Railway Ticket Rate Hike: ರೈಲ್ವೆ ಟಿಕೆಟ್ ದರ ಪರಿಷ್ಕರಣೆ ಜುಲೈ 1ರಿಂದ: ಎಷ್ಟು ಹೆಚ್ಚಾಗಿದೆ ಗೊತ್ತಾ?

Photo of author

Mantesh

Publish: June 25, 2025
Railway Ticket Rate Hike

share Share:

Railway Ticket Rate Hike ರೈಲ್ವೆ ಇಲಾಖೆಯು ಜುಲೈ 1ರಿಂದ ಟಿಕೆಟ್ ದರಗಳನ್ನು ಪರಿಷ್ಕರಿಸಲು (Railway Ticket Fare Hike) ತೀರ್ಮಾನಿಸಿದೆ. ದೀರ್ಘ ದೂರ ಪ್ರಯಾಣಿಸುವವರಿಗೆ ಇದು ಹೊಸ ಬದಲಾವಣೆಯಾಗಿ ಬೀಳಲಿದೆ. ಸಾಮಾನ್ಯ ಹಾಗೂ ಎಕ್ಸ್‌ಪ್ರೆಸ್ ನಾನ್-ಎಸಿ ರೈಲಿನಲ್ಲಿ ಪ್ರತೀ ಕಿಲೋಮೀಟರ್‌ಗೂ 1 ಪೈಸೆ ಹೆಚ್ಚಳವಾಗಲಿದೆ. ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವವರಿಗೆ ಈ ಹೆಚ್ಚಳ 2 ಪೈಸೆಯಷ್ಟಾಗಲಿದೆ. ಆದರೆ 500 ಕಿಲೋಮೀಟರ್ ಒಳಗಿನ ಸೆಕೆಂಡ್ ಕ್ಲಾಸ್ ಪ್ರಯಾಣ ದರಗಳು ಹಳೆಹೀಗೆಯೇ ಉಳಿಯಲಿವೆ.ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್


ಜುಲೈ 1ರಿಂದ ರೈಲು ದರ ಹೆಚ್ಚಳ, ದೂರ ಪ್ರಯಾಣಿಕರಿಗೆ ಪರಿಣಾಮ.Railway Ticket Rate Hike

ಭಾರತೀಯ ರೈಲ್ವೆ ಇಲಾಖೆ ಜುಲೈ 1ರಿಂದ ಟಿಕೆಟ್ ದರಗಳಲ್ಲಿ ಹೊಸ ಪರಿಷ್ಕರಣೆ ಜಾರಿಗೆ ತರುವ ತೀರ್ಮಾನ ತೆಗೆದುಕೊಂಡಿದೆ. ಇದರ ಪರಿಣಾಮವಾಗಿ, ದೀರ್ಘ ದೂರ ಪ್ರಯಾಣ ಮಾಡುವ ಪ್ರಯಾಣಿಕರು ಸ್ವಲ್ಪ ಹೆಚ್ಚಿದ ದರವನ್ನು ಕಟ್ಟಬೇಕಾಗುತ್ತದೆ.

ಅದೃಷ್ಟವಶಾತ್, ಕಡಿಮೆ ದೂರ ಅಥವಾ ದೈನಂದಿನ ಪ್ರಯಾಣಿಕರ ಮೇಲೆ ಈ ಬದಲಾವಣೆ ತುಂಬಾ ಪರಿಣಾಮ ಬೀರುವಂತಿಲ್ಲ. ಹೀಗಾಗಿ, ಸ್ಥಳೀಯ ಪ್ರಯಾಣದವರು ಹಳೆಯ ದರದಲ್ಲೇ ಪ್ರಯಾಣಿಸಲು ಸಾಧ್ಯವಾಗುತ್ತದೆ.

Minor Pan Card: 18 ವರ್ಷ ಒಳಗಿನ ಮಕ್ಕಳಿಗೂ ಪ್ಯಾನ್ ಕಾರ್ಡ್..! ಇಂದೇ ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ.

ಇನ್ನೊಂದು ಮಹತ್ವದ ಬದಲಾವಣೆ ಎಂದರೆ, ಜುಲೈ 1, 2025ರಿಂದ ತತ್ಕಾಲ್ ಟಿಕೆಟ್ ಬುಕ್ಕಿಂಗ್ ವೇಳೆ ಆಧಾರ್ ದೃಢೀಕರಣ ಕಡ್ಡಾಯವಾಗಲಿದೆ. ಈ ಎಲ್ಲ ಬದಲಾವಣೆಗಳ ಹಿಂದೆ ಇರುವ ಮುಖ್ಯ ಉದ್ದೇಶವೇನೆಂದರೆ—ರೈಲ್ವೆಯ ಕಾರ್ಯಾಚರಣಾ ವೆಚ್ಚವನ್ನು ಸಮತೋಲನಗೊಳಿಸುವುದು ಮತ್ತು ಪ್ರಯಾಣಿಕರಿಗೆ ನೀಡಲಾಗುವ ಸೌಲಭ್ಯಗಳನ್ನು ಮತ್ತಷ್ಟು ಉತ್ತಮಗೊಳಿಸುವುದು.

