ಯೋಗ (Yoga): ಮಾನಸಿಕ ಮತ್ತು ದೈಹಿಕ ಬಲಕ್ಕಾಗಿ

Photo of author

Mantesh

Publish: February 17, 2025

share Share:

Yoga ನಮಗೆಲ್ಲ ತಿಳಿದಿರುವ ಹಾಗೆ ಪ್ರಸ್ತುತ ಕಾಲಮಾನದಲ್ಲಿ ಆರೋಗ್ಯ, ಹೇಗೆ ಮತ್ತು ಎಷ್ಟು ಮುಖ್ಯವೆಂಬುದು ಗೊತ್ತೇ ಇದೆ. “ಆರೋಗ್ಯವೇ ಭಾಗ್ಯ” ಎನ್ನುವ ಹಾಗೆ ನಮ್ಮ ಜೀವನದಲ್ಲಿ ಆರೋಗ್ಯವೆಂಬುದು ಎಷ್ಟು ಮುಖ್ಯವಾಗಿದೆ, ಏಕೆಂದರೆ ಪ್ರಸ್ತುತ ಕಾಲಮಾನದಲ್ಲಿನ ಆಹಾರ ಪದ್ಧತಿ ಜೀವನ ರೀತಿ ದುಡಿಮೆಯ ಸ್ಥಿತಿಗತಿ ಹಾಗೂ ನಾವಿರುವಂತಹ ಸುತ್ತಮುತ್ತಲಿನ ಪರಿಸರ ಹೇಗೆ ಇದೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಇಷ್ಟೊಂದು ಕಲುಷಿತ ಜೀವನ ನಡೆಸುತ್ತಿರುವ ನಾವು ನೀವೆಲ್ಲರೂ ಆರೋಗ್ಯವನ್ನು ಕಡೆಗಣಿಸುತ್ತಿದ್ದೇವೆ, ಇದೇ ರೀತಿಯಾಗಿ ಮುಂದುವರೆದರೆ ನಾವು ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡಾಗ ನಮಗೆ ನಮ್ಮ ಆರೋಗ್ಯದ ಅರಿವಾಗುತ್ತದೆ. ಆದರೆ ಅಷ್ಟು ಹೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ. ಹಾಗಾಗಿ ನಾವು ನೀವೆಲ್ಲರೂ ದೇವರು ನೀಡಿದ ಈ ಸದೃಢ ದೇಹವನ್ನು ಆರೋಗ್ಯವಾಗಿ ಕಾಯ್ದುಕೊಳ್ಳಬೇಕು, ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವನ್ನು ಮಾತ್ರ ಪರಿಗಣಿಸಬಾರದು, ಇಲ್ಲಿ ಆರೋಗ್ಯದ ಅರ್ಥ ದೈಹಿಕ ಹಾಗೂ ಮಾನಸಿಕ ಇವೆರಡು ಸಹ ಆರೋಗ್ಯದ ಅರ್ಥ.

ಹೀಗೆ ಆರೋಗ್ಯವಾಗಿ ಇರಲು ನಾವು ಏನು ಮಾಡಬಹುದು? ನಿಮಗೆ ತಿಳಿದಿದೆಯೇ?
ಈ ರೀತಿಯ ಆರೋಗ್ಯವನ್ನು ಪಡೆಯಬೇಕಾದರೆ ನಾವು ನಮ್ಮ ದೇಹಕ್ಕೆ ಹಾಗೂ ಮನಸ್ಸಿಗೆ ಸರಿಯಾದ ರೀತಿಯ ವ್ಯಾಯಾಮ ಮಾಡಿಸಬೇಕು. ಇಲ್ಲಿ ನಾನು ಹೇಳುವ ವ್ಯಾಯಾಮ ದ ಅರ್ಥವೇ “ಯೋಗ” Yoga ಹಾಗೂ “ಧ್ಯಾನ“. ಹಾಗಾದರೆ ಇವುಗಳ ಮಹತ್ವವನ್ನು ತಿಳಿದುಕೊಳ್ಳೋಣ.

