Bank Holidays in June 2025: ಜೂನ್ ತಿಂಗಳ ಈ ವಾರದಲ್ಲಿ ಹಲವು ಕಡೆಗಳಲ್ಲಿ ಬ್ಯಾಂಕ್ ಸೇವೆಗಳು ಬಂದ್ ಆಗಿರುತ್ತವೆ, ಕಾರಣ RBI ನ ಜೂನ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಒಟ್ಟು, ಈ ತಿಂಗಳು, ಅಂದರೆ ಜೂನ್ ತಿಂಗಳಲ್ಲಿ ಒಟ್ಟಾರೆಯಾಗಿ 12 ಬ್ಯಾಂಕ್ ರಜೆಗಳನ್ನು ನಾವು ಕಾಣಬಹುದು. ಈ ಒಂದು ಲೇಖನದಲ್ಲಿ ನಾವು ನಿಮಗೆ ಈ ವಿಷಯದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ, ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
Bank Holidays in June 2025
ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ನ ಅಧಿಕೃತ ಮಾಹಿತಿ ಬಿಡುಗಡೆಯಾಗಿದ್ದು (ಜೂನ್ ತಿಂಗಳ ಒಟ್ಟು ರಜಾ ದಿನಗಳ ಪಟ್ಟಿ – Bank Holidays in June 2025) ಇದರ ಪ್ರಕಾರ ಜೂನ್ ತಿಂಗಳಲ್ಲಿ ಒಟ್ಟಾರೆಯಾಗಿ 12 ರಜೆಗಳು ಇರುತ್ತವೆ. ಇದರಲ್ಲಿ ವಾರಾಂತ್ಯದ ರಜೆಗಳು ಸಹ ಇರುತ್ತವೆ, ಹಾಗಾಗಿ ಗ್ರಾಹಕರು ತಮ್ಮ ತಮ್ಮ ಹಣಕಾಸಿನ ವ್ಯವಹಾರಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾಗಿ ಮುಗಿಸಿಕೊಳ್ಳುವದು ಉತ್ತಮ. ಈ ಒಂದು ರಜೆಗಳು ರಾಜ್ಯದಿಂದ – ರಾಜ್ಯಕ್ಕೆ ಬದಲಾಗುತ್ತವೆ.
Bank holidays next week
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ ಜೂನ್ ತಿಂಗಳ ಮೊದಲ ವಾರದಲ್ಲಿ ದೇಶಾದ್ಯಂತ ಕೆಲವು ರಾಜ್ಯಗಳಲ್ಲಿ ಮೊದಲನೆಯ ವಾರದಲ್ಲಿ ಎರಡು ರಜೆಗಳನ್ನು ನಾವು ಕಾಣಬಹುದು, ಕಾರಣ, ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ “ಬಕ್ರೀದ್” (Bakrid), ಹಾಗೂ Id-Uz-Zuha. ಹಾಗಾಗಿ ಮೊದಲ ವಾರದಲ್ಲಿ ಎರಡು ರಾಜ್ಯಗಳನ್ನು ಕಾಣಬಹುದು. ಜೂನ್ 8 ರಂದು ರವಿವಾರ ಆಗಿದ್ದು ಸಾರ್ವತ್ರಿಕ ಸರ್ಕಾರಿ ರಜೆ ಆಗಿರುತ್ತದೆ. ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾಗಿ ಇರುವುದು ಕಾರಣ ಅಲ್ಲಿಯೇ ಧರ್ಮಗಳ ಆಚರಣೆ, ಸ್ಥಳೀಯ ನಂಬಿಕೆಗಳು.
Bank holiday on June 6
ತಿಂಗಳಿನ 6 ತಾರೀಕು ಹಲವು ಕಡೆಗಳಲ್ಲಿ ಬ್ಯಾಂಕ್ ರಜೆ ಇದ್ದು, ಕಾರಣ ಇಸ್ಲಾಂ ಧರ್ಮದ ಪವಿತ್ರ ಆಚರಣೆ ಆದ ಬಕ್ರೀದ್, ಬಕ್ರೀದ್ ಒಂದು ಪವಿತ್ರ ಇಸ್ಲಾಂ ಧರ್ಮದ ಆಚರಣೆ ಆಗಿದ್ದು ಇದು, ಪ್ರವಾದಿ ಮೊಹಮ್ಮದ್ ರ ಮಕ್ಕಳ ತ್ಯಾಗ ಹಾಗೂ ಬಲಿದಾನಗಳ ಸಂಕೇತವಾಗಿ ಆಚರಣೆ ಮಾಡುವ ಒಂದು ಹಬ್ಬ.
Bank holiday on June 7
ಜೂನ್ ತಿಂಗಳಿನ 7 ತಾರೀಖಿನಂದು ಹಲವು ಕಡೆಗಳಲ್ಲಿ (ಅಹಮದಾಬಾದ್, ಗ್ಯಾಂಗ್ ಟೊಕ್, ಇಟಾ ನಗರ, ಕೊಚ್ಚಿ, ತಿರುವನಂತಪುರಂ ಹೊರತುಪಡಿಸಿ) ಬ್ಯಾಂಕ್ ರಜೆಗಳು ಇರುತ್ತವೆ. ಇಂದಿನ ದಿನದಂದು ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ ಬಕ್ರೀದ್ ನ ಎರಡನೇ ದಿನವಾಗಿದ್ದು ಇವತ್ತಿನ ದಿನದಲ್ಲಿ ಅವರು ತಮ್ಮ ದೇವರಾದ ಅಲ್ಲಾಹು ಗೆ ಬಲಿದಾನ ಕೊಡುವ ಮೂಲಕ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇದನ್ನು “goat festival” ಎಂದು ಸಹ ಕರೆಯಲಾಗುತ್ತದೆ.