ಪರಿಷ್ಕೃತ ರೈಲ್ವೆ ದರಗಳು ಜುಲೈ 1ರಿಂದ ಜಾರಿಗೆ!

Railway Ticket Rate Hike
Railway Ticket Rate Hike

ಅನೆಕ ವರ್ಷಗಳ ನಂತರ, ಭಾರತೀಯ ರೈಲ್ವೆ ಇಲಾಖೆ ಜುಲೈ 1ರಿಂದ ಪ್ರಯಾಣಿಕರ ರೈಲು ದರಗಳಲ್ಲಿ ಹೊಸ ಬದಲಾವಣೆಯನ್ನು ತರಲು ಮುಂದಾಗಿದೆ. ಈ ಪರಿಷ್ಕೃತ ದರಗಳು (Railway Ticket Rate Hike) ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಅಧಿಕೃತ ವರದಿಗಳು ಹೇಳುತ್ತವೆ.

ನಾನ್-ಎಸಿ ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಪ್ರತಿ ಕಿಲೋಮೀಟರ್‌ಗೆ 1 ಪೈಸೆಯಷ್ಟು ಹೆಚ್ಚಳವಾಗಲಿದ್ದು, ಇದರಿಂದ ದೈನಂದಿನ ಪ್ರಯಾಣದ ಮೇಲೆ ಮಾತ್ರ ಅಲ್ಪ ಪ್ರಮಾಣದ ಹೆಚ್ಚಳ ಅನಿಸಬಹುದಾಗಿದೆ. ರೈಲ್ವೆ ಇಲಾಖೆ ಮಾಹಿತಿ ಪ್ರಕಾರ, ದಿನದಗರಿ 13,000ಕ್ಕೂ ಹೆಚ್ಚು ನಾನ್-ಎಸಿ ರೈಲುಗಳ ಟಿಕೆಟ್ ದರಗಳಲ್ಲಿ ಸಣ್ಣ ಮಟ್ಟದ ಬದಲಾವಣೆ ನಡೆಯಲಿದೆ.

ಅದೇ ವೇಳೆ, ಎಸಿ ವರ್ಗದ ಪ್ರಯಾಣಿಕರಿಗೆ ಈ ಹೆಚ್ಚಳ ಸ್ವಲ್ಪ ಹೆಚ್ಚಾಗಿ, ಪ್ರತಿ ಕಿಲೋಮೀಟರ್‌ಗೆ 2 ಪೈಸೆಯಷ್ಟು ಆಗಲಿದೆ. ಆದರೆ ಸಬ್‌ಅರ್ಬನ್ ರೈಲುಗಳ ದರಗಳು ಮತ್ತು ಮಾಸಿಕ ಸೀಸನ್ ಟಿಕೆಟ್‌ಗಳ (MST) ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡುವ ಯೋಚನೆ ಇಲ್ಲವೆಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

“ಈ ಹೊಸ ದರ (Railway Ticket Rate Hike) ರಚನೆಯು ಸಾಮಾನ್ಯ ಪ್ರಯಾಣಿಕರ ಹಣಕಾಸಿನ ಮೇಲ್ಭಾರವನ್ನು ಹೆಚ್ಚಿಸುವಂತಿಲ್ಲ. ಬಜೆಟ್‌ ಮೇಲೆ ಮಹತ್ತರ ಹೊರೆ ಬೀರುವುದಿಲ್ಲ” ಎಂದು ಭಾರತೀಯ ರೈಲ್ವೆ ಇಲಾಖೆಯು ತಿಳಿಸಿದೆ.

500 ಕಿ.ಮೀವರೆಗೆ ದರ ಏರಿಕೆ ಅನ್ವಯವಿಲ್ಲ!

