Ration Card Correction Karnataka: ರೇಷನ್ ಕಾರ್ಡ್ ತಿದ್ದುಪಡಿ: ಮತ್ತೆ ಅವಕಾಶ! ಜುಲೈ 31 ಅಂತಿಮ ದಿನಾಂಕ.

Photo of author

Mantesh

Publish: July 21, 2025
Ration Card Correction Karnataka

share Share:

Ration Card Correction Karnataka: ರೇಷನ್ ಕಾರ್ಡ್ ತಿದ್ದುಪಡಿ ಮಾಡಿಲ್ಲವೇ? ನಿಮಗಿದು ಕೊನೆಯ ಅವಕಾಶ..! ಸರ್ಕಾರ ಇದೀಗ ಮತ್ತೆ ಒಂದು ಅವಕಾಶವನ್ನು ನೀಡಿದೆ. ಜೂಲೈ 31ರ ಒಳಗಾಗಿ ಎಲ್ಲರೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬೇಕೆಂದು. ಹೌದು ಸ್ನೇಹಿತರೆ, ಸರ್ಕಾರ ಜನರಿಗೆ ತಿದ್ದುಪಡಿ ಮಾಡಿಕೊಳ್ಳಲು ಮಾತೂಂದು ಅವಕಾಶ ನೀಡಿದೆ. ಈ ಲೇಖನದಲ್ಲಿ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು [ಇಲ್ಲಿ ಕ್ಲಿಕ್ ಮಾಡಿ]


ರೇಷನ್ ಕಾರ್ಡ್ ತಿದ್ದುಪಡಿ (Ration Card Correction Karnataka) ಏಕೆ ಇಷ್ಟು ಮಹತ್ವಪೂರ್ಣ?

ಪ್ರತಿಯೊಬ್ಬರಿಗೂ ಬೇಕಾದ, ಸರಕಾರದಿಂದ ಸುವಿಧೆಯ ಕೇಂದ್ರಬಿಂದುವಾಗಿರುವ ದಾಖಲೆ ಎಂದರೆ ರೇಷನ್ ಕಾರ್ಡ್. ಆದರೆ, ಇದರಲ್ಲಿ ಅನೇಕರ ಹೆಸರಿನಲ್ಲಿ ಸ್ಪೆಲ್ಲಿಂಗ್ ತಪ್ಪು, ವಿಳಾಸದಲ್ಲಿ ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ, ಅಥವಾ ಆಧಾರ್ ಲಿಂಕ್‌ನಂತೆ ಅನಿವಾರ್ಯ ಮಾಹಿತಿ ತಪ್ಪಾಗಿ ಇದೆ.

ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದೆಯೇ..! ಹೀಗೆ ಚೆಕ್ ಮಾಡಿ.

ಇಂತಹ ತಿದ್ದುಪಡಿಗಳು ಸರಿಯಾಗಿ ಇಲ್ಲದಿದ್ದರೆ, ಉಚಿತ ಅನ್ನಭಾಗ್ಯ ಯೋಜನೆ, ಪಿಂಚಣಿ, ಮೃದು ಸಾಲ, ಮನೆಯ ಯೋಜನೆ, ಉದ್ಯೋಗ ಭತ್ಯೆ ಹೀಗೆ ಹಲವಾರು ಸೌಲಭ್ಯಗಳಿಂದ ವಂಚಿತರಾಗುವ ಅಪಾಯವಿದೆ. ಹಾಗಾಗಿ ಇದು ಪ್ರತಿಯೊಬ್ಬರಿಗೂ ಬೇಕಾಗುತ್ತದೆ.

ಸರ್ಕಾರದಿಂದ ಮತ್ತೆ ಒಂದು ಅವಕಾಶ – ಆದರೆ ಇದು ಕೊನೆಯದು!

Ration Card Correction Karnataka
Ration Card Correction Karnataka

ಸಾಮಾನ್ಯವಾಗಿ ವರ್ಷಕ್ಕೆ ಒಂದು ಬಾರಿಗೆ ಮಾತ್ರ ಸರ್ಕಾರ ಇಂತಹ ತಿದ್ದುಪಡಿ ಅವಕಾಶ ನೀಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರವು ಅನೇಕ ಅವಕಾಶಗಳ್ಳನ್ನು ನೀಡಿದ್ದು. ಈ ಬಾರಿ ಕೊನೆಯ ಅವಕಾಶವನ್ನು ನೀಡಿದೆ. ಹಾಗಾಗಿ ಪ್ರತಿಯೊಬ್ಬರು ಈ ಬಾರಿ ತಪ್ಪದೆ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ.

