Railone App: ಭಾರತೀಯ ರೈಲ್ವೆ ಇದೀಗ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ‘Railone app’ ಇದರ ಉದ್ದೇಶ ಪ್ರಯಾಣಿಕರಿಗೆ ಒಂದೇ ಜಾಗದಲ್ಲಿ ಎಲ್ಲಾ ಸೇವೆಗಳು ದೊರೆಯುವಂತೆ ರೂಪಿಸಲಾಗಿದೆ.
ಪ್ರಸ್ತುತವಾಗಿ ಗ್ರಾಹಕರು ಸೇವೆಗಳನ್ನು ಪಡೆಯಲು ವಿವಿಧ ರೀತಿಯ ವೆಬ್ ಪೋರ್ಟಲ್ ಅಥವಾ ಆ್ಯಪ್ ಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುತ್ತಿತ್ತು. ಪ್ರಸ್ತುತವಾಗಿ ಬಿಡುಗಡೆ ಮಾಡಿದ ‘Railone app’ ಮೂಲಕ ಎಲ್ಲಾ ಸೇವೆಗಳನ್ನು ಒಂದೇ ಆ್ಯಪ್ ಮೂಲಕ ಪಡೆಯಬಹುದು. ಇದರ ಇನ್ನಷ್ಟು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
RailOne App ಅಂದರೆ ಏನು?
Railone, ನಮಗೆಲ್ಲ ಗೊತ್ತಿರುವ ಹಾಗೆ ನಾವು ಯಾವುದೇ ರೀತಿಯ ರೈಲು ಪ್ರಯಾಣವನ್ನು ಮಾಡಬೇಕಾದಲ್ಲಿ ಮೊದಲು ಆನ್ಲೈನ್ ಮೂಲಕ ನಮ್ಮ ಸೀಟುಗಳನ್ನು ಬುಕ್ ಮಾಡಬೇಕಾಗುತ್ತದೆ. ಹಾಗೆ ಬುಕ್ ಮಾಡಲು ನಾವು ರೈಲ್ವೆ ಇಲಾಖೆಯ ಅಧಿಕೃತ ಮೊಬೈಲ್ ಆ್ಯಪ್ ಆದಂತಹ “IRCTC” ಅನ್ನು ಬಳಸಬೇಕಾಗಿತ್ತು, ಹಾಗೂ ಕಾಯ್ದಿರಿಸಿದ ನಮ್ಮ ಸೀಟುಗಳ ಪಿ ಎನ್ ಆರ್ ಸ್ಥಿತಿಯನ್ನು ನೋಡಲು ಮತ್ತೆ ಬೇರೊಂದು ಆ್ಯಪ್ ಬಳಸಬೇಕಾಗಿತ್ತು,
ಇದೇ ರೀತಿ ರೈಲುಗಳ ನೈಜ ಸಮಯದ ಮಾಹಿತಿ ಮತ್ತು ಫುಡ್ ಆರ್ಡರ್ ಕುರಿತ ಮಾಹಿತಿಯನ್ನು ನೋಡಲು ವಿವಿಧ ರೀತಿಯ ಆ್ಯಪ್ ಗಳನ್ನು ಬಳಕೆ ಮಾಡಬೇಕಾಗಿತ್ತು. ಆದರೆ ಇದೀಗ ಭಾರತೀಯ ರೈಲ್ವೆ ಈ ಎಲ್ಲಾ ವಿವಿಧ ರೀತಿಯ ಆ್ಯಪ್ ಬಳಕೆಯನ್ನು ತಡೆದು ಎಲ್ಲಾ ಸೇವೆಗಳು ಒಂದೇ ಜಾಗದಲ್ಲಿ ದೊರೆಯುವಂತೆ ಈ ‘Railone’ ಆ್ಯಪ್ ಅನ್ನು ಸಿದ್ಧಪಡಿಸಿದೆ.

ಈ ಹೊಸ RailOne App ನಲ್ಲಿ ಏನೆಲ್ಲ ಲಭ್ಯ?
ಟಿಕೆಟ್ ಬುಕ್ಕಿಂಗ್:
- ಕಾಯ್ದಿರಿಸಿದ (reserved) ಮತ್ತು ಕಾಯ್ದಿರಿಸದ (unreserved) ಟಿಕೆಟ್‌ಗಳನ್ನು ಬುಕ್ ಮಾಡಬಹುದು.
- ಪ್ಲಾಟ್‌ಫಾರ್ಮ್ ಟಿಕೆಟ್ ಕೂಡ ಬಹಳ ಸುಲಭ.
ಪಿಎನ್‌ಆರ್ ಸ್ಥಿತಿ (PNR Status) ಚೆಕ್ ಮಾಡಬಹುದು:
- ನೈಜ ಸಮಯದಲ್ಲಿ ನಿಮ್ಮ ಟಿಕೆಟ್‌ನ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ರೈಲು ಮಾಹಿತಿ:
- ರೈಲುಗಳು ಎಲ್ಲಿ , ಯಾವ ಕೋಚ್ ಎಲ್ಲಿದೆ – ಇವೆಲ್ಲ ವಿವರಗಳು ಕ್ಷಣ ಕ್ಷಣಕ್ಕೆ ಲಭ್ಯ.