500 ಕಿ.ಮೀವರೆಗೆ ಸೆಕೆಂಡ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರಿಗೆ ಈ ಬಾರಿ ಯಾವುದೇ ದರ ಹೆಚ್ಚಳದ ಸಮಸ್ಯೆಯೇ ಇಲ್ಲ. ಆದರೆ, ಈ ಹದಗೆಟ್ಟಿಲ್ಲದ ನೀತಿ 500 ಕಿ.ಮೀ ಮೀರಿ ಪ್ರಯಾಣಿಸುವವರಿಗೆ ಮಾತ್ರ ಅನ್ವಯವಾಗುತ್ತದೆ. ಅಂಥ ಪ್ರಯಾಣಿಕರು ಪ್ರತಿ ಕಿ.ಮೀಗೆ ಕೇವಲ ಅರ್ಧ ಪೈಸೆ ಹೆಚ್ಚುವರಿ ದರವನ್ನು (Railway Ticket Rate Hike) ನೀಡಬೇಕಾಗುತ್ತದೆ. ಉದಾಹರಣೆಗೆ, 600 ಕಿ.ಮೀ ದೂರ ಪ್ರಯಾಣಿಸಿದರೆ, ನಿಮ್ಮ ಟಿಕೆಟ್‌ ದರದಲ್ಲಿ ಕೇವಲ 50 ಪೈಸೆ ಹೆಚ್ಚಳವಾಗಲಿದೆ—ಇದು ನಿರ್ಲಕ್ಷಿಸಬಹುದಾದ ಮಟ್ಟದ ಬದಲಾವಣೆ ಎನ್ನಬಹುದು.

ಇನ್ನೊಂದು ಸುದ್ದಿ ಅಂದ್ರೆ, ನೀವು ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರೆ ಅಥವಾ ಮಾಸಿಕ ಸೀಸನ್ ಟಿಕೆಟ್ (MST) ಹೊಂದಿದ್ದರೆ, ಈ ಬದಲಾವಣೆಯ ಪರಿಣಾಮ ನಿಮ್ಮ ಮೆಲೆ ಬೀಳುವುದಿಲ್ಲ. ಏಕೆಂದರೆ ಈ ದರ ಪರಿಷ್ಕರಣೆ 500 ಕಿ.ಮೀ ಮೀರುವ ದೀರ್ಘ ಪ್ರಯಾಣಗಳಿಗೆ ಮಾತ್ರ ಸೀಮಿತವಾಗಿದೆ.

ಪರಿಷ್ಕೃತ ರೈಲ್ವೆ ದರಗಳ ಸಂಪೂರ್ಣ ವಿವರ ಇಲ್ಲಿದೆ.Train ticket fare chart July 2025

ರೈಲ್ವೆ ಸೇವೆ / ವರ್ಗದರ ಬದಲಾವಣೆ
ಸಬರ್ಬನ್ ರೈಲುಗಳುಯಾವುದೇ ಹೆಚ್ಚಳವಿಲ್ಲ
ಮಾಸಿಕ ಸೀಸನ್ ಟಿಕೆಟ್ (MST)ಯಾವುದೇ ಹೆಚ್ಚಳವಿಲ್ಲ
ಸಾಮಾನ್ಯ ಸೆಕೆಂಡ್ ಕ್ಲಾಸ್ (500 ಕಿ.ಮೀ ವರೆಗೆ)ಯಾವುದೇ ಹೆಚ್ಚಳವಿಲ್ಲ
ಸಾಮಾನ್ಯ ಸೆಕೆಂಡ್ ಕ್ಲಾಸ್ (500 ಕಿ.ಮೀ ಹೆಚ್ಚು)ಪ್ರತಿ ಕಿ.ಮೀಗೆ ₹0.005 (ಅರ್ಧ ಪೈಸೆ)
ಮೇಲ್/ಎಕ್ಸ್‌ಪ್ರೆಸ್ ರೈಲುಗಳು (non-ac)ಪ್ರತಿ ಕಿ.ಮೀಗೆ ₹0.01 (1 ಪೈಸೆ)
ಎಸಿ ಕ್ಲಾಸ್‌ಗಳು (ಎಲ್ಲಾ ರೈಲುಗಳು)ಪ್ರತಿ ಕಿ.ಮೀಗೆ ₹0.02 (2 ಪೈಸೆ)

ಜೂನ್ 2025 ರಲ್ಲಿ, ಭಾರತೀಯ ರೈಲ್ವೆ ಇಲಾಖೆಯು ಒಂದು ಪ್ರಮುಖ ಬದಲಾವಣೆಯನ್ನು ಘೋಷಿಸಿತು. ಜುಲೈ 1, 2025 ರಿಂದ ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಆಧಾರ್ ದೃಢೀಕರಣ ಕಡ್ಡಾಯವಾಗಲಿದೆ. ರೈಲ್ವೆ ಸಚಿವಾಲಯವು ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

Join

Leave a Comment