ಯೋಗದ ಇತಿಹಾಸ: History Of Yoga

ಯೋಗ Yoga ಎಂಬ ಪದ ಸಂಸ್ಕೃತದ “ಯುಜ್” ಎಂಬ ಶಬ್ದದಿಂದ ಬಂದಿದೆ. ಇದರರ್ಥ ಜೋಡಿಸು ಅಥವಾ ಒಗ್ಗೂಡಿಸುವ ಎಂಬುವುದು. ಯೋಗವು ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿರುವಂತಹ ಒಂದು ಸುಸ್ಥಿರ ಮಾರ್ಗ. ಇನ್ನು ನಾವು ಯೋಗದ ಇತಿಹಾಸದ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಯೋಗದ ಮೂಲವನ್ನು ನಾವು ವೇದಗಳಲ್ಲಿ ಕಾಣಬಹುದು. ಅದರಲ್ಲೂ ಇದರ ಮೂಲ ಋಗ್ವೇದ ಎಂದು ಹೇಳಲಾಗುತ್ತದೆ. ಪತಂಜಲಿ ಮಹರ್ಷಿಗಳು ಯೋಗದ ಮೂಲ ಪುರುಷ ಎಂದು ಪರಿಗಣಿಸಲಾಗುತ್ತದೆ. ಯೋಗದಲ್ಲಿ ಅಷ್ಟಾಂಗ ಯೋಗ ಎಂಬ ಎಂಟು ಮೆಟ್ಟಿಲುಗಳನ್ನು ನಾವು ಕಾಣಬಹುದು. ಅವುಗಳೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಹಾರ, ಧ್ಯಾನ, ದಾರಣ, ಮತ್ತು ಸಮಾಧಿ.
ಯೋಗ ಎಂಬುದು ಕೇವಲ ಮಾನವನ ದೈಹಿಕ ಆರೋಗ್ಯಕ್ಕೆ ಮಾತ್ರ ಸೀಮಿತವಲ್ಲ ಯೋಗ ಎಂಬುದು ಮಾನವನ ದೈಹಿಕ ಮಾನಸಿಕ ಹಾಗೂ ಬೌದ್ಧಿಕ ಆರೋಗ್ಯಕ್ಕಾಗಿ ಇರುವಂತಹ ಮಾರ್ಗ. ಇಂದ್ರಿಯಗಳನ್ನು ನಿಗ್ರಹಿಸುವುದು. ಮನಸ್ಸಿನ ಸಮತೋಲನವನ್ನು ಕಾಪಾಡುವುದು. ಅಲ್ಲದೆ ಸಮಾಜದಲ್ಲಿ ಒಬ್ಬ ಮನುಷ್ಯ ಸುಖಿಯಾಗಿ ಬದುಕಲು ಯೋಗ ಸಹಾಯ ಮಾಡುವುದು.

ಯೋಗದ ವಿಧಗಳು: Types Of Yoga

ಯೋಗವೆಂದರೆ “ಯಜ್ಞತೇ ಸಮಾಧೀಯೆತನೇನ ಇತಿ ಯೋಗಅಃ” ಅಂದರೆ “well fixed position of mind” ಕನ್ನಡದಲ್ಲಿ ಇದರ ಅರ್ಥ ಸದೃಢ ಹಾಗೂ ಸ್ಥಿರವಾದ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಹೊಂದಿರುವುದು ಎಂಬುದು. ಇಂತಹ ಯೋಗವನ್ನು Yoga ನಾವಿಲ್ಲರೂ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಯೋಗವೆಂದರೆ ಕೇವಲ ಪಾಶ್ಚಿಮಾತ್ಯರು ಮಾಡುವ ವ್ಯಾಯಾಮದ ರೀತಿಯ ವಿಧ ಅಲ್ಲ. ಇದಕ್ಕೆ ತನ್ನದೇ ಆದ ನಿಯಮಗಳಿವೆ ಹಾಗೂ ತನ್ನದೇ ಆದ ವಿವಿಧ ರೀತಿಯ ಪ್ರಕಾರಗಳು ಇವೆ. ಅಂತವುಗಳಲ್ಲಿ ನಾವು ಕೆಲವೊಂದಿಷ್ಟು ಯೋಗದ ಪ್ರಕಾರಗಳು ಬಗ್ಗೆ ತಿಳಿದುಕೊಳ್ಳೋಣ.

