Sunita Williams.ಸುನಿತಾ ವಿಲಿಯಮ್ಸ್ ಮರಳಿ ಭೂಮಿಗೆ..! ಇಲ್ಲಿದೆ ಸಂಪೂರ್ಣ ಮಾಹಿತಿ.

Photo of author

Mantesh

Publish: March 21, 2025
Sunita Williams

share Share:

Introduction: ನಮಸ್ಕಾರ ಕರ್ನಾಟಕದ ಜನತೆಗೆ, ಈ ಒಂದು ಲೇಖನದಲ್ಲಿ ಇಂದು ನಾವು ಸುನೀತಾ ವಿಲಿಯಮ್ಸ್ (Sunita Williams) ಮರಳಿ ಭೂಮಿಗೆ ಬಂದ ಸಂದರ್ಭದ ಹಾಗೂ ಅವರ ಈ ಬಾಹ್ಯಾಕಾಶದ ಪ್ರಯಾಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲು ಇಷ್ಟಪಡುತ್ತೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸುತ್ತೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಿ. ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ:

ಸುನೀತಾ ವಿಲಿಯಮ್ಸ್ ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ:Sunita Williams

ಸುನಿತಾ ವಿಲಿಯನ್ಸ್ (Sunita Williams) ಅವರು ಅಮೆರಿಕಾದ ಪ್ರಜೆಯಾಗಿದ್ದು ಇವರು ಮೂಲತಃ ಭಾರತದವರು. ಇವರ ತಂದೆ ಡಾ. ದೀಪಕ್ ನಂದಾ, ತಾಯಿ: ಬೋನಿ ಪಂಡ್ಯ. ಇವರು ಜನಿಸಿದ್ದು ಸಪ್ಟೆಂಬರ್ 19, 1965. ಯುನೆಸ್ಟರ್, ಓಹಿಯೋ, ಅಮೆರಿಕದಲ್ಲಿ. ಇವರು ಮೊದಲಿಗೆ ಅಮೆರಿಕಾದ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದು. ನಂತರ ದಿನಗಳಲ್ಲಿ ಬಾಹ್ಯಾಕಾಶ ಯಾನಿಯಾಗಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇವರು ಮೊದಲಿಗೆ 2006-07 ರಲ್ಲಿ ಮೊದಲ ಬಾಹ್ಯಾಕಾಶ ಯಾನವನ್ನು ಮಾಡುತ್ತಾರೆ(ಎಕ್ಸ್‌ಪಿಡಿಷನ್ 14-15).
ಇವರು ಒಟ್ಟು ಬಾಹ್ಯಾಕಾಶದಲ್ಲಿ 322 ದಿನಗಳನ್ನು ಕಳೆದಿದ್ದಾರೆ. ಇವರು ಅತ್ಯಧಿಕ ಬಾಹ್ಯಾಕಾಶ ನಡಿಗೆಯನ್ನು ಸಹ ಮಾಡಿದ್ದಾರೆ. ಇವರಿಗೆ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಮೆರಿಕದ ಸೇವೆಯ ಮೊಹನ್ನತ ಗೌರವ ಪ್ರಶಸ್ತಿಯಾದ ಲೆಜಿನ್ ಆಪ್ ಮೆರಿಟ್ ( legion of merit) ನೀಡಿ ಗೌರವಿಸಿದೆ.

Sunita Williams

ಅಂತರಿಕ್ಷದಲ್ಲಿ ಸಿಲುಕಿಕೊಳ್ಳಲು ಕಾರಣ: Sunita Williams in ISS

ಬೋಯಿಂಗ್ ಎಂಬ ಕಂಪನಿಯು ಸ್ಟಾರ್ ಲೈನರ್ ಎಂಬ ಕ್ಯಾಪ್ಸುಲ್ ಮೂಲಕ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಕಳುಹಿಸಲಾಗುತ್ತದೆ. ಕಾರಣ ಭವಿಷ್ಯದ ಬಾಹ್ಯಾಕಾಶ ಪ್ರಯಾಣಗಳನ್ನು ಸುಗಮಗೊಳಿಸಲು ಇದು ಒಂದು ಪ್ರಮುಖ ಹೆಜ್ಜೆ ಆಗಬಹುದು ಎಂದು. ಆದರೆ ಇವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಕೆಲವು ಸಮಯಗಳಲ್ಲಿ ಕ್ಯಾಪ್ಸುಲ್ನಲ್ಲಿ ಕಂಡುಬಂದಂತಹ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಮರಳಿ ಭೂಮಿಗೆ ಬರುವುದು ಸಾಧ್ಯವಿಲ್ಲ ಎಂದು ತಿಳಿಯುವುದು. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಈ ಒಂದು ಮಿಷನ್ ಕೇವಲ 8 ದಿನಗಳಿಗಷ್ಟೇ ನಿರ್ಧಾರವಾಗಿತ್ತು, ಆದರೆ ಕ್ಯಾಪ್ಸುಲ್ನಲ್ಲಿ ಕಂಡುಬಂದಂತಹ ಹಲವಾರು ತಾಂತ್ರಿಕ ದೋಷಗಳಿಂದ ಸುನಿತಾ ವಿಲಿಯಮ್ಸ್ ಹಾಗೂ ಅವರ ಸಹಾಯತ್ರಿಕರೂ 9 ತಿಂಗಳಿಗಿಂತ ಹೆಚ್ಚಿನ ಸಮಯ ಅಲ್ಲಿಯೇ ಉಳಿಯಬೇಕಾಗಿತು. ಇದೀಗ ಅವರು ಮರಳಿ ಭೂಮಿಗೆ ಬಂದಿರುವುದು ಎಲ್ಲರಲ್ಲಿ ಸಂತಸವನ್ನು ಉಂಟು ಮಾಡಿದೆ.

