Swavalambi Sarathi Yojana Karnataka Online Application: ನಮಸ್ಕಾರ ಸ್ನೇಹಿತರೇ ಅನೇಕ ಜನರು ತಾವು ಸ್ವಂತ ಉದ್ಯೋಗದಲ್ಲಿ ಇರಬೇಕು ಎನ್ನುವ ಕನಸುಗಳನ್ನು ಹೊಂದಿರುತ್ತಾರೆ. ಆದರೆ ಅವರ ಆರ್ಥಿಕ ಸಮಸ್ಯೆಗಳಿಂದಾಗಿ (ಹಣಕಾಸಿನ) ಅವರಿಗೆ ಯಾವುದೇ ರೀತಿಯ ಸ್ವ ಉದ್ಯೋಗ ಆರಂಭಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅಂತವರು ಹಿಂದೆಯೇ ಉಳಿಯುತ್ತಾರೆ. ಆದರೆ ಅಂಥವರಿಗಾಗಿ ರಾಜ್ಯ ಸರ್ಕಾರವು ಒಂದು ಅವಕಾಶವನ್ನು ಸೃಷ್ಟಿ ಮಾಡಿಕೊಟ್ಟಿದೆ. ಅದೇನೆಂದರೆ, ಸ್ವಾವಲಂಬಿ ಸಾರಥಿ ಯೋಜನೆ (swavalambi sarathi scheme).
ಈ ಯೋಜನೆಯ ಅಡಿಯಲ್ಲಿ ಸರ್ಕಾರವು ವಾಹನ ಖರೀದಿ ಮಾಡುವವರಿಗೆ ರೂ. 4 ಲಕ್ಷದವರೆಗೆ ಸಹಾಯಧನವನ್ನು ನೀಡುತ್ತಿದೆ. ಹಾಗಾದರೆ ಈ ಯೋಜನೆಗೆ ಅರ್ಹರು ಯಾರು, ಸಹಾಯಧನವನ್ನು ಪಡೆಯಲು ಯಾವ ದಾಖಲೆಗಳನ್ನು ಹೊಂದಿರಬೇಕು, ಮತ್ತು ಅರ್ಜಿ ಹೇಗೆ ಸಲ್ಲಿಸಬೇಕು ಎಂಬುದರ ಕುರಿತಾಗಿ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ.
ಇದೇ ರೀತಿಯ ಉಪಯುಕ್ತ ಮಾಹಿತಿಗಳನ್ನು ಪ್ರತಿದಿನ ಪಡೆಯಲು ಈ ಕೂಡಲೇ ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಿ. ಜಾಯಿನ್ ಆಗಲು [ಇಲ್ಲಿ ಕ್ಲಿಕ್ ಮಾಡಿ].
ಏನಿದು ಸ್ವಾವಲಂಬಿ ಸಾರಥಿ ಯೋಜನೆ?
ಸ್ವಾವಲಂಬಿ ಸಾರಥಿ ಯೋಜನೆ ಒಂದು ಸರ್ಕಾರಿ ಮಹತ್ವದ ಯೋಜನೆ ಆಗಿದ್ದು ಇದರ ಮೂಲ ಉದ್ದೇಶ ಯಾರು ಸ್ವಂತ ವಾಹನ ಖರೀದಿಸಿ ಸ್ವಯಂ ಉದ್ಯೋಗ ಮಾಡಲು ಬಯಸುವರು ಅಂತವರಿಗೆ ಸಹಾಯಧನದ ರೂಪದಲ್ಲಿ ಆರ್ಥಿಕ ಸಹಾಯವನ್ನು ಮಾಡುವುದು. ಈ ಯೋಜನೆಯ ಅಡಿಯಲ್ಲಿ ಫಲಾನುಭವಿಯು ಖರೀದಿಸುವ ವಾಹನದ ಒಟ್ಟು ಮೌಲ್ಯದ ಶೇ. 75 ರಷ್ಟು ಮೊತ್ತವನ್ನು ಸರ್ಕಾರವೇ ಭರಿಸುವುದು.
