Skin Care Tips. ಬಿಳಿಯ ತ್ವಚೆಗಾಗಿ ಏನು ಮಾಡಬೇಕು ಗೊತ್ತಾ? Skin Care Tips In Kannada.

Photo of author

Mantesh

Publish: March 23, 2025

share Share:

ಮಾನವನ ದೈಹಿಕ ಆರೋಗ್ಯಕ್ಕೆ ಏನು ಮುಖ್ಯ ಹಾಗೂ ಬಿಳಿಯ ತ್ವಚೆಗಾಗಿ ಏನು ಮಾಡಬೇಕ (Skin Care Tips) ಎಂಬುದನ್ನು ಈ ಲೇಖನದಲ್ಲಿ ಹೇಳಲಾಗಿದೆ. ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನ ತಿಳಿದುಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ:

ನಿಮ್ಮ ಚರ್ಮದ ವಿಧಗಳನ್ನು ತಿಳಿದುಕೊಳ್ಳುವುದು? Know Your Skin Type.

ಹಾ, ಏನು ಚರ್ಮದ ವಿಧಗಳು? ಹೌದು ಮಾನವನ ಚರ್ಮದಲ್ಲಿ(Skin Care Tips) ಅನೇಕ ವಿವಿಧ ರೀತಿಯ ಚರ್ಮದ ವಿಧಗಳನ್ನು ನಾವು ಕಾಣಬಹುದು, ಹೌದು ನಿಮ್ಮ ಚರ್ಮವು ಯಾವ ವಿಧವನ್ನು ಹೊಂದಿದೆ ಎಂಬುದು ತಿಳಿದುಕೊಳ್ಳುವುದು ಅತ್ಯಗತ್ಯ. ಇದರಲ್ಲಿ ಒಣ ಚರ್ಮ, ಎಣ್ಣೆಯ ರೀತಿಯ ಚರ್ಮ, ಒಣ ಹಾಗೂ ಎಣ್ಣೆಯ ರೀತಿಯ ಕೂಡಿದ ಚರ್ಮ, ಮೃದು ಚರ್ಮ, ಹೀಗೆ ಅನೇಕ ವಿಧಗಳನ್ನು ನಾವು ಕಾಣಬಹುದು. ಮೊದಲು ನೀವು ಯಾವ ರೀತಿಯ ಚರ್ಮವನ್ನು ಹೊಂದಿರುವಿರಿ ಎಂದು ತಿಳಿದುಕೊಳ್ಳಬೇಕು.

bmrcl recruitment 2025: ನಮ್ಮ ಮೆಟ್ರೋದಲ್ಲಿ ನೇಮಕಾತಿ…!

ಹಾಗೆ ತಿಳಿದುಕೊಳ್ಳಬೇಕೆಂದರೆ ನೀವು ಒಂದು ಕೊಠಡಿಯ ತಾಪಮಾನದಲ್ಲಿ 15 ನಿಮಿಷಗಳ ಕಾಲ ಕುಳಿತುಕೊಳ್ಳಬೇಕು, ನಂತರ ನಿಮ್ಮ ಮುಖದ ಚರ್ಮವನ್ನು ಸ್ಪರ್ಶಿಸಿದಾಗ ಒಂದು ವೇಳೆ ಅದು ಎಣ್ಣೆಯ ರೀತಿಯ ಜಿಗ್ಗುಟಾದ ಪದಾರ್ಥವನ್ನು ಹೊರಡಿಸಿದರೆ ಅದು ಎಣ್ಣೆಯ ರೀತಿಯ ಚರ್ಮ ಎಂದು ಪರಿಗಣಿಸಬೇಕು, ಅದೇ ರೀತಿ ಯಾವುದೇ ರೀತಿಯ ಪರಿವರ್ತನೆಯನ್ನು ಹೊಂದದೆ ಒಣ ಚರ್ಮವಾಗಿದ್ದರೆ ಅದನ್ನು ಒಣಚರ್ಮ ಎಂದು ಭಾವಿಸಬೇಕು, ಹಾಗೆ ಇವುಗಳ ಮಿಶ್ರಿತ ಚರ್ಮವನ್ನು ನಾವು ಕಾಣಬಹುದು, ಅದೇ ರೀತಿ ನಿಮ್ಮ ಚರ್ಮವು ಮೃದು ಚರ್ಮವಾಗಿದ್ದರೆ ಅದಕ್ಕೆ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸಿದಾಗ ಅದು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆಸದಿದ್ದರೆ ಅದನ್ನು ಮೃದು ಚರ್ಮ ಎಂದು ಭಾವಿಸಬಹುದು. ಈ ರೀತಿಯಾಗಿ ನಿಮ್ಮ ಚರ್ಮವನ್ನು ಗುರುತಿಸಿಕೊಂಡರೆ ಅದಕ್ಕೆ ಸರಿಯಾಗಿ ಹೊಂದುವ ರಾಸಾಯನಿಕಗಳನ್ನು ಬಳಸಬಹುದು.

