Vivo T4 5G – ಅಬ್ಬಾ…! ಇಷ್ಟು ಕಡಿಮೆ ಬೆಲೆಯಲ್ಲಿ ಅದೆಷ್ಟೋ ಫೀಚರ್ಸ. Vivo ಕಂಪನಿಯ T-Series ನ ಮತ್ತೊಂದು ಫೋನ್ ಮಾರುಕಟ್ಟೆಗೆ.

Photo of author

Mantesh

Publish: April 24, 2025

share Share:

Vivo T4 5G ನಮಗಿಲ್ಲ ತಿಳಿದಿರುವ ಹಾಗೆ ವಿವೊ (Vivo) ಎಂಬ ದೈತ್ಯ ಮೊಬೈಲ್ ಕಂಪನಿಯು ತನ್ನದೇ ಆದ ವೈಶಿಷ್ಟ್ಯಗಳಿಗೆ ಹಾಗೂ ಕ್ಯಾಮೇರಾ ಕ್ವಾಲಿಟಿಗೆ ಹೆಸರುವಾಸಿಯಾಗಿದೆ. ಇದು ಇತ್ತೀಚಿನ ದಿನಗಳಲ್ಲಿ T- ಸೀರಿಸ್ ನ ಅನೇಕ ಹೊಚ್ಚ ಹೊಸ ಮೊಬೈಲ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈಗ ಅದೇ ಸೀರಿಸ್ ನ ಮತ್ತೊಂದು ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಕಡಿಮೆ ಬೆಲೆಯಲ್ಲಿ ಅತಿಹೆಚ್ಚಿನ ಫೀಚರ್ ಗಳನ್ನು ಹೊಂದಿದ್ದು ಗ್ರಾಹಕರ ಗಮನ ಸೆಳೆದಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ Vivo T4 5G ಸ್ಮಾರ್ಟ್ಫೋನ್, ಯುವಕರಿಗೆ, ವಿದ್ಯಾರ್ಥಿಗಳಿಗೆ, ಮತ್ತು ಗೇಮ್ ಆಟಗಾರರಿಗೆ ಸೂಪರ್ ಆಯ್ಕೆಯಾಗಿರೋದು ನಿಜ. ಹೆಚ್ಚಿನ ಮಟ್ಟದ ಬ್ಯಾಟರಿ, ಚಿಪ್ಸೆಟ್, GenAI ಫೀಚರ್ಗಳು ಮತ್ತು ತನ್ನ ಕೆಲಸಕ್ಕೆ ಹೆಸರುವಾಸಿಯಾದ ಕ್ಯಾಮೆರಾ ಕ್ವಾಲಿಟಿಯನ್ನು ಈ ಈ ಮೊಬೈಲ್ ಫೋನ್ ಪರಿಚಯಿಸಿದೆ. ಹಾಗಾಗಿ ಈ ಒಂದು ಲೇಖನದಲ್ಲಿ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ನೀಡಿದ್ದೇವೆ. ದಯವಿಟ್ಟು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;


7300 mAh ಬ್ಯಾಟರಿ ಹಾಗೂ ಸೂಪರ್ ಫಾಸ್ಟ್ ಚಾರ್ಜ್..! Vivo T4 5G specifications Kannada.

ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆಗೆ ಬರುತ್ತಿರುವ ಹೊಸ ಫೋನ್ ಗಳಲ್ಲಿ ಗ್ರಾಹಕರು ಕಾಣುವ ಮೊದಲನೇ ಸಮಸ್ಯೆ ಎಂದರೆ ಬ್ಯಾಟರಿ ಬ್ಯಾಕಪ್. ಆದರೆ,Vivo T4 5G 7300mAh ಬ್ಯಾಟರಿ ಹೊಂದಿದ್ದು, 90W ಫ್ಲಾಶ್ ಚಾರ್ಜ್ ಸಪೋರ್ಟ್ ಮಾಡತ್ತೆ.
• ಕೇವಲ 5 ನಿಮಿಷ ಮೊಬೈಲ್ ಚಾರ್ಜ್ ಮಾಡಿದರೆ 4 ಗಂಟೆ ಬಳಕೆ ಮಾಡಲು ಇದು ಸಾಕಾಗುತ್ತದೆ!
• 90W ಚಾರ್ಜ್ ಸಪೋರ್ಟ್ ಮಾಡುವ ಇದು ಕೇವಲ 30 ನಿಮಿಷಗಳಲ್ಲಿ 60% ಚಾರ್ಜ್ ಆಗುತ್ತದೆ
• ಒಂದು ಬಾರಿ ಪೂರ್ತಿ ಚಾರ್ಜ್ ಆಗಲು ತೆಗೆದುಕೊಳ್ಳುವ ಸಮಯ ಒಂದು ಗಂಟೆ.
ಅಂದರೆ, ದಿನಕ್ಕೆ ಒಂದು ಬಾರಿ ಪೂರ್ತಿಯಾಗಿ ಮೊಬೈಲ್ ಚಾರ್ಜ್ ಮಾಡಿದರೆ ದಿನವಿಡೀ ನಿಶ್ಚಿಂತೆಯಿಂದ ಉಪಯೋಗಿಸಬಹುದು.