ISS ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಸುನಿತಾ ವಿಲಿಯಮ್ಸ್ ಮರಳಿ ಭೂಮಿಗೆ….!

ಸ್ನೇಹಿತರೆ, ಈ ದೀರ್ಘ ಪ್ರಯಾಣದ ಅವಧಿಯಲ್ಲಿ ನಾಸಾ ಹಾಗೂ ಬೋಯಿಂಗ್ ಕಂಪನಿಯ ತಂಡಗಳು ತಾಂತ್ರಿಕ ದೋಷಗಳನ್ನು ಸರಿಪಡಿಸಲು ನಿರಂತರವಾಗಿ ಶ್ರಮಿಸಿದರು ಸಹ ಯಾವುದೇ ರೀತಿಯ ಮರು ಪ್ರಯಾಣಕ್ಕೆ ಮಾರ್ಗವು ಸಿಗದೇ ಇರುವಾಗ ನಾಸಾ (NASA)ವು ಸ್ಪೇಸ್ ಎಕ್ಸ್ ಕ್ರೊ ಡ್ರಾಗನ್ ಮೂಲಕ ಅವರನ್ನು ಭೂಮಿಗೆ ತರಲು ನಿರ್ಧರಿಸಿತು. ಅದೇ ರೀತಿ ಮಾರ್ಚ್ 18, 2025 ರಂದು ಸುನಿತಾ ವಿಲಿಯನ್ಸ್ ಹಾಗೂ ಬುಚ್ ವಿಲ್ಮೊರ್ ಬಾಹ್ಯಾಕಾಶದಿಂದ ಅವರನ್ನು ಸುರಕ್ಷಿತವಾಗಿ ಮರಳಿ ಭೂಮಿಗೆ ತರಲಾಯಿತು. ಸ್ಪೇಸ್ ಎಕ್ಸ್ ಕಂಪನಿಯು ಮೊದಲೇ ನಿರ್ಧಾರ ಮಾಡಿದ ಹಾಗೆ ನಿಯಂತ್ರಿತ ಲ್ಯಾಂಡಿಂಗ್ ಮಾಡಿ ಫ್ಲೋರಿಡಾದ ಟಲಾಹಸ್ಸಿ ಸಮೀಪದ ಮೆಕ್ಸಿಕೋ ಕೆರೆಯಲ್ಲಿ ಈ ಒಂದು ಕ್ಯಾಪ್ಸುಲ್ ಅನ್ನು ಲ್ಯಾಂಡ್ ಮಾಡಲಾಯಿತು. ಈ ರೀತಿಯಾಗಿ ಸುನಿತಾ ವಿಲಿಯಂಸ್ ಅವರು ಮರಳಿ ಭೂಮಿಗೆ ಬಂದರು.

ಬಾಹ್ಯಾಕಾಶದಲ್ಲಿ ಗಣೇಶ:

ಹೌದು ಸ್ನೇಹಿತರೆ, ಸುನಿತಾ ವಿಲಿಯಮ್ಸ್ ಮೂಲತಃ ಭಾರತೀಯರಾಗಿದ್ದರು, ಹಾಗೂ ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದು ಇವರು ಭಾರತದವರು ಎಂದು ಹೇಳಲು ನಮಗೆ ಹೆಮ್ಮೆಯಾಗಬೇಕು. ಇವರು ಈ ಪ್ರಯಾಣದಲ್ಲಿ ತಮ್ಮ ಜೊತೆಗೆ ತಮ್ಮ ಆರಾಧ್ಯ ದೇವರಾದಂತಹ ಗಣೇಶನ ಒಂದು ಚಿಕ್ಕ ಮೂರ್ತಿಯನ್ನು ತಮ್ಮ ಜೊತೆಗೆ ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿದ್ದರು. ಇದನ್ನು ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಿಕೊಂಡಿದ್ದು ಇದರ ಬಗ್ಗೆ ಹೆಚ್ಚಿನ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸಹ ಪಡೆದಿದ್ದರು. ಬಾಹ್ಯಾಕಾಶದಲ್ಲಿ ಗಣೇಶನನ್ನು ಕಂಡ ಭಾರತೀಯರೆಲ್ಲರೂ ಸಂತಸ ವ್ಯಕ್ತಪಡಿಸಿದರು.

ಈ ಮಾಹಿತಿಗಳನ್ನು ಓದಿ:

SBI Har Ghar Lakhpati Yojana 2025: SBIನ ಹೊಸ ಹೂಡಿಕೆ ಯೋಜನೆ 2025. Quickly Apply.

ಯೋಗ (Yoga): ಮಾನಸಿಕ ಮತ್ತು ದೈಹಿಕ ಬಲಕ್ಕಾಗಿ

Join

1 thought on “Sunita Williams.ಸುನಿತಾ ವಿಲಿಯಮ್ಸ್ ಮರಳಿ ಭೂಮಿಗೆ..! ಇಲ್ಲಿದೆ ಸಂಪೂರ್ಣ ಮಾಹಿತಿ.”

Leave a Comment