Skin Care Tips

ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ: Protect Skin From Harmful Ray’s. Skin Care Tips In Kannada.

ಸೂರ್ಯನಿಂದ ಭೂಮಿಗೆ ಬರುವ ಬೆಳಕು ಅನೇಕ ರೀತಿಯ ಹಾನಿಕಾರಕ ಬೆಳಕಿನ ಕಿರಣಗಳನ್ನು ಹೊತ್ತು ತರುತ್ತದೆ. ಇಂತಹ ಕಿರಣಗಳನ್ನು ಭೂಮಿಯ ಓಝೋನ್ ಪದರು, ಭೂಮಿಗೆ ಈ ಹಾನಿಕಾರಕ ಕಿರಣಗಳು ಬರದಂತೆ ತಡೆಯುತ್ತದೆ. ಆದರೂ ಕೆಲವೊಂದು ಹಾನಿಕಾರಕ ಕಿರಣಗಳು ಭೂಮಿಯನ್ನು ತಲುಪುತ್ತವೆ. ಅಂತಹ ಕಿರಣಗಳು ಒಂದು ವೇಳೆ ನಮ್ಮ ಚರ್ಮದ ಮೇಲೆ ಬಿದ್ದರೆ ಅನೇಕ ರೀತಿಯ ಸಮಸ್ಯೆಗಳನ್ನು ತಂದದೊಡ್ಡುತ್ತವೆ. ಹಾಗಾಗಿ ಈ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಬೇಕು.

ಅತಿಯಾಗಿ ಮುಖವನ್ನು ಸ್ಪರ್ಶಿಸುವುದು & ಮೊಡವೆಗಳನ್ನು ಚೂಟುವುದು: Avoid Popping Pimple’s.

ನಿಮ್ಮ ಚರ್ಮವು ಮೃದುವಾಗಿ ಇರಬೇಕೆಂದರೆ ಅದನ್ನು ಪದೇ ಪದೇ ಕೈಗಳಿಂದ ಸ್ಪರ್ಶಿಸುವುದು ಮಾಡಬಾರದು. ಆ ರೀತಿ ಮಾಡಿದರೆ ಅದು ಗಡುಸಾಗಿ ಬಿಡುತ್ತದೆ. ಮತ್ತು ನಿಮ್ಮ ಮುಖದ ಮೇಲೆ ಆದಂತಹ ಮೊಡವೆಗಳನ್ನು ಒಡೆಯುವುದು ಅಥವಾ ಚೂಟುವುದು ಮಾಡಬಾರದು, ಈ ರೀತಿ ಮಾಡಿದರೆ ಅವುಗಳು ಪೂರ್ಣವಾಗಿ ಕಪ್ಪು ಚುಕ್ಕೆಗಳಾಗಿ ಮುಖದ ಮೇಲೆ ಉಳಿಯುತ್ತವೆ.

ದೇಹದಲ್ಲಿ ಹೈಡ್ರೇಶನ್ ಅನ್ನು ಕಾಪಾಡುವುದು ಹಾಗೂ ಪಾನೀಯಗಳನ್ನು ಸೇವಿಸುವುದು: Keep Hydration & Use Glowing Drinks.

Skin Care Tips ಮಾನವನ ದೇಹವು 75% ನೀರಿನಿಂದ ಮಾಡಲ್ಪಟ್ಟಿದೆ, ಹಾಗಾಗಿ ಒಬ್ಬ ಆರೋಗ್ಯವಂತ ಮಾನವನ ದೇಹದಲ್ಲಿ ಸರಿಯಾದ ಪ್ರಮಾಣದ ನೀರಿನ ಅಂಶವನ್ನು ಹೊಂದಿರುವುದು ಅತ್ಯಗತ್ಯ. ಅದೇ ರೀತಿ ತ್ವಚೆಯ ಆರೋಗ್ಯಕ್ಕಾಗಿ ಅತಿ ಹೆಚ್ಚಿನ ಪ್ರಮಾಣದ ನೀರನ್ನು ನಾವು ನೀವೆಲ್ಲರೂ ಸೇವಿಸಬೇಕು. ಮತ್ತು ಅನೇಕ ರೀತಿಯ ತ್ವಚೆಯ ಹೊಳಪನ್ನು ಹೆಚ್ಚಿಸುವ ಪಾನೀಯಗಳನ್ನು ಸಹ ಸೇವಿಸಬೇಕು. ಅವುಗಳಲ್ಲಿ ನಿಂಬೆಹಣ್ಣಿನ ರಸ, ನಿಂಬೆ ಹಣ್ಣಿನಿಂದ ತಯಾರು ಮಾಡಿದ ಜ್ಯೂಸ್ ಗಳು, ಸೇಬು ಹಣ್ಣಿನ ಜ್ಯೂಸ್, ಕಿತ್ತಳೆ ಹಣ್ಣಿನ ಜ್ಯೂಸ್, ಇತ್ಯಾದಿ ರೀತಿಯ ಹಣ್ಣು-ಹಂಪಲು ಗಳಿಂದ ಮಾಡಿದಂತಹ ಜ್ಯೂಸ್ ಗಳನ್ನು ಅಥವಾ ಪಾನೀಯಗಳನ್ನು ಸೇವಿಸುವುದು ನಿಮ್ಮ ತ್ವಚೆಗೆ ಒಳ್ಳೆಯದು.

