PM Kisan Yojana 20th Instalment: ಪಿಎಂ ಕಿಸಾನ್ 20ನೇ ಕಂತು ಶೀಘ್ರ ಬಿಡುಗಡೆ: ಹಣ ಯಾವ ದಿನ ಖಾತೆಗೆ ಬರುತ್ತದೆ? ಸಂಪೂರ್ಣ ಮಾಹಿತಿಯು ಇಲ್ಲಿದೆ!

Photo of author

Mantesh

Publish: June 13, 2025
PM Kisan Yojana 20th Instalment

share Share:

PM Kisan Yojana 20th Instalment: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯದ ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ ಫಲಾನುಭವಿಗಳಿಗೆ ಇದೀಗ ಒಂದು ಸಿಹಿ ಸುದ್ದಿ. ಪ್ರಸ್ತುತ 19ನೇ ಕಂತು ಬಿಡುಗಡೆಯಾದ ನಂತರ ಈಗ 20ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರವು ದಿನಾಂಕ ನಿಗದಿಪಡಿಸಿದೆ. ಇದೆ ತಿಂಗಳ ಜೂನ್ 20ರಂದು ಪ್ರತಿಯೊಬ್ಬ ಫಲಾನುಭವಿ ಖಾತೆಗೆ ₹2000 ಜಮಾ ಆಗಲಿದೆ ಎಂದು ವರದಿಯಾಗಿದೆ. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;


PM Kisan Samman Nidhi Yojana

ಕೇಂದ್ರ ಸರ್ಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸುವ ಹಾಗೂ ರೈತರಿಗೆ ಉಳುಮೆ ಮಾಡಲು, ಕೃಷಿ ಉಪಕರಣಗಳ ಕೊಳ್ಳುವಿಕೆಗೆ, ರಸಗೊಬ್ಬರಗಳ ಖರೀದಿಗೆ ಹೀಗೆ ಇನ್ನಿತರ ರೈತಾಪಿ ವರ್ಗದ ಜನರ ಕೃಷಿ ಚಟುವಟಿಕೆಗಳ ಆಯವ್ಯಯಕ್ಕೆ ಸಹಾಯ ರೂಪದಲ್ಲಿ ನೀಡುವ ಹಣಕಾಸಿನ ಯೋಜನೆ (PM Kisan Yojana 20th Instalment) ಇದಾಗಿದ್ದು, ವರ್ಷದಲ್ಲಿ 3 ಕಂತುಗಳ ಮೂಲಕ ರೈತರ ಖಾತೆಗೆ ವರ್ಷಕ್ಕೆ ₹6000 ದಂತೆ ಕಂತುಗಳ ರೂಪದಲ್ಲಿ ನೇರವಾಗಿ ವರ್ಗಾವಣೆ ಮಾಡಲಾಗುವುದು. ಸದರಿ ಎಲ್ಲಾ ಕಂತುಗಳು ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತಾ ಬಂದಿದ್ದು, ಇದೀಗ ಈ ಯೋಜನೆಯ 20ನೆಯ (20th Instalment) ಕಂತಿನ ಹಣ ಜಮಾ ಆಗುವುದು ಬಾಕಿ ಇದೆ. ಇದರ ಕುರಿತಾಗಿ ಹಣ ಜಮೆ ಆಗುವ ದಿನಾಂಕ ನಿಗದಿಯಾಗಿದ್ದು ಇದರ ಕುರಿತು ವರದಿ ಇಲ್ಲಿದೆ.


ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತಿನ ಹಣವನ್ನು ಪಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲು ದಿನಾಂಕ ನಿಗದಿ ಪಡಿಸಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳ ವರದಿ ಪ್ರಕಾರ 2025ರ ಜೂನ್ 20ರಂದು ಫಲಾನುಭವಿ ರೈತರ ಖಾತೆಗೆ ₹2000 ಜಮಾ ಆಗಲಿದೆ ಎಂದು ತಿಳಿದುಬಂದಿದೆ. ಈ ಕುರಿತಾಗಿ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆಯು ಹೊರಬಿದ್ದಲ್ಲ. ಆದರೆ ಸಾಮಾನ್ಯವಾಗಿ ಪ್ರತಿವರ್ಷದಂತೆ ಮುಂಗಾರು ಮೊದಲ ಮೇ ಜೂನ್ ತಿಂಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಈ ಒಂದು ಮಾಹಿತಿಯ ಪ್ರಕಾರ ಈ ವರ್ಷದ 20ನೇ ಕಂತಿನ (PM Kisan Yojana 20th Instalment) ಹಣ ಜೂನ್ ತಿಂಗಳಲ್ಲೇ ರೈತರ ಖಾತೆಗಳಿಗೆ ಜಮಾ ಆಗಬಹುದು ಎಂದು ಸ್ಪಷ್ಟವಾಗಿದೆ.