ಪರ್ಫಾರ್ಮೆನ್ಸ್ – ಗೇಮ್ಸ್ ಗಳ ಉತ್ತಮ ಆಯ್ಕೆ.

ಪರ್ಫಾರ್ಮೆನ್ಸ್ – ಗೇಮ್ಸ್ ಗಳ ಉತ್ತಮ ಆಯ್ಕೆ.
Snapdragon 7s Gen 3 ಪ್ರೊಸೆಸರ್ ಇದರಲ್ಲಿ ಇಡಲಾಗಿದೆ.
• 4nm ತಂತ್ರಜ್ಞಾನದಿಂದ ತಯಾರಾದ ಈ ಚಿಪ್ಸೆಟ್ ವೇಗದ ಕೆಲಸ ಮಾಡತ್ತೆ.
• AnTuTuನಲ್ಲಿ 7,90,000 ಸ್ಕೋರ್.
• ಗ್ರಾಫಿಕ್ಸ್ಗೂ ಜೋರಾಗಿರುವ Adreno GPU ಇದೆ.
ಇದರ ಒಟ್ಟಾರೆಯ ಅರ್ಥ ಮೊಬೈಲ್ ಸ್ಟ್ರಕ್ ಆಗದೆ ಸ್ಮೂತ್ ಆಗಿ ಚಲಿಸುತ್ತದೆ.


ಕ್ಯಾಮೆರಾ –ಹೈ ಕ್ಲಾರಿಟಿಗೆ ಹೆಸರುವಾಸಿಯಾದ ಬ್ರಾಂಡ್..!

Vivo_T4_5G
Image Source: Vivo official site

ಕ್ಯಾಮೆರಾ –ಹೈ ಕ್ಲಾರಿಟಿಗೆ ಹೆಸರುವಾಸಿಯಾದ ಬ್ರಾಂಡ್..!
• ಹಿಂದಿನ ಕ್ಯಾಮೆರಾ: 50MP + 2MP ಡೆಪ್ತ್ ಸೆನ್ಸರ್
• ಸೆಲ್ಫಿ ಕ್ಯಾಮೆರಾ: 16MP ಒಳಗೊಂಡಿದೆ.
• AI ಫೀಚರ್ಗಳು: Enhance clarity, Unblur, Reflection Remover, Eraser
ವಿವೋ ಎಂಬ ಬ್ರ್ಯಾಂಡ್ ತನ್ನ ಕ್ಯಾಮೆರಾದ ಹೈ ಕ್ವಾಲಿಟಿ ಚಿತ್ರಣಕ್ಕೆ ಹೆಸರುವಾಸಿಯಾಗಿದೆ. ಇದರಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ A I ಅಳವಡಿಕೆ ಎಂಬುದು ಇದಕ್ಕೆ ಪೂರಕವಾಗಿದೆ.


ಡಿಸ್ಪ್ಲೇ ಮತ್ತು ಡಿಸೈನ್

• 6.67 ಇಂಚು FHD+ AMOLED ಡಿಸ್ಪ್ಲೇ
• 120Hz Refresh rate,
• 1800 ನಿಟ್ಸ್ ಬ್ರೈಟ್ನೆಸ್ – ಬಿಸಿಲಲ್ಲೂ ಕ್ಲಿಯರ್ ಗೋಚರ.
• Wet Touch & Glove Mode ತೇವದ ಕೈಗಳಿಂದ ಉಪಯೋಗಿಸಬಹುದು.
• IP65 ರೇಟಿಂಗ್ – ವಾಟರ್ ಪ್ರೂಫ್ ಕೂಡ ಇದೆ.
• ಫಿಂಗರ್ಪ್ರಿಂಟ್ ಸೆನ್ಸರ್ ಇರಲೇಬೇಕಲ್ಲವೇ.!


