Ration card e-kyc ನಮಸ್ಕಾರ ಕರ್ನಾಟಕದ ಜನತೆಗೆ, ಕರ್ನಾಟಕ ರಾಜ್ಯದ ಆಹಾರ ಸರಬರಾಜು ಮಂಡಳಿಯಿಂದ ಹೊಸ ಘೋಷಣೆ! ಏನೆಂದರೆ ಏಪ್ರಿಲ್ 30ರ ನಂತರ ಪಡಿತರ ಚೀಟಿ ಬಂದ್. ಕಾರಣ ಈ-ಕೆ ವೈ ಸಿ ಮಾಡಿಸಿಕೊಳ್ಳದೆ ಇರುವುದು. ಈ ಒಂದು ಲೇಖನದಲ್ಲಿ ನಾವು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸಲಿದ್ದೇವೆ. ಆದಕಾರಣ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
ಪಡಿತರ ಚೀಟಿಯ ಈ-ಕೆ ವೈ ಸಿ. Ration card e-kyc
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಾರ, ಅನೇಕ ಬಾರಿ ಕರ್ನಾಟಕ ರಾಜ್ಯದ ಜನತೆಗೆ ಪಡಿತರ ಚೀಟಿಯಲ್ಲಿನ ಬದಲಾವಣೆಗಳ ಕುರಿತು ಹಾಗೂ ಹೊಸ ಪಡಿತರ ಚೀಟಿಗಳ ಅರ್ಜಿಗೆ ಕುರಿತು ಅನೇಕ ರೀತಿಯಲ್ಲಿ ಇಲಾಖೆಯು ಗಡುವು ನೀಡಿರುತ್ತದೆ. ಆದರೆ ಇನ್ನೂ ಕೆಲವು ಪಡಿತರ ಚೀಟಿಗಳ ಈ-ಕೆ ವೈ ಸಿ (Ration card e-kyc) ಆಗಿರದ ಕಾರಣ ಅಂತಹ ಪಡಿತರ ಚೀಟಿಗಳನ್ನು ಏಪ್ರಿಲ್, 30ರ ನಂತರ ಅಮಾನ್ಯ ಒಂದು ಭಾವಿಸಲಾಗುವುದು ಎಂಬ ಹೇಳಿಕೆಯನ್ನು ನೀಡಿದ್ದಾರೆ. ಕಾರಣ, ಯಾರು ಯಾರು ಇಲ್ಲಿಯವರೆಗೆ ರೇಷನ್ ಕಾರ್ಡ್ (ಪಡಿತರ ಚೀಟಿಯ) ಈ-ಕೆ ವೈ ಸಿಯನ್ನು ಮಾಡಿಸಿಕೊಂಡಿಲ್ಲ ಅಂತವರು ತಕ್ಷಣ ಈ-ಕೆ ವೈ ಸಿ ಯನ್ನು ಮಾಡಿಸಿಕೊಳ್ಳಬೇಕು.
ರೇಷನ್ ಕಾರ್ಡ್ ಈ-ಕೆ ವೈ ಸಿ ಯಾಕೆ ಕಡ್ಡಾಯ? Ration card e-kyc.
ನಿಮಗೆಲ್ಲರೂ ತಿಳಿದಿರುವ ಹಾಗೆ, ರೇಷನ್ ಕಾರ್ಡ್ ಮೂಲಕವೇ ಆಹಾರ ಸರಬರಾಜು ಮಂಡಳಿಯು ಕರ್ನಾಟಕದ ಪ್ರತಿಯೊಬ್ಬ ಪ್ರಜೆಗೂ ಇಂದು ರೇಷನ್ ಅನ್ನು ಹಂಚುತ್ತಿದ್ದು. ಇದನ್ನು ಪಡೆಯಲು ನೀವು ರೇಷನ್ ಕಾರ್ಡನ್ನು ಹೊಂದಿರಬೇಕಾಗುತ್ತದೆ. ಅದೇ ರೀತಿ ಆ ರೇಷನ್ ಕಾರ್ಡ್ ಕೂಡ ಈ-ಕೆ ವೈ ಸಿ ಯನ್ನು ಹೊಂದಿರಬೇಕು. ಈ-ಕೆ ವೈ ಸಿ ಎಂದರೆ ಇದು ಒಂದು ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ಪಡಿತರ ಚೀಟಿಯಲ್ಲಿ ಸೇರಿಸುವ ಪ್ರಕ್ರಿಯೆ.

ಯಾಕೆ ಈ-ಕೆ ವೈ ಸಿ ಕಡ್ಡಾಯ? ಎಂದು ನೀವು ಕೇಳಬಹುದು. ಮೂಲಗಳ ವರದಿಗಳ ಪ್ರಕಾರ ತಿಳಿದು ಬಂದಿರುವ ವಿಷಯವೇನೆಂದರೆ ಇಲ್ಲಿಯವರೆಗೆ ಸರಿಸುಮಾರು 24% ಕರ್ನಾಟಕ ರಾಜ್ಯದ ಪಡಿತರ ಚೀಟಿಗಳ ಈ-ಕೆ ವೈ ಸಿ ಬಾಕಿ ಇರುವುದು. ಸದ್ಯಕ್ಕೆ ರಾಜ್ಯದಲ್ಲಿ ಉಚಿತ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ನಕಲಿ ಪಡಿತರ ಚೀಟಿಯನ್ನು ಹೊಂದಿರುವಂತಹ ಗ್ರಾಹಕರನ್ನು ತೆಗೆದುಹಾಕಲು ಈ ಒಂದು ಈ-ಕೆ ವೈ ಸಿ ಯನ್ನು ಕಡ್ಡಾಯ ಮಾಡಲಾಗಿದೆ. ಹಾಗೂ ಕೇವಲ ಅರ್ಹ ಇರುವಂತ ಜನರು ಮಾತ್ರ ಸರ್ಕಾರದ ಈ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕು ಎಂಬ ಉದ್ದೇಶದಿಂದ ಈ-ಕೆ ವೈ ಸಿ ಯನ್ನು ಕಡ್ಡಾಯ ಮಾಡಲಾಗಿದೆ.