Other bank holidays on June 2025
ಜೂನ್ ತಿಂಗಳ ಮೊದಲ ವಾರದಲ್ಲಿ ನಾವು ಎರಡು ರಜೆಗಳನ್ನು ಕಾಣಬಹುದು, ತದನಂತರದಲ್ಲಿ ಒಟ್ಟು ತಿಂಗಳಿನಲ್ಲಿ 12 ರಾಜ್ಯಗಳನ್ನು ಕಾಣಬಹುದು. ಇನ್ನು ಉಳಿದ ರಜೆಗಳು;
ಜೂನ್ 11 (ಬುಧವಾರ): ಸಂತ ಕಬೀರನ ಜಯಂತಿ
ಜೂನ್ 27 (ಶುಕ್ರವಾರ): ಓಡಿಸ್ಸಾದಲ್ಲಿ ರಥ ಯಾತ್ರೆ.
Know More From Viewing This Chart:
| ದಿನಾಂಕ | ವಾರ | ಸಂದರ್ಭದಲ್ಲಿ / ಕಾರಣ | ಬ್ಯಾಂಕ್ ಸ್ಥಿತಿ |
|---|---|---|---|
| ಜೂನ್ 1, 2025 | ಭಾನುವಾರ | ನಿಯಮಿತ ಭಾನುವಾರ ರಜೆ | ಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ |
| ಜೂನ್ 6, 2025 | ಶುಕ್ರವಾರ | ಬಕ್ರಿದ್ (Eid-ul-Ad’ha) | ಕೆಲ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ |
| ಜೂನ್ 7, 2025 | ಶನಿವಾರ | ಬಕ್ರಿ ಇದ್ / ಇದ್-ಉಲ್-ಝುಹಾ | ಬಹುಪಾಲು ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ |
| ಜೂನ್ 8, 2025 | ಭಾನುವಾರ | ನಿಯಮಿತ ಭಾನುವಾರ ರಜೆ | ಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ |
| ಜೂನ್ 11, 2025 | ಬುಧವಾರ | ಸಂತ ಗುರು ಕಬೀರ ಜಯಂತಿ / ಸಾಗಾ ದಾವಾ | ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶದಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ |
| ಜೂನ್ 14, 2025 | ಶನಿವಾರ | ದ್ವಿತೀಯ ಶನಿವಾರ | ಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ |
| ಜೂನ್ 15, 2025 | ಭಾನುವಾರ | ನಿಯಮಿತ ಭಾನುವಾರ ರಜೆ | ಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ |
| ಜೂನ್ 22, 2025 | ಭಾನುವಾರ | ನಿಯಮಿತ ಭಾನುವಾರ ರಜೆ | ಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ |
| ಜೂನ್ 27, 2025 | ಶುಕ್ರವಾರ | ರಥ ಯಾತ್ರೆ / ಕಾಂಗ್ | ಒಡಿಶಾ ಮತ್ತು ಮಣಿಪುರದಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ |
| ಜೂನ್ 28, 2025 | ಶನಿವಾರ | ನಾಲ್ಕನೇ ಶನಿವಾರ | ಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ |
| ಜೂನ್ 29, 2025 | ಭಾನುವಾರ | ನಿಯಮಿತ ಭಾನುವಾರ ರಜೆ | ಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ |
| ಜೂನ್ 30, 2025 | ಸೋಮವಾರ | ರೆಮ್ನಾ ನಿ | ಮಿಜೋರಾಂನಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ |
ಉಳಿದ ಬ್ಯಾಂಕಿಂಗ್ ಸೇವೆಗಳು ಲಭ್ಯ..!
ಗ್ರಾಹಕರು ರಜೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಅವಶ್ಯಕ ಹಣಕಾಸಿನ ವಹಿವಾಟುಗಳನ್ನು ಮುಗಿಸಿಕೊಳ್ಳುವುದು ಉತ್ತಮ. ಆದರೂ ಬ್ಯಾಂಕಿಂಗ್ ನ ಶಾಖಾ ಸೇವೆಗಳು ಮುಚ್ಚಿದ್ದರೂ ಸಹ ಉಳಿದ ಎಲ್ಲ ರೀತಿಯ ಆನ್ಲೈನ್ ಸೇವೆಗಳು ಹಾಗೂ ಯುಪಿಐ ಸೇವೆಗಳು, ಮೊಬೈಲ್ ಬ್ಯಾಂಕಿಂಗ್, NEFT ಮತ್ತು RTGS ಅಂತಹ ಸೇವೆಗಳು ಲಭ್ಯವಿರುತ್ತವೆ. ಹಾಗೂ ಉಳಿದ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಚೆಕ್ ಬುಕ್, ಹಾಗೂ ಎಟಿಎಂ ನಂತಹ ಸೇವೆಗಳು ಸಹ ಲಭ್ಯವಿರುತ್ತವೆ. ಇನ್ನುಳಿದ ಖಾತಾ ನಿರ್ವಹಣಾ ಸೇವೆಗಳು ಸಹ ಲಭ್ಯವಿರುತ್ತದೆ.