ಹೊಸ GenAI ಫೀಚರ್ಗಳು

ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಪ್ರತಿಯೊಂದು ಮೊಬೈಲ್ ಫೋನ್ ಗಳಲ್ಲಿ ಇಂದು AI ಎಂಬ ಹೊಸ ಫೀಚರ್ ಇದ್ದೇ ಇರುತ್ತದೆ. ಇನ್ನು ಇದರಲ್ಲಿ ಕೇಳಬೇಕಾ.
• Android 15 ಆಧಾರಿತ Funtouch OS 15
• AI Summary, AI Writer, AI Translator, Screen Reading, Chart Extractor
• Google Circle to Search ಕೂಡ ಇದೆ!


ಅಧಿಕೃತ ಬೆಲೆ ಹಾಗೂ ಲಾಂಚ್ ಡೇಟ್ ಮತ್ತು ಲಭ್ಯತೆ. Vivo T4 5G launch date.

Vivo T4 5G ಈ ಮೂರು ವಿಧದಲ್ಲಿ ಸಿಗತ್ತೆ:
8GB RAM + 128GB – ₹21,999
8GB RAM + 256GB – ₹23,999
12GB RAM + 256GB – ₹25,999
Flipkart ನಲ್ಲಿ ಏಪ್ರಿಲ್ 25ರಿಂದ ಸಿಗತ್ತೆ. ₹1000 ರಿಯಾಯಿತಿ ಸಹ ಲಭ್ಯವಿದೆ.


ಬಣ್ಣ ಆಯ್ಕೆ: Colors we can see.

• Phantom Grey
• Emerald Blaze

Image Source: Vivo official site

ಕೊನೆಯ ಮಾತು:
Vivo T4 5G ತಗ್ಗಿದ ಬೆಲೆಯಲ್ಲೇ ಪರ್ಫಾರ್ಮೆನ್ಸ್, ಬ್ಯಾಟರಿ, ಕ್ಯಾಮೆರಾ ಮತ್ತು GenAI ಟೇಕ್ನಾಲಜಿ ನೀಡ್ತಾ ಬಂದ್ರೆ… ಇನ್ನೇನು ಬೇಕು? ಬೆಸ್ಟ್ Best 5G phone under 25000 in India ಎಂದು ಹೇಳಬಹುದು..
ಇಷ್ಟು ಕಡಿಮೆ ಬೆಲೆಯಲ್ಲಿ ಇಷ್ಟೊಂದು ನವೀನ ಫೀಚರ್ಸ್ ಗಳನ್ನು ಹೊಂದಿರುವ ಮೊಬೈಲ್ ಫೋನ್ ಇದಾಗಿದೆ. ಇಷ್ಟವಾದ್ರೆ ಶೇರ್ ಮಾಡಿ, ಮತ್ತು ನಿಮ್ಮ ಅಭಿಪ್ರಾಯವನ್ನೂ ಕಾಮೆಂಟ್ನಲ್ಲಿ ತಿಳಿಸಬಹುದು. ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ:

Oppo ನ Oppo K13 5G ಮಾರುಕಟ್ಟೆಗೆ ಲಗ್ಗೆ..! ಬೆಲೆ ಎಷ್ಟು? ಫೀಚರ್ಸ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

Motorola edge 60 pro 5g. ಮಾರುಕಟ್ಟೆಗೆ ಮೋಟೋರೋಲಾ ಎಡ್ಜ್ 60 ಪ್ರೊ 5g.

ವಿಶೇಷ ಸೂಚನೆ: ಈ ಒಂದು ಲೇಖನದಲ್ಲಿ ಬಳಸಿದ ಎಲ್ಲಾ ರೀತಿಯ ಚಿತ್ರಣಗಳು Vivo ನ ಅಧಿಕೃತ ವೆಬ್ಸೈಟ್ ನಿಂದ ತೆಗೆದುಕೊಳ್ಳಲಾಗಿದೆ.Credits to Vivo

Join

Leave a Comment