ನೀವು ನಿಮ್ಮ ಮೊಬೈಲ್ ನಲ್ಲಿ ಈ-ಕೆ ವೈ ಸಿ ಯನ್ನು ಹೀಗೆ ಮಾಡಬಹುದು.Ration card e-kyc in mobile.
ಮೊದಲನೆಯದಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಆಹಾರ ಇಲಾಖೆಯ ಅಧಿಕೃತ ಜಾಲತಾಣವಾಗಿರುವಂತಹ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕ್ಕೇ ಭೇಟಿ ನೀಡಿ ನಂತರ ರೇಷನ್ ಕಾರ್ಡ್ ಈ-ಕೆ ವೈ ಸಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಪಡಿತರ ಚೀಟಿ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ, ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ಮೊಬೈಲ್ ನಂಬರ್ಗೆ ಬರುವ ಓಟಿಪಿಯನ್ನು ನಮೂದಿಸಬೇಕಾಗುತ್ತದೆ. ಓಟಿಪಿಯನ್ನು ನಮೂದಿಸಿ ಸಬ್ಮಿಟ್ ಎಂದು ಕ್ಲಿಕ್ ಮಾಡಿದ ತಕ್ಷಣ ಎಲ್ಲಾ ಮಾಹಿತಿಯು ನಿಮ್ಮ ಎದುರಿಗೆ ಕಾಣಿಸುತ್ತದೆ. ಮುಂದಿನ ಹಂತದಲ್ಲಿ ಕನ್ಫರ್ಮ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಿಮ್ಮ ಈಕೆ ವೈ ಸಿ ಕಾರ್ಯವು ಮುಗಿಯುತ್ತದೆ.
ಒಂದು ವೇಳೆ ನಿಮಗೇನಾದರೂ ಮೊಬೈಲ್ನಲ್ಲಿ ಈ-ಕೆ ವೈ ಸಿ ಮಾಡುವಲ್ಲಿ ಗೊಂದಲವಿದ್ದರೆ, ನಿಮ್ಮ ಹತ್ತಿರವಿರುವಂತಹ ಹಾಗೂ ನಿಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಹಾಗೂ ಅಗತ್ಯ ದಾಖಲೆಗಳು ಅಂದರೆ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ಈ ಪ್ರಕ್ರಿಯೆಯನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದು.
ಈಕೆ ವೈ ಸಿ ಮಾಡಿಸಿಕೊಳ್ಳಲು ಕೊನೆಯ ದಿನಾಂಕ.Last Date To Ration card e-kyc.
ಇಲ್ಲಿಯವರೆಗೆ ಸರ್ಕಾರವು ಈ-ಕೆ ವೈ ಸಿಯನ್ನು ಮಾಡಿಸಿಕೊಳ್ಳಲು ಅನೇಕ ಬಾರಿ ಸಮಯದ ಗಡುವನ್ನು ವಿಸ್ತರಿಸಿದೆ. ಸರಿಸುಮಾರು 6 ಬಾರಿ ಈ ಒಂದು ಗಡುವನ್ನು ವಿಸ್ತರಿಸಲಾಗಿದೆ ಅದೇ ರೀತಿ ಕೊನೆಯ ದಿನಾಂಕಗಳನ್ನು ಸಹ ವಿಸ್ತರಿಸುತ್ತಾ ಬಂದಿದೆ. ಆದರೆ ಈ ಬಾರಿಯ ಗಡುವನ್ನು ವಿಸ್ತರಿಸುವುದು ಕಷ್ಟಸಾಧ್ಯ. ಹಾಗಾಗಿ ಆಹಾರ ಇಲಾಖೆಯು ಇದೇ ತಿಂಗಳ, ಅಂದರೆ ಏಪ್ರಿಲ್ 30ನೇ ತಿಂಗಳ ಒಳಗಾಗಿ ಎಲ್ಲಾ ಗ್ರಾಹಕರು ತಪ್ಪದೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇರುವುದು. ಹಾಗಾಗಿ ಎಲ್ಲರೂ ಸಹ ನಿಮ್ಮ ನಿಮ್ಮ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಈಕೆ ವೈ ಸಿ ಯನ್ನು ಮಾಡಿಸಿಕೊಳ್ಳಿ. ಹಾಗೂ ಈ ಒಂದು ಮಾಹಿತಿಯು ತುಂಬಾ ಉಪಯುಕ್ತ ಆಗಿದ್ದು ಇತರರೊಡನೆ ಶೇರ್ ಮಾಡುವುದರ ಮೂಲಕ ಹಂಚಿಕೊಳ್ಳಿ. ಧನ್ಯವಾದಗಳು.