Yoga


ಹಠ ಯೋಗ:

ಹಠಯೋಗ ಯೋಗ ಪ್ರಕಾರದಲ್ಲಿ ಪ್ರಮುಖವಾದ ಯೋಗ Yoga. ಹಠ ಯೋಗ ಎಂದರೆ ಶರೀರ ಮತ್ತು ಮನಸ್ಸಿನ ನಿಯಂತ್ರಣ ಮಾಡುವ ಮೂಲಕ ಆರೋಗ್ಯ ಸ್ಥಿರತೆ ಮತ್ತು ಏಕಾಗ್ರತೆಯನ್ನು ಸಾಧಿಸಲು ಸಹಾಯ ಮಾಡುವ ಒಂದು ವಿಧಾನ. ಇದು ನಮ್ಮ ದೇಹದ ಸೂರ್ಯನಾದ ಶಕ್ತಿಯ (ಪಿಂಗಲ ನಾಡಿ) ಹಾಗೂ ಚಂದ್ರನಾದ ಶಕ್ತಿಯ (ಇಡ ನಾಡಿ) ಸಮತೋಲನವನ್ನು ತರಲು ಸಹಾಯ ಮಾಡುತ್ತದೆ. ಇದರ ಪ್ರಮುಖ ಭಾಗಗಳು:
ಆಸನಗಳು : ಇದೊಂದು ಶಾರೀರಿಕ ಅಭ್ಯಾಸ ದೇಹದ ಸ್ಥಿರತೆ ಹಾಗೂ ಸಂಯಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ಪ್ರಾಣಾಯಾಮ : ಇದು ಶ್ವಾಸ ನಿಯಂತ್ರಣ ಮಾಡುವ ಕ್ರಿಯೆ.
ಬಂಧುಗಳು: ಇವುಗಳ ಮೂಲಕ ಮನುಷ್ಯನ ದೇಹದ ಒಳಗಿನ ಭಾಗಗಳಿಗೆ ವ್ಯಾಯಾಮ ಒದಗಿಸುವುದು.
ಮುದ್ರೆಗಳು: ಶಕ್ತಿಯನ್ನು ನಿಯಂತ್ರಿಸಿ ಧ್ಯಾನಕ್ಕೆ ನೆರವಾಗುವ ತಂತ್ರ
‌ ಧ್ಯಾನ: ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಲು ಹಾಗೂ ಆಂತರಿಕ ಶಾಂತಿಯನ್ನು ಪಡೆಯಲು.

ರಾಜಯೋಗ:

ರಾಜಯೋಗ ಎಂದರೆ ಯೋಗಗಳ ರಾಜ ಎಂಬುದು. ನಾವು ರಾಜಯೋಗವನ್ನು ಮಾಡುವುದರಿಂದ ಮನಸ್ಸಿನ ಆಂತರಿಕ ಶಾಂತಿಯನ್ನು ಪಡೆಯಬಹುದು ಇದರ ಮುಖ್ಯ ಭಾಗವೆಂದರೆ ಧ್ಯಾನ (meditation). ನಾನು ಮೊದಲೇ ಹೇಳಿದ ಅಷ್ಟಾಂಗ ಮಾರ್ಗವನ್ನು ಇಲ್ಲಿ ಕಾಣಬಹುದು. ಈ ಅಷ್ಟಾಂಗ ಮಾರ್ಗಗಳ ಮೂಲಕ ನಾವು ಆಧ್ಯಾತ್ಮಿಕ ಪ್ರಗತಿಯನ್ನು ಕಾಣಬಹುದು ನಮಗೆ ಗೊತ್ತಿರುವ ಹಾಗೆ ಅಷ್ಟಾಂಗ ಮಾರ್ಗದಲ್ಲಿ ಒಟ್ಟು ಎಂಟು ಮೆಟ್ಟಿಲುಗಳು ಇವೆ. ಅವುಗಳನ್ನು ಈ ಮೊದಲೇ ನಾನು ಹೇಳಿದ್ದೇನೆ ಆ ಎಂಟು ಮೆಟ್ಟಿಲುಗಳನ್ನು ಸಾಧಿಸುವುದರ ಮೂಲಕ ನಾವು ಈ ಒಂದು ರಾಜಯೋಗವನ್ನು ಸಂಪೂರ್ಣ ಮಾಡಬಹುದು.
ರಾಜಯೋಗವೂ ಮನಸ್ಸಿನ ನಿಯಂತ್ರಣ ಧ್ಯಾನ ಮತ್ತು ಆತ್ಮ ಸಾಕ್ಷಾತ್ಕಾರಕ್ಕೆ ಒಂದು ಪ್ರಮುಖ ದಾರಿಯಾಗಿದೆ. ಇದು ನಮ್ಮ ಜೀವನದಲ್ಲಿ ಆಂತರಿಕ ಶಾಂತಿ ಏಕಾಗ್ರತೆ ಮತ್ತು ಸಮತೋಲನವನ್ನು ತುಂಬಿಸುವುದು. ಇವೆಲ್ಲವನ್ನೂ ಅನುಸರಿಸಿದರೆ ನಿಜವಾದ ಸ್ವಾತಂತ್ರ್ಯ ಮತ್ತು ಶಾಂತಿ ನಮ್ಮದಾಗುತ್ತದೆ.
ಯಾರು ಮನಸ್ಸನ್ನು ನಿಯಂತ್ರಿಸುವರು ಅವರು ಉಳಿದೆಲ್ಲವನ್ನು ನಿಯಂತ್ರಿಸುವರು

ಭಕ್ತಿ ಯೋಗ:

ಈ ಯೋಗದ Yoga ವಿಧದಲ್ಲಿ ನಾವು ಭಕ್ತಿಯ ಮೂಲಕ ಅಂದರೆ ಆ ದೇವರಲ್ಲಿ ಸಂಪೂರ್ಣ ಶರಣಾಗತರಾಗುವ ಮೂಲಕ ಆತ್ಮ ಸಾಕ್ಷಾತ್ಕಾರದ ಮಾರ್ಗವನ್ನು ಕಂಡುಕೊಳ್ಳುತ್ತೇವೆ. ಇದು ದೇವರ ಮೇಲಿನ ಶ್ರದ್ಧೆಯ ಪ್ರತೀಕ ಆಗಿದ್ದು”ಭಕ್ತಿಯ ಮೂಲಕ ಮುಕ್ತಿ”ಎಂಬುವುದಾಗಿದೆ.

ಜ್ಞಾನ ಯೋಗ:

ಯೋಗದ Yoga ಅಂತಿಮ ಮಾರ್ಗವೆಂದರೆ ಮುಕ್ತಿ, ನಾವು ಯಾವುದೇ ರೀತಿಯ ವಿಧಾನವನ್ನು ಅನುಸರಿಸಿದರೂ ಕೊನೆ ಮಾರ್ಗವಾಗಿ ನಮಗೆ ಸಿಗುವುದು ಮುಕ್ತಿಯ ಹೊರತು ಬೇರೊಂದಲ್ಲ. ನಾವೆಲ್ಲರೂ ಜ್ಞಾನ ಯೋಗದ ಮೂಲಕ ಜ್ಞಾನ ಮತ್ತು ತತ್ವ ಚಿಂತನೆಯ ಮೂಲಕ ಮುಕ್ತಿಯ ಮಾರ್ಗವನ್ನು ಕಂಡುಕೊಳ್ಳಲು ಇದು ಸಹಕಾರಿಯಾಗಿದೆ.

Also Read :

India Post Recruitment 2025: ಒಟ್ಟು 21413 ಹುದ್ದೆಗಳು ಖಾಲಿ!

