯುವುದರ ಮೂಲಕ ತೃಪ್ತಿಯನ್ನು ಹೊಂದಿತು. ನಂತರ 2020ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತವು 7 ಪದಕಗಳನ್ನು(ಒಂದು ಚಿನ್ನದ ಜೊತೆಗೆ) ಗೆಲ್ಲುವ ಮೂಲಕ ಜಗತ್ತಿನಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿತು.

ಈ ಬಾರಿ ಇದರ ನಿರೀಕ್ಷೆ ಹೆಚ್ಚಾಗಿದ್ದು ಭಾರತೀಯರು ಈ ಬಾರಿಯ Paris Olympics 2024 ನಲ್ಲಿ ಹೇಗೆ ಪ್ರದರ್ಶನವನ್ನು ನೀಡುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ. ನಿಮಗೆಲ್ಲಾ ತಿಳಿದಿರುವಂತೆ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತದ 117 ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದು ಇವರ ಜೊತೆಗೆ ಮ್ಯಾನೇಜ್ಮೆಂಟ್ ಸಹ ಪ್ಯಾರಿಸ್ ತಲುಪಿದ್ದಾರೆ. Paris Olympics 2024 ಉದ್ಘಾಟನಾ ಸಮಾರಂಭ ಆಗಿದ್ದು ಇನ್ನೂ ಕ್ರೀಡೆಗಳು ಶುರುವಾಗಿವೆ.
ಭಾರತಕ್ಕೆ ಬಂದ ಮೊದಲ ಪದಕ:ಭಾರತಕ್ಕೆ ಬಂದ ಮೊದಲ ಪದಕ!:Manu Bhaker Wins Paris Olympics 2024 First Medal
ಭಾರತದ ಶೂಟರ್ ಆಗಿರುವಂತ ಮನು ಭಾಕರ್ ಅವರು ಪ್ಯಾರಿಸ್ 2024ರ ಬೇಸಿಗೆ ಒಲಂಪಿಕ್ಸ್ ನಲ್ಲಿ 10 ಮೀಟರ್ ಗಾಳಿ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆಯುವುದರ ಮೂಲಕ ಭಾರತಕ್ಕೆ ಮೊದಲ ಪದಕವನ್ನು ತಂದು ಕೊಟ್ಟಿದ್ದಾರೆ. ಇವರು 22 ವರ್ಷದವರಾಗಿದ್ದು ಮನು ಬಾಕರ್ ಅವರು ಒಲಂಪಿಕ್ ನಲ್ಲಿ ಶೂಟಿಂಗ್ ಮೂಲಕ ಪದಕ ತಂದುಕೊಟ್ಟ ಮೊದಲ ಮಹಿಳೆ ಆಗಿದ್ದಾರೆ.

ಇನ್ನೊಂದು ಸಿಹಿ ಸುದ್ದಿ ಏನೆಂದರೆ ರಮಿತಾ ಜಿಂದಾಲ್ ಮತ್ತು ಅರ್ಜುನ್ ಬಬುತಾ ಇವರು ಸಹ 10m ಗಾಳಿ ಪಿಸ್ತೂಲ್ ಮಹಿಳಾ ಹಾಗೂ ಪುರುಷ ವಿಭಾಗದಲ್ಲಿ ಇಬ್ಬರೂ ಸಹ ಅಂತಿಮ ಆವೃತ್ತಿಗೆ (Final) ತಲುಪಿರುವುದು ಭಾರತೀಯರಿಗೆ ಹರ್ಷವನ್ನುಂಟು ಮಾಡಿದೆ.
Also Read :
Olympic Games Paris 2024: ಪ್ಯಾರಿಸ್ ಒಲಿಂಪಿಕ್ಸ್ 2024: PV Sindhu
P. V. Sindhu ಅವರ ಬಗ್ಗೆ:

ಇನ್ನು ನಮ್ಮ ಭಾರತದ “ರಾಷ್ಟ್ರೀಯ ಸಂಪತ್ತು” ಎಂದೇ ಪ್ರಖ್ಯಾತರಾಗಿರುವ P. V. Sindhu ಅವರು ಸಹ ತಮ್ಮ ಮೊದಲನೇ ಆಟವನ್ನು ಗೆದ್ದು ಬೀಗಿದ್ದಾರೆ ಇವರು ಮಾಲ್ಡೀವ್ಸ್ ನ ಆಟಗಾರ್ತಿ “ಫಾತಿಮತ್ ಅಬ್ದುಲ್ ರಜಾಕ್” ಅವರನ್ನು ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಕೇವಲ 29 ನಿಮಿಷಗಳಲ್ಲಿ “ಫಾತಿಮತ್ ಅಬ್ದುಲ್ ರಜಾಕ್” ಅವರನ್ನು 21-9 21-6ರ ಮೂಲಕ ಸೋಲಿಸಿ ತಮ್ಮ ಒಲಿಂಪಿಕ್ಸ್ ನ 3ನೇ ಪದಕದ ಗುರಿಯ ಕಡೆಗೆ ಹೆಜ್ಜೆ ಹಾಕಿದ್ದಾರೆ. ಇವರು 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದವರು. ಅಂದು 2016 ರಲ್ಲಿ ರಿಯೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಸ್ಪೇನ್ ನ ಆಟಗಾರ್ತಿ “Carolina Marín” ಅವರ ಜೊತೆಗೆ ಆಟವಾಡುವದರ ಮೂಲಕ ತಮ್ಮ 2ನೇ ಸ್ಥಾನವನ್ನು ಪಡೆಯುದರ ಮೂಲಕ ತೃಪ್ತಿಯನ್ನು ಹೊಂದಿದರು. ನಂತರ ಇವರು 2020 ರಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್ ನಲ್ಲಿಯೂ ಸಹ ಭಾಗವಹಿಸಿ ಕಂಚಿನ (bronze) ಪದಕವನ್ನು ಗೆದ್ದುಕೊಂಡರು. ಇದೀಗ ನಡೆಯುತ್ತಿರುವ 2024ರ ಪ್ಯಾರಿಸ್ ಬೇಸಿಗೆ ಒಲಿಂಪಿಕ್ಸ್ ಇವರ 3ನೇಒಲಿಂಪಿಕ್ಸ್ ಆಗಿದ್ದು ಇವರ ಈ ಭಾರಿಯ ಗುರಿ ಚಿನ್ನ, ಭಾರತೀಯರೆಲ್ಲರೂ ಇವರ ಚಿನ್ನದ ಬೇಟೆಯನ್ನು ನೋಡಲು ಕಾದು ಕುಳಿತಿದ್ದಾರೆ.