ಆಹಾರ ಸೇವೆ:
- ನಿಮ್ಮ ಕುರ್ಚಿಯಲ್ಲೇ ಕುಳಿತು ಆಹಾರ ಆರ್ಡರ್ ಮಾಡುವ ಸೌಲಭ್ಯ!
ಇತರೆ ಸೇವೆಗಳು:
- ಪ್ರಯಾಣಿಕರ ಸಹಾಯ, ಪ್ರತಿಕ್ರಿಯೆ ಸಲ್ಲಿಸುವುದು, ದೂರು ನೀಡುವುದು – ಎಲ್ಲವೂ ಒಂದೇ ಆಪ್ನಲ್ಲಿ.
RailOne App ನ ವಿಶೇಷತೆಗಳು
- ಒಂದೇ ವೇದಿಕೆ:
ಹಳೆ IRCTC Connect, Rail Madad, e-Catering, UTS (ಉದಾಹರಣೆಗೆ, ಟಿಕೆಟ್ ಬುಕಿಂಗ್‌ಗೆ Rail Connect, ಊಟಕ್ಕೆ e-Catering, ಪ್ರತಿಕ್ರಿಯೆಗೆ Rail Madad, ಕಾಯ್ದಿರಿಸದ ಟಿಕೆಟ್‌ಗಳಿಗೆ UTS, ರೈಲು ಎಲ್ಲಿ ಎಂದು ತಿಳಿಯಲು National Train Enquiry System) – ಇಂತಹ ವಿಭಿನ್ನ ಆಪ್ಗಳ ಸೇವೆಗಳನ್ನು RailOne ಒಂದೇ ಜಾಗದಲ್ಲಿ ಒದಗಿಸುತ್ತದೆ.
- ಸಿಂಗಲ್ ಸೈನ್ ಇನ್ (Single Sign-In):
ಹಳೆಯ Rail Connect ಅಥವಾ UTS ಲಾಗಿನ್‌ನಿಂದಲೇ ಇಲ್ಲಿ ಸೈನ್-ಇನ್ ಮಾಡಬಹುದು. ಹೆಚ್ಚು ಪಾಸ್ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ.
- ಆರ್ ವ್ಯಾಲೆಟ್ (R-Wallet):
ಭಾರತೀಯ ರೈಲ್ವೆಯ ವಿಶೇಷ Wallet ಕೂಡ ಇದೆ. MPIN ಅಥವಾ Fingerprint ನೊಂದಿಗೆ ಲಾಗಿನ್ ಮಾಡಬಹುದು.
- ಸರಳ ನೋಂದಣಿ:
ಒಂದು ಮೊಬೈಲ್ ನಂಬರ್ ಅಥವಾ OTP ಮೂಲಕ ನೋಂದಾಯಿಸಬಹುದು – ತುಂಬಾ ತ್ವರಿತ ಪ್ರಕ್ರಿಯೆ.
- ತ್ವರಿತ ವಿಚಾರಣೆ:
PNR ಅಥವಾ ಟಿಕೆಟ್ ಸಮಸ್ಯೆಗಳಿಗಾಗಿ RailOne ನಲ್ಲಿ ತಕ್ಷಣವೇ ವಿಚಾರಣೆ ಸಲ್ಲಿಸಬಹುದು.
ಯಾಕೆ RailOne ಸದ್ಯದ ಪ್ರಮುಖ ಆಯ್ಕೆ?
ಸದ್ಯ IRCTC Connect ಆಪ್‌ಗೆ 10 ಕೋಟಿ ಹೆಚ್ಚು ಡೌನ್‌ಲೋಡ್‌ಗಳಿವೆ. ಆದರೆ RailOne ಇದಕ್ಕಿಂತ ಸುಧಾರಿತ ಮತ್ತು ಬಳಕೆದಾರ ಸ್ನೇಹಿ ಸೇವೆಗಳನ್ನು ಒದಗಿಸುತ್ತದೆ. ಟಿಕೆಟ್ ಬುಕ್ಕಿಂಗ್, ಫುಡ್ ಆರ್ಡರ್, ಮಾಹಿತಿ – ಎಲ್ಲವೂ ಒಂದೇ ಕ್ಲಿಕ್ಕಿನಲ್ಲಿ!
ಭಾರತೀಯ ರೈಲ್ವೆ ಪ್ರತಿ ವರ್ಷ ಹೊಸ ತಂತ್ರಜ್ಞಾನಗಳನ್ನೂ ಸತತವಾಗಿ ಅಳವಡಿಸಿಕೊಂಡು ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲು ಸಜ್ಜಾಗುತ್ತಿದೆ. RailOne Super App ಕೂಡ ಆ ದಾರಿಯಲ್ಲಿಯೇ ಇನ್ನೊಂದು ದೊಡ್ಡ ಹೆಜ್ಜೆ.
RailOne App ಡೌನ್‌ಲೋಡ್ ಲಿಂಕ್ (Android)