ಉದಾಹರಣೆಗೆ: ರಮೇಶ್ ಎಂಬ ವ್ಯಕ್ತಿಯು ಒಂದು ಆಟೋರಿಕ್ಷಾ ಖರೀದಿಸಲು ಬಯಸುತ್ತಾನೆ. ಆ ವಾಹನದ ಬೆಲೆಯು 1,00,000 ಲಕ್ಷ ರೂಪಾಯಿ ಇತ್ತು ಎಂದರೆ, ರಮೇಶನ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಅಡಿಯಲ್ಲಿ ವಾಹನವನ್ನು ಖರೀದಿಸಿದರೆ, ಇದರಲ್ಲಿ ಶೇ.75 ರಷ್ಟು ಅಂದರೆ 1,00,000 ಲಕ್ಷ ರೂಪಾಯಿಯಲ್ಲಿ 75,000 ರೂಗಳನ್ನು ಸರ್ಕಾರವೇ ಭರಿಸುವುದು. ರಮೇಶನು ಕೇವಲ 25000 ರೂಗಳನ್ನು ಮಾತ್ರ ಬರಿಸಬೇಕಾಗುವುದು. ಇದು ಸರ್ಕಾರದ ಮಹತ್ವದ ಉದ್ದೇಶ.

ಸ್ವಾವಲಂಬಿ ಸಾರಥಿ ಯೋಜನೆಗೆ ಬೇಕಾಗುವ ಅಗತ್ಯ ದಾಖಲೆಗಳು.
- ಅರ್ಜಿದಾರರ ಫೋಟೋ (Photo)
- ಮೊಬೈಲ್ ಸಂಖ್ಯೆ
- ಆದಾಯ ಪ್ರಮಾಣ ಪತ್ರ (Income Certificate)
- ಆಧಾರ್ ಕಾರ್ಡ್ ಪ್ರತ (ನಿವಾಸದ ಪುರಾವೆ)
- ಚಾಲನಾ ಪರವಾನಗಿ ಪ್ರತ (Driving Licence)
- ಬ್ಯಾಂಕ್ ಪಾಸ್ ಬುಕ್ (Bank Pass Book)
- ಸ್ವಯಂ ಘೋಷಣಾ ಪತ್ರ (Self Declaration Form)
ಸಹಾಯಧನ ವಿವರ:
| ವರ್ಗ | ಗರಿಷ್ಠ ಸಹಾಯಧನ | ಶೇಕಡಾವಾರು ನೆರವು |
|---|---|---|
| ಪರಿಶಿಷ್ಟ ಜಾತಿ (SC) | ₹4,00,000 | ವಾಹನ ಬೆಲೆಯ 75% ವರೆಗೆ |
| ಪರಿಶಿಷ್ಟ ಜನಾಂಗ (ST) | ₹3,00,000 | ವಾಹನ ಬೆಲೆಯ 50% ವರೆಗೆ |
| ಇತರೆ ಅರ್ಹರು | ₹3,00,000 | ವಾಹನ ಬೆಲೆಯ 50% ವರೆಗೆ |
ಯೋಜನೆಯ ಕೆಲವು ಷರತ್ತುಗಳು.
- ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು.
- ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿಯಾಗಿರಬೇಕು.
- ಅರ್ಜಿದಾರರ ವಯಸ್ಸು 21 ರಿಂದ 56 ವರ್ಷದೊಳಗೆ ಇರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ₹1,50,000/- ಮತ್ತು ನಗರ ಪ್ರದೇಶದಲ್ಲಿ ₹2,00,000/- ಮೀರಿರಬಾರದು.
- ಅರ್ಜಿದಾರರು ಸ್ವಂತ ವಾಹನ ಖರೀದಿಸಲು ಆಸಕ್ತಿ ಹೊಂದಿರಬೇಕು.
- ವಾಹನ ಚಾಲನೆಗೆ ಮಾನ್ಯ ಚಾಲನಾ ಪರವಾನಗಿ ಹೊಂದಿರಬೇಕು.