BEL Recruitment 2025: (Trainee Engineer & Project Engineer)

ಯೋಗದ ಶಾರೀರಿಕ ಹಾಗೂ ಮಾನಸಿಕ ಪ್ರಯೋಜನಗಳು: Benefits Of Yoga

ಯೋಗವು ಒಂದು ಶಾರೀರಿಕ ಹಾಗೂ ಮಾನಸಿಕ ಬಲ ವರ್ಧನೆಯ ವಿಧಾನ ಆಗಿದ್ದು ನಾವು ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮಲ್ಲಿ ಶಾರೀರಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಕಾಣಬಹುದು ಸತ್ಯದಂತಹ ಪರಿಸ್ಥಿತಿಯಲ್ಲಿ ಯೋಗವು ಮನುಷ್ಯನಿಗೆ ತುಂಬಾ ಅವಶ್ಯಕವಾದ ಮಾರ್ಗ ಎನಿಸುವಂತಹದ್ದಾಗಿದೆ. ನಾವೆಲ್ಲರೂ 2019-20 ರಲ್ಲಿ ಕರೋನ (covid-19) ಅನ್ನು ಕಂಡಿದ್ದೇವೆ. ಅದೆಷ್ಟು ಭಯಭೀತಿಯ ವಾತಾವರಣ ಮತ್ತು ಎಷ್ಟು ಸಂಖ್ಯೆಯ ಸಾವು ನೋವುಗಳನ್ನು ನಾವು ಕಂಡಿದ್ದೇವೆ. ಕೇವಲ ಕೆಮ್ಮು ಮತ್ತು ಶೀತದಂತಹ ಸಾಮಾನ್ಯ ಲಕ್ಷಣಗಳು ಕಂಡುಬಂದರೂ ಸಹ ನಾವೆಲ್ಲರೂ ಭಯ ಪಡುತ್ತಿದ್ದೆವು. ಇಂತಹ ಬಯಕೆ ಕಾರಣ ಮನುಷ್ಯನಲ್ಲಿರುವ ನಿರೋಧಕ ಶಕ್ತಿಯ ಕೊರತೆ ಹಾಗೂ ಆತ್ಮಸ್ಥೈರ್ಯದ ಕೊರತೆಯಿಂದಾಗಿ. ಯೋಗವನ್ನು ಮಾಡುವುದರ ಮೂಲಕ ನಾವು ಮನಸ್ಸಿನ ಹಾಗೂ ದೇಹದ ರೋಗ ರುಜಿನಗಳನ್ನು ತೊಡೆದು ಹಾಕಿ ಸದೃಢ ಸ್ತೂಲ ಕಾಯ ಹೊಂದಿದ ದೇಹ ಹಾಗೂ ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯದಿಂದ ಕೂಡಿದ ಒಂದು ಮನಸ್ಸನ್ನು ಪಡೆಯಬಹುದು. ಯೋಗ ನಿರತನಾದ ಯೋಗ ಅಭ್ಯಾಸಯು ತನ್ನ ಆಂತರಿಕ ಶಾಂತಿಯನ್ನು ಕೊಂಡುಕೊಳ್ಳುತ್ತಾನೆ ಮತ್ತು ದೈಹಿಕ ಬಲವನ್ನು ಸಾಧಿಸುತ್ತಾನೆ ಹಾಗೆಯೇ ಸಮಾಜದಲ್ಲಿ ಒಬ್ಬ ಒಳ್ಳೆಯ ಪ್ರಜೆಯಾಗಿ ಬಾಳುತ್ತಾನೆ.

ಒಟ್ಟಿನಲ್ಲಿ ಹೇಳುವುದಾದರೆ ಒಂದು ಸದೃಢ ದೇಹದಲ್ಲಿ ಒಂದು ಸದೃಢ ಮನಸ್ಸು ವಾಸಿಸುತ್ತದೆ. ಸದೃಢ ದೇಹ ಹಾಗೂ ಮನಸ್ಸಿಗಾಗಿ ಯೋಗ ಮಾಡೋಣ ಇದಕ್ಕೆ ಯೋಗವೊಂದೇ ಮಾರ್ಗ.

“ಯೋಗದಿಂದ ಮುಕ್ತಿ”

Join