SSC Selection Post Phase 13 Notification 2025: 2402 ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ!
ಕೆಂದ್ರ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಆಸೆ ಇದ್ದರೆ, ನಿಮಗಾಗಿ ಒಳ್ಳೆಯ ಸುದ್ದಿ ಇದೆ! ಸಿಬ್ಬಂದಿ ಆಯ್ಕೆ ಆಯೋಗ (SSC) ತನ್ನ ಹಂತ – XIII ನೇಮಕಾತಿ 2025 ಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 2402 ಹುದ್ದೆಗಳನ್ನು ಭರ್ತಿ ಮಾಡಲಿದ್ದಾರೆ.
ಈ ಹುದ್ದೆಗಳಿಗಾಗಿ ಅರ್ಹತೆ ಹೊಂದಿರುವ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಕೆಗೆ ಮೊದಲು ನೀವು SSC ವೆಬ್‌ಸೈಟ್‌ನಲ್ಲಿ ಒಮ್ಮೆ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕಾಗುತ್ತದೆ.
SSC ಸಂಸ್ಥೆ ನಿತ್ಯವೂ ಕೇಂದ್ರ ಸರ್ಕಾರದ ವಿವಿಧ ಮಂತ್ರಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆಗಳನ್ನು ನಡೆಸುತ್ತದೆ. ಈ ಬಾರಿಗೆ ಕೂಡ ಹಂತ-13 ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
ಈ ಲೇಖನದ ಮುಂದಿನ ಭಾಗದಲ್ಲಿ ನೀವು ತಿಳಿದುಕೊಳ್ಳಬಹುದಾದ ಪ್ರಮುಖ ಅಂಶಗಳು:
ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ, ಹಾಗೂ ಇತರೆ ಪೂರಕ ಮಾಹಿತಿಗಳು
ಈ ಪೂರ್ಣ ಮಾಹಿತಿಯನ್ನು ಪಡೆಯಲು ಲೇಖನವನ್ನು ಕೊನೆವರೆಗೂ ಓದಿ. ಇದು ಉಪಯುಕ್ತ ಅನ್ನಿಸಿದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಶೇರ್ ಮಾಡುವುದನ್ನು ಮರೆಯಬೇಡಿ! ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
Highlights of SSC job news: SSC Selection Post Phase 13 Notification 2025
| ಆಯೋಜಕ ಸಂಸ್ಥೆ | Staff Selection Commission (SSC) |
|---|---|
| ಹುದ್ದೆಗಳ ಹೆಸರು | Various Posts |
| ಒಟ್ಟು ಖಾಲಿ ಹುದ್ದೆಗಳು | 2402 |
| ಅರ್ಜಿ ಸಲ್ಲಿಕೆ ಪ್ರಕ್ರಿಯೆ | Online |
| ಉದ್ಯೋಗ ಸ್ಥಳ | All Over India |
ಪ್ರಮುಖ ದಿನಾಂಕಗಳು: Important Dates
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 02/06/2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/06/2025
ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 24/06/2025

ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಹಾವಿದ್ಯಾಲಯದಿಂದ ಅಥವಾ ವಿಶ್ವವಿದ್ಯಾಲಯದಿಂದ ಹತ್ತನೇ ತರಗತಿ (10th standard), 12ನೇಯ ತರಗತಿ (PUC), ಹಾಗೂ ಪದವಿ (Degree) ಯನ್ನು ಹೊಂದಿರುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಬಹುದು.
Indian Air Force Recruitment 2025: ಭಾರತೀಯ ವಾಯುಪಡೆಯಲ್ಲಿ 153 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಯೋಮಿತಿ
ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷದ ಒಳಗಿನ ಅಭ್ಯರ್ಥಿ ಆಗಿರಬೇಕು.
ಆಯ್ಕೆ ಪ್ರಕ್ರಿಯೆ: Selection Process
- ಮೊದಲಿಗೆ ಲಿಖಿತ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುವುದು (CBT).
- ಹುದ್ದೆಯ ಅವಶ್ಯಕತೆಗೆ ಅನುಗುಣವಾಗಿ ಕೌಶಲ್ಯ ಪರೀಕ್ಷೆ.
- ದಾಖಲಾತಿಗಳ ಪರಿಶೀಲನೆ.
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಓಬಿಸಿ (OBC) ಅಭ್ಯರ್ಥಿಗಳಿಗೆ —100/-
SC/ST/PWD/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುವುದು.
ಪರೀಕ್ಷಾ ಮಾದರಿ:
- ಮೊದಲನೆಯ ಹಂತದಲ್ಲಿ ನಡೆಯುವ ಲಿಖಿತ ಪರೀಕ್ಷೆಯು ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
- ಆಪ್ಟಿಟ್ಯೂಡ್
- ಕನ್ನಡ ಭಾಷೆ
- ಪ್ರತಿ ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕಗಳು ಇರುತ್ತವೆ
How to apply for the SSC selection post phase 13 recruitment 2025.
ಸಿಬ್ಬಂದಿ ನೇಮಕಾತಿ ಸಮಿತಿ (SSC Selection Post Phase 13) ಯ ಈ ಒಂದು ಬೃಹತ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಈ ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು.
- ಮೊದಲನೆಯದಾಗಿ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
- ನಂತರದಲ್ಲಿ ನಾವು ಕೆಳಗೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ( ಇದು ನೇರ ಅರ್ಜಿ ಲಿಂಕ್ ಆಗಿರುತ್ತದೆ)
- ಅವಶ್ಯಕತೆ ವಾಗಿ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ
- ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿಸಿ
- ಭವಿಷ್ಯದ ಅರ್ಜಿ ಹಾಗೂ ಇನ್ನಿತರ ಉಪಯೋಗಕ್ಕಾಗಿ ಅರ್ಜಿ ಸಂಖ್ಯೆ ಹಾಗೂ ಅರ್ಜಿ ಸಲ್ಲಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಉಪಯುಕ್ತ ಲಿಂಕ್ ಗಳು: Important Links.
| ವಿವರ (Details) | ಲಿಂಕ್ (Link) |
|---|---|
| ಅಧಿಕೃತ ಅಧಿಸೂಚನೆ PDF | ಡೌನ್‌ಲೋಡ್ ಮಾಡಿ (Download) |
| ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ | ಈಗಲೇ ಅರ್ಜಿ ಹಾಕಿ (Apply Now) |
| ಅಧಿಕೃತ ವೆಬ್‌ಸೈಟ್ | ssc.gov.in |
| ಇನ್ನಷ್ಟು ಮಾಹಿತಿ | Karnataka24.in |













