ನಮಸ್ಕಾರ ವಿದ್ಯಾರ್ಥಿಗಳೇ ಮತ್ತು ಪೋಷಕರೇ,
ದ್ವಿತೀಯ ಪಿಯುಸಿ (What After PUC) ಫಲಿತಾಂಶ ಬಂದ ನಂತರ ಒಂದೇ ಪ್ರಶ್ನೆ: “ಮುಂದೆ ಏನು?” (What After PUC)
ಹೌದು, ಇದು ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಎದುರಿಸುವ ಬಹುಮುಖ್ಯ ಸಮಯ ಹಾಗೂ ಸಮಸ್ಯೆ. ಇಷ್ಟು ವರ್ಷದ ಶಾಲಾ ಜೀವನದ ನಂತರ, ಜೀವನದ ಮುಂದಿನ ಹೆಜ್ಜೆ ಬಗ್ಗೆ ಸ್ಪಷ್ಟತೆ ಇರಬೇಕು.
ಈ ಒಂದು ಲೇಖನದಲ್ಲಿ ನಾವು ಡಿಗ್ರಿ Vs ಡಿಪ್ಲೊಮಾ (degree v/s diploma) ಬಗ್ಗೆ ತೂಕದ ಮಾತು ಮಾಡೋಣ – ಸರಳವಾಗಿ, ಹಾಗೂ ನೈಜ ಉದಾಹರಣೆಗಳೊಂದಿಗೆ, ನೀವು ಓದಲು ಅರ್ಥವಾಗುವ ಹಾಗೂ ಬಯಸುವ ರೀತಿಯಲ್ಲಿ.ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ;
ಮೊದಲನೆಯದಾಗಿ, ನಿಮ್ಮ ಆಸಕ್ತಿ ಕೇಳಿ! Know your interest. (What After PUC)
ಪಠ್ಯಕ್ರಮ ಯಾವದು ಬೇಕೆಂಬುದಕ್ಕೂ ಮುಂಚೆ, ನಿಮ್ಮನ್ನು ನೀವು ಕೇಳಿಕೊಳ್ಳಿ:
- ನನಗೆ ಯಾವ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಇದೆ?
- ನಾನು ಶೈಕ್ಷಣಿಕವಾಗಿ ಮುಂದುವರೆಯಬೇಕೆ?
- ಕೌಶಲ್ಯಾಧಾರಿತ ಕೆಲಸವೇ ನನ್ನ ಗುರಿಯೇ?
- Degree ಬೇಕೋ Diploma ಬೇಕೋ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿಯೇ ನಿಂತಿರುತ್ತೆ

ಡಿಗ್ರಿ ಪದವಿ ಎಂದರೇನು? What is degree?
Degree ಪದವಿ ಎಂಬುದು ಸಾಮಾನ್ಯವಾಗಿ ಮೂರು ವರ್ಷಗಳ ಕೋರ್ಸ್ ಆಗಿರುತ್ತೆ. ಈ ಕೋರ್ಸ್ಗಳು ಹೆಚ್ಚಿನ ಥಿಯರಿ ಒಳಗೊಂಡಿರುತ್ತವೆ.
ಉದಾಹರಣೆಗಳು:
- B.A (Arts)
- B.Com (Commerce)
- B.Sc (Science)
- BCA (Computer Applications)
- BBA (Business Administration)
ಯಾರು ಆಯ್ಕೆ ಮಾಡಬಹುದು? What After PUC
ಅಕಾಡೆಮಿಕ್ಲಿ ಬೆಳೆದು ಮುಂದೆ Masters ಅಥವಾ Competitive Exams ಬರೆಯಲು ಇಚ್ಛಿಸುವವರು.
ಲಾಭಗಳು:
✅ ಹೆಚ್ಚಿನ ಜ್ಞಾನ
✅ ಸರ್ಕಾರಿ ಉದ್ಯೋಗಗಳಿಗೆ ಅರ್ಹತೆ
✅ UPSC/KPSC ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ
✅ ಪ್ರಸ್ತುತ ಸಂಶೋಧನೆಗೆ ಹೋಗಲು ಅವಕಾಶ
ಡಿಪ್ಲೊಮಾ ಎಂದರೇನು? What is diploma? What After PUC
Diploma ಪದವಿ ಒಂದು ಕೌಶಲ್ಯಾಧಾರಿತ ಶಿಕ್ಷಣ. ಸಾಮಾನ್ಯವಾಗಿ 3 ವರ್ಷಗಳಿಗಿಂತ ಕಡಿಮೆ ಅವಧಿ ಇರುತ್ತದೆ (ಅಂದರೆ 2-3 ವರ್ಷ).
ಜನಪ್ರಿಯ ಡಿಪ್ಲೊಮಾ ಕೋರ್ಸ್ಗಳು: popular diploma courses.
- Diploma in Mechanical Engineering
- Diploma in Electrical / Civil / Computer Science
- Diploma in Fashion Designing / Hotel Management
- Diploma in Digital Marketing / Animation
ಯಾರು ಆಯ್ಕೆ ಮಾಡಬಹುದು?