ಆಹಾರ ಸೇವನೆಯ ನಿಯಂತ್ರಣ: Food And Diet.

ಒಂದು ಒಳ್ಳೆಯ ತ್ವಚೆಯನ್ನು ನೀವು ಪಡೆಯಬೇಕಾದರೆ ಮೊದಲು ಇದನ್ನು ಅರ್ಥ ಮಾಡಿಕೊಳ್ಳಿ, ನೀವು ಏನನ್ನು ತಿನ್ನುವಿರೋ ಅದುವೇ ನಿಮ್ಮನ್ನು ತೋರಿಸುತ್ತದೆ. ಅಂದರೆ ಒಳ್ಳೆಯ ರೀತಿಯ ಆಹಾರ ಸೇವನೆ ನಿಮ್ಮ ದೈಹಿಕ ಆರೋಗ್ಯಕ್ಕೂ ಶ್ರೇಯಸ್ಕರ. ಜಂಕ್ ಫುಡ್ ಗಳು, ಆಯ್ಲಿ ಫುಡ್ ಗಳು, ಫಾಸ್ಟ್ ಫುಡ್ ಗಳು, ಅತಿಯಾದ ಮಸಾಲೆ ಬೆರಿತ ಆಹಾರದ ಸೇವನೆ ನಿಮ್ಮ ತ್ವಚೆಗೆ ಹಾನಿಯನ್ನು ಉಂಟುಮಾಡುತ್ತದೆ. ಹಾಗಾಗಿ ಆಹಾರದ ಸೇವನೆಯಲ್ಲಿ ನಿಯಂತ್ರವನ್ನು ತರುವುದು ಅತಿ ಮುಖ್ಯ.

ಸಕ್ಕರೆಯ ಸೇವನೆಯನ್ನು ನಿರ್ಬಂಧಿಸುವುದು: Avoid Sugar.

ಸಕ್ಕರೆಯೂ ಬಿಳಿಯ ವಿಷ ಎಂದು ಕುಖ್ಯಾತಿಯನ್ನು ಪಡೆದ ಒಂದು ಪದಾರ್ಥ, ಅಂದರೆ ಇದು ಮಾನವನ ದೇಹಕ್ಕೆ ಅಷ್ಟು ಒಳ್ಳೆಯ ಪದಾರ್ಥವಲ್ಲ ಹಾಗಾಗಿ ನಾವು ಅತಿಯಾದ ಸಕ್ಕರೆ ಸೇವನೆಯನ್ನು ನಿರ್ಬಂಧಿಸುವುದು ನಮ್ಮ ಆರೋಗ್ಯಕ್ಕೆ ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿನ ಅತಿಯಾದ ಪ್ರಮಾಣದ ರಾಸಾಯನಿಕಗಳು ಮಾನವನ ದೇಹದಲ್ಲಿ ಏರುಪೇರುಗಳನ್ನು ಉಂಟುಮಾಡುತ್ತವೆ. ಹಾಗಾಗಿ ಇದರ ಸೇವನೆಯನ್ನು ಮಾಡಬಾರದು.

ಧ್ಯಾನ ಯೋಗ ಹಾಗೂ ಇನ್ನಿತರ ದೈಹಿಕ ಚಟುವಟಿಕೆಗಳು: Meditation & exercise.

ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ ಎಂಬ ಹೇಳಿಕೆಯಂತೆ ನೀವು ಎಷ್ಟು ದೈಹಿಕವಾಗಿ ಸಕ್ರಿಯರಾಗಿರುತ್ತೀರೋ ಅಷ್ಟು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಎಲ್ಲರೂ ಧ್ಯಾನ, ಯೋಗ, ಇನ್ನಿತರ ದೈಹಿಕ ಚಟುವಟಿಕೆಗಳನ್ನು ಮಾಡುವುದು ಉತ್ತಮ.

ಯೋಗದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಈ ಮಾಹಿತಿಗಳನ್ನು ಓದಿ:

SBI Har Ghar Lakhpati Yojana 2025: SBIನ ಹೊಸ ಹೂಡಿಕೆ ಯೋಜನೆ 2025. Quickly Apply.

Calcium Deficiency Symptoms In Kannada: ನಿಮ್ಮಲ್ಲಿ ಈ ಲಕ್ಷಣಗಳು ಕಂಡು ಬಂದರೆ, ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆ ಎಂದರ್ಥ.

Join

1 thought on “Skin Care Tips. ಬಿಳಿಯ ತ್ವಚೆಗಾಗಿ ಏನು ಮಾಡಬೇಕು ಗೊತ್ತಾ? Skin Care Tips In Kannada.”

Leave a Comment