Krishi Bhagya Scheme 2025 ಕೃಷಿ ಭಾಗ್ಯ ಯೋಜನೆ 2025 – ಮಿನಿ ಟ್ರ್ಯಾಕ್ಟರ್ ಖರೀದಿಗೆ ಶೇಕಡಾ 90ರಷ್ಟು ಸಬ್ಸಿಡಿ..! ಇಂದೇ ಅರ್ಜಿ ಸಲ್ಲಿಸಿ

ಈ ಕೆ ವೈ ಸಿ (E -kyc) ಮಾಡಿಸದಿದ್ದರೆ ಹಣ ಜಮಾ ಇಲ್ಲ

ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಫಲಾನುಭವಿ ರೈತರು ಈ ಕೆ ವೈ ಸಿ ಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು. ಮತ್ತು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಬೇಕು. ಒಂದು ವೇಳೆ ನೀವು ಈ ಕೆವೈಸಿ ಮಾಡಿಸದೆ ಇದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ. ಕೇಂದ್ರ ಸರ್ಕಾರವು 19ನೇ ಕಂತಿನ ಹಣವನ್ನು 2025 ಫೆಬ್ರವರಿ 24ರಂದು ಬಿಡುಗಡೆ ಮಾಡಿದ್ದು, ಒಟ್ಟು 11 ಕೋಟಿ ರೈತರ ಖಾತೆಗಳಿಗೆ ನೇರವಾಗಿ ತಲಾ ₹2000 ರಂತೆ ಒಟ್ಟು ₹22 ಸಾವಿರ ಕೋಟಿಗೂ ಹೆಚ್ಚು ಹಣ ವರ್ಗಾವಣೆ ಮಾಡಲಾಗಿತ್ತು. ಈ ಬಾರಿಯೂ ಅಷ್ಟೇ ಪ್ರಮಾಣದ ರೈತರ ಖಾತೆಗೆ ಹಣ ವರ್ಗಾವಣೆಯಾಗುವ ಸಾಧ್ಯತೆ ಇರುವುದು.

E-kyc ಮಾಡಿಸುವುದು ಹೇಗೆ? PM Kisan Yojana 20th Instalment E-kyc

  • ಮೊದಲು ಪಿಎಂ ಕಿಸಾನ್ ಅಧಿಕೃತ ವೆಬ್ ಟ್ ಗೆ ಭೇಟಿ ನೀಡಿ.
  • ಫಾರ್ಮರ್ ಕಾರ್ನರ್ ನಲ್ಲಿ ‘ಅಪ್ಡೇಟ್ ಮೊಬೈಲ್ ನಂಬರ್’ ಎಂಬ ಆಯ್ಕೆ ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿ.
  • ಆಧಾರ್ ವಿವರಗಳನ್ನು ನಮೂದಿಸಿ. ಓಟಿಪಿ ಗಾಗಿ ಕ್ಲಿಕ್ ಮಾಡಿ.
  • ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ ಪರಿಶೀಲಿಸಿ.
PM Kisan Yojana 20th Instalment
PM Kisan Yojana 20th Instalment

ಜಮಾ ಸ್ಟೇಟಸ್ ಚೆಕ್ ಮಾಡುವ ಪ್ರಕ್ರಿಯೆ

  • ಪಿಎಂ ಕಿಸಾನ್ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ‘ಫಾರ್ಮರ್ಸ್ ಕಾರ್ನರ್’ನಲ್ಲಿ ‘ ಬೆನಿಫಿಶಿಯರಿ ಸ್ಟೇಟಸ್’ ಆಯ್ಕೆ ಮಾಡಿ.
  • ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಿ.
  • ಪಾವತಿ ಇತಿಹಾಸ (payment history) ಅಥವಾ ಅರ್ಹತೆಯನ್ನು (eligibility) ಚೆಕ್ ಮಾಡಿಕೊಳ್ಳಿ.

ಇಲ್ಲಿ ನಿಮಗೆ ನಿಮ್ಮ ಎಲ್ಲಾ ಮಾಹಿತಿಯು ದೊರೆಯುವುದು.

Follow Us:

Join

Leave a Comment