ವೇಗವಾಗಿ ಕೆಲಸ ಮಾಡಲು ಇಚ್ಛಿಸುವವರು, practically ಕಲಿಯಲು ಇಚ್ಛಿಸುವವರು.
ಲಾಭಗಳು:
✅ ನೇರವಾಗಿ ಉದ್ಯೋಗಕ್ಕೆ ಹೋಗಬಹುದು
✅ ಕೈಗಾರಿಕೆಗಳಲ್ಲಿ ಡಿಮಾಂಡ್ ಇರುವ ಕೋರ್ಸ್ಗಳು
✅ Degree ನಂತರ lateral entry ಸಹ ಸಾಧ್ಯವಿದೆ
✅ ಹೆಚ್ಚಿನ practical knowledge
ಹಾಗಾದರೆ ನನ್ನ ಜೀವನದ ಗುರಿಗೆ ಯಾವದು ಸೂಕ್ತ?
ನಿಮ್ಮ ಗುರಿ ಸೂಕ್ತ ಆಯ್ಕೆ
ಸರ್ಕಾರಿ ಕೆಲಸ Degree
| ಖಾಸಗಿ ಉದ್ಯೋಗ Diploma / Degree
| ತಕ್ಷಣ ಉದ್ಯೋಗ ಬೇಕು Diploma
| ಮುಂದಿನ ಅಧ್ಯಯನ / ಸಂಶೋಧನೆ Degree
ಸಿಕ್ಕಿಸಿಕೊಂಡು ಹೋಗಬೇಡಿ – ಇದು ನಿಮ್ಮ ಜೀವನ
ಈ ಸಮಯದಲ್ಲಿ ಹಲವು ಸಲಹೆಗಳು ಬರಬಹುದು – ಅವನನ್ನ ನೋಡೋ, ಅವಳು commerce ತೆಗೆದುಕೊಂಡಿದ್ದಾಳೆ, engineering ಗೆ ಹೋಬೇಕು, ಕಂಪ್ಯೂಟರ್ ಕೋರ್ಸ್ಗೆ ಒಳ್ಳೆಯ scope ಇದೆ… ಈ ರೀತಿಯಾಗಿ ಇತ್ಯಾದಿ ಸಲಹೆಗಳು ಬರಬಹುದು.
ಆದರೆ ನಿಮ್ಮ ಆಸಕ್ತಿಯೆ ಮುಖ್ಯ. ಇತರರ ಅಭಿಪ್ರಾಯ ಕೇಳಿ, ಆದರೆ ಅಂತಿಮವಾಗಿ ನೀವು ಕೇಳಿಕೊಳ್ಳಬೇಕಾದದ್ದು –
ನನ್ನ ಆಸಕ್ತಿ ಇರುವುದು ಎಲ್ಲಿ?
ಕೊನೆಗೆ, ಕೆಲವು ಉಪಯುಕ್ತ ಟಿಪ್ಸ್: tips for choice.
- Course ಆಯ್ಕೆ ಮಾಡುವಾಗ ಕಾಲೇಜು ಫೀ, ಪ್ಲೇಸ್ಮೆಂಟ್, ಮತ್ತು Practical Exposure ನೋಡಿಕೊಳ್ಳಿ
- ಒಂದು ಅಥವಾ ಎರಡು ಓಪನ್ ಡೇ / ಕೌನ್ಸೆಲಿಂಗ್ ಸೆಶನ್ಗಳಲ್ಲಿ ಭಾಗವಹಿಸಿ
- Skill-based short-term courses ಕೂಡ ಪಕ್ಕದಲ್ಲೇ consider ಮಾಡಿ (Tally, Web Design, Canva, MS Office)
ನಿಮ್ಮ ಕನಸುಗಳ ಹಾದಿಯಲ್ಲಿ ಹೆಜ್ಜೆ ಹಾಕಿ.
ಪಿಯುಸಿ ನಂತರ ನಿಮ್ಮ ಜೀವನದ ದಾರಿ ನಿರ್ಧರವಾಗಬಹುದು, ಆದರೆ ಇದು permanent ಲೈನ್ ಅಲ್ಲ. ನಿಮ್ಮ ಜೀವನದ ಹಾದಿಯಲ್ಲಿ ಬದಲಾವಣೆಗಳು ಆಗಬಹುದು, ಆಗಬೇಕು ಸಹ!
ಆದಷ್ಟು ಹೊತ್ತಿಗೆ – ನಿಮ್ಮನ್ನು ನೀವು ಉತ್ತಮವಾಗಿ ಅರ್ಥಮಾಡಿಕೊಳ್ಳಿ, ನಂಬಿಕೆ ಇಟ್ಟುಕೊಳ್ಳಿ, ಮುಂದೆ ಹೋಗಿ!
ನಿಮ್ಮ ಮುಂದಿನ ಹಾದಿಗೆ ಶುಭಾಶಯಗಳು!
ಈ ಮಾಹಿತಿಗಳನ್ನು ಓದಿ:
Motorola edge 60 pro 5g. ಮಾರುಕಟ್ಟೆಗೆ ಮೋಟೋರೋಲಾ ಎಡ್ಜ್ 60 ಪ್ರೊ 5g.