ತಿದ್ದುಪಡಿ ಮಾಡುವ ವಿಧಾನ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಿರುವ ಗ್ರಾಮ ಒನ್ ಕೇಂದ್ರಗಳು, ಕರ್ನಾಟಕ ಒನ್ ಕೇಂದ್ರಗಳು,
ಬೆಂಗಳೂರು ಒನ್ ಕೇಂದ್ರಗಳು ನಾವಜ್ಞಾಪಕರ ರೂಪದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.
ಸರಕಾರಿ ರಜಿಗೆ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 10:00ರಿಂದ ಸಂಜೆ 05:00ರವರೆಗೆ ತಿದ್ದುಪಡಿ ಅವಕಾಶವಿದೆ.

ಈ ಬಾರಿ ಸರ್ಕಾರದ ಸೇವಾ ಪೋರ್ಟಲ್ (Seva Sindhu) ಮೂಲಕ ಆನ್‌ಲೈನ್‌ನಲ್ಲಿ ಸಹಜವಾಗಿ ತಿದ್ದುಪಡಿ ಮಾಡಲು ಅವಕಾಶ ಇದೆ. ಬೇಕಾದ ದಾಖಲೆಗಳು ತಯಾರಾಗಿಟ್ಟುಕೊಂಡು, ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್‌ನಿಂದಲೇ ಅರ್ಜಿ ಸಲ್ಲಿಸಬಹುದು.

ಯಾವ ತಿದ್ದುಪಡಿ ಮಾಡಿಸಬಹುದು?

  • ಹೆಸರು ಅಥವಾ ಸದಸ್ಯರ ಹೆಸರುಗಳಲ್ಲಿ ಬಂದಿರುವ ತಪ್ಪುಗಳು
  • ವಿಳಾಸ ಬದಲಾವಣೆ
  • ಹೊಸ ಸದಸ್ಯರ ಸೇರ್ಪಡೆ ಅಥವಾ ಹೊರಪಡಿಸುವಿಕೆ
  • ಆಧಾರ್ ಲಿಂಕ್
  • ಕುಟುಂಬದ ಸದಸ್ಯರ ದಾಖಲೆಗಳು

ಏನು ಬೇಕು? – ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವಾಗ ನೀವು ಒದಗಿಸಬೇಕಾದ ದಾಖಲೆಗಳಲ್ಲಿ ಆಧಾರ್ ಕಾರ್ಡ್, ವಿಳಾಸ ಪುರಾವೆ, ಪಾಸ್ಪೋರ್ಟ್ ಸೈಸ್ ಫೋಟೋ, ಮತ್ತು ನಿಮ್ಮ ಹಳೆಯ ರೇಷನ್ ಕಾರ್ಡ್ ಪ್ರತಿಗಳು ಸೇರಿವೆ. ತಿದ್ದುಪಡಿ ಯಾವದು ಎಂಬುದರ ಮೇಲೆ ಹೆಚ್ಚುವರಿ ದಾಖಲೆಗಳ ಅಗತ್ಯವಿರಬಹುದು.

ಅರ್ಜಿ ಸಲ್ಲಿಸಿದ ಮೇಲೆ ಏನು?

ತಿದ್ದುಪಡಿ ಸಲ್ಲಿಸಿದ ನಂತರ, ನಿಮ್ಮ ಅರ್ಜಿ ಪರಿಶೀಲನೆಗೆ ಹೋಗುತ್ತದೆ. ಸಹಜವಾಗಿ 7 ರಿಂದ 15 ದಿನಗಳ ಒಳಗಾಗಿ ನೀವು ತಿದ್ದುಪಡಿ ಅಸ್ವೀಕಾರ ಅಥವಾ ಅನುಮೋದನೆಯ ಮಾಹಿತಿ ಪಡೆಯಬಹುದು. ಅರ್ಜಿಯ ಸ್ಥಿತಿಯನ್ನು Seva Sindhu ಪೋರ್ಟಲ್ ಅಥವಾ ಅನ್ನಭಾಗ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಬಹುದು.

ಒಂದು ಬಾರಿ ಕೊನೆಯ ದಿನಾಂಕ ಗಡುವಾದ ಮೇಲೆ ನಿಮ್ಮ ತಿದ್ದುಪಡಿ ಅವಕಾಶ ಹಾರಿಹೋಗಬಹುದು. ಈಗ ಇಂದೇ ಸಮಯವನ್ನು ಉಪಯೋಗಿಸಿ, ನಿಮ್ಮ ಕುಟುಂಬದ ಪ್ರಾಥಮಿಕ ದಾಖಲೆ ಖಚಿತಪಡಿಸಿಕೊಳ್ಳಿ.Ration Card Correction Karnataka

Join

Leave a Comment