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಉದ್ಯೋಗಗಳು : Click Here
ಯಾರು ಅಜ್ಜಿ ಸಲ್ಲಿಸಬಹುದು
- ದೀನದಲಿತರು ಹಾಗೂ ಹಿಂದುಳಿದ ವರ್ಗಗಳ ಅರ್ಹತೆಯುಳ್ಳವರು
- ಕರ್ನಾಟಕ ರಾಜ್ಯದ ವೀರಶೈವ-ಲಿಂಗಾಯತ ಸಮುದಾಯದವರು
- ಕರ್ನಾಟಕ ರಾಜ್ಯದ ಒಕ್ಕಲಿಗ ಸಮುದಾಯದವರು
- ಕರ್ನಾಟಕ ರಾಜ್ಯದ ಬ್ರಹ್ಮಣ ಸಮುದಾಯದವರು
- ಕರ್ನಾಟಕ ರಾಜ್ಯದ ಉಪ್ಪಾರ ಸಮುದಾಯದವರು
- ಸಿಗಾಂನಿ ಶಿಲ್ಪಿ ಹಾಗೂ ಅಂಬಿಗ ಬಡಗ ಸಮುದಾಯದವರು
- ಕರ್ನಾಟಕ ರಾಜ್ಯದ ಸದಾನಾ ಸಮುದಾಯದವರು
- ಕರ್ನಾಟಕ ರಾಜ್ಯದ ದೇವದಾಸಿ ಮುಕ್ತರ ಸಮುದಾಯದವರು
- ಕರ್ನಾಟಕ ರಾಜ್ಯದ ಮದರ ಸಮುದಾಯದವರು
- ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರು
ಅರ್ಜಿ ಸಲ್ಲಿಸುವುದು ಹೇಗೆ? Swavalambi Sarathi Yojana Karnataka Online Application.
- ಅರ್ಜಿಯನ್ನು ಎಲ್ಲಲ್ಲಿ ಸಲ್ಲಿಸಬೇಕು?
- ಅರ್ಜಿದಾರರು ತಮ್ಮ ಗ್ರಾಮ/ಪಟ್ಟಣದ Karnataka One / Common Service Centre (CSC) ಅಥವಾ ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು
- ಅಧಿಕೃತ ವೆಬ್‌ಸೈಟ್‌ಗೆ ಹೋಗಿ: https://kmcdonline.karnataka.gov.in/Portal/login
- ಮೊಬೈಲ್ ಸಂಖ್ಯೆಯನ್ನು ನಮೂದಿಸಿ, OTP ಪಡೆದು ಲಾಗಿನ್ ಮಾಡಿ.
- ಅರ್ಜಿಯ ನಮೂನೆ ಆಯ್ಕೆ
- ಲಾಗಿನ್ ಆದ ನಂತರ “ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತ ಯೋಜನೆಗಳು (2024-25)” ವಿಭಾಗದಲ್ಲಿ “ಸ್ವಸಹಾಯ ಯೋಜನೆ” ಆಯ್ಕೆಮಾಡಿ.
- ಅವಶ್ಯಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಫೋಟೋ, ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
- ಅಂತಿಮ ಸಲ್ಲಿಕೆ
- ಎಲ್ಲಾ ವಿವರಗಳನ್ನು ಪರಿಶೀಲಿಸಿ, ಸಲ್ಲಿಸು ಬಟನ್ ಒತ್ತಿ.
- ಅರ್ಜಿ ಸ್ಥಿತಿ ಪರಿಶೀಲನೆ
- ಅರ್ಜಿಯ ಸ್ಥಿತಿಯನ್ನು ನಂತರ ವೆಬ್‌ಸೈಟ್‌ನಲ್ಲಿ ಟ್ರ್ಯಾಕ್ ಮಾಡಬಹುದು.
swavalambi sarathi scheme last date.
ಅರ್ಜಿಸಲ್ಲಿಕೆ ಪ್ರಾರಂಭ ದಿನಾಂಕ: 07-08-2025
ಯೋಜನೆಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